عَنْ عَائِشَةَ أُمِّ المؤْمِنين رَضيَ اللهُ عنها قَالَتْ:
جَاءَتْنِي مِسْكِينَةٌ تَحْمِلُ ابْنَتَيْنِ لَهَا، فَأَطْعَمْتُهَا ثَلَاثَ تَمَرَاتٍ، فَأَعْطَتْ كُلَّ وَاحِدَةٍ مِنْهُمَا تَمْرَةً، وَرَفَعَتْ إِلَى فِيهَا تَمْرَةً لِتَأْكُلَهَا، فَاسْتَطْعَمَتْهَا ابْنَتَاهَا، فَشَقَّتِ التَّمْرَةَ الَّتِي كَانَتْ تُرِيدُ أَنْ تَأْكُلَهَا بَيْنَهُمَا، فَأَعْجَبَنِي شَأْنُهَا، فَذَكَرْتُ الَّذِي صَنَعَتْ لِرَسُولِ اللهِ صَلَّى اللهُ عَلَيْهِ وَسَلَّمَ، فَقَالَ: «إِنَّ اللهَ قَدْ أَوْجَبَ لَهَا بِهَا الْجَنَّةَ، أَوْ أَعْتَقَهَا بِهَا مِنَ النَّارِ».
[صحيح] - [رواه مسلم] - [صحيح مسلم: 2630]
المزيــد ...
ಸತ್ಯವಿಶ್ವಾಸಿಗಳ ಮಾತೆ ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು:
ಒಬ್ಬ ಬಡ ಮಹಿಳೆ ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಹೊತ್ತುಕೊಂಡು ನನ್ನ ಬಳಿಗೆ ಬಂದಳು. ನಾನು ಅವಳಿಗೆ ಮೂರು ಖರ್ಜೂರಗಳನ್ನು ತಿನ್ನಲು ಕೊಟ್ಟೆನು. ಅವಳು ತನ್ನ ಇಬ್ಬರು ಹೆಣ್ಣು ಮಕ್ಕಳಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ಖರ್ಜೂರವನ್ನು ಕೊಟ್ಟಳು. ಇನ್ನೊಂದು ಖರ್ಜೂರವನ್ನು ತಾನು ತಿನ್ನಲು ತನ್ನ ಬಾಯಿಯ ಕಡೆಗೆ ಎತ್ತಿದಳು. ಆಗ ಅವಳ ಇಬ್ಬರು ಹೆಣ್ಣು ಮಕ್ಕಳು ಅವಳಿಂದ ಆ (ಮೂರನೇ) ಖರ್ಜೂರವನ್ನು ಕೇಳಿದರು. ಆಗ ಅವಳು ತಾನು ತಿನ್ನಬೇಕೆಂದಿದ್ದ ಖರ್ಜೂರವನ್ನು ಎರಡು ಭಾಗ ಮಾಡಿ ಅವರಿಬ್ಬರಿಗೆ ಹಂಚಿದಳು. ಅವಳ ಈ ಕಾರ್ಯವು ನನಗೆ ಬಹಳ ಆಶ್ಚರ್ಯವನ್ನುಂಟುಮಾಡಿತು. ಅವಳು ಮಾಡಿದ್ದನ್ನು ನಾನು ಅಲ್ಲಾಹನ ಸಂದೇಶವಾಹಕರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸಿದೆನು. ಆಗ ಅವರು ಹೇಳಿದರು: "ಖಂಡಿತವಾಗಿಯೂ ಅಲ್ಲಾಹು ಅದರ ಕಾರಣದಿಂದ ಅವಳಿಗೆ ಸ್ವರ್ಗವನ್ನು ಕಡ್ಡಾಯಗೊಳಿಸಿದ್ದಾನೆ. ಅಥವಾ ಅದರ ಕಾರಣದಿಂದ ಅವಳನ್ನು ನರಕದಿಂದ ಮುಕ್ತಗೊಳಿಸಿದ್ದಾನೆ".
[صحيح] - [رواه مسلم] - [صحيح مسلم - 2630]
ಸತ್ಯವಿಶ್ವಾಸಿಗಳ ಮಾತೆ ಆಯಿಷಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ತಿಳಿಸುವುದೇನೆಂದರೆ, ಒಬ್ಬ ಬಡ ಮಹಿಳೆ ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಹೊತ್ತುಕೊಂಡು ಅವರ ಬಳಿ (ಸಹಾಯ) ಕೇಳಿದಳು. ಆಗ ಅವರು ಅವಳಿಗೆ ಮೂರು ಖರ್ಜೂರಗಳನ್ನು ತಿನ್ನಲು ಕೊಟ್ಟರು. ಅವಳು ತನ್ನ ಇಬ್ಬರು ಹೆಣ್ಣು ಮಕ್ಕಳಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ಖರ್ಜೂರವನ್ನು ಕೊಟ್ಟಳು. ಇನ್ನೊಂದು ಖರ್ಜೂರವನ್ನು ತಾನು ತಿನ್ನಲು ತನ್ನ ಬಾಯಿಯ ಕಡೆಗೆ ಎತ್ತಿದಳು. ಆಗ ಅವಳ ಇಬ್ಬರು ಹೆಣ್ಣು ಮಕ್ಕಳು ಅವಳು ತಿನ್ನಬೇಕೆಂದಿದ್ದ ಖರ್ಜೂರವನ್ನು ಕೇಳಿದರು. ಆಗ ಅವಳು ಆ ಖರ್ಜೂರವನ್ನು ಎರಡು ತುಂಡು ಮಾಡಿ ಅವರಿಬ್ಬರಿಗೆ ಹಂಚಿದಳು. ಆಯಿಷಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಗೆ ಅವಳ ಈ ಕಾರ್ಯವು ಬಹಳ ಆಶ್ಚರ್ಯವನ್ನುಂಟುಮಾಡಿತು. ಅವರು ಆ ಮಹಿಳೆ ಮಾಡಿದ್ದನ್ನು ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸಿದರು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ಖಂಡಿತವಾಗಿಯೂ ಅಲ್ಲಾಹು ಈ ಖರ್ಜೂರದ ಕಾರಣದಿಂದ ಅವಳಿಗೆ ಸ್ವರ್ಗವನ್ನು ಕಡ್ಡಾಯಗೊಳಿಸಿದ್ದಾನೆ, ಅಥವಾ ಅದರ ಕಾರಣದಿಂದ ಅವಳನ್ನು ನರಕದಿಂದ ಮುಕ್ತಗೊಳಿಸಿದ್ದಾನೆ.