ಹದೀಸ್‌ಗಳ ಪಟ್ಟಿ

ವಿಧವೆ ಮತ್ತು ಬಡವರಿಗಾಗಿ ಪರಿಶ್ರಮಪಡುವವರು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡುವವರಿಗೆ, ಅಥವಾ ರಾತ್ರಿಯಿಡೀ ನಮಾಝ್ ಮಾಡುವವರು ಮತ್ತು ಹಗಲಿಡೀ ಉಪವಾಸ ಆಚರಿಸುವವರಿಗೆ ಸಮವಾಗಿದ್ದಾರೆ
عربي ಆಂಗ್ಲ ಉರ್ದು
“ನಿಮ್ಮ ಮನೆಗಳನ್ನು ಸಮಾಧಿಗಳನ್ನಾಗಿ ಮಾಡಬೇಡಿ; ನನ್ನ ಸಮಾಧಿಯನ್ನು ಉತ್ಸವ ಸ್ಥಳವಾಗಿ ಮಾಡಬೇಡಿ; ನನ್ನ ಮೇಲೆ ಸ್ವಲಾತ್ ಹೇಳಿರಿ, ನೀವು ಎಲ್ಲಿದ್ದರೂ ನಿಶ್ಚಯವಾಗಿಯೂ ನಿಮ್ಮ ಸ್ವಲಾತ್ ನನ್ನನ್ನು ತಲುಪುತ್ತದೆ.”
عربي ಆಂಗ್ಲ ಉರ್ದು
“ಐದು ವೇಳೆಯ ನಮಾಝ್‌ಗಳು, ಒಂದು ಜುಮುಅದಿಂದ ಇನ್ನೊಂದು ಜುಮುಅ, ಒಂದು ರಮದಾನ್‌ನಿಂದ ಇನ್ನೊಂದು ರಮದಾನ್, ಅವುಗಳ ನಡುವಿನ ಪಾಪಗಳಿಗೆ ಪರಿಹಾರವಾಗಿದೆ; ಮಹಾಪಾಪಗಳಿಂದ ದೂರವಿದ್ದರೆ.”
عربي ಆಂಗ್ಲ ಉರ್ದು
“ಒಬ್ಬ ಮುಸಲ್ಮಾನನಿಗೆ ಆಯಾಸ, ಅನಾರೋಗ್ಯ, ಆತಂಕ, ದುಃಖ, ಹಾನಿ, ಸಂಕಟ ಮುಂತಾದ ಯಾವುದೇ ಸಂಭವಿಸಿದರೂ, ಎಲ್ಲಿಯವರೆಗೆಂದರೆ ಒಂದು ಸಣ್ಣ ಮುಳ್ಳು ಚುಚ್ಚಿದರೂ ಸಹ, ಅದಕ್ಕೆ ಪರಿಹಾರವಾಗಿ ಅಲ್ಲಾಹು ಅವನ ಕೆಲವು ಪಾಪಗಳನ್ನು ಅಳಿಸದೆ ಇರುವುದಿಲ್ಲ.”
عربي ಆಂಗ್ಲ ಉರ್ದು
ಹಲಾಲ್ ಅತ್ಯಂತ ಸ್ಪಷ್ಟವಾಗಿದೆ ಮತ್ತು ಹರಾಮ್ ಕೂಡ ಅತ್ಯಂತ ಸ್ಪಷ್ಟವಾಗಿದೆ
عربي ಆಂಗ್ಲ ಉರ್ದು
ನೀವು ಅಲ್ಲಾಹನಲ್ಲಿ ಭರವಸೆಯಿಡಬೇಕಾದ ರೀತಿಯಲ್ಲೇ ಭರವಸೆಯಿಟ್ಟರೆ, ಅವನು ಹಕ್ಕಿಗಳಿಗೆ ಆಹಾರ ನೀಡುವಂತೆ ನಿಮಗೂ ಆಹಾರ ನೀಡುವನು. ಅವು ಬೆಳಗ್ಗೆ ಖಾಲಿ ಹೊಟ್ಟೆಯಿಂದ ಹೊರಟು ಸಂಜೆ ತುಂಬಿದ ಹೊಟ್ಟೆಯೊಂದಿಗೆ ಮರಳುತ್ತವೆ
عربي ಆಂಗ್ಲ ಉರ್ದು
ಒಬ್ಬ ದಾಸ ಪಾಪವನ್ನು ಮಾಡಿ ನಂತರ ಹೇಳುತ್ತಾನೆ: "ಓ ಅಲ್ಲಾಹ್! ನನ್ನ ಪಾಪವನ್ನು ಕ್ಷಮಿಸು
عربي ಆಂಗ್ಲ ಉರ್ದು
ಎಲ್ಲಾ ಒಳ್ಳೆಯ ಕಾರ್ಯಗಳು ದಾನವಾಗಿವೆ
عربي ಆಂಗ್ಲ ಉರ್ದು
“ಕುಟುಂಬ ಸಂಬಂಧ ಕಡಿಯುವವನು ಸ್ವರ್ಗವನ್ನು ಪ್ರವೇಶಿಸುವುದಿಲ್ಲ.”
