ಉಪವರ್ಗಗಳು

ಹದೀಸ್‌ಗಳ ಪಟ್ಟಿ

.
عربي ಆಂಗ್ಲ ಉರ್ದು
"ಒಬ್ಬ ಮನುಷ್ಯನು ಇಂತಿಂತಹ ಒಂದು ಊರಿನಲ್ಲಿ ನಿಧನನಾಗಬೇಕೆಂದು ಅಲ್ಲಾಹು ತೀರ್ಮಾನಿಸಿದರೆ ಅವನಿಗೆ ಆ ಊರಿಗೆ ಹೋಗುವ ಅಗತ್ಯವನ್ನು ಉಂಟುಮಾಡುತ್ತಾನೆ."
عربي ಆಂಗ್ಲ ಉರ್ದು
"ಅಬೂ ಮೂಸಾ ತೀವ್ರ ನೋವಿನಿಂದ ಬಳಲುತ್ತಿದ್ದರು. ಅವರ ತಲೆಯು ಅವರ ಕುಟುಂಬದ ಮಹಿಳೆಯೊಬ್ಬರ ಮಡಿಲಿನಲ್ಲಿದ್ದ ಸ್ಥಿತಿಯಲ್ಲಿ ಅವರು ಪ್ರಜ್ಞಾಹೀನರಾಗಿದ್ದರು. ಆಕೆಗೆ ಯಾವುದೇ ರೀತಿಯಲ್ಲಿ ಉತ್ತರ ನೀಡಲು ಅವರಿಗೆ ಸಾಧ್ಯವಾಗಲಿಲ್ಲ. ಪ್ರಜ್ಞೆ ಮರಳಿ ಬಂದ ನಂತರ ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಯಾರಿಂದ ಮುಕ್ತರಾಗಿದ್ದರೋ ಅವರಿಂದ ನಾನು ಕೂಡ ಮುಕ್ತನಾಗಿದ್ದೇನೆ. @ಖಂಡಿತವಾಗಿಯೂ, ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಾಲಿಕ (ಗೋಳಾಡುವ ಮಹಿಳೆ), ಹಾಲಿಕ (ತಲೆ ಬೋಳಿಸಿಕೊಳ್ಳುವ ಮಹಿಳೆ) ಮತ್ತು ಶಾಕ್ಕ (ಬಟ್ಟೆ ಹರಿದುಕೊಳ್ಳುವ ಮಹಿಳೆ) ರಿಂದ ಮುಕ್ತರಾಗಿದ್ದರು."
عربي ಆಂಗ್ಲ ಉರ್ದು