ಹದೀಸ್‌ಗಳ ಪಟ್ಟಿ
ಇಸ್ಲಾಂ ಧರ್ಮವನ್ನು ಐದು (ಸ್ತಂಭಗಳ) ಮೇಲೆ ನಿರ್ಮಿಸಲಾಗಿದೆ
عربي
الإنجليزية
الأوردية
ಒಂದು ವೇಳೆ ನಾನು ಕಡ್ಡಾಯಗೊಳಿಸಲ್ಪಟ್ಟ ನಮಾಝ್‌ಗಳನ್ನು ನಿರ್ವಹಿಸಿದರೆ, ರಮದಾನ್‌ನಲ್ಲಿ ಉಪವಾಸ ಆಚರಿಸಿದರೆ, ಹಲಾಲ್ ಅನ್ನು ಹಲಾಲ್ ಎಂದು (ಪರಿಗಣಿಸಿ) ಅನುಸರಿಸಿದರೆ, ಹರಾಮ್ ಅನ್ನು ಹರಾಮ್ ಎಂದು (ಪರಿಗಣಿಸಿ) ತ್ಯಜಿಸಿದರೆ
عربي
الإنجليزية
الأوردية
ಶುದ್ಧಿಯು ಈಮಾನ್‌ನ (ವಿಶ್ವಾಸದ) ಅರ್ಧ ಭಾಗವಾಗಿದೆ. 'ಅಲ್‌ಹಮ್ದುಲಿಲ್ಲಾಹ್' (ಪುಣ್ಯದ) ತಕ್ಕಡಿಯನ್ನು ತುಂಬಿಸುತ್ತದೆ. 'ಸುಬ್‌ಹಾನಲ್ಲಾಹ್' ಮತ್ತು 'ಅಲ್‌ಹಮ್ದುಲಿಲ್ಲಾಹ್' ಅವೆರಡೂ ಆಕಾಶಗಳು ಮತ್ತು ಭೂಮಿಯ ನಡುವಿನ (ಅಂತರವನ್ನು ಪುಣ್ಯದಿಂದ) ತುಂಬಿಸುತ್ತವೆ
عربي
الإنجليزية
الأوردية
“ಯಾರು ಅಲ್ಲಾಹನಿಗಾಗಿ ಹಜ್ಜ್ ನಿರ್ವಹಿಸುತ್ತಾನೋ, ಮತ್ತು (ಹಜ್ಜ್‌ನ ವೇಳೆಯಲ್ಲಿ) ಅಶ್ಲೀಲ ಕೃತ್ಯಗಳನ್ನು ಮತ್ತು ದುಷ್ಕರ್ಮಗಳನ್ನು ಮಾಡುವುದಿಲ್ಲವೋ, ಅವನು ಅವನ ತಾಯಿ ಅವನಿಗೆ ಜನ್ಮ ನೀಡಿದ ದಿನದಂತೆ (ಪಾಪಮುಕ್ತನಾಗಿ) ಹಿಂದಿರುಗುತ್ತಾನೆ.”
عربي
الإنجليزية
الأوردية
ಆಹಾರವು ಸಿದ್ಧವಾಗಿರುವಾಗ ಮತ್ತು ಮಲಮೂತ್ರಗಳನ್ನು ಅದುಮಿಕೊಂಡು ನಮಾಝ್ ನಿರ್ವಹಿಸಬಾರದು
عربي
الإنجليزية
الأوردية
ಶುಕ್ರವಾರ ಇಮಾಮರು ಪ್ರವಚನ ನಿರ್ವಹಿಸುತ್ತಿರುವಾಗ, ನೀನು ನಿನ್ನ ಬಳಿಯಿರುವವನಿಗೆ "ಮೌನವಾಗಿರು" ಎಂದು ಹೇಳಿದರೆ ನೀನು ಅನಗತ್ಯವಾದುದನ್ನು ಮಾಡಿದೆ
عربي
الإنجليزية
الأوردية
ಐದು ಕಾರ್ಯಗಳು ಫಿತ್ರ (ಸಹಜ ಮನೋಧರ್ಮ) ದ ಭಾಗವಾಗಿವೆ: ಸುನ್ನತಿ ಮಾಡುವುದು, ಗುಹ್ಯಭಾಗದ ರೋಮವನ್ನು ಬೋಳಿಸುವುದು, ಮೀಸೆ ಕಿರಿದಾಗಿಸುವುದು, ಉಗುರುಗಳನ್ನು ಕತ್ತರಿಸುವುದು ಮತ್ತು ಕಂಕುಳದ ರೋಮವನ್ನು ಕೀಳುವುದು
عربي
الإنجليزية
الأوردية
ಮೀಸೆಗಳನ್ನು ಕಿರಿದುಗೊಳಿಸಿರಿ ಮತ್ತು ದಾಡಿಯನ್ನು ಬೆಳೆಸಿರಿ
عربي
الإنجليزية
الأوردية
ಯಾರು ನಾನಿಲ್ಲಿ ವುದೂ ನಿರ್ವಹಿಸಿದಂತೆ ವುದೂ ನಿರ್ವಹಿಸಿ, ಇಹಲೋಕದ ಯಾವುದೇ ವಿಷಯದ ಬಗ್ಗೆ ಏನೂ ಯೋಚಿಸದೆ ಎರಡು ರಕಅತ್ ನಮಾಝ್ ನಿರ್ವಹಿಸುತ್ತಾರೋ ಅವರ ಗತ ಪಾಪಗಳನ್ನು ಅಲ್ಲಾಹು ಕ್ಷಮಿಸುತ್ತಾನೆ
عربي
الإنجليزية
الأوردية
ಓ ಅಲ್ಲಾಹ್, ನನ್ನ ಸಮಾಧಿಯನ್ನು ವಿಗ್ರಹವನ್ನಾಗಿ ಮಾಡಬೇಡ
عربي
الإنجليزية
الأوردية
ಇಶಾ ನಮಾಝ್ ಮತ್ತು ಫಜ್ರ್ ನಮಾಝ್ ಕಪಟವಿಶ್ವಾಸಿಗಳಿಗೆ ಅತ್ಯಂತ ಭಾರವಾದ ನಮಾಝ್‌ಗಳಾಗಿವೆ. ಆ ಎರಡು ನಮಾಝ್‌ಗಳಲ್ಲಿರುವ (ಪ್ರತಿಫಲವನ್ನು) ಅವರು ತಿಳಿದಿದ್ದರೆ, ಅವರು ಅದಕ್ಕಾಗಿ ಅಂಬೆಗಾಲಿಟ್ಟುಕೊಂಡಾದರೂ ಬರುತ್ತಿದ್ದರು
عربي
الإنجليزية
الأوردية
ನಿಮ್ಮಲ್ಲೊಬ್ಬರಿಗೆ ಅಶುದ್ಧಿಯುಂಟಾದರೆ ಅವರು ವುದೂ ನಿರ್ವಹಿಸುವ ತನಕ ಅಲ್ಲಾಹು ಅವರ ನಮಾಝನ್ನು ಸ್ವೀಕರಿಸುವುದಿಲ್ಲ
عربي
الإنجليزية
الأوردية
“ಸಿವಾಕ್ (ಹಲ್ಲುಜ್ಜುವುದು) ಬಾಯಿಯನ್ನು ಸ್ವಚ್ಛಗೊಳಿಸುತ್ತದೆ ಮತ್ತು ಅಲ್ಲಾಹನನ್ನು ಸಂಪ್ರೀತಗೊಳಿಸುತ್ತದೆ.”
