عَنْ أَبِي هُرَيْرَةَ رضي الله عنه قَالَ: سَمِعْتُ رَسُولَ اللَّهِ صَلَّى اللهُ عَلَيْهِ وَسَلَّمَ يَقُولُ:
«يَقْبِضُ اللَّهُ الأَرْضَ، وَيَطْوِي السَّمَوَاتِ بِيَمِينِهِ، ثُمَّ يَقُولُ: أَنَا المَلِكُ، أَيْنَ مُلُوكُ الأَرْضِ».
[صحيح] - [متفق عليه] - [صحيح البخاري: 4812]
المزيــد ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ:
"ಅಲ್ಲಾಹು ಭೂಮಿಯನ್ನು ಮುಷ್ಠಿಯಲ್ಲಿ ಹಿಡಿಯುತ್ತಾನೆ ಮತ್ತು ಆಕಾಶಗಳನ್ನು ಬಲಗೈಯಿಂದ ಸುರುಳಿಯಾಗಿ ಮಡಚುತ್ತಾನೆ. ನಂತರ ಹೇಳುತ್ತಾನೆ: ನಾನೇ ರಾಜ. ಭೂಮಿಯ ರಾಜರುಗಳು ಎಲ್ಲಿದ್ದಾರೆ?"
[صحيح] - [متفق عليه] - [صحيح البخاري - 4812]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಪುನರುತ್ಥಾನ ದಿನದಂದು ಅಲ್ಲಾಹು ಭೂಮಿಯನ್ನು ಮುಷ್ಠಿಯಲ್ಲಿ ಹಿಡಿಯುತ್ತಾನೆ ಮತ್ತು ಆಕಾಶವನ್ನು ತನ್ನ ಬಲಗೈಯಿಂದ ಒಂದರ ಮೇಲೊಂದರಂತೆ ಸುರುಳಿಯಾಗಿ ಮಡಚುತ್ತಾನೆ. ನಂತರ ಅವುಗಳನ್ನು ನಾಶ ಮಾಡುತ್ತಾನೆ. ನಂತರ ಅವನು ಘೋಷಿಸುತ್ತಾನೆ: "ನಾನೇ ರಾಜ, ಭೂಮಿಯ ರಾಜರುಗಳು ಎಲ್ಲಿದ್ದಾರೆ?!"