ಹದೀಸ್‌ಗಳ ಪಟ್ಟಿ

ಓ ಅಲ್ಲಾಹ್, ನನ್ನ ಸಮಾಧಿಯನ್ನು ವಿಗ್ರಹವನ್ನಾಗಿ ಮಾಡಬೇಡ
عربي ಆಂಗ್ಲ ಉರ್ದು
“ಅಲ್ಲಾಹು ಅಲ್ಲದವರ ಮೇಲೆ ಆಣೆ ಮಾಡುವವನು ಸತ್ಯನಿಷೇಧಿಯಾದನು ಅಥವಾ ಬಹುದೇವವಿಶ್ವಾಸಿಯಾದನು.”
عربي ಆಂಗ್ಲ ಉರ್ದು
ಇಶಾ ನಮಾಝ್ ಮತ್ತು ಫಜ್ರ್ ನಮಾಝ್ ಕಪಟವಿಶ್ವಾಸಿಗಳಿಗೆ ಅತ್ಯಂತ ಭಾರವಾದ ನಮಾಝ್‌ಗಳಾಗಿವೆ. ಆ ಎರಡು ನಮಾಝ್‌ಗಳಲ್ಲಿರುವ (ಪ್ರತಿಫಲವನ್ನು) ಅವರು ತಿಳಿದಿದ್ದರೆ, ಅವರು ಅದಕ್ಕಾಗಿ ಅಂಬೆಗಾಲಿಟ್ಟುಕೊಂಡಾದರೂ ಬರುತ್ತಿದ್ದರು
عربي ಆಂಗ್ಲ ಉರ್ದು
“ಖಂಡಿತವಾಗಿಯೂ ನಾನು ನಿಮ್ಮ ಬಗ್ಗೆ ಸಣ್ಣ ಶಿರ್ಕ್ (ಸಣ್ಣ ಬಹುದೇವತ್ವ) ವನ್ನು ಅತಿಯಾಗಿ ಭಯಪಡುತ್ತೇನೆ." ಅವರು ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ಸಣ್ಣ ಶಿರ್ಕ್ ಎಂದರೇನು?" ಅವರು ಉತ್ತರಿಸಿದರು: "ತೋರಿಕೆಗಾಗಿ ಕೆಲಸ ಮಾಡುವುದು
عربي ಆಂಗ್ಲ ಉರ್ದು
ನಿಶ್ಚಯವಾಗಿಯೂ ನೀವು ಗ್ರಂಥದವರ ಬಳಿಗೆ ಹೋಗುತ್ತಿದ್ದೀರಿ. ಆದ್ದರಿಂದ ನೀವು ಅವರ ಬಳಿಗೆ ಹೋದರೆ, ಅವರನ್ನು “ಅಲ್ಲಾಹನ ಹೊರತು ಆರಾಧನೆಗೆ ಯಾರೂ ಅರ್ಹರಲ್ಲ ಮತ್ತು ನಾನು ಅಲ್ಲಾಹನ ಸಂದೇಶವಾಹಕನಾಗಿದ್ದೇನೆಂದು” ಸಾಕ್ಷಿ ವಹಿಸಲು ಆಹ್ವಾನಿಸಿರಿ
عربي ಆಂಗ್ಲ ಉರ್ದು
“ಅಲ್ಲಾಹನೊಂದಿಗೆ ಸಹಭಾಗಿತ್ವ ಮಾಡದ ಸ್ಥಿತಿಯಲ್ಲಿ ಯಾರು ಅವನನ್ನು ಭೇಟಿಯಾಗುತ್ತಾನೋ ಅವನು ಸ್ವರ್ಗವನ್ನು ಪ್ರವೇಶಿಸುತ್ತಾನೆ. ಅಲ್ಲಾಹನೊಂದಿಗೆ ಸಹಭಾಗಿತ್ವ ಮಾಡಿದ ಸ್ಥಿತಿಯಲ್ಲಿ ಯಾರು ಅವನನ್ನು ಭೇಟಿಯಾಗುತ್ತಾನೋ ಅವನು ನರಕವನ್ನು ಪ್ರವೇಶಿಸುತ್ತಾನೆ.”