عربي ಆಂಗ್ಲ ಉರ್ದು
“ಯಾರು ತನ್ನ ಜೀವನೋಪಾಯವು ವಿಶಾಲವಾಗಲು ಮತ್ತು ತನ್ನ ಆಯುಷ್ಯವು ದೀರ್ಘವಾಗಲು ಬಯಸುತ್ತಾನೋ ಅವನು ಕುಟುಂಬ ಸಂಬಂಧಗಳನ್ನು ಜೋಡಿಸಲಿ.”
عربي ಆಂಗ್ಲ ಉರ್ದು
ಪ್ರಾರ್ಥನೆಯೇ ಆರಾಧನೆ
عربي ಆಂಗ್ಲ ಉರ್ದು
“ಸರ್ವಶಕ್ತನಾದ ಅಲ್ಲಾಹನ ದೃಷ್ಟಿಯಲ್ಲಿ ಪ್ರಾರ್ಥನೆಗಿಂತಲೂ ಹೆಚ್ಚು ಗೌರವಾರ್ಹವಾದ ಬೇರೆ ವಿಷಯವಿಲ್ಲ.”
عربي ಆಂಗ್ಲ ಉರ್ದು
ಯಾರು ದಿನಕ್ಕೆ ನೂರು ಬಾರಿ ‘ಸುಬ್‌ಹಾನಲ್ಲಾಹಿ ವಬಿಹಮ್ದಿಹೀ’ ಎಂದು ಹೇಳುತ್ತಾರೋ, ಅವರ ಪಾಪಗಳು ಸಮುದ್ರದ ನೊರೆಯಷ್ಟೇ ಇದ್ದರೂ ಸಹ ಅಳಿಸಿಹೋಗುತ್ತವೆ
عربي ಆಂಗ್ಲ ಉರ್ದು
ಯಾರು ಹತ್ತು ಬಾರಿ — ಲಾ ಇಲಾಹ ಇಲ್ಲಲ್ಲಾಹು ವಹ್ದಹೂ ಲಾ ಶರೀಕ ಲಹೂ, ಲಹುಲ್ ಮುಲ್ಕು ವಲಹುಲ್ ಹಮ್ದು ವಹುವ ಅಲಾ ಕುಲ್ಲಿ ಶೈಇನ್ ಕದೀರ್ (ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ, ಅವನು ಏಕೈಕನು ಮತ್ತು ಸಹಭಾಗಿಗಳಿಲ್ಲದವನು, ಆಧಿಪತ್ಯವು ಅವನದ್ದು ಮತ್ತು ಸ್ತುತಿಯು ಅವನಿಗೆ, ಅವನು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ) ಎಂದು ಹೇಳುತ್ತಾನೋ
عربي ಆಂಗ್ಲ ಉರ್ದು
ಅಲ್ಲಾಹು ಯಾರಿಗೆ ಒಳಿತನ್ನು ಬಯಸುತ್ತಾನೋ ಅವನಿಗೆ ಧಾರ್ಮಿಕ ವಿಷಯಗಳಲ್ಲಿ ಪಾಂಡಿತ್ಯವನ್ನು ನೀಡುತ್ತಾನೆ
عربي ಆಂಗ್ಲ ಉರ್ದು
ಯಾರು ಅಲ್ಲಾಹನ ಗ್ರಂಥದಿಂದ ಒಂದು ಅಕ್ಷರವನ್ನು ಪಠಿಸುತ್ತಾರೋ ಅವರಿಗೆ ಒಂದು ಒಳಿತು ಮಾಡಿದ ಪ್ರತಿಫಲವಿದೆ. ಒಂದು ಒಳಿತು ಅದರ ಹತ್ತು ಪಟ್ಟು ಒಳಿತುಗಳ ಪ್ರತಿಫಲವನ್ನು ಒಳಗೊಂಡಿದೆ
