عَنْ عَائِشَةَ رضي الله عنها قَالَتْ: قَالَ رَسُولُ اللهِ صلى الله عليه وسلم:
«مَنْ أَحْدَثَ فِي أَمْرِنَا هَذَا مَا لَيْسَ فِيهِ فَهُوَ رَدٌّ» متفق عليه.
ولمسلم: «مَنْ عَمِلَ عَمَلًا لَيْسَ عَلَيْهِ أَمْرُنَا فَهُوَ رَدٌّ».
[صحيح] - [متفق عليه] - [صحيح البخاري: 2697]
المزيــد ...
ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ನಮ್ಮ ಈ ವಿಷಯದಲ್ಲಿ (ಧರ್ಮದಲ್ಲಿ) ಅದರಲ್ಲಿಲ್ಲದ ಒಂದನ್ನು ಯಾರಾದರೂ ಆವಿಷ್ಕರಿಸಿದರೆ, ಅದು ತಿರಸ್ಕೃತವಾಗಿದೆ." [ಬುಖಾರಿ ಮತ್ತು ಮುಸ್ಲಿಂ].
ಮುಸ್ಲಿಂರ ವರದಿಯಲ್ಲಿ ಹೀಗಿದೆ: "ನಮ್ಮ ಆಜ್ಞೆಯಿಲ್ಲದ ಒಂದು ಕರ್ಮವನ್ನು ಯಾರಾದರೂ ನಿರ್ವಹಿಸಿದರೆ ಅದು ತಿರಸ್ಕೃತವಾಗಿದೆ."
[صحيح] - [متفق عليه] - [صحيح البخاري - 2697]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಧರ್ಮದಲ್ಲಿ ಹೊಸದಾದ ಒಂದು ಕಾರ್ಯವನ್ನು ಯಾರಾದರೂ ಆವಿಷ್ಕರಿಸಿದರೆ, ಅಥವಾ ಕುರ್‌ಆನ್ ಮತ್ತು ಸುನ್ನತ್‌ನಲ್ಲಿ ಆಧಾರವಿಲ್ಲದ ಒಂದು ಕಾರ್ಯವನ್ನು ಮಾಡಿದರೆ, ಅದು ತಿರಸ್ಕೃತವಾಗಿದೆ. ಅಲ್ಲಾಹು ಅದನ್ನು ಸ್ವೀಕರಿಸುವುದಿಲ್ಲ.