عربي
الإنجليزية
الأوردية
“ಐದು ವೇಳೆಯ ನಮಾಝ್‌ಗಳು, ಒಂದು ಜುಮುಅದಿಂದ ಇನ್ನೊಂದು ಜುಮುಅ, ಒಂದು ರಮದಾನ್‌ನಿಂದ ಇನ್ನೊಂದು ರಮದಾನ್, ಅವುಗಳ ನಡುವಿನ ಪಾಪಗಳಿಗೆ ಪರಿಹಾರವಾಗಿದೆ; ಮಹಾಪಾಪಗಳಿಂದ ದೂರವಿದ್ದರೆ.”
عربي
الإنجليزية
الأوردية
ಯಾರು ವಿಶ್ವಾಸ ಮತ್ತು ಪ್ರತಿಫಲಾಪೇಕ್ಷೆಯಿಂದ ರಮದಾನ್ ತಿಂಗಳಲ್ಲಿ ಉಪವಾಸ ಆಚರಿಸುತ್ತಾನೋ, ಅವನಿಗೆ ಅವನ ಹಿಂದಿನ ಪಾಪಗಳನ್ನು ಕ್ಷಮಿಸಲಾಗುವುದು.”
عربي
الإنجليزية
الأوردية
ಯಾರು ವಿಶ್ವಾಸ ಮತ್ತು ಪ್ರತಿಫಲಾಪೇಕ್ಷೆಯಿಂದ ಕದರ್‌ನ ರಾತ್ರಿಯಲ್ಲಿ ನಮಾಝ್ ನಿರ್ವಹಿಸುತ್ತಾನೋ, ಅವನಿಗೆ ಅವನ ಹಿಂದಿನ ಪಾಪಗಳನ್ನು ಕ್ಷಮಿಸಲಾಗುವುದು.”
عربي
الإنجليزية
الأوردية
“ಮರಣಹೊಂದಿದವರ ಬಗ್ಗೆ ಕೆಟ್ಟದಾಗಿ ಮಾತನಾಡಬೇಡಿ. ಏಕೆಂದರೆ ಅವರು ತಮ್ಮ ಕರ್ಮಗಳೊಂದಿಗೆ ತೆರಳಿದ್ದಾರೆ.”
عربي
الإنجليزية
الأوردية
ಫಜ್ರ್ ನಮಾಝ್ ಮಾಡುವವನು ಅಲ್ಲಾಹನ ರಕ್ಷಣೆಯಲ್ಲಿದ್ದಾನೆ
عربي
الإنجليزية
الأوردية
“ದಾನ ಮಾಡಿದ ಕಾರಣ ಯಾವುದೇ ಆಸ್ತಿ ಕಡಿಮೆಯಾಗಿಲ್ಲ. (ಇತರರನ್ನು) ಮನ್ನಿಸುವ ಗುಣವಿರುವ ದಾಸನಿಗೆ ಅಲ್ಲಾಹು ಗೌರವವನ್ನಲ್ಲದೆ ಬೇರೇನನ್ನೂ ಹೆಚ್ಚಿಸಿಲ್ಲ. ಯಾರು ಅಲ್ಲಾಹನಿಗಾಗಿ ವಿನಯ ತೋರುತ್ತಾನೋ ಅವನನ್ನು ಅಲ್ಲಾಹು ಉನ್ನತಿಗೇರಿಸದೇ ಇರಲಾರ.”
