1. ಮುಖಪುಟ
  2. ಕೃತಿಗಳು
  3. ಅಕೀದಾ

ಹದೀಸ್ ಯಾರು ಅಲ್ಲಾಹನೊಂದಿಗೆ ಏನನ್ನೂ ಸಹಭಾಗಿತ್ವ (ಶಿರ್ಕ್) ಮಾಡದೆ ಅವನನ್ನು ಭೇಟಿಯಾಗುತ್ತಾರೋ, (ಅವರು ಮಾಡಿದ) ಪಾಪವು ಅವರಿಗೆ ಹಾನಿಯುಂಟುಮಾಡುವುದಿಲ್ಲ. ಯಾರು ಅವನೊಂದಿಗೆ ಸಹಭಾಗಿತ್ವ (ಶಿರ್ಕ್) ಮಾಡುತ್ತಾ ಮರಣ ಹೊಂದುತ್ತಾರೋ, (ಅವರು ಮಾಡಿದ) ಸತ್ಕರ್ಮವು ಅವರಿಗೆ ಪ್ರಯೋಜನ ನೀಡುವುದಿಲ್ಲ

عَنْ عَبْدَ اللهِ بْنِ عَمْرٍو رَضيَ اللهُ عَنْهُمَا يَقُولُ: قَالَ رَسُولُ اللهِ صَلَّى اللهُ عَلَيْهِ وَسَلَّمَ:
«مَنْ لَقِيَ اللهَ لَا يُشْرِكُ بِهِ شَيْئًا لَمْ تَضُرَّهُ مَعَهُ خَطِيئَةٌ، وَمَنْ مَاتَ وَهُوَ يُشْرِكُ بِهِ لَمْ يَنْفَعْهُ مَعَهُ حَسَنَةٌ».

ಅಬ್ದುಲ್ಲಾ ಇಬ್ನ್ ಅಮ್ರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಯಾರು ಅಲ್ಲಾಹನೊಂದಿಗೆ ಏನನ್ನೂ ಸಹಭಾಗಿತ್ವ (ಶಿರ್ಕ್) ಮಾಡದೆ ಅವನನ್ನು ಭೇಟಿಯಾಗುತ್ತಾರೋ, (ಅವರು ಮಾಡಿದ) ಪಾಪವು ಅವರಿಗೆ ಹಾನಿಯುಂಟುಮಾಡುವುದಿಲ್ಲ. ಯಾರು ಅವನೊಂದಿಗೆ ಸಹಭಾಗಿತ್ವ (ಶಿರ್ಕ್) ಮಾಡುತ್ತಾ ಮರಣ ಹೊಂದುತ್ತಾರೋ, (ಅವರು ಮಾಡಿದ) ಸತ್ಕರ್ಮವು ಅವರಿಗೆ ಪ್ರಯೋಜನ ನೀಡುವುದಿಲ್ಲ."