عربي ಆಂಗ್ಲ ಉರ್ದು
ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ ಮತ್ತು ಮುಹಮ್ಮದ್ ಅಲ್ಲಾಹನ ಸಂದೇಶವಾಹಕರಾಗಿದ್ದಾರೆ ಎಂದು ಯಾರು ತನ್ನ ಹೃದಯದಿಂದ ಪ್ರಾಮಾಣಿಕವಾಗಿ ಸಾಕ್ಷಿ ವಹಿಸುತ್ತಾನೋ ಅವನನ್ನು ಅಲ್ಲಾಹು ನರಕಾಗ್ನಿಗೆ ನಿಷಿದ್ಧಗೊಳಿಸದೇ ಇರಲಾರ
عربي ಆಂಗ್ಲ ಉರ್ದು
ಅಲ್ಲಾಹನನ್ನು ಮಾತ್ರ ಆರಾಧಿಸುವುದು ಹಾಗೂ ಅವನೊಂದಿಗೆ ಏನನ್ನೂ ಸಹಭಾಗಿತ್ವ (ಶಿರ್ಕ್) ಮಾಡದಿರುವುದು ದಾಸರ ಮೇಲಿರುವ ಅಲ್ಲಾಹನ ಹಕ್ಕಾಗಿದೆ. ತನ್ನೊಂದಿಗೆ ಏನನ್ನೂ ಸಹಭಾಗಿತ್ವ (ಶಿರ್ಕ್) ಮಾಡದವರನ್ನು ಶಿಕ್ಷಿಸದಿರುವುದು ಅಲ್ಲಾಹನ ಮೇಲಿರುವ ದಾಸರ ಹಕ್ಕಾಗಿದೆ
عربي ಆಂಗ್ಲ ಉರ್ದು
ಅಲ್ಲಾಹನೊಡನೆ ಸಹಭಾಗಿತ್ವ (ಶಿರ್ಕ್) ಮಾಡದ ಸ್ಥಿತಿಯಲ್ಲಿ ನಿಧನರಾಗುವವರು ಸ್ವರ್ಗವನ್ನು ಪ್ರವೇಶಿಸುತ್ತಾರೆ; ಮತ್ತು ಅಲ್ಲಾಹನೊಡನೆ ಸಹಭಾಗಿತ್ವ ಮಾಡಿದ ಸ್ಥಿತಿಯಲ್ಲಿ ನಿಧನರಾಗುವವರು ನರಕವನ್ನು ಪ್ರವೇಶಿಸುತ್ತಾರೆ
عربي ಆಂಗ್ಲ ಉರ್ದು
ನಿಶ್ಚಯವಾಗಿಯೂ ಪುನರುತ್ಥಾನ ದಿನ ಅಲ್ಲಾಹು ಎಲ್ಲಾ ಸೃಷ್ಟಿಗಳ ಮುಂಭಾಗದಲ್ಲಿ ನನ್ನ ಸಮುದಾಯದಲ್ಲಿ ಸೇರಿದ ಒಬ್ಬ ವ್ಯಕ್ತಿಯನ್ನು ಪ್ರತ್ಯೇಕವಾಗಿ ಕರೆಯುವನು
عربي ಆಂಗ್ಲ ಉರ್ದು
