عن عائشة رضي الله عنها قالت: قال النبي صلى الله عليه وسلم:
«لَا تَسُبُّوا الْأَمْوَاتَ، فَإِنَّهُمْ قَدْ أَفْضَوْا إِلَى مَا قَدَّمُوا».
[صحيح] - [رواه البخاري] - [صحيح البخاري: 1393]
المزيــد ...
ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
“ಮರಣಹೊಂದಿದವರ ಬಗ್ಗೆ ಕೆಟ್ಟದಾಗಿ ಮಾತನಾಡಬೇಡಿ. ಏಕೆಂದರೆ ಅವರು ತಮ್ಮ ಕರ್ಮಗಳೊಂದಿಗೆ ತೆರಳಿದ್ದಾರೆ.”
[صحيح] - [رواه البخاري] - [صحيح البخاري - 1393]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಮರಣಹೊಂದಿದವರ ಬಗ್ಗೆ ಕೆಟ್ಟದಾಗಿ ಮಾತನಾಡುವುದು ಮತ್ತು ಅವರ ಗೌರವಕ್ಕೆ ಕಳಂಕ ತರುವುದು ನಿಷಿದ್ಧವೆಂದು ತಿಳಿಸುತ್ತಿದ್ದಾರೆ. ಇದು ಬಹಳ ಕೆಟ್ಟ ಗುಣವಾಗಿದೆ. ಏಕೆಂದರೆ, ಅವರು ಮಾಡಿದ ಒಳಿತು ಅಥವಾ ಕೆಡುಕುಗಳೊಂದಿಗೆ ಅವರು ಹೊರಟು ಹೋಗಿದ್ದಾರೆ. ಅದೇ ರೀತಿ, ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ಅದರಿಂದ ತೊಂದರೆಯಿರುವುದು ಅವರಿಗಲ್ಲ; ಬದಲಿಗೆ ಬದುಕಿರುವವರಿಗಾಗಿದೆ.