عَنْ أَبِي هُرَيْرَةَ رضي الله عنه أَنَّ رَسُولَ اللهِ صَلَّى اللهُ عَلَيْهِ وَسَلَّمَ قَالَ:
«بَادِرُوا بِالْأَعْمَالِ فِتَنًا كَقِطَعِ اللَّيْلِ الْمُظْلِمِ، يُصْبِحُ الرَّجُلُ مُؤْمِنًا وَيُمْسِي كَافِرًا، أَوْ يُمْسِي مُؤْمِنًا وَيُصْبِحُ كَافِرًا، يَبِيعُ دِينَهُ بِعَرَضٍ مِنَ الدُّنْيَا».
[صحيح] - [رواه مسلم] - [صحيح مسلم: 118]
المزيــد ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಅಂಧಕಾರ ತುಂಬಿದ ರಾತ್ರಿಗಳ ತುಂಡುಗಳಂತಿರುವ ಪರೀಕ್ಷೆಗಳು ಬರುವುದಕ್ಕೆ ಮೊದಲು ಸತ್ಕರ್ಮಗಳನ್ನು ಮಾಡಲು ಧಾವಿಸಿರಿ. ಆಗ ಬೆಳಗ್ಗೆ ಸತ್ಯವಿಶ್ವಾಸಿಯಾಗಿದ್ದ ವ್ಯಕ್ತಿ ಸಂಜೆಯಾದಾಗ ಸತ್ಯನಿಷೇಧಿಯಾಗುವನು ಅಥವಾ ಸಂಜೆ ಸತ್ಯವಿಶ್ವಾಸಿಯಾಗಿದ್ದ ವ್ಯಕ್ತಿ ಬೆಳಗಾದಾಗ ಸತ್ಯನಿಷೇಧಿಯಾಗುವನು. ಭೌತಿಕ ಲಾಭಕ್ಕಾಗಿ ಅವನು ತನ್ನ ಧರ್ಮವನ್ನು ಮಾರಾಟ ಮಾಡುವನು."
[صحيح] - [رواه مسلم] - [صحيح مسلم - 118]
ಸತ್ಕರ್ಮಗಳನ್ನು ತಡೆಯುವ ಮತ್ತು ಹಿಮ್ಮೆಟ್ಟಿಸುವ ಪರೀಕ್ಷೆಗಳು ಮತ್ತು ಸಂಶಯಗಳು ಉದ್ಭವಿಸಿ, ಸತ್ಕರ್ಮಗಳನ್ನು ನಿರ್ವಹಿಸಲು ಸಾಧ್ಯವಾಗದ ಅಥವಾ ಅದನ್ನು ಬಿಟ್ಟು ಬೇರೆ ಕೆಲಸಗಳಲ್ಲಿ ನಿರತರಾಗುವ ಮೊದಲು ಸತ್ಕರ್ಮಗಳನ್ನು ನಿರ್ವಹಿಸಲು ಆತುರಪಡುವಂತೆ ಮತ್ತು ಅವುಗಳನ್ನು ಹೆಚ್ಚು ಹೆಚ್ಚಾಗಿ ನಿರ್ವಹಿಸುವಂತೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಒತ್ತಾಯಿಸುತ್ತಿದ್ದಾರೆ. ಆ ಪರೀಕ್ಷೆಗಳು ರಾತ್ರಿಯ ತುಂಡುಗಳಂತಿರುವ ಅಂಧಕಾರಗಳಾಗಿದ್ದು, ಅದರಲ್ಲಿ ಸತ್ಯ ಮತ್ತು ಅಸತ್ಯವು ಮಿಶ್ರವಾಗಿದೆ. ಅವುಗಳನ್ನು ವಿವೇಚಿಸಿ ತಿಳಿಯಲು ಜನರಿಗೆ ಕಷ್ಟವಾಗುವುದು. ಅವುಗಳ ತೀವ್ರತೆಯಿಂದಾಗಿ ಮನುಷ್ಯನು ಗೊತ್ತುಗುರಿಯಿಲ್ಲದೆ ಅಲೆಯುವನು. ಎಲ್ಲಿಯವರೆಗೆಂದರೆ, ಬೆಳಗ್ಗೆ ಸತ್ಯವಿಶ್ವಾಸಿಯಾಗಿದ್ದ ವ್ಯಕ್ತಿ ಸಂಜೆಯಾದಾಗ ಸತ್ಯನಿಷೇಧಿಯಾಗುವನು ಅಥವಾ ಸಂಜೆ ಸತ್ಯವಿಶ್ವಾಸಿಯಾಗಿದ್ದ ವ್ಯಕ್ತಿ ಬೆಳಗಾದಾಗ ಸತ್ಯನಿಷೇಧಿಯಾಗುವನು. ತಾತ್ಕಾಲಿಕ ಭೌತಿಕ ಆನಂದಕ್ಕಾಗಿ ಅವನು ತನ್ನ ಧರ್ಮವನ್ನು ತೊರೆಯುವನು.