عَنْ أَبِي هُرَيْرَةَ رضي الله عنه أَنَّ رَسُولَ اللهِ صَلَّى اللهُ عَلَيْهِ وَسَلَّمَ قَالَ:
«مَنْ دَعَا إِلَى هُدًى كَانَ لَهُ مِنَ الْأَجْرِ مِثْلُ أُجُورِ مَنْ تَبِعَهُ، لَا يَنْقُصُ ذَلِكَ مِنْ أُجُورِهِمْ شَيْئًا، وَمَنْ دَعَا إِلَى ضَلَالَةٍ كَانَ عَلَيْهِ مِنَ الْإِثْمِ مِثْلُ آثَامِ مَنْ تَبِعَهُ، لَا يَنْقُصُ ذَلِكَ مِنْ آثَامِهِمْ شَيْئًا».
[صحيح] - [رواه مسلم] - [صحيح مسلم: 2674]
المزيــد ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಸನ್ಮಾರ್ಗಕ್ಕೆ ಕರೆಯುವವನು ಅವನನ್ನು ಅನುಸರಿಸಿದವನ ಪ್ರತಿಫಲಕ್ಕೆ ಸಮಾನವಾದ ಪ್ರತಿಫಲವನ್ನು ಪಡೆಯುತ್ತಾನೆ. ಅದು ಅವರ ಪ್ರತಿಫಲಗಳಲ್ಲಿ ಏನನ್ನೂ ಕಡಿಮೆಗೊಳಿಸುವುದಿಲ್ಲ. ದುರ್ಮಾರ್ಗಕ್ಕೆ ಕರೆಯುವವನು ಅವನನ್ನು ಅನುಸರಿಸಿದವನ ಪಾಪಕ್ಕೆ ಸಮಾನವಾದ ಪಾಪವನ್ನು ಪಡೆಯುತ್ತಾನೆ. ಅದು ಅವರ ಪಾಪಗಳಲ್ಲಿ ಏನನ್ನೂ ಕಡಿಮೆ ಮಾಡುವುದಿಲ್ಲ."
[صحيح] - [رواه مسلم] - [صحيح مسلم - 2674]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಯಾರಾದರೂ ಮಾತು ಅಥವಾ ಕ್ರಿಯೆಯ ಮೂಲಕ, ಸತ್ಯ ಮತ್ತು ಒಳಿತಿನ ಮಾರ್ಗದ ಕಡೆಗೆ ಜನರಿಗೆ ಮಾರ್ಗದರ್ಶನ ಮಾಡಿದರೆ, ಆ ಮಾರ್ಗದರ್ಶನವನ್ನು ಅನುಸರಿಸುವವರು ಪಡೆಯುವ ಪ್ರತಿಫಲಕ್ಕೆ ಸಮಾನವಾದ ಪ್ರತಿಫಲವನ್ನು ಮಾರ್ಗದರ್ಶನ ಮಾಡಿದವನೂ ಪಡೆಯುತ್ತಾನೆ. ಇದರಿಂದ ಅನುಸರಿಸುವವನ ಪ್ರತಿಫಲದಲ್ಲಿ ಏನೂ ಕಡಿಮೆಯಾಗುವುದಿಲ್ಲ. ಅದೇ ರೀತಿ, ಯಾರಾದರೂ ಮಾತು ಅಥವಾ ಕ್ರಿಯೆಯ ಮೂಲಕ, ಪಾಪ, ದೋಷ ಮತ್ತು ಧರ್ಮಸಮ್ಮತವಲ್ಲದ ವಿಷಯಗಳಿರುವ ಸುಳ್ಳು ಮತ್ತು ಕೆಡುಕಿನ ಮಾರ್ಗದ ಕಡೆಗೆ ಜನರಿಗೆ ಮಾರ್ಗದರ್ಶನ ಮಾಡಿದರೆ, ಆ ಮಾರ್ಗದರ್ಶನವನ್ನು ಅನುಸರಿಸುವವರು ಪಡೆಯುವ ಪಾಪ ಮತ್ತು ದೋಷಕ್ಕೆ ಸಮಾನವಾದ ಪಾಪ ಮತ್ತು ದೋಷವನ್ನು ಇವನೂ ಪಡೆಯುತ್ತಾನೆ. ಇದರಿಂದ ಅನುಸರಿಸುವವನ ಪಾಪದಲ್ಲಿ ಏನೂ ಕಡಿಮೆಯಾಗುವುದಿಲ್ಲ.