عربي
الإنجليزية
الأوردية
ಅಲ್ಲಾಹು ಹೇಳಿದನು: "ಓ ಆದಮನ ಮಗನೇ! ಖರ್ಚು ಮಾಡು. ನಾನು ನಿನಗಾಗಿ ಖರ್ಚು ಮಾಡುತ್ತೇನೆ
عربي
الإنجليزية
الأوردية
ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎಲ್ಲಾ ನಮಾಝ್‌ಗಳ ನಂತರ ಇವುಗಳ ಮೂಲಕ ತಹ್ಲೀಲ್ (ಲಾಇಲಾಹ ಇಲ್ಲಲ್ಲಾಹ್) ಪಠಿಸುತ್ತಿದ್ದರು
عربي
الإنجليزية
الأوردية
ಈ ದಿನಗಳ ಹೊರತು ಅಲ್ಲಾಹನಿಗೆ ಸತ್ಕರ್ಮಗಳು ಹೆಚ್ಚು ಇಷ್ಟವಾಗುವ ಬೇರೆ ದಿನಗಳಿಲ್ಲ." ಅಂದರೆ, ದುಲ್‌ಹಿಜ್ಜ ತಿಂಗಳ ಮೊದಲ ಹತ್ತು ದಿನಗಳು
عربي
الإنجليزية
الأوردية
ಯಾರು ಅಸರ್ ನಮಾಝನ್ನು ತೊರೆಯುತ್ತಾರೋ ಅವರ ಕರ್ಮಗಳು ನಿಷ್ಪಲವಾಗುತ್ತವೆ
عربي
الإنجليزية
الأوردية
ಯಾರು ಉತ್ತಮ ರೀತಿಯಲ್ಲಿ ವುದೂ ನಿರ್ವಹಿಸುತ್ತಾರೋ ಅವರ ಪಾಪಗಳು ಅವರ ದೇಹದಿಂದ ಹೊರಟುಹೋಗುತ್ತವೆ; ಎಲ್ಲಿಯವರೆಗೆಂದರೆ, ಅವರ ಉಗುರುಗಳ ಅಡಿಭಾಗದಿಂದಲೂ ಸಹ
عربي
الإنجليزية
الأوردية
ಸಮಾಧಿಗಳ ಮೇಲೆ ಕೂರಬೇಡಿ ಮತ್ತು ಅವುಗಳ ಕಡೆಗೆ ನಮಾಝ್ ಮಾಡಬೇಡಿ
عربي
الإنجليزية
الأوردية
ಅವರು ಎಂತಹ ಜನರೆಂದರೆ, ಅವರಲ್ಲಿ ಒಬ್ಬ ನೀತಿವಂತ ದಾಸ ಅಥವಾ ಒಬ್ಬ ನೀತಿವಂತ ವ್ಯಕ್ತಿ ಮರಣಹೊಂದಿದರೆ, ಅವರು ಅವನ ಸಮಾಧಿಯ ಮೇಲೆ ಆರಾಧನಾಲಯವನ್ನು ನಿರ್ಮಿಸುತ್ತಿದ್ದರು
عربي
الإنجليزية
الأوردية
ನನಗೆ ಏಳು ಎಲುಬುಗಳ ಮೇಲೆ ಸಾಷ್ಟಾಂಗ ಮಾಡಲು ಆಜ್ಞಾಪಿಸಲಾಗಿದೆ
عربي
الإنجليزية
الأوردية
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎರಡು ಸುಜೂದ್‌ಗಳ ಮಧ್ಯೆ "ಅಲ್ಲಾಹುಮ್ಮಗ್ಫಿರ್ ಲೀ, ವರ್‌ಹಮ್‌ನೀ, ವಆಫಿನೀ, ವಹ್ದಿನೀ, ವರ್‌ಝುಕ್‌ನೀ" (ಓ ಅಲ್ಲಾಹ್! ನನ್ನನ್ನು ಕ್ಷಮಿಸು, ನನಗೆ ದಯೆತೋರು, ನನಗೆ ಸೌಖ್ಯವನ್ನು ನೀಡು, ನನಗೆ ಸನ್ಮಾರ್ಗವನ್ನು ತೋರಿಸು ಮತ್ತು ನನಗೆ ಜೀವನೋಪಾಯವನ್ನು ದಯಪಾಲಿಸು) ಎಂದು ಹೇಳುತ್ತಿದ್ದರು
عربي
الإنجليزية
الأوردية
ಅಲ್ಲಾಹುಮ್ಮ ಅನ್ತ ಸ್ಸಲಾಂ, ವಮಿನ್ಕ ಸ್ಸಲಾಂ, ತಬಾರಕ್ತ ದಲ್ ಜಲಾಲಿ ವಲ್ ಇಕ್ರಾಮ್
عربي
الإنجليزية
الأوردية
ನಿಂತು ನಮಾಝ್ ನಿರ್ವಹಿಸಿ, ಅದು ಸಾಧ್ಯವಾಗದಿದ್ದರೆ ಕುಳಿತು ನಿರ್ವಹಿಸಿ, ಅದು ಕೂಡ ಸಾಧ್ಯವಾಗದಿದ್ದರೆ ಮಲಗಿ ನಿರ್ವಹಿಸಿ
عربي
الإنجليزية
الأوردية
ತಮಗೆ ನಮಾಝ್‌ಗೆ ಕರೆಯುವ ಅಝಾನ್ ಕೇಳುತ್ತದೆಯೇ?" ಆ ವ್ಯಕ್ತಿ ಹೌದು ಎಂದಾಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಹಾಗಾದರೆ ನೀವು ಅದಕ್ಕೆ ಉತ್ತರ ನೀಡಬೇಕು
عربي
الإنجليزية
الأوردية
(ಮುಸಲ್ಮಾನರೊಂದಿಗೆ) ಒಪ್ಪಂದದಲ್ಲಿರುವ ವ್ಯಕ್ತಿಯನ್ನು ಯಾರಾದರೂ ಕೊಂದರೆ ಅವನು ಸ್ವರ್ಗದ ಪರಿಮಳವನ್ನು ಕೂಡ ಅನುಭವಿಸಲಾರ. ಅದರ ಪರಿಮಳವನ್ನು ನಲ್ವತ್ತು ವರ್ಷಗಳ ದೂರದಿಂದಲೇ ಅನುಭವಿಸಬಹುದಾಗಿದೆ
عربي
الإنجليزية
الأوردية
ಇಸ್ಲಾಂ ಧರ್ಮವನ್ನು ಐದು (ಸ್ತಂಭಗಳ) ಮೇಲೆ ನಿರ್ಮಿಸಲಾಗಿದೆ
عربي
الإنجليزية
الأوردية