ಅಲ್ಲಾಹನನ್ನು ಭಯಪಡಿರಿ, ಕಿವಿಗೊಡಿರಿ ಮತ್ತು ಅನುಸರಿಸಿರಿ, ನಿಮ್ಮ ಆಡಳಿತಗಾರನು ಅಬಿಸೀನಿಯಾದ ಗುಲಾಮನಾಗಿದ್ದರೂ ಸಹ. ನನ್ನ ಕಾಲಾನಂತರ ನಿಮ್ಮಲ್ಲಿ ಯಾರು ಬದುಕಿರುತ್ತಾರೋ ಅವರು ಬಹಳಷ್ಟು ಭಿನ್ನಾಭಿಪ್ರಾಯಗಳನ್ನು ಕಾಣುವರು. ಆಗ ನೀವು ನನ್ನ ಚರ್ಯೆಗೆ ಮತ್ತು ಸರಿಯಾದ ಸನ್ಮಾರ್ಗದಲ್ಲಿರುವ ಖಲೀಫರ ಚರ್ಯೆಗೆ ಬದ್ಧರಾಗಿರಿ
عربي ಆಂಗ್ಲ ಉರ್ದು
ಮುಅಝ್ಝಿನ್ 'ಅಲ್ಲಾಹು ಅಕ್ಬರ್ ಅಲ್ಲಾಹು ಅಕ್ಬರ್' ಎಂದು ಹೇಳುವಾಗ ನಿಮ್ಮಲ್ಲೊಬ್ಬರು ಹೃದಯಾಂತರಾಳದಿಂದ 'ಅಲ್ಲಾಹು ಅಕ್ಬರ್ ಅಲ್ಲಾಹು ಅಕ್ಬರ್' ಎಂದು ಹೇಳಿದರೆ
عربي ಆಂಗ್ಲ ಉರ್ದು
ಅಲ್ಲಾಹು ಹೇಳುತ್ತಾನೆ: ನಾನು ನಮಾಝನ್ನು ನನ್ನ ಮತ್ತು ನನ್ನ ದಾಸನ ನಡುವೆ ಎರಡು ಭಾಗಗಳಾಗಿ ವಿಭಜಿಸಿದ್ದೇನೆ. ನನ್ನ ದಾಸನಿಗೆ ಅವನು ಬೇಡುವುದೆಲ್ಲವೂ ಇದೆ
عربي ಆಂಗ್ಲ ಉರ್ದು
ನಾನು ನಿಮ್ಮಿಂದ ಆಣೆ ಮಾಡಿಸಿದ್ದು ನಿಮ್ಮ ಮೇಲೆ ಅಪವಾದ ಹೊರಿಸುವುದಕ್ಕಲ್ಲ. ಬದಲಿಗೆ, ಸರ್ವಶಕ್ತನಾದ ಅಲ್ಲಾಹು ದೇವದೂತರ ಸಮ್ಮುಖದಲ್ಲಿ ನಿಮ್ಮ ಬಗ್ಗೆ ಹೇಳಿ ಹೆಮ್ಮೆಪಡುತ್ತಿದ್ದಾನೆಂದು ಜಿಬ್ರೀಲ್ ಬಂದು ನನಗೆ ತಿಳಿಸಿದರು
عربي ಆಂಗ್ಲ ಉರ್ದು
ನೀವು ಸತ್ಯವಿಶ್ವಾಸಿಗಳಾಗುವ ತನಕ ನೀವು ಸ್ವರ್ಗವನ್ನು ಪ್ರವೇಶಿಸುವುದಿಲ್ಲ, ಮತ್ತು ನೀವು ಪರಸ್ಪರ ಪ್ರೀತಿಸುವ ತನಕ ನೀವು ಸತ್ಯವಿಶ್ವಾಸಿಗಳಾಗುವುದಿಲ್ಲ. ನೀವು ಪರಸ್ಪರ ಪ್ರೀತಿಸುವಂತೆ ಮಾಡುವ ಒಂದು ವಿಷಯವನ್ನು ನಾನು ನಿಮಗೆ ತಿಳಿಸಲೇ? ನಿಮ್ಮ ಮಧ್ಯೆ ಸಲಾಮ್ ಹೇಳುವುದನ್ನು ವ್ಯಾಪಕಗೊಳಿಸಿ
عربي ಆಂಗ್ಲ ಉರ್ದು
