ಉಪವರ್ಗಗಳು

ಹದೀಸ್‌ಗಳ ಪಟ್ಟಿ

“ಒಬ್ಬ ಮುಸಲ್ಮಾನನಿಗೆ ಆಯಾಸ, ಅನಾರೋಗ್ಯ, ಆತಂಕ, ದುಃಖ, ಹಾನಿ, ಸಂಕಟ ಮುಂತಾದ ಯಾವುದೇ ಸಂಭವಿಸಿದರೂ, ಎಲ್ಲಿಯವರೆಗೆಂದರೆ ಒಂದು ಸಣ್ಣ ಮುಳ್ಳು ಚುಚ್ಚಿದರೂ ಸಹ, ಅದಕ್ಕೆ ಪರಿಹಾರವಾಗಿ ಅಲ್ಲಾಹು ಅವನ ಕೆಲವು ಪಾಪಗಳನ್ನು ಅಳಿಸದೆ ಇರುವುದಿಲ್ಲ.”
عربي ಆಂಗ್ಲ ಉರ್ದು
ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ ಮತ್ತು ಮುಹಮ್ಮದ್ ಅಲ್ಲಾಹನ ಸಂದೇಶವಾಹಕರಾಗಿದ್ದಾರೆ ಎಂದು ಯಾರು ತನ್ನ ಹೃದಯದಿಂದ ಪ್ರಾಮಾಣಿಕವಾಗಿ ಸಾಕ್ಷಿ ವಹಿಸುತ್ತಾನೋ ಅವನನ್ನು ಅಲ್ಲಾಹು ನರಕಾಗ್ನಿಗೆ ನಿಷಿದ್ಧಗೊಳಿಸದೇ ಇರಲಾರ
عربي ಆಂಗ್ಲ ಉರ್ದು
ಅಲ್ಲಾಹನನ್ನು ಮಾತ್ರ ಆರಾಧಿಸುವುದು ಹಾಗೂ ಅವನೊಂದಿಗೆ ಏನನ್ನೂ ಸಹಭಾಗಿತ್ವ (ಶಿರ್ಕ್) ಮಾಡದಿರುವುದು ದಾಸರ ಮೇಲಿರುವ ಅಲ್ಲಾಹನ ಹಕ್ಕಾಗಿದೆ. ತನ್ನೊಂದಿಗೆ ಏನನ್ನೂ ಸಹಭಾಗಿತ್ವ (ಶಿರ್ಕ್) ಮಾಡದವರನ್ನು ಶಿಕ್ಷಿಸದಿರುವುದು ಅಲ್ಲಾಹನ ಮೇಲಿರುವ ದಾಸರ ಹಕ್ಕಾಗಿದೆ
عربي ಆಂಗ್ಲ ಉರ್ದು
ಅಲ್ಲಾಹನೊಡನೆ ಸಹಭಾಗಿತ್ವ (ಶಿರ್ಕ್) ಮಾಡದ ಸ್ಥಿತಿಯಲ್ಲಿ ನಿಧನರಾಗುವವರು ಸ್ವರ್ಗವನ್ನು ಪ್ರವೇಶಿಸುತ್ತಾರೆ; ಮತ್ತು ಅಲ್ಲಾಹನೊಡನೆ ಸಹಭಾಗಿತ್ವ ಮಾಡಿದ ಸ್ಥಿತಿಯಲ್ಲಿ ನಿಧನರಾಗುವವರು ನರಕವನ್ನು ಪ್ರವೇಶಿಸುತ್ತಾರೆ
عربي ಆಂಗ್ಲ ಉರ್ದು
ನಿಶ್ಚಯವಾಗಿಯೂ ಪುನರುತ್ಥಾನ ದಿನ ಅಲ್ಲಾಹು ಎಲ್ಲಾ ಸೃಷ್ಟಿಗಳ ಮುಂಭಾಗದಲ್ಲಿ ನನ್ನ ಸಮುದಾಯದಲ್ಲಿ ಸೇರಿದ ಒಬ್ಬ ವ್ಯಕ್ತಿಯನ್ನು ಪ್ರತ್ಯೇಕವಾಗಿ ಕರೆಯುವನು
عربي ಆಂಗ್ಲ ಉರ್ದು
ಓ ಅಲ್ಲಾಹನ ಸಂದೇಶವಾಹಕರೇ! ನಾನು ಚಿಕ್ಕ ಮತ್ತು ದೊಡ್ಡ ಯಾವುದೇ ಪಾಪಗಳನ್ನು ಮಾಡದೆ ಬಿಟ್ಟಿಲ್ಲ." ಅವರು ಕೇಳಿದರು: "ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ, ಮತ್ತು ಮುಹಮ್ಮದ್ ಅಲ್ಲಾಹನ ಸಂದೇಶವಾಹಕರು ಎಂದು ನೀನು ಸಾಕ್ಷಿ ವಹಿಸುವುದಿಲ್ಲವೇ?
عربي ಆಂಗ್ಲ ಉರ್ದು
ಕರ್ಮಗಳಲ್ಲಿ ಆರು ವಿಧಗಳಿವೆ. ಮನುಷ್ಯರಲ್ಲಿ ನಾಲ್ಕು ವರ್ಗಗಳಿವೆ. ಕಡ್ಡಾಯಗೊಳಿಸುವ ಎರಡು ಕಾರ್ಯಗಳಿವೆ. ತದ್ರೂಪವಾದ ಒಂದು ವಿಷಯವಿದೆ. ಹತ್ತು ಪಟ್ಟು ಪ್ರತಿಫಲವಿರುವ ಒಳಿತು ಮತ್ತು ಏಳು ನೂರು ಪಟ್ಟು ಪ್ರತಿಫಲವಿರುವ ಒಳಿತು ಇದೆ
عربي ಆಂಗ್ಲ ಉರ್ದು
ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ ಎಂದು ಹೇಳಿರಿ. ಪುನರುತ್ಥಾನ ದಿನದಂದು ನಾನು ಅದರ ಮೂಲಕ ನಿಮ್ಮ ಪರವಾಗಿ ಸಾಕ್ಷಿ ಹೇಳುವೆನು
عربي ಆಂಗ್ಲ ಉರ್ದು