ನಾನು ಐದು ವೇಳೆಯ ಕಡ್ಡಾಯ ನಮಾಝ್‌ಗಳನ್ನು ನಿರ್ವಹಿಸಿದರೆ, ರಮದಾನ್ ತಿಂಗಳಲ್ಲಿ ಉಪವಾಸ ಆಚರಿಸಿದರೆ, ಧರ್ಮಸಮ್ಮತವಾಗಿರುವುದನ್ನು ಧರ್ಮಸಮ್ಮತವೆಂದು ಮತ್ತು ಧರ್ಮನಿಷಿದ್ಧವಾಗಿರುವುದನ್ನು ಧರ್ಮನಿಷಿದ್ಧವೆಂದು ಪರಿಗಣಿಸಿದರೆ
عربي
الإنجليزية
الأوردية
“ಶುದ್ಧೀಕರಣವು ಸತ್ಯವಿಶ್ವಾಸದ ಅರ್ಧ ಭಾಗವಾಗಿದೆ. ‘ಅಲ್-ಹಮ್ದುಲಿಲ್ಲಾಹ್’ ಎಂಬ ವಚನವು ತಕ್ಕಡಿಯನ್ನು ತುಂಬುತ್ತದೆ. ‘ಸುಬ್‌ಹಾನಲ್ಲಾಹ್ ವಲ್-ಹಮ್ದುಲಿಲ್ಲಾಹ್’ ಎಂಬ ವಚನಗಳು ತಕ್ಕಡಿಯನ್ನು ತುಂಬುತ್ತವೆ, ಅಥವಾ ಭೂಮ್ಯಾಕಾಶಗಳ ನಡುವಿನ ಭಾಗವನ್ನು ತುಂಬುತ್ತವೆ
عربي
الإنجليزية
الأوردية
ಹಿಮ್ಮಡಿಗಳಿಗೆ ನರಕಾಗ್ನಿಯಿಂದ ವಿನಾಶವಿದೆ. ಪೂರ್ಣವಾಗಿ ವುದೂ ನಿರ್ವಹಿಸಿರಿ
عربي
الإنجليزية
الأوردية
ಮುಅಝ್ಝಿನ್ 'ಅಲ್ಲಾಹು ಅಕ್ಬರ್ ಅಲ್ಲಾಹು ಅಕ್ಬರ್' ಎಂದು ಹೇಳುವಾಗ ನಿಮ್ಮಲ್ಲೊಬ್ಬರು ಹೃದಯಾಂತರಾಳದಿಂದ 'ಅಲ್ಲಾಹು ಅಕ್ಬರ್ ಅಲ್ಲಾಹು ಅಕ್ಬರ್' ಎಂದು ಹೇಳಿದರೆ
عربي
الإنجليزية
الأوردية
ಯಾರಾದರೂ ನಮಾಝನ್ನು ಮರೆತುಬಿಟ್ಟರೆ ನೆನಪಾದಾಗ ಅದನ್ನು ನಿರ್ವಹಿಸಲಿ. ಇದಲ್ಲದೆ ಅದಕ್ಕೆ ಬೇರೆ ಪ್ರಾಯಶ್ಚಿತ್ತವಿಲ್ಲ
عربي
الإنجليزية
الأوردية
ಒಬ್ಬ ವ್ಯಕ್ತಿ ಮತ್ತು ಶಿರ್ಕ್ (ದೇವಸಹಭಾಗಿತ್ವ) ಹಾಗೂ ಕುಫ್ರ್ (ಸತ್ಯನಿಷೇಧ) ನ ನಡುವಿನ ಅಂತರವು ನಮಾಝನ್ನು ತೊರೆಯುವುದಾಗಿದೆ
عربي
الإنجليزية
الأوردية
ನಮಾಝ್ ನಮ್ಮ ಮತ್ತು ಅವರ (ಸತ್ಯನಿಷೇಧಿಗಳ) ನಡುವಿನ ಒಪ್ಪಂದವಾಗಿದೆ. ಯಾರು ಅದನ್ನು ತೊರೆಯುತ್ತಾರೋ ಅವರು ಸತ್ಯನಿಷೇಧಿಗಳಾದರು
عربي
الإنجليزية
الأوردية
ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜೊತೆಗಿನ ಒಂದು ಯುದ್ಧದಲ್ಲಿ ಒಬ್ಬ ಮಹಿಳೆ ಕೊಲೆಯಾಗಿ ಬಿದ್ದಿರುವುದು ಕಂಡುಬಂತು. ಆಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಹಿಳೆಯರು ಮತ್ತು ಮಕ್ಕಳನ್ನು ಕೊಲ್ಲುವುದನ್ನು ಖಂಡಿಸಿದರು
عربي
الإنجليزية
الأوردية
ಅಲ್ಲಾಹನ ವಚನವು ಸರ್ವೋಚ್ಛವಾಗಬೇಕೆಂದು ಯಾರು ಹೋರಾಡುತ್ತಾರೋ ಅವರೇ ಅಲ್ಲಾಹನ ಮಾರ್ಗದಲ್ಲಿರುವವರು
عربي
الإنجليزية
الأوردية
ನೀವು ಅಝಾನ್ ಕೇಳಿದರೆ ಮುಅಝ್ಝಿನ್ ಹೇಳುವಂತೆಯೇ ಹೇಳಿರಿ
عربي
الإنجليزية
الأوردية
ಅವುಗಳನ್ನು ಬಿಟ್ಟುಬಿಡಿ. ನಾವು ಅವುಗಳನ್ನು ಶುದ್ಧಿಯಲ್ಲಿದ್ದ ಸ್ಥಿತಿಯಲ್ಲಿ ಧರಿಸಿದ್ದೆ
عربي
الإنجليزية
الأوردية
ಅದು ರಕ್ತನಾಳವಾಗಿದೆ. ಆದರೆ ಸಾಮಾನ್ಯವಾಗಿ ನಿಮಗೆ ಮುಟ್ಟಾಗುವ ಅವಧಿಯಲ್ಲಿ ನಮಾಝ್ ತೊರೆಯಿರಿ, ನಂತರ ಗುಸ್ಲ್ (ಕಡ್ಡಾಯ ಸ್ನಾನ) ನಿರ್ವಹಿಸಿ ನಮಾಝ್ ಮುಂದುವರಿಸಿ
عربي
الإنجليزية
الأوردية
ನಿಮ್ಮ ಸಾಲುಗಳನ್ನು ನೇರಗೊಳಿಸಿರಿ. ಏಕೆಂದರೆ, ಸಾಲನ್ನು ನೇರಗೊಳಿಸುವುದು ನಮಾಝನ್ನು ಪೂರ್ಣಗೊಳಿಸುವುದರ ಭಾಗವಾಗಿದೆ
عربي
الإنجليزية
الأوردية