ಅಲ್ಲಾಹು ಅತ್ಯಂತ ಇಷ್ಟಪಡುವ ಕರ್ಮ ಯಾವುದು?” ಅವರು ಉತ್ತರಿಸಿದರು: “ನಮಾಝನ್ನು ಅದರ ಸಮಯದಲ್ಲಿ ನಿರ್ವಹಿಸುವುದು.” ನಾನು ಕೇಳಿದೆ: “ನಂತರ ಯಾವುದು?” ಅವರು ಉತ್ತರಿಸಿದರು: “ನಂತರ ಮಾತಾಪಿತರಿಗೆ ಒಳಿತು ಮಾಡುವುದು.” ನಾನು ಕೇಳಿದೆ: “ನಂತರ ಯಾವುದು?” ಅವರು ಉತ್ತರಿಸಿದರು: “ಅಲ್ಲಾಹನ ಮಾರ್ಗದಲ್ಲಿ ಜಿಹಾದ್ ಮಾಡುವುದು
عربي ಆಂಗ್ಲ ಉರ್ದು
ಶಕುನ ನಂಬುವುದು ಶಿರ್ಕ್, ಶಕುನ ನಂಬುವುದು ಶಿರ್ಕ್, ಶಕುನ ನಂಬುವುದು ಶಿರ್ಕ್." (ಅವರು ಇದನ್ನು ಮೂರು ಬಾರಿ ಹೇಳಿದರು). "ಆದರೆ ನಮ್ಮಲ್ಲಿ (ಶಕುನ ನಂಬದವರು) ಯಾರೂ ಇಲ್ಲ. ಆದರೆ ಅಲ್ಲಾಹು ಅದನ್ನು ತವಕ್ಕುಲ್ (ಭರವಸೆ) ನಿಂದ ನಿವಾರಿಸುತ್ತಾನೆ
عربي ಆಂಗ್ಲ ಉರ್ದು
ನಿಮ್ಮ ಪರಿಪಾಲಕನಾದ ಅಲ್ಲಾಹನನ್ನು ಭಯಪಡಿರಿ, ನಿಮ್ಮ ಐದು ವೇಳೆಯ ನಮಾಝ್‌ಗಳನ್ನು ನಿರ್ವಹಿಸಿರಿ, ನಿಮ್ಮ (ರಮದಾನ್) ತಿಂಗಳಲ್ಲಿ ಉಪವಾಸ ಆಚರಿಸಿರಿ, ನಿಮ್ಮ ಸಂಪತ್ತಿನ ಝಕಾತನ್ನು ನೀಡಿರಿ ಮತ್ತು ನಿಮ್ಮ ಆಡಳಿತಗಾರರನ್ನು ಅನುಸರಿಸಿರಿ. ನೀವು ನಿಮ್ಮ ಪರಿಪಾಲಕನ (ಅಲ್ಲಾಹನ) ಸ್ವರ್ಗವನ್ನು ಪ್ರವೇಶಿಸುವಿರಿ
عربي ಆಂಗ್ಲ ಉರ್ದು
ಓ ಅಲ್ಲಾಹನ ಸಂದೇಶವಾಹಕರೇ! ನಾನು ಚಿಕ್ಕ ಮತ್ತು ದೊಡ್ಡ ಯಾವುದೇ ಪಾಪಗಳನ್ನು ಮಾಡದೆ ಬಿಟ್ಟಿಲ್ಲ." ಅವರು ಕೇಳಿದರು: "ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ, ಮತ್ತು ಮುಹಮ್ಮದ್ ಅಲ್ಲಾಹನ ಸಂದೇಶವಾಹಕರು ಎಂದು ನೀನು ಸಾಕ್ಷಿ ವಹಿಸುವುದಿಲ್ಲವೇ?