صحيح رواه أحمد مسند أحمد - 6586

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸಿರುವುದೇನೆಂದರೆ, ಯಾರು ಏಕದೇವಾರಾಧಕನಾಗಿ, ಅಲ್ಲಾಹನೊಂದಿಗೆ ಏನನ್ನೂ ಸಹಭಾಗಿತ್ವ (ಶಿರ್ಕ್) ಮಾಡದೆ ಮರಣಹೊಂದಿ ಅಲ್ಲಾಹನನ್ನು ಭೇಟಿಯಾಗುತ್ತಾನೋ, ಅವನು ಸ್ವರ್ಗವಾಸಿಗಳಲ್ಲಿ ಸೇರಿದವನಾಗುತ್ತಾನೆ; ಒಂದು ವೇಳೆ ಅವನು ಮಾಡಿದ ಪಾಪಕ್ಕಾಗಿ ಅವನಿಗೆ ನರಕದಲ್ಲಿ (ತಾತ್ಕಾಲಿಕವಾಗಿ) ಶಿಕ್ಷೆಯಾದರೂ ಸರಿ (ಕೊನೆಗೆ ಸ್ವರ್ಗ ಸೇರುತ್ತಾನೆ). ಯಾರು ಅಲ್ಲಾಹನೊಂದಿಗೆ ಏನನ್ನಾದರೂ ಸಹಭಾಗಿತ್ವ ಮಾಡುತ್ತಾ (ಶಿರ್ಕ್ ಮಾಡುತ್ತಾ) ಮರಣ ಹೊಂದುತ್ತಾನೋ, ಆ ಶಿರ್ಕ್‌ನೊಂದಿಗೆ ಅವನ ಸತ್ಕರ್ಮವು ಅವನಿಗೆ ಪ್ರಯೋಜನ ನೀಡುವುದಿಲ್ಲ; ಮತ್ತು ಸ್ವರ್ಗವು ಅವನ ಪಾಲಿಗೆ ನಿಷಿದ್ಧವಾಗಿದೆ (ಹರಾಮ್).

ಹದೀಸಿನ ಪ್ರಯೋಜನಗಳು

  1. ಶಿರ್ಕ್ (ಬಹುದೇವಾರಾಧನೆ) ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಅದು ಅತ್ಯಂತ ದೊಡ್ಡ ಪಾಪ ಮತ್ತು ಅಪರಾಧವಾಗಿದೆ. ಅಲ್ಲಾಹು ಅದನ್ನು (ಶಿರ್ಕ್ ಸ್ಥಿತಿಯಲ್ಲಿ ಮೃತಪಟ್ಟವನನ್ನು) ಕ್ಷಮಿಸುವುದಿಲ್ಲ.
  2. ತೌಹೀದ್‌ನ (ಏಕದೇವಾರಾಧನೆಯ) ಶ್ರೇಷ್ಠತೆಯನ್ನು ತಿಳಿಸಲಾಗಿದೆ. ಇದು ಸ್ವರ್ಗ ಪ್ರವೇಶಕ್ಕೆ ಕಾರಣವಾಗುತ್ತದೆ; (ಪಾಪಗಳಿದ್ದರೆ) ಶಿಕ್ಷೆಗೆ ಒಳಗಾದ ನಂತರವಾದರೂ ಸರಿ (ಸ್ವರ್ಗ ಸಿಗುತ್ತದೆ).
  3. ಮರಣದವರೆಗೂ ತೌಹೀದ್‌ನಲ್ಲಿ ಸ್ಥಿರವಾಗಿರುವುದರ ಮತ್ತು ಅದರ ವಿರುದ್ಧವಾದ ಶಿರ್ಕ್ ಅನ್ನು ಎಸಗದೆ ಇರುವುದರ ಮಹತ್ವವನ್ನು ತಿಳಿಸಲಾಗಿದೆ.

ಅನುವಾದಗಳನ್ನು ತೋರಿಸಿ

29 ಭಾಷೆ
EN English الإنجليزية
UR اردو الأوردية
ID Indonesia الإندونيسية
BN বাংলা البنغالية
TR Türkçe التركية
RU Русский الروسية
BS Bosanski البوسنية
SI සිංහල السنهالية
HI हिन्दी الهندية
VI Tiếng Việt الفيتنامية
TL Tagalog تجالوج
KU Kurdî الكردية
HA Hausa الهوسا
PT Português البرتغالية
ML മലയാളം المليالم
TE తెలుగు التلغو
SW Kiswahili السواحيلية
TH ไทย التايلندية
AS অসমীয়া الأسامية
NL Nederlands الهولندية
GU ગુજરાતી الغوجاراتية
PRS دری الدرية
SR Српски الصربية
HU Magyar المجرية
KA ქართული الجورجية
MK Македонски المقدونية
KM ភាសាខ្មែរ الخميرية
PA ਪੰਜਾਬੀ البنجابية
MR मराठी الماراثية