عَنْ سَلَمَةَ بْنِ الْأَكْوَعِ رضي الله عنه:
أَنَّ رَجُلًا أَكَلَ عِنْدَ رَسُولِ اللهِ صَلَّى اللهُ عَلَيْهِ وَسَلَّمَ بِشِمَالِهِ، فَقَالَ: «كُلْ بِيَمِينِكَ»، قَالَ: لَا أَسْتَطِيعُ، قَالَ: «لَا اسْتَطَعْتَ»، مَا مَنَعَهُ إِلَّا الْكِبْرُ، قَالَ: فَمَا رَفَعَهَا إِلَى فِيهِ.
[صحيح] - [رواه مسلم] - [صحيح مسلم: 2021]
المزيــد ...
ಸಲಮ ಬಿನ್ ಅಕ್ವಅ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ.
"ಒಮ್ಮೆ ಒಬ್ಬ ವ್ಯಕ್ತಿ ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿ ಎಡಗೈಯಿಂದ ಆಹಾರ ಸೇವಿಸಿದನು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಬಲಗೈಯಿಂದ ಸೇವಿಸಿರಿ." ಆ ವ್ಯಕ್ತಿ ಉತ್ತರಿಸಿದನು: "ನನಗೆ ಅದು ಸಾಧ್ಯವಿಲ್ಲ." ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಮಗೆ ಅದು ಸಾಧ್ಯವಾಗದಿರಲಿ." ಅಹಂಕಾರದ ಹೊರತು ಬೇರೇನೂ ಅವನನ್ನು ಬಲಗೈಯಿಂದ ಸೇವಿಸದಂತೆ ತಡೆದಿರಲಿಲ್ಲ. ನಂತರ ಅವನಿಗೆ ಅದನ್ನು ಬಾಯಿಗೆ ಎತ್ತಲು ಆಗಲೇ ಇಲ್ಲ."
[صحيح] - [رواه مسلم] - [صحيح مسلم - 2021]
ಒಮ್ಮೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಒಬ್ಬ ವ್ಯಕ್ತಿ ತನ್ನ ಎಡಗೈಯಿಂದ ಆಹಾರ ಸೇವಿಸುವುದನ್ನು ಕಂಡರು. ಅವರು ಅವನಿಗೆ ಬಲಗೈಯಿಂದ ಆಹಾರ ಸೇವಿಸುವಂತೆ ಆದೇಶಿಸಿದರು. ಆದರೆ, ಆ ವ್ಯಕ್ತಿ ತನಗೆ ಸಾಧ್ಯವಿಲ್ಲ ಎಂದು ಅಹಂಕಾರದಿಂದ ಸುಳ್ಳು ಹೇಳಿದನು! ಆದ್ದರಿಂದ, ಆತನಿಗೆ ಇನ್ನು ಮುಂದೆ ಬಲಗೈಯಿಂದ ತಿನ್ನಲು ಸಾಧ್ಯವಾಗದಿರಲಿ ಎಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪ್ರಾರ್ಥಿಸಿದರು. ಅಲ್ಲಾಹು ಅವನ ಬಲಗೈಯನ್ನು ಪಾರ್ಶ್ವವಾಯುವಿಗೆ ಒಳಪಡಿಸುವ ಮೂಲಕ ಪ್ರವಾದಿಯ ಪ್ರಾರ್ಥನೆಗೆ ಉತ್ತರಿಸಿದನು. ಅದರ ನಂತರ ಅವನಿಗೆ ಆಹಾರ ಅಥವಾ ಪಾನೀಯ ಸೇವಿಸಲು ಅದನ್ನು ತನ್ನ ಬಾಯಿಗೆ ಎತ್ತಲಾಗಲಿಲ್ಲ.