عَنْ عَبْدِ اللَّهِ بن مسعودٍ رضي الله عنه قَالَ: سَمِعْتُ رَسُولَ اللَّهِ صَلَّى اللَّهُ عَلَيْهِ وَسَلَّمَ يَقُولُ:
«إِنَّ مِنْ شِرَارِ النَّاسِ مَنْ تُدْرِكُهُ السَّاعَةُ وَهُمْ أَحْيَاءٌ، وَمَنْ يَتَّخِذُ الْقُبُورَ مَسَاجِدَ».
[حسن] - [رواه أحمد] - [مسند أحمد: 3844]
المزيــد ...
ಅಬ್ದುಲ್ಲಾ ಬಿನ್ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ:
"ಅಂತ್ಯಸಮಯವು ಸಂಭವಿಸುವಾಗ ಜೀವಂತವಿರುವವರು ಮತ್ತು ಸಮಾಧಿಗಳನ್ನು ಆರಾಧನಾಲಯಗಳನ್ನಾಗಿ ಮಾಡಿಕೊಳ್ಳುವವರು ನಿಶ್ಚಯವಾಗಿಯೂ ಜನರಲ್ಲೇ ಅತಿ ನಿಕೃಷ್ಟರಾಗಿದ್ದಾರೆ."
[حسن] - [رواه أحمد] - [مسند أحمد - 3844]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಅತಿನಿಕೃಷ್ಟ ಜನರ ಬಗ್ಗೆ ತಿಳಿಸುತ್ತಿದ್ದಾರೆ. ಅವರು ಯಾರೆಂದರೆ ಅಂತ್ಯದಿನ ಸಂಭವಿಸುವಾಗ ಜೀವಂತವಿರುವವರು ಮತ್ತು ಸಮಾಧಿಗಳನ್ನು ಆರಾಧನಾಲಯಗಳನ್ನಾಗಿ ಮಾಡಿ ಅವುಗಳ ಬಳಿ ಮತ್ತು ಅವುಗಳಿಗೆ ಮುಖಮಾಡಿ ನಮಾಝ್ ಮಾಡುವವರು.