عربي ಆಂಗ್ಲ ಉರ್ದು
ನಮ್ಮ ಈ ವಿಷಯದಲ್ಲಿ (ಧರ್ಮದಲ್ಲಿ) ಅದರಲ್ಲಿಲ್ಲದ ಒಂದನ್ನು ಯಾರಾದರೂ ಆವಿಷ್ಕರಿಸಿದರೆ, ಅದು ತಿರಸ್ಕೃತವಾಗಿದೆ
عربي ಆಂಗ್ಲ ಉರ್ದು
ಶಕುನ ನೋಡುವವನು, ಶಕುನ ನೋಡಿಸುವವನು, ಭವಿಷ್ಯ ನೋಡುವವನು (ಜ್ಯೋತಿಷಿ), ಭವಿಷ್ಯ ನೋಡಿಸುವವನು, ಮಾಟಮಾಡುವವನು, ಮಾಟ ಮಾಡಿಸುವವನು, ಗಂಟು ಕಟ್ಟುವವನು ಮುಂತಾದವರು ನಮ್ಮಲ್ಲಿ ಸೇರಿದವರಲ್ಲ
عربي ಆಂಗ್ಲ ಉರ್ದು
ಯಾರಾದರೂ ಭವಿಷ್ಯ ನುಡಿಯುವವನ ಬಳಿಗೆ ಹೋಗಿ, ಅವನೊಡನೆ ಏನಾದರೂ ವಿಷಯದ ಬಗ್ಗೆ ಕೇಳಿದರೆ ಅವನ ನಲ್ವತ್ತು ದಿನಗಳ ನಮಾಝ್ ಸ್ವೀಕರಿಸಲ್ಪಡುವುದಿಲ್ಲ
عربي ಆಂಗ್ಲ ಉರ್ದು
ಯಾರು ಜ್ಯೋತಿಷ್ಯ ವಿದ್ಯೆಯನ್ನು ಗಳಿಸುತ್ತಾರೋ ಅವರು ವಾಮಾಚಾರದ ಒಂದು ಶಾಖೆಯನ್ನು ಗಳಿಸುತ್ತಾರೆ. ಅದರ ಬಗ್ಗೆ ಹೆಚ್ಚು ವಿದ್ಯೆಯನ್ನು ಗಳಿಸಿದವರು ಹೆಚ್ಚು ವಾಮಾಚಾರವನ್ನು ಗಳಿಸುತ್ತಾರೆ
عربي ಆಂಗ್ಲ ಉರ್ದು
ಸತ್ಯವಿಶ್ವಾಸವು (ಈಮಾನ್) ಎಪ್ಪತ್ತಕ್ಕಿಂತಲೂ — ಅಥವಾ ಅರುವತ್ತಕ್ಕಿಂತಲೂ — ಹೆಚ್ಚು ಶಾಖೆಗಳನ್ನು ಹೊಂದಿದೆ. 'ಲಾ ಇಲಾಹ ಇಲ್ಲಲ್ಲಾಹ್' ಎಂಬ ವಚನವು ಅತಿಶ್ರೇಷ್ಠ ಶಾಖೆಯಾಗಿದೆ ಮತ್ತು ರಸ್ತೆಯಿಂದ ಅಡ್ಡಿಗಳನ್ನು ನಿವಾರಿಸುವುದು ಅತ್ಯಂತ ಕೆಳಗಿನ ಶಾಖೆಯಾಗಿದೆ
عربي ಆಂಗ್ಲ ಉರ್ದು
ಅವರು ಹೇಳಿದ ಆ ಮಾತು ಮಾತ್ರ ಸತ್ಯವಾಗಿದೆ. ಜಿನ್ನ್‌ಗಳು ಆ ಮಾತನ್ನು (ಆಕಾಶದಿಂದ) ಕಸಿದುಕೊಂಡು ಅವರ ಗೆಳೆಯರ (ಜ್ಯೋತಿಷಿಗಳ) ಕಿವಿಯಲ್ಲಿ ಕೋಳಿ ಕುಕ್ಕುವಂತೆ ಸದ್ದುಮಾಡುತ್ತಾ ಪಿಸುಗುಡುತ್ತಾರೆ. ಅವರು (ಜ್ಯೋತಿಷಿಗಳು) ಅದಕ್ಕೆ ನೂರಕ್ಕಿಂತಲೂ ಹೆಚ್ಚು ಸುಳ್ಳುಗಳನ್ನು ಬೆರೆಸುತ್ತಾರೆ
