عن بعض أزواج النبي صلى الله عليه وسلم عن النبي صلى الله عليه وسلم قال:
«مَنْ أَتَى عَرَّافًا فَسَأَلَهُ عَنْ شَيْءٍ لَمْ تُقْبَلْ لَهُ صَلَاةٌ أَرْبَعِينَ لَيْلَةً».
[صحيح] - [رواه مسلم] - [صحيح مسلم: 2230]
المزيــد ...
ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೆಲವು ಪತ್ನಿಯರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಯಾರಾದರೂ ಭವಿಷ್ಯ ನುಡಿಯುವವನ ಬಳಿಗೆ ಹೋಗಿ, ಅವನೊಡನೆ ಏನಾದರೂ ವಿಷಯದ ಬಗ್ಗೆ ಕೇಳಿದರೆ ಅವನ ನಲ್ವತ್ತು ದಿನಗಳ ನಮಾಝ್ ಸ್ವೀಕರಿಸಲ್ಪಡುವುದಿಲ್ಲ."
[صحيح] - [رواه مسلم] - [صحيح مسلم - 2230]
ಭವಿಷ್ಯ ನುಡಿಯುವವರ ಬಳಿಗೆ ಹೋಗುವುದರ ಬಗ್ಗೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಎಚ್ಚರಿಕೆ ನೀಡುತ್ತಾರೆ.ಭವಿಷ್ಯ ನುಡಿಯುವವರು ಎಂಬುದು ಜ್ಯೋತಿಷಿಗಳು, ರಾಶಿಫಲ ನೋಡುವವರು, ಭೂಮಿಯಲ್ಲಿ ಗೆರೆ ಎಳೆಯುವವರು ಮುಂತಾದ ನಿರ್ದಿಷ್ಟ ವಸ್ತುಗಳನ್ನು ಬಳಸಿ ಭವಿಷ್ಯವನ್ನು ತಿಳಿಯುತ್ತೇವೆಂದು ವಾದಿಸುವವರಿಗೆ ಬಳಸುವ ಸಾಮಾನ್ಯ ಹೆಸರಾಗಿದೆ. ಭವಿಷ್ಯದ ಬಗ್ಗೆ ಅವರಲ್ಲಿ ಕೇವಲ ಪ್ರಶ್ನೆ ಕೇಳಿದರೂ ಅಲ್ಲಾಹು ಅವನ ನಲ್ವತ್ತು ದಿನಗಳ ನಮಾಝಿನ ಪ್ರತಿಫಲವನ್ನು ತಡೆಹಿಡಿಯುತ್ತಾನೆ. ಇದು ಈ ಪಾಪಕ್ಕೆ ಮತ್ತು ಮಹಾ ಅಪರಾಧಕ್ಕೆ ನೀಡಲಾಗುವ ಶಿಕ್ಷೆಯಾಗಿದೆ.