عربي ಆಂಗ್ಲ ಉರ್ದು
ಕರ್ಮಗಳಲ್ಲಿ ಆರು ವಿಧಗಳಿವೆ. ಮನುಷ್ಯರಲ್ಲಿ ನಾಲ್ಕು ವರ್ಗಗಳಿವೆ. ಕಡ್ಡಾಯಗೊಳಿಸುವ ಎರಡು ಕಾರ್ಯಗಳಿವೆ. ತದ್ರೂಪವಾದ ಒಂದು ವಿಷಯವಿದೆ. ಹತ್ತು ಪಟ್ಟು ಪ್ರತಿಫಲವಿರುವ ಒಳಿತು ಮತ್ತು ಏಳು ನೂರು ಪಟ್ಟು ಪ್ರತಿಫಲವಿರುವ ಒಳಿತು ಇದೆ
عربي ಆಂಗ್ಲ ಉರ್ದು
“ನಿಶ್ಚಯವಾಗಿಯೂ ಜ್ಞಾನ ಎತ್ತಲಾಗುವುದು, ಅಜ್ಞಾನ ಹೆಚ್ಚಾಗುವುದು, ವ್ಯಭಿಚಾರ ಹೆಚ್ಚಾಗುವುದು, ಮಧ್ಯಪಾನ ಹೆಚ್ಚಾಗುವುದು, ಪುರುಷರು ಕಡಿಮೆಯಾಗಿ ಮಹಿಳೆಯರು ಹೆಚ್ಚಾಗುವುದು, ಎಲ್ಲಿಯವರೆಗೆಂದರೆ ಐವತ್ತು ಮಹಿಳೆಯರನ್ನು ನೋಡಿಕೊಳ್ಳಲು ಒಬ್ಬ ಪುರುಷ ಮಾತ್ರವಿರುವುದು ಪ್ರಳಯದ ಚಿಹ್ನೆಗಳಾಗಿವೆ
عربي ಆಂಗ್ಲ ಉರ್ದು
ಒಮ್ಮೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಒಂದು ವಿಷಯವನ್ನು ಪ್ರಸ್ತಾಪಿಸುತ್ತಾ ಹೇಳಿದರು: "ಅದು ಜ್ಞಾನವು ಹೊರಟುಹೋಗುವ ಸಮಯದಲ್ಲಾಗಿದೆ
عربي ಆಂಗ್ಲ ಉರ್ದು
ವಿದ್ವಾಂಸರ ನಡುವೆ ಮೆರೆಯಲು, ಅಥವಾ ಅವಿವೇಕಿಗಳೊಡನೆ ತರ್ಕಿಸಲು, ಅಥವಾ ಸಭೆಗಳಲ್ಲಿ ಶ್ರೇಷ್ಠ ಸ್ಥಾನಮಾನ ಪಡೆಯಲು ಜ್ಞಾನವನ್ನು ಕಲಿಯಬೇಡಿ
عربي ಆಂಗ್ಲ ಉರ್ದು
ಅಲ್ಲಾಹು ನೇರ ಮಾರ್ಗದ ಒಂದು ಉದಾಹರಣೆಯನ್ನು ನೀಡುತ್ತಾನೆ
عربي ಆಂಗ್ಲ ಉರ್ದು
ನಿಮ್ಮಲ್ಲೊಬ್ಬನು ತನ್ನ ಮನೆಗೆ ಹಿಂದಿರುಗಿ ಬರುವಾಗ ಅಲ್ಲಿ ಮೂರು ದೊಡ್ಡ ಕೊಬ್ಬಿದ ಗರ್ಭಿಣಿ ಹೆಣ್ಣು ಒಂಟೆಗಳನ್ನು ಕಾಣಲು ಇಷ್ಟಪಡುತ್ತಾನೆಯೇ?