عربي ಆಂಗ್ಲ ಉರ್ದು
ಇಸ್ಲಾಂ ಧರ್ಮವನ್ನು ಐದು (ಸ್ತಂಭಗಳ) ಮೇಲೆ ನಿರ್ಮಿಸಲಾಗಿದೆ
عربي ಆಂಗ್ಲ ಉರ್ದು
ನಿಮ್ಮಲ್ಲಿ ಯಾರಾದರೂ ಒಂದು ಕೆಡುಕನ್ನು ಕಂಡರೆ ಅದನ್ನು ತನ್ನ ಕೈಯಿಂದ ಬದಲಾಯಿಸಲಿ. ಅದು ಸಾಧ್ಯವಾಗದಿದ್ದರೆ ನಾಲಿಗೆಯಿಂದ. ಅದು ಕೂಡ ಸಾಧ್ಯವಾಗದಿದ್ದರೆ ಹೃದಯದಿಂದ. ಅದು ಅತಿ ದುರ್ಬಲ ವಿಶ್ವಾಸವಾಗಿದೆ
عربي ಆಂಗ್ಲ ಉರ್ದು
ಯಾರು ಇಸ್ಲಾಂ ಧರ್ಮದಲ್ಲಿ ಒಳಿತು ಮಾಡುತ್ತಾನೋ, ಅವನನ್ನು ಅಜ್ಞಾನ ಕಾಲದಲ್ಲಿ ಮಾಡಿದ ದುಷ್ಕರ್ಮಗಳಿಗಾಗಿ ಶಿಕ್ಷಿಸಲಾಗುವುದಿಲ್ಲ. ಆದರೆ ಯಾರು ಇಸ್ಲಾಂ ಧರ್ಮದಲ್ಲಿ ಕೆಡುಕು ಮಾಡುತ್ತಾನೋ, ಅವನನ್ನು ಹಿಂದಿನ ಮತ್ತು ನಂತರದ ದುಷ್ಕರ್ಮಗಳಿಗಾಗಿ ಶಿಕ್ಷಿಸಲಾಗುತ್ತದೆ
عربي ಆಂಗ್ಲ ಉರ್ದು
ನಾನು ಐದು ವೇಳೆಯ ಕಡ್ಡಾಯ ನಮಾಝ್‌ಗಳನ್ನು ನಿರ್ವಹಿಸಿದರೆ, ರಮದಾನ್ ತಿಂಗಳಲ್ಲಿ ಉಪವಾಸ ಆಚರಿಸಿದರೆ, ಧರ್ಮಸಮ್ಮತವಾಗಿರುವುದನ್ನು ಧರ್ಮಸಮ್ಮತವೆಂದು ಮತ್ತು ಧರ್ಮನಿಷಿದ್ಧವಾಗಿರುವುದನ್ನು ಧರ್ಮನಿಷಿದ್ಧವೆಂದು ಪರಿಗಣಿಸಿದರೆ
عربي ಆಂಗ್ಲ ಉರ್ದು
“ಶುದ್ಧೀಕರಣವು ಸತ್ಯವಿಶ್ವಾಸದ ಅರ್ಧ ಭಾಗವಾಗಿದೆ. ‘ಅಲ್-ಹಮ್ದುಲಿಲ್ಲಾಹ್’ ಎಂಬ ವಚನವು ತಕ್ಕಡಿಯನ್ನು ತುಂಬುತ್ತದೆ. ‘ಸುಬ್‌ಹಾನಲ್ಲಾಹ್ ವಲ್-ಹಮ್ದುಲಿಲ್ಲಾಹ್’ ಎಂಬ ವಚನಗಳು ತಕ್ಕಡಿಯನ್ನು ತುಂಬುತ್ತವೆ, ಅಥವಾ ಭೂಮ್ಯಾಕಾಶಗಳ ನಡುವಿನ ಭಾಗವನ್ನು ತುಂಬುತ್ತವೆ
عربي ಆಂಗ್ಲ ಉರ್ದು
ಒಬ್ಬ ವ್ಯಕ್ತಿ ಮತ್ತು ಶಿರ್ಕ್ (ದೇವಸಹಭಾಗಿತ್ವ) ಹಾಗೂ ಕುಫ್ರ್ (ಸತ್ಯನಿಷೇಧ) ನ ನಡುವಿನ ಅಂತರವು ನಮಾಝನ್ನು ತೊರೆಯುವುದಾಗಿದೆ
عربي ಆಂಗ್ಲ ಉರ್ದು
