عَنْ عَبْدِ اللَّهِ بْنِ عَمْرٍو رضي الله عنهما قَالَ: قالَ النَّبِيُّ صَلَّى اللهُ عَلَيْهِ وَسَلَّمَ:
«حَوْضِي مَسِيرَةُ شَهْرٍ، مَاؤُهُ أَبْيَضُ مِنَ اللَّبَنِ، وَرِيحُهُ أَطْيَبُ مِنَ المِسْكِ، وَكِيزَانُهُ كَنُجُومِ السَّمَاءِ، مَنْ شَرِبَ مِنْهَا فَلاَ يَظْمَأُ أَبَدًا».
[صحيح] - [متفق عليه] - [صحيح البخاري: 6579]
المزيــد ...
ಅಬ್ದುಲ್ಲಾ ಬಿನ್ ಅಮ್ರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ನನ್ನ ಹೌದ್ (ಕೊಳ) ಒಂದು ತಿಂಗಳ ಪ್ರಯಾಣದಷ್ಟಿದೆ. ಅದರ ನೀರು ಹಾಲಿಗಿಂತಲೂ ಬೆಳ್ಳಗೆ ಮತ್ತು ಅದರ ಪರಿಮಳ ಕಸ್ತೂರಿಗಿಂತಲೂ ಉತ್ತಮವಾಗಿದೆ. ಅದರ ಲೋಟಗಳು ಆಕಾಶದಲ್ಲಿರುವ ನಕ್ಷತ್ರಗಳಂತಿವೆ. ಯಾರು ಅದರ ನೀರನ್ನು ಕುಡಿಯುತ್ತಾರೋ ಅವರಿಗೆ ಮತ್ತೆ ಎಂದಿಗೂ ದಾಹವಾಗುವುದಿಲ್ಲ."
[صحيح] - [متفق عليه] - [صحيح البخاري - 6579]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಪುನರುತ್ಥಾನ ದಿನ ಅವರಿಗೆ ಒಂದು ಕೊಳ (ಹೌದ್) ಇರಲಿದೆ. ಅದರ ಉದ್ದ ಮತ್ತು ಅಗಲ ಒಂದು ತಿಂಗಳ ಪ್ರಯಾಣದಷ್ಟಿದೆ. ಅದರ ನೀರು ಹಾಲಿಗಿಂತಲೂ ಹೆಚ್ಚು ಬೆಳ್ಳಗಿದೆ. ಅದರ ಪರಿಮಳವು ಕಸ್ತೂರಿಯ ಪರಿಮಳಕ್ಕಿಂತಲೂ ಉತ್ತಮ ಮತ್ತು ಆಹ್ಲಾದಕರವಾಗಿದೆ. ಅದರ ಲೋಟಗಳು ಆಕಾಶದಲ್ಲಿರುವ ನಕ್ಷತ್ರಗಳ ಸಂಖ್ಯೆಯಷ್ಟಿವೆ. ಆ ಲೋಟಗಳ ಮೂಲಕ ಆ ಕೊಳದ ನೀರನ್ನು ಕುಡಿಯುವವರಿಗೆ ಮತ್ತೆ ಎಂದಿಗೂ ದಾಹವಾಗುವುದಿಲ್ಲ.