عربي ಆಂಗ್ಲ ಉರ್ದು
ಕುರ್‌ಆನಿನ ವ್ಯಕ್ತಿಯೊಡನೆ ಹೇಳಲಾಗುವುದು: ಪಠಿಸು ಮತ್ತು ಏರುತ್ತಾ ಹೋಗು. ಇಹಲೋಕದಲ್ಲಿ ಸಾವಧಾನದಿಂದ ಪಠಿಸುತ್ತಿದ್ದಂತೆ ಪಠಿಸು. ನೀನು ಪಠಿಸುವ ಕೊನೆಯ ವಚನದ ಬಳಿ ನಿನ್ನ ಪದವಿಯಿದೆ
عربي ಆಂಗ್ಲ ಉರ್ದು
ಬಹಿರಂಗವಾಗಿ ಕುರ್‌ಆನ್ ಪಠಿಸುವವನು ಬಹಿರಂಗವಾಗಿ ದಾನ ಮಾಡುವವನಂತೆ. ರಹಸ್ಯವಾಗಿ ಕುರ್‌ಆನ್ ಪಠಿಸುವವನು ರಹಸ್ಯವಾಗಿ ದಾನಮಾಡುವವನಂತೆ
عربي ಆಂಗ್ಲ ಉರ್ದು
ಅವರು ಪ್ರವಾದಿಯವರಿಂದ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹತ್ತು ವಚನಗಳನ್ನು ಕಲಿಯುತ್ತಿದ್ದರು. ನಂತರ ಆ ಹತ್ತು ವಚನಗಳಲ್ಲಿರುವ ಜ್ಞಾನ ಮತ್ತು ಕರ್ಮವನ್ನು ಕಲಿತುಕೊಳ್ಳದೆ ಅವರು ಮುಂದಿನ ಹತ್ತು ವಚನಗಳಿಗೆ ಹೋಗುತ್ತಿರಲಿಲ್ಲ
عربي ಆಂಗ್ಲ ಉರ್ದು
ಓ ಅಬೂ ಮುಂದಿರ್! ನಿಮ್ಮ ಕೈಯಲ್ಲಿರುವ ಅಲ್ಲಾಹನ ಗ್ರಂಥದಲ್ಲಿ ಅತಿ ಶ್ರೇಷ್ಠವಾದ ವಚನ ಯಾವುದೆಂದು ನಿಮಗೆ ತಿಳಿದಿದೆಯೇ?" ನಾನು ಹೇಳಿದೆ: "ಅಲ್ಲಾಹು ಲಾ ಇಲಾಹ ಇಲ್ಲಾ ಹುವಲ್ ಹಯ್ಯುಲ್ ಕಯ್ಯೂಮ್ (ಆಯತುಲ್ ಕುರ್ಸಿ) [ಬಕರ: 255]". ಆಗ ಅವರು ನನ್ನ ಎದೆಗೆ ತಟ್ಟುತ್ತಾ ಹೇಳಿದರು: "ಅಲ್ಲಾಹನಾಣೆ! ಓ ಅಬೂ ಮುಂದಿರ್, ಜ್ಞಾನವು ನಿಮಗೆ ಸಂತೋಷವನ್ನು ದಯಪಾಲಿಸಲಿ
عربي ಆಂಗ್ಲ ಉರ್ದು
ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ ಎಂದು ಹೇಳಿರಿ. ಪುನರುತ್ಥಾನ ದಿನದಂದು ನಾನು ಅದರ ಮೂಲಕ ನಿಮ್ಮ ಪರವಾಗಿ ಸಾಕ್ಷಿ ಹೇಳುವೆನು
عربي ಆಂಗ್ಲ ಉರ್ದು
ಮುಅಝ್ಝಿನ್ ಅಝಾನ್ ನೀಡುವುದನ್ನು ಕೇಳಿದರೆ, ಅವರು ಹೇಳಿದಂತೆಯೇ ಹೇಳಿರಿ. ನಂತರ ನನ್ನ ಮೇಲೆ ಸಲಾತ್ ಹೇಳಿರಿ
عربي ಆಂಗ್ಲ ಉರ್ದು
ಅವನು ಖಿನ್‌ಝಬ್ ಎಂಬ ಹೆಸರಿನ ಶೈತಾನ್. ನಿಮಗೆ ಅವನ ಅನುಭವವಾದರೆ, ಅವನ ವಿರುದ್ಧ ಅಲ್ಲಾಹನಲ್ಲಿ ರಕ್ಷೆ ಬೇಡಿರಿ, ಮತ್ತು ನಿಮ್ಮ ಎಡಭಾಗಕ್ಕೆ ಮೂರು ಸಲ ಹಗುರವಾಗಿ ಉಗಿಯಿರಿ
عربي ಆಂಗ್ಲ ಉರ್ದು