ನಮಾಝ್ ನಮ್ಮ ಮತ್ತು ಅವರ (ಸತ್ಯನಿಷೇಧಿಗಳ) ನಡುವಿನ ಒಪ್ಪಂದವಾಗಿದೆ. ಯಾರು ಅದನ್ನು ತೊರೆಯುತ್ತಾರೋ ಅವರು ಸತ್ಯನಿಷೇಧಿಗಳಾದರು
عربي ಆಂಗ್ಲ ಉರ್ದು
ಅಂಧಕಾರ ತುಂಬಿದ ರಾತ್ರಿಗಳ ತುಂಡುಗಳಂತಿರುವ ಪರೀಕ್ಷೆಗಳು ಬರುವುದಕ್ಕೆ ಮೊದಲು ಸತ್ಕರ್ಮಗಳನ್ನು ಮಾಡಲು ಧಾವಿಸಿರಿ
عربي ಆಂಗ್ಲ ಉರ್ದು
ಸನ್ಮಾರ್ಗಕ್ಕೆ ಕರೆಯುವವನು ಅವನನ್ನು ಅನುಸರಿಸಿದವನ ಪ್ರತಿಫಲಕ್ಕೆ ಸಮಾನವಾದ ಪ್ರತಿಫಲವನ್ನು ಪಡೆಯುತ್ತಾನೆ. ಅದು ಅವರ ಪ್ರತಿಫಲಗಳಲ್ಲಿ ಏನನ್ನೂ ಕಡಿಮೆಗೊಳಿಸುವುದಿಲ್ಲ
عربي ಆಂಗ್ಲ ಉರ್ದು
ಶಕುನ ನಂಬುವುದು ಶಿರ್ಕ್, ಶಕುನ ನಂಬುವುದು ಶಿರ್ಕ್, ಶಕುನ ನಂಬುವುದು ಶಿರ್ಕ್." (ಅವರು ಇದನ್ನು ಮೂರು ಬಾರಿ ಹೇಳಿದರು). "ಆದರೆ ನಮ್ಮಲ್ಲಿ (ಶಕುನ ನಂಬದವರು) ಯಾರೂ ಇಲ್ಲ. ಆದರೆ ಅಲ್ಲಾಹು ಅದನ್ನು ತವಕ್ಕುಲ್ (ಭರವಸೆ) ನಿಂದ ನಿವಾರಿಸುತ್ತಾನೆ
عربي ಆಂಗ್ಲ ಉರ್ದು
ಓ ಜನರೇ! ಧರ್ಮದಲ್ಲಿ ಮಿತಿಮೀರುವುದರ ಬಗ್ಗೆ ಹುಷಾರಾಗಿರಿ! ಏಕೆಂದರೆ ನಿಮಗಿಂತ ಮೊದಲಿನವರನ್ನು ನಾಶ ಮಾಡಿದ್ದು ಧರ್ಮದಲ್ಲಿರುವ ಅತಿರೇಕವಾಗಿದೆ
عربي ಆಂಗ್ಲ ಉರ್ದು
ಅದ್ವಾ ಇಲ್ಲ, ತಿಯರ ಇಲ್ಲ, ಹಾಮ ಇಲ್ಲ, ಸಫರ್ ಇಲ್ಲ. ಆದರೆ, ಸಿಂಹವನ್ನು ಕಂಡು ಓಡುವಂತೆ ಕುಷ್ಠರೋಗಿಯಿಂದ ದೂರ ಓಡಿರಿ
عربي ಆಂಗ್ಲ ಉರ್ದು
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅನ್ಸಾರ್‌ಗಳ ಬಗ್ಗೆ ಹೇಳಿದರು: "ಸತ್ಯವಿಶ್ವಾಸಿಯ ಹೊರತು ಇನ್ನಾರೂ ಅವರನ್ನು ಪ್ರೀತಿಸುವುದಿಲ್ಲ ಮತ್ತು ಕಪಟವಿಶ್ವಾಸಿಯ ಹೊರತು ಇನ್ನಾರೂ ಅವರನ್ನು ದ್ವೇಷಿಸುವುದಿಲ್ಲ. ಯಾರು ಅವರನ್ನು ಪ್ರೀತಿಸುತ್ತಾನೋ ಅವನನ್ನು ಅಲ್ಲಾಹು ಪ್ರೀತಿಸುತ್ತಾನೆ ಮತ್ತು ಯಾರು ಅವರನ್ನು ದ್ವೇಷಿಸುತ್ತಾನೋ ಅವನನ್ನು ಅಲ್ಲಾಹು ದ್ವೇಷಿಸುತ್ತಾನೆ