ನಿಮ್ಮಲ್ಲೊಬ್ಬರು ವುದೂ (ಅಂಗಸ್ನಾನ) ಮಾಡುವಾಗ, ಮೂಗಿಗೆ ನೀರನ್ನು ಎಳೆದು ಹೊರಬಿಡಲಿ. ನಿಮ್ಮಲ್ಲೊಬ್ಬನು ಇಸ್ತಿಜ್ಮಾರ್ (ಕಲ್ಲು ಮುಂತಾದ ವಸ್ತುಗಳಿಂದ ಶುಚಿ) ಮಾಡುವಾಗ ಬೆಸ ಸಂಖ್ಯೆಯಲ್ಲಿ ಮಾಡಲಿ
عربي
الإنجليزية
الأوردية
ನಾನು ಪ್ರವಾದಿಯವರಿಂದ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹತ್ತು ರಕಅತ್‌ಗಳನ್ನು ಜ್ಞಾಪಕದಲ್ಲಿಟ್ಟಿದ್ದೇನೆ
عربي
الإنجليزية
الأوردية
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರಾತ್ರಿ ನಿದ್ರೆಯಿಂದ ಎದ್ದರೆ, ಹಲ್ಲುಜ್ಜುವ ಕಡ್ಡಿಯಿಂದ ತಮ್ಮ ಬಾಯಿಯನ್ನು ಸ್ವಚ್ಛಗೊಳಿಸುತ್ತಿದ್ದರು
عربي
الإنجليزية
الأوردية
ನೀವು ಮಲ ವಿಸರ್ಜನೆ ಮಾಡುವ ಸ್ಥಳಕ್ಕೆ ಹೋದರೆ ಕಿಬ್ಲದ ದಿಕ್ಕಿಗೆ ಮುಖ ಮಾಡಬೇಡಿ ಮತ್ತು ಅದರ ಕಡೆಗೆ ಬೆನ್ನು ಹಾಕಬೇಡಿ. ಬದಲಿಗೆ, ಪೂರ್ವಕ್ಕೆ ಅಥವಾ ಪಶ್ಚಿಮಕ್ಕೆ ಮುಖ ಮಾಡಿರಿ
عربي
الإنجليزية
الأوردية
ನಿಮ್ಮಲ್ಲೊಬ್ಬರು ಮೂತ್ರ ವಿಸರ್ಜನೆ ಮಾಡುವಾಗ ತನ್ನ ಜನನಾಂಗವನ್ನು ಬಲಗೈಯಲ್ಲಿ ಹಿಡಿಯಬಾರದು, ಬಲಗೈಯಿಂದ ಶೌಚವನ್ನು ಒರೆಸಬಾರದು, ಮತ್ತು ಪಾತ್ರೆಯೊಳಗೆ ಶ್ವಾಸ ಬಿಡಬಾರದು
عربي
الإنجليزية
الأوردية
ಇಮಾಮರು ತಲೆ ಎತ್ತುವುದಕ್ಕಿಂತ ಮೊದಲು ತಲೆ ಎತ್ತುವವರು, ಅಲ್ಲಾಹು ಅವರ ತಲೆಯನ್ನು ಕತ್ತೆಯ ತಲೆಯಾಗಿ, ಅಥವಾ ಅವರ ರೂಪವನ್ನು ಕತ್ತೆಯ ರೂಪವಾಗಿ ಮಾರ್ಪಡಿಸುವನು ಎಂದು ಭಯಪಡುವುದಿಲ್ಲವೇ?
عربي
الإنجليزية
الأوردية
ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಾಝನ್ನು ಪ್ರಾರಂಭಿಸುವಾಗ ತಮ್ಮ ಎರಡು ಕೈಗಳನ್ನು ಹೆಗಲಿಗೆ ಸಮಾನಾಂತರವಾಗಿ ಎತ್ತುತ್ತಿದ್ದರು
عربي
الإنجليزية
الأوردية
ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನನ್ನ ಅಂಗೈಯನ್ನು ಅವರ ಎರಡು ಅಂಗೈಗಳ ಮಧ್ಯದಲ್ಲಿಟ್ಟು, ಕುರ್‌ಆನಿನ ಒಂದು ಅಧ್ಯಾಯವನ್ನು ಕಲಿಸಿಕೊಡುವಂತೆ ನನಗೆ ತಶಹ್ಹುದ್ ಕಲಿಸಿಕೊಟ್ಟರು
عربي
الإنجليزية
الأوردية
ಓ ಅಲ್ಲಾಹ್! ನಾನು ನಿನ್ನಲ್ಲಿ ಸಮಾಧಿಯ ಶಿಕ್ಷೆಯಿಂದ, ನರಕ ಶಿಕ್ಷೆಯಿಂದ, ಜೀವನ ಮತ್ತು ಮರಣದ ಪರೀಕ್ಷೆಗಳಿಂದ ಮತ್ತು ದಜ್ಜಾಲ್‌ನ ಪರೀಕ್ಷೆಯಿಂದ ರಕ್ಷೆ ಬೇಡುತ್ತೇನೆ
عربي
الإنجليزية
الأوردية
ಓ ಅಲ್ಲಾಹ್! ಪೂರ್ವ ಮತ್ತು ಪಶ್ಚಿಮಗಳ ನಡುವೆ ಅಂತರವಿಟ್ಟಂತೆ ನನ್ನ ಮತ್ತು ನನ್ನ ಪಾಪಗಳ ನಡುವೆ ಅಂತರವಿಡು
عربي
الإنجليزية
الأوردية
ನಾಯಿ ನಿಮ್ಮಲ್ಲೊಬ್ಬರ ಪಾತ್ರೆಯಲ್ಲಿ ಕುಡಿದರೆ, ಅವನು ಅದನ್ನು ಏಳು ಬಾರಿ ತೊಳೆಯಬೇಕಾಗಿದೆ
عربي
الإنجليزية
الأوردية
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಶೌಚಾಲಯವನ್ನು ಪ್ರವೇಶಿಸುವಾಗ,ಅಲ್ಲಾಹುಮ್ಮ ಇನ್ನೀ ಅಊದು ಬಿಕ ಮಿನಲ್ ಖುಬುಸಿ ವಲ್ ಖಬಾಇಸ್ (ಓ ಅಲ್ಲಾಹ್, ಗಂಡು ಶೈತಾನರಿಂದ ಮತ್ತು ಹೆಣ್ಣು ಶೈತಾನರಿಂದ ನಾನು ನಿನ್ನಲ್ಲಿ ರಕ್ಷೆ ಬೇಡುತ್ತೇನೆ) ಎಂದು ಹೇಳುತ್ತಿದ್ದರು
عربي
الإنجليزية
الأوردية
