عَنْ أُمِّ عَطِيَّةَ رَضِيَ اللَّهُ عَنْهَا قَالَتْ:
نُهِينَا عَنِ اتِّبَاعِ الجَنَائِزِ، وَلَمْ يُعْزَمْ عَلَيْنَا.
[صحيح] - [متفق عليه] - [صحيح البخاري: 1278]
المزيــد ...
ಉಮ್ಮು ಅತಿಯ್ಯಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು:
"ಜನಾಝಾಗಳನ್ನು (ಮೃತದೇಹಗಳನ್ನು) ಹಿಂಬಾಲಿಸುವುದನ್ನು ನಮಗೆ (ಮಹಿಳೆಯರಿಗೆ) ನಿಷೇಧಿಸಲಾಗಿದೆ. ಆದರೆ ನಮ್ಮ ಮೇಲೆ ಅದನ್ನು ಕಟ್ಟುನಿಟ್ಟಾಗಿ ಹೇರಲಾಗಿರಲಿಲ್ಲ".
[صحيح] - [متفق عليه] - [صحيح البخاري - 1278]
ಉಮ್ಮು ಅತಿಯ್ಯಾ ಅಲ್-ಅನ್ಸಾರಿಯ್ಯಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ತಿಳಿಸುವುದೇನೆಂದರೆ; ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಹಿಳೆಯರಿಗೆ ಜನಾಝಾಗಳೊಂದಿಗೆ (ಮೃತದೇಹಗಳೊಂದಿಗೆ) ನಡೆಯುವುದನ್ನು ನಿಷೇಧಿಸಿದ್ದಾರೆ. ಇದಕ್ಕೆ ಕಾರಣ ಅವರಿಗೆ ಮತ್ತು ಅವರಿಂದ ಫಿತ್ನಾ (ಪ್ರಚೋದನೆ/ಪರೀಕ್ಷೆ) ಉಂಟಾಗುವ ಭಯವಾಗಿದೆ. ಅವರ ತಾಳ್ಮೆಯ ಕೊರತೆಯೂ ಅದಕ್ಕೆ ಒಂದು ಕಾರಣವಾಗಿದೆ. ನಂತರ ಅವರು (ಉಮ್ಮು ಅತಿಯ್ಯಾ) ತಿಳಿಸುವುದೇನೆಂದರೆ; ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇತರ ನಿಷಿದ್ಧ ಕಾರ್ಯಗಳಲ್ಲಿ ಮಾಡುವಂತೆ ಈ ನಿಷೇಧದ ಬಗ್ಗೆ ಒತ್ತುಕೊಟ್ಟು ಹೇಳಿಲ್ಲ.