عربي ಆಂಗ್ಲ ಉರ್ದು
ಅವನು ಹೇಳಿದ್ದು ಸತ್ಯವಾಗಿದ್ದರೆ ಅವನು ಯಶಸ್ವಿಯಾದನು
عربي ಆಂಗ್ಲ ಉರ್ದು
ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ ಮತ್ತು ಮುಹಮ್ಮದ್ ಅಲ್ಲಾಹನ ಸಂದೇಶವಾಹಕರು ಎಂದು ಸಾಕ್ಷ್ಯ ವಹಿಸುವ, ನಮಾಝ್ ಸಂಸ್ಥಾಪಿಸುವ ಮತ್ತು ಝಕಾತ್ ನೀಡುವ ತನಕ ಜನರೊಂದಿಗೆ ಹೋರಾಡಲು ನನಗೆ ಆಜ್ಞಾಪಿಸಲಾಗಿದೆ
عربي ಆಂಗ್ಲ ಉರ್ದು
ಪರಸ್ಪರ ಪ್ರೀತಿ, ಕರುಣೆ ಮತ್ತು ಸಹಾನುಭೂತಿ ತೋರುವುದರಲ್ಲಿ ಸತ್ಯವಿಶ್ವಾಸಿಗಳ ಉದಾಹರಣೆಯು ಒಂದು ದೇಹದಂತೆ. ಅದರ ಒಂದು ಅಂಗವು ನೋವಿನಿಂದ ಬಳಲುವಾಗ, ದೇಹದ ಉಳಿದೆಲ್ಲಾ ಭಾಗಗಳು ನಿದ್ರಾಹೀನತೆ ಮತ್ತು ಜ್ವರದ ಮೂಲಕ ಅದಕ್ಕೆ ಸ್ಪಂದಿಸುತ್ತವೆ
عربي ಆಂಗ್ಲ ಉರ್ದು
“ಯಾರ ನಾಲಗೆ ಮತ್ತು ಕೈಯಿಂದ ಇತರ ಮುಸಲ್ಮಾನರು ಸುರಕ್ಷಿತರೋ ಅವನೇ ಮುಸ್ಲಿಮ್. ಯಾರು ಅಲ್ಲಾಹು ನಿಷೇಧಿಸಿದ್ದನ್ನು ತೊರೆಯುತ್ತಾನೋ ಅವನೇ ಮುಹಾಜಿರ್
عربي ಆಂಗ್ಲ ಉರ್ದು
ಅವರು ಒಂದು ದಿನವೂ, 'ಓ ನನ್ನ ಪರಿಪಾಲಕನೇ! ಪ್ರತಿಫಲ ದಿನದಂದು ನನ್ನ ಪಾಪಗಳನ್ನು ಕ್ಷಮಿಸು' ಎಂದು ಹೇಳಿಲ್ಲ
عربي ಆಂಗ್ಲ ಉರ್ದು
ನಿಮ್ಮ ಪರಿಪಾಲಕನು (ಅಲ್ಲಾಹು) ಏನು ಹೇಳಿದನೆಂದು ನಿಮಗೆ ತಿಳಿದಿದೆಯೇ?" ಅವರು ಹೇಳಿದರು: "ಅಲ್ಲಾಹು ಮತ್ತು ಅವನ ಸಂದೇಶವಾಹಕರೇ ಹೆಚ್ಚು ತಿಳಿದವರು." ಅವರು ಹೇಳಿದರು: "(ಅಲ್ಲಾಹು ಹೇಳಿದನು): ನನ್ನ ದಾಸರಲ್ಲಿ ಕೆಲವರು ಸತ್ಯವಿಶ್ವಾಸಿಗಳಾಗಿ ಮತ್ತು ಕೆಲವರು ಸತ್ಯನಿಷೇಧಿಗಳಾಗಿ ಬೆಳಗನ್ನು ಪ್ರವೇಶಿಸಿದ್ದಾರೆ