ಯಾರು ಅಲ್ಲಾಹನೊಡನೆ ಪ್ರಾಮಾಣಿಕವಾಗಿ ಹುತಾತ್ಮತೆಯನ್ನು ಬೇಡುತ್ತಾನೋ ಅವನನ್ನು ಅಲ್ಲಾಹು ಹುತಾತ್ಮರ ಸ್ಥಾನಗಳಿಗೆ ತಲುಪಿಸುತ್ತಾನೆ. ಅವನು ತನ್ನ ಹಾಸಿಗೆಯಲ್ಲಿ ಪ್ರಾಣ ಬಿಟ್ಟರೂ ಸಹ
عربي
الإنجليزية
الأوردية
ದೊಡ್ಡ ಅಶುದ್ಧಿಯಿಂದ (ಜನಾಬತ್) ಸ್ನಾನ ಮಾಡುವ ರೂಪ
عربي
الإنجليزية
الأوردية
ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ದೊಡ್ಡ ಅಶುದ್ಧಿಯಿಂದಾಗಿ (ಜನಾಬತ್) ಸ್ನಾನ ಮಾಡುವಾಗ, ಮೊದಲು ಕೈಗಳನ್ನು ತೊಳೆದು, ನಂತರ ನಮಾಝ್‌ಗಾಗಿ ವುದೂ (ಅಂಗಸ್ನಾನ) ಮಾಡುವಂತೆ ವುದೂ ಮಾಡುತ್ತಿದ್ದರು. ನಂತರ ಅವರು ಸ್ನಾನ ಮಾಡುತ್ತಿದ್ದರು
عربي
الإنجليزية
الأوردية
ನಾನು ಅತ್ಯಧಿಕ ಮದಿ (ಸ್ಖಲನಪೂರ್ವ ದ್ರವ) ಸ್ರವಿಸುವ ವ್ಯಕ್ತಿಯಾಗಿದ್ದೆ. ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಗಳಿಗಿರುವ ಸ್ಥಾನಮಾನದಿಂದ ನಾನು ಅವರಲ್ಲಿ ಅದರ ಬಗ್ಗೆ ಕೇಳಲು ಸಂಕೋಚಪಡುತ್ತಿದ್ದೆ. ಆದ್ದರಿಂದ, ನಾನು ಮಿಕ್ದಾದ್ ಬಿನ್ ಅಸ್ವದ್ ರಿಗೆ ಆಜ್ಞಾಪಿಸಿದೆ. ಅವರು (ಅದರ ಬಗ್ಗೆ) ಕೇಳಿದಾಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಉತ್ತರಿಸಿದರು: ಅವರು ತಮ್ಮ ಜನನಾಂಗವನ್ನು ತೊಳೆದು ವುದೂ (ಅಂಗಸ್ನಾನ) ನಿರ್ವಹಿಸಲಿ
عربي
الإنجليزية
الأوردية
ಅಲ್ಲಾಹು ಅತ್ಯಂತ ಇಷ್ಟಪಡುವ ಕರ್ಮ ಯಾವುದು?” ಅವರು ಉತ್ತರಿಸಿದರು: “ನಮಾಝನ್ನು ಅದರ ಸಮಯದಲ್ಲಿ ನಿರ್ವಹಿಸುವುದು.” ನಾನು ಕೇಳಿದೆ: “ನಂತರ ಯಾವುದು?” ಅವರು ಉತ್ತರಿಸಿದರು: “ನಂತರ ಮಾತಾಪಿತರಿಗೆ ಒಳಿತು ಮಾಡುವುದು.” ನಾನು ಕೇಳಿದೆ: “ನಂತರ ಯಾವುದು?” ಅವರು ಉತ್ತರಿಸಿದರು: “ಅಲ್ಲಾಹನ ಮಾರ್ಗದಲ್ಲಿ ಜಿಹಾದ್ ಮಾಡುವುದು
عربي
الإنجليزية
الأوردية
ದಾಸರು ಬೆಳಗನ್ನು ಪ್ರವೇಶಿಸುವ ಪ್ರತಿ ದಿನವೂ ಎರಡು ದೇವದೂತರುಗಳು ಇಳಿದು ಬರುತ್ತಾರೆ. ಆಗ ಅವರಲ್ಲೊಬ್ಬರು ಹೇಳುವರು: ಓ ಅಲ್ಲಾಹ್! ಖರ್ಚು ಮಾಡುವವರಿಗೆ ಬದಲಿಯನ್ನು ನೀಡು. ಇನ್ನೊಬ್ಬರು ಹೇಳುವರು: ಓ ಅಲ್ಲಾಹ್! (ಖರ್ಚು ಮಾಡದೆ) ತಡೆಹಿಡಿಯುವವರಿಗೆ ಹಾನಿಯನ್ನು ನೀಡು
عربي
الإنجليزية
الأوردية
ಯಾರು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಲು ಒಬ್ಬ ಯೋಧನನ್ನು ಸಿದ್ಧಗೊಳಿಸುತ್ತಾನೋ ಅವನು ಯುದ್ಧ ಮಾಡಿದವನಿಗೆ ಸಮಾನನಾಗುತ್ತಾನೆ. ಯಾರು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡುವವನು ಬಿಟ್ಟು ಹೋದ ಅವನ ಆಶ್ರಿತರನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೋ ಅವನು ಯುದ್ಧ ಮಾಡಿದವನಿಗೆ ಸಮಾನನಾಗುತ್ತಾನೆ
عربي
الإنجليزية
الأوردية
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವುದೂ ನಿರ್ವಹಿಸಿದಂತೆ ವುದೂ ನಿರ್ವಹಿಸಿ ತೋರಿಸಿದರು
عربي
الإنجليزية
الأوردية
