ವರ್ಗ: Virtues and Manners .
+ -

عن أبي هريرة رضي الله عنه أن رسول الله صلى الله عليه وسلم كان يقول:
«الصَّلَوَاتُ الْخَمْسُ، وَالْجُمُعَةُ إِلَى الْجُمُعَةِ، وَرَمَضَانُ إِلَى رَمَضَانَ، مُكَفِّرَاتٌ مَا بَيْنَهُنَّ إِذَا اجْتَنَبَ الْكَبَائِرَ».

[صحيح] - [رواه مسلم] - [صحيح مسلم: 233]
المزيــد ...

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುತ್ತಿದ್ದರು:
“ಐದು ವೇಳೆಯ ನಮಾಝ್‌ಗಳು, ಒಂದು ಜುಮುಅದಿಂದ ಇನ್ನೊಂದು ಜುಮುಅ, ಒಂದು ರಮದಾನ್‌ನಿಂದ ಇನ್ನೊಂದು ರಮದಾನ್, ಅವುಗಳ ನಡುವಿನ ಪಾಪಗಳಿಗೆ ಪರಿಹಾರವಾಗಿದೆ; ಮಹಾಪಾಪಗಳಿಂದ ದೂರವಿದ್ದರೆ.”

[صحيح] - [رواه مسلم]

ವಿವರಣೆ

ಹಗಲು-ರಾತ್ರಿಯಲ್ಲಿ ಕಡ್ಡಾಯವಾಗಿರುವ ಐದು ವೇಳೆಯ ನಮಾಝ್‌ಗಳು, ಪ್ರತಿ ಶುಕ್ರವಾರ ನಿರ್ವಹಿಸುವ ಜುಮುಅ ನಮಾಝ್, ಪ್ರತಿ ವರ್ಷ ರಮದಾನ್ ತಿಂಗಳಲ್ಲಿ ಆಚರಿಸುವ ಉಪವಾಸಗಳು, ಅವುಗಳ ನಡುವೆ ಸಂಭವಿಸುವ ಕಿರುಪಾಪಗಳಿಗೆ ಪರಿಹಾರವಾಗಿದೆ. ಆದರೆ ಮಹಾಪಾಪಗಳಿಂದ ದೂರವಿರುವವರಿಗೆ ಮಾತ್ರ. ವ್ಯಭಿಚಾರ, ಮದ್ಯಪಾನ ಮುಂತಾದ ಮಹಾಪಾಪಗಳು ಪಶ್ಚಾತ್ತಾಪದಿಂದಲ್ಲದೆ ಪರಿಹಾರವಾಗುವುದಿಲ್ಲ.

ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಉಯ್ಘರ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ತಮಿಳು ಬರ್ಮೀ ಥಾಯ್ ಜರ್ಮನ್ ಜಪಾನೀ ಪಶ್ತೋ الأسامية الألبانية السويدية الأمهرية الهولندية الغوجاراتية القيرقيزية النيبالية اليوروبا الليتوانية الدرية الصومالية الطاجيكية الكينياروندا الرومانية المجرية التشيكية المالاجاشية الإيطالية الأورومو الأذربيجانية الأوزبكية الأوكرانية
ಅನುವಾದಗಳನ್ನು ತೋರಿಸಿ

ಹದೀಸಿನ ಪ್ರಯೋಜನಗಳು

  1. ಪಾಪಗಳಲ್ಲಿ ಕಿರುಪಾಪಗಳು ಮತ್ತು ಮಹಾಪಾಪಗಳಿವೆ ಎಂಬುದನ್ನು ಈ ಹದೀಸ್ ತಿಳಿಸುತ್ತದೆ.
  2. ಕಿರುಪಾಪಗಳು ಪರಿಹಾರವಾಗಬೇಕಾದರೆ ಮಹಾ ಪಾಪಗಳಿಂದ ದೂರವಿರಬೇಕಾದ ಷರತ್ತು ಇದೆ.
  3. ವ್ಯಭಿಚಾರ, ಮದ್ಯಪಾನ ಮುಂತಾದ ಇಹಲೋಕದಲ್ಲೇ ಶಿಕ್ಷೆ ನಿಗದಿಪಡಿಸಲಾದ, ಅಥವಾ ಪರಲೋಕದಲ್ಲಿ ಉಗ್ರ ಶಿಕ್ಷೆಯಿದೆಯೆಂದು, ಅಥವಾ ಅಲ್ಲಾಹನ ಕೋಪಕ್ಕೆ ಗುರಿಯಾಗಬೇಕಾದೀತೆಂದು ಎಚ್ಚರಿಸಲಾದ, ಅಥವಾ ಅದರ ಬಗ್ಗೆ ಬೆದರಿಸಲಾದ, ಅಥವಾ ಅದನ್ನು ಮಾಡುವವನನ್ನು ಶಪಿಸಲಾದ ಪಾಪಗಳೆಲ್ಲವೂ ಮಹಾಪಾಪಗಳಾಗಿವೆ.
ಇನ್ನಷ್ಟು