عربي ಆಂಗ್ಲ ಉರ್ದು
ನಮ್ಮ ಮನಸ್ಸುಗಳಲ್ಲಿ ನಾವು ಮಾತನಾಡಲು ಭಯಪಡುವಂತಹ ಕೆಲವು ವಿಚಾರಗಳು ಮೂಡುತ್ತವೆ." ಅವರು ಕೇಳಿದರು: "ನೀವು ಅದನ್ನು (ಭಯವನ್ನು) ಅನುಭವಿಸಿದ್ದೀರಾ?" ಅವರು ಹೌದೆಂದು ಉತ್ತರಿಸಿದರು. ಅವರು ಹೇಳಿದರು: "ಅದು ನಿರ್ಮಲ ಸತ್ಯವಿಶ್ವಾಸವಾಗಿದೆ
عربي ಆಂಗ್ಲ ಉರ್ದು
ಶೈತಾನನು ನಿಮ್ಮಲ್ಲೊಬ್ಬನ ಬಳಿಗೆ ಬಂದು ಕೇಳುತ್ತಾನೆ: "ಇದನ್ನು ಸೃಷ್ಟಿಸಿದ್ದು ಯಾರು? ಇದನ್ನು ಸೃಷ್ಟಿಸಿದ್ದು ಯಾರು?" ಹೀಗೆ ಅವನು "ನಿನ್ನ ಪರಿಪಾಲಕನನ್ನು (ಅಲ್ಲಾಹನನ್ನು) ಸೃಷ್ಟಿಸಿದ್ದು ಯಾರು?" ಎಂದು ಕೇಳುವ ತನಕ ಮುಂದುವರಿಯುತ್ತಾನೆ. ಯಾರಿಗಾದರೂ ಇಂತಹ ಅನುಭವವಾದರೆ ಅವನು ಅಲ್ಲಾಹನಲ್ಲಿ ಅಭಯ ಯಾಚಿಸಿ ಅಲ್ಲಿಯೇ ನಿಂತುಬಿಡಲಿ
عربي ಆಂಗ್ಲ ಉರ್ದು
ನಿಶ್ಚಯವಾಗಿಯೂ, ಒಳಿತಿನ ವಿಷಯದಲ್ಲಿ ಅಲ್ಲಾಹು ಸತ್ಯವಿಶ್ವಾಸಿಗೆ ಅನ್ಯಾಯ ಮಾಡುವುದಿಲ್ಲ. ಒಳಿತು ಮಾಡಿದ್ದಕ್ಕಾಗಿ ಅವನಿಗೆ ಇಹಲೋಕದಲ್ಲಿ (ಜೀವನೋಪಾಯವನ್ನು) ನೀಡಲಾಗುತ್ತದೆ ಮತ್ತು ಪರಲೋಕದಲ್ಲೂ ಪ್ರತಿಫಲ ನೀಡಲಾಗುತ್ತದೆ
عربي ಆಂಗ್ಲ ಉರ್ದು
ನೀನು ಹಿಂದೆ ಮಾಡಿದ ಒಳಿತುಗಳೊಂದಿಗೇ ಇಸ್ಲಾಂ ಧರ್ಮವನ್ನು ಸ್ವೀಕರಿಸಿರುವೆ
عربي ಆಂಗ್ಲ ಉರ್ದು
ಕಪಟ ವಿಶ್ವಾಸಿಯ ಉದಾಹರಣೆಯು ಎರಡು ಕುರಿಮಂದೆಯ ನಡುವೆಯಿರುವ ಒಂದು ಕುರಿಯಂತಿದೆ. ಅದು ಒಮ್ಮೆ ಈ ಮಂದೆಗೂ ಇನ್ನೊಮ್ಮೆ ಈ ಮಂದೆಗೂ ಚಲಿಸುತ್ತದೆ
عربي ಆಂಗ್ಲ ಉರ್ದು
ನಿಶ್ಚಯವಾಗಿಯೂ ನಿಮ್ಮ ಬಟ್ಟೆ ಹಳತಾಗುವಂತೆ ನಿಮ್ಮ ಹೃದಯದಲ್ಲಿರುವ ವಿಶ್ವಾಸವು ಕೂಡ ಹಳತಾಗುತ್ತದೆ. ಆದ್ದರಿಂದ ನಿಮ್ಮ ಹೃದಯದಲ್ಲಿರುವ ವಿಶ್ವಾಸವನ್ನು ನವೀಕರಿಸಲು ನೀವು ಅಲ್ಲಾಹನಲ್ಲಿ ಬೇಡಿಕೊಳ್ಳಿರಿ
عربي ಆಂಗ್ಲ ಉರ್ದು
ನಿಶ್ಚಯವಾಗಿಯೂ ನಾನು ನನ್ನ ಕೊಳದ ಬಳಿಯಿದ್ದು ನೀವು ಅದರ ನೀರು ಕುಡಿಯಲು ಬರುವುದನ್ನು ನಾನು ನೋಡುತ್ತೇನೆ. ಆದರೆ ಕೆಲವು ಜನರನ್ನು ಅಲ್ಲಿಗೆ ಬರದಂತೆ ತಡೆಹಿಡಿಯಲಾಗುತ್ತದೆ. ಆಗ ನಾನು ಹೇಳುತ್ತೇನೆ: "ಓ ನನ್ನ ಪರಿಪಾಲಕನೇ! ಅವರು ನನ್ನವರು ಮತ್ತು ನನ್ನ ಸಮುದಾಯದವರು
عربي ಆಂಗ್ಲ ಉರ್ದು
ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ)—ಅವರು ಸತ್ಯವಂತರು ಮತ್ತು ಸತ್ಯವಂತರೆಂದು ಅಂಗೀಕರಿಸಲ್ಪಟ್ಟವರು—ತಿಳಿಸಿದರು: ನಿಶ್ಚಯವಾಗಿಯೂ, ನಿಮ್ಮಲ್ಲಿ ಪ್ರತಿಯೊಬ್ಬನ ಸೃಷ್ಟಿಯನ್ನು ಅವನ ತಾಯಿಯ ಉದರದಲ್ಲಿ ನಲ್ವತ್ತು ದಿನ-ರಾತ್ರಿಗಳ ಕಾಲ 'ನುತ್ಫ'ದ (ವೀರ್ಯದ) ರೂಪದಲ್ಲಿ ಜೋಡಿಸಿಡಲಾಗುತ್ತದೆ
عربي ಆಂಗ್ಲ ಉರ್ದು
ನಾನು ಬನೂ ಸಅದ್ ಗೋತ್ರಕ್ಕೆ ಸೇರಿದ ದಿಮಾಮ್ ಬಿನ್ ಸಅಲಬ
عربي ಆಂಗ್ಲ ಉರ್ದು
ಯಹೂದಿಗಳು (ಅಲ್ಲಾಹನ) ಕೋಪಕ್ಕೆ ಪಾತ್ರರಾದವರು ಮತ್ತು ಕ್ರೈಸ್ತರು ದಾರಿತಪ್ಪಿದವರು
عربي ಆಂಗ್ಲ ಉರ್ದು
ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ ಎಂದು ಹೇಳಿರಿ. ಪುನರುತ್ಥಾನ ದಿನದಂದು ನಾನು ಅದರ ಮೂಲಕ ನಿಮ್ಮ ಪರವಾಗಿ ಸಾಕ್ಷಿ ಹೇಳುವೆನು
عربي ಆಂಗ್ಲ ಉರ್ದು
ನೀವು ಏನು ಹೇಳುತ್ತಿದ್ದೀರೋ ಮತ್ತು ಯಾವುದರ ಕಡೆಗೆ ಕರೆಯುತ್ತಿದ್ದೀರೋ ಅದು ಬಹಳ ಸುಂದರವಾಗಿದೆ. ನಾವು ಮಾಡಿದ ತಪ್ಪುಗಳಿಗೆ ಏನಾದರೂ ಪರಿಹಾರವಿದೆಯೇ ಎಂದು ತಿಳಿಸಿ
عربي ಆಂಗ್ಲ ಉರ್ದು
ನಮ್ಮ ವಿರುದ್ಧ ಆಯುಧ ಎತ್ತಿದವನು ನಮ್ಮಲ್ಲಿ ಸೇರಿದವನಲ್ಲ
عربي ಆಂಗ್ಲ ಉರ್ದು