ನೀನು ನಿನ್ನ ಕೈಗಳಿಂದ ಹೀಗೆ ಮಾಡಿದರೆ ನಿನಗೆ ಸಾಕಾಗುತ್ತಿತ್ತು." ನಂತರ ಅವರು ತಮ್ಮ ಕೈಗಳಿಂದ ಒಂದು ಬಾರಿ ನೆಲಕ್ಕೆ ಬಡಿದರು. ನಂತರ ಎಡಗೈಯಿಂದ ಬಲಗೈಯನ್ನು, ಎರಡು ಅಂಗೈಗಳ ಹೊರಭಾಗವನ್ನು ಮತ್ತು ಮುಖವನ್ನು ಸವರಿದರು
عربي
الإنجليزية
الأوردية
ನನಗಿಂತ ಮೊದಲಿನ ಸಮುದಾಯಗಳಲ್ಲಿ ಅಲ್ಲಾಹು ಕಳುಹಿಸಿದ ಯಾವುದೇ ಪ್ರವಾದಿಗೂ ಅವರ ಸಮುದಾಯದಲ್ಲಿ ಶಿಷ್ಯರು ಮತ್ತು ಸಂಗಡಿಗರು ಇಲ್ಲದೇ ಇರಲಿಲ್ಲ. ಅವರು ಆ ಪ್ರವಾದಿಯ ಚರ್ಯೆಗಳನ್ನು ಬಿಗಿಯಾಗಿ ಹಿಡಿದುಕೊಂಡು ಅವರ ಆಜ್ಞೆಯನ್ನು ಪಾಲಿಸುತ್ತಿದ್ದರು
عربي
الإنجليزية
الأوردية
ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ದೇವರಿಲ್ಲ ಮತ್ತು ಮುಹಮ್ಮದ್ ಅಲ್ಲಾಹನ ಸಂದೇಶವಾಹಕರು ಎಂದು ಸಾಕ್ಷ್ಯ ವಹಿಸುತ್ತೇನೆ, ನಮಾಝ್ ಸಂಸ್ಥಾಪಿಸುತ್ತೇನೆ, ಝಕಾತ್ ನೀಡುತ್ತೇನೆ, ಕೇಳುತ್ತೇನೆ ಮತ್ತು ಅನುಸರಿಸುತ್ತೇನೆ ಹಾಗೂ ಎಲ್ಲಾ ಮುಸ್ಲಿಮರ ಹಿತಚಿಂತಕನಾಗಿರುತ್ತೇನೆ ಎಂದು ನಾನು ಅಲ್ಲಾಹನ ಸಂದೇಶವಾಹಕರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಿಷ್ಠೆಯ ಪ್ರತಿಜ್ಞೆ ಮಾಡಿದೆ
عربي
الإنجليزية
الأوردية
ನಾನು ನಿನಗೆ ಉಪದೇಶ ಮಾಡುತ್ತಿದ್ದೇನೆ. ಎಲ್ಲಾ ನಮಾಝ್‌ಗಳ ನಂತರ ಹೀಗೆ ಹೇಳುವುದನ್ನು ಬಿಟ್ಟುಬಿಡಬೇಡ: ಓ ಅಲ್ಲಾಹ್! ನಿನ್ನನ್ನು ಸ್ಮರಿಸಲು, ನಿನಗೆ ಕೃತಜ್ಞತೆ ಸಲ್ಲಿಸಲು ಮತ್ತು ಉತ್ತಮವಾದ ರೀತಿಯಲ್ಲಿ ನಿನ್ನ ಆರಾಧನೆ ಮಾಡಲು ನನಗೆ ಸಹಾಯ ಮಾಡು
عربي
الإنجليزية
الأوردية
ಅಲ್ಲಾಹು ಹೇಳಿದನು: ಆದಮರ ಪುತ್ರ ಮಾಡುವ ಎಲ್ಲಾ ಕರ್ಮಗಳು ಅವನಿಗೇ ಆಗಿವೆ; ಉಪವಾಸದ ಹೊರತು. ಅದು ನನಗಾಗಿದೆ ಮತ್ತು ನಾನೇ ಅದಕ್ಕೆ ಪ್ರತಿಫಲವನ್ನು ನೀಡುತ್ತೇನೆ
عربي
الإنجليزية
الأوردية
ಓ ಅಲ್ಲಾಹ್! ನಿನ್ನ ಕೋಪದಿಂದ ನಿನ್ನ ತೃಪ್ತಿಯಲ್ಲಿ ಮತ್ತು ನಿನ್ನ ಶಿಕ್ಷೆಯಿಂದ ನಿನ್ನ ಕ್ಷೇಮದಲ್ಲಿ ನಾನು ರಕ್ಷಣೆಯನ್ನು ಬೇಡುತ್ತೇನೆ. ನಿನಗೆ ವಿರುದ್ಧವಾಗಿ ನಿನ್ನಲ್ಲೇ ನಾನು ಆಶ್ರಯವನ್ನು ಬೇಡುತ್ತೇನೆ. ನೀನು ನಿನ್ನನ್ನು ಪ್ರಶಂಸಿಸಿದಂತೆ ನನಗೆ ನಿನ್ನ ಪ್ರಶಂಸೆಯನ್ನು ಎಣಿಸಲು ಸಾಧ್ಯವಿಲ್ಲ
عربي
الإنجليزية
الأوردية
ನಾನು ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರೊಡನೆ ಕೇಳಿದೆ: "ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಮನೆಗೆ ಪ್ರವೇಶಿಸಿದಾಗ ಮೊತ್ತಮೊದಲು ಏನು ಮಾಡುತ್ತಿದ್ದರು?" ಅವರು ಹೇಳಿದರು: "ಮಿಸ್ವಾಕ್ (ಹಲ್ಲುಗಳನ್ನು ಸ್ವಚ್ಛಗೊಳಿಸುವ ಕಡ್ಡಿ) ನಿಂದ ಹಲ್ಲು ಸ್ವಚ್ಛಗೊಳಿಸುತ್ತಿದ್ದರು
عربي
الإنجليزية
الأوردية
ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಮ್ಮುಖದಲ್ಲಿ ರಾತ್ರಿಯಿಡೀ ಮಲಗಿ ಬೆಳಿಗ್ಗೆಯವರೆಗೂ ಎದ್ದೇಳದ ಒಬ್ಬ ವ್ಯಕ್ತಿಯ ಬಗ್ಗೆ ಹೇಳಲಾಯಿತು. ಆಗ ಅವರು ಹೇಳಿದರು: “ಅವನು ಎಂತಹ ವ್ಯಕ್ತಿಯೆಂದರೆ, ಅವನ ಕಿವಿಗಳಲ್ಲಿ (ಅಥವಾ ಅವರು ಹೀಗೆ ಹೇಳಿದರು: ಅವನ ಕಿವಿಯಲ್ಲಿ) ಶೈತಾನನು ಮೂತ್ರ ವಿಸರ್ಜನೆ ಮಾಡಿದ್ದಾನೆ.”
عربي
الإنجليزية
الأوردية
ನಿಮ್ಮಲ್ಲೊಬ್ಬನು ಮಲಗಿರುವಾಗ ಶೈತಾನನು ಅವನ ಕತ್ತಿನ ಹಿಂಭಾಗದಲ್ಲಿ ಮೂರು ಗಂಟುಗಳನ್ನು ಹಾಕಿ, ಅವುಗಳಲ್ಲಿ ಪ್ರತಿಯೊಂದು ಗಂಟಿಗೂ ಗುದ್ದುತ್ತಾ, "ರಾತ್ರಿ ಇನ್ನೂ ದೀರ್ಘವಾಗಿದೆ; ಮಲಗು" ಎನ್ನುತ್ತಿರುವನು
عربي
الإنجليزية
الأوردية
ಅಲ್ಲಾಹನಿಗೆ ಅತ್ಯಧಿಕವಾಗಿ ಸುಜೂದ್ ಮಾಡಿರಿ. ಏಕೆಂದರೆ ನೀವು ಅಲ್ಲಾಹನಿಗಾಗಿ ಒಂದು ಸುಜೂದ್ ಮಾಡಿದರೆ, ಅಲ್ಲಾಹು ಅದರಿಂದ ನಿಮಗೆ ಒಂದುಸ್ಥಾನಯನ್ನು ಏರಿಸುವನು ಮತ್ತು ನಿಮ್ಮಿಂದ ಒಂದು ಪಾಪವನ್ನು ಅಳಿಸುವನು
عربي
الإنجليزية
الأوردية
ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರಮದಾನಿನ ಕೊನೆಯ ಹತ್ತು ದಿನಗಳಲ್ಲಿ ಇತರ ದಿನಗಳಲ್ಲಿ ಪರಿಶ್ರಮಿಸದಷ್ಟು ಪರಿಶ್ರಮಿಸುತ್ತಿದ್ದರು
عربي
الإنجليزية
الأوردية
ಯಾವ ದಾಸನ ಪಾದಗಳು ಅಲ್ಲಾಹನ ಮಾರ್ಗದಲ್ಲಿ ಧೂಳಿನಿಂದ ಮುಚ್ಚಿಹೋಗುತ್ತವೆಯೋ, ಆ ಪಾದಗಳನ್ನು ನರಕದ ಬೆಂಕಿ ಸ್ಪರ್ಶಿಸುವುದಿಲ್ಲ
عربي
الإنجليزية
الأوردية
ಯಾರು ಎರಡು ಬರದ್ (ತಂಪು) ನಮಾಝ್‌ಗಳನ್ನು ನಿರ್ವಹಿಸುತ್ತಾರೋ ಅವರು ಸ್ವರ್ಗವನ್ನು ಪ್ರವೇಶಿಸುತ್ತಾರೆ
عربي
الإنجليزية
الأوردية
ನನ್ನ ಗೆಳೆಯ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನನಗೆ ಮೂರು ವಿಷಯಗಳ ಉಪದೇಶ ಮಾಡಿದರು: ಪ್ರತೀ ತಿಂಗಳಲ್ಲಿ ಮೂರು ದಿನ ಉಪವಾಸ ಆಚರಿಸುವುದು, ಎರಡು ರಕ್‌ಅತ್ ದುಹಾ ನಮಾಝ್ ನಿರ್ವಹಿಸುವುದು ಮತ್ತು ಮಲಗುವುದಕ್ಕೆ ಮೊದಲು ವಿತ್ರ್ ನಮಾಝ್ ನಿರ್ವಹಿಸುವುದು
عربي
الإنجليزية
الأوردية
ನೀವು ಅದನ್ನು (ಚಂದ್ರನನ್ನು) ಕಂಡರೆ ಉಪವಾಸವನ್ನು ಪ್ರಾರಂಭಿಸಿರಿ, ಮತ್ತು ನೀವು ಅದನ್ನು ಕಂಡರೆ ಉಪವಾಸವನ್ನು ನಿಲ್ಲಿಸಿರಿ. ಮೋಡಗಳ ಕಾರಣ ನಿಮಗೆ ಅದನ್ನು ಕಾಣಲಾಗದಿದ್ದರೆ ಮೂವತ್ತು ದಿನಗಳನ್ನು ಪೂರ್ಣಗೊಳಿಸಿರಿ
عربي
الإنجليزية
الأوردية
ಒಬ್ಬ ವ್ಯಕ್ತಿ ಸಾಮೂಹಿಕವಾಗಿ (ಜಮಾಅತ್‌ನೊಂದಿಗೆ) ನಮಾಝ್ ನಿರ್ವಹಿಸುವುದು, ಆತ ತನ್ನ ಮನೆಯಲ್ಲಿ ಅಥವಾ ತನ್ನ ಮಾರುಕಟ್ಟೆಯಲ್ಲಿ ನಿರ್ವಹಿಸುವ ನಮಾಝ್‌ಗಿಂತ ಇಪ್ಪತ್ತಕ್ಕಿಂತಲೂ ಹೆಚ್ಚು ಪದವಿಗಳನ್ನು ಹೊಂದಿದೆ
عربي
الإنجليزية
الأوردية
ಬೆಳ್ಳುಳ್ಳಿ ಅಥವಾ ಈರುಳ್ಳಿಯನ್ನು ತಿಂದವರು ನಮ್ಮಿಂದ ದೂರವಿರಲಿ - ಅಥವಾ ಅವರು ಹೀಗೆ ಹೇಳಿದರು: ಅವರು ನಮ್ಮ ಮಸೀದಿಯಿಂದ ದೂರವಿರಲಿ - ಮತ್ತು ತಮ್ಮ ಮನೆಯಲ್ಲೇ ಉಳಿದುಕೊಳ್ಳಲಿ
عربي
الإنجليزية
الأوردية
ನೀವು ಆಲೋಚಿಸಿ ನೋಡಿದ್ದೀರಾ! ನಿಮ್ಮಲ್ಲೊಬ್ಬನ ಮನೆಯ ಬಾಗಿಲಿನ ಬಳಿ ಒಂದು ನದಿ ಹರಿಯುತ್ತಿದ್ದು, ಅವನು ಅದರಲ್ಲಿ ಪ್ರತಿ ದಿನ ