عَنْ أَبِي هُرَيْرَةَ قَالَ: قَالَ النَّبِيُّ صَلَّى اللهُ عَلَيْهِ وَسَلَّمَ:
«السَّاعِي عَلَى الأَرْمَلَةِ وَالمِسْكِينِ، كَالْمُجَاهِدِ فِي سَبِيلِ اللَّهِ، أَوِ القَائِمِ اللَّيْلَ الصَّائِمِ النَّهَارَ».
[صحيح] - [متفق عليه] - [صحيح البخاري: 5661]
المزيــد ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ವಿಧವೆ ಮತ್ತು ಬಡವರಿಗಾಗಿ ಪರಿಶ್ರಮಪಡುವವರು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡುವವರಿಗೆ, ಅಥವಾ ರಾತ್ರಿಯಿಡೀ ನಮಾಝ್ ಮಾಡುವವರು ಮತ್ತು ಹಗಲಿಡೀ ಉಪವಾಸ ಆಚರಿಸುವವರಿಗೆ ಸಮವಾಗಿದ್ದಾರೆ."
[صحيح] - [متفق عليه] - [صحيح البخاري - 5661]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಗಂಡನನ್ನು ಕಳಕೊಂಡು ನೋಡಿಕೊಳ್ಳಲು ಯಾರೂ ಇಲ್ಲದ ವಿಧವೆಯ ಮತ್ತು ನಿರ್ಗತಿಕರ ಯೋಗಕ್ಷೇಮ ನೋಡುವವರು ಮತ್ತು ಅಲ್ಲಾಹನಿಂದ ಪ್ರತಿಫಲವನ್ನು ಅಪೇಕ್ಷಿಸಿ ಅವರಿಗೆ ಖರ್ಚು ಮಾಡುವವರು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡುವ ಧರ್ಮಯೋಧರು ಪಡೆಯುವ ಪ್ರತಿಫಲವನ್ನು ಅಥವಾ ದಣಿವಿಲ್ಲದೆ ರಾತ್ರಿ ತಹಜ್ಜುದ್ ನಮಾಝ್ ಮಾಡುವವರು ಮತ್ತು ನಿರಂತರ ಉಪವಾಸ ಆಚರಿಸುವವರು ಪಡೆಯುವ ಪ್ರತಿಫಲವನ್ನು ಪಡೆಯುತ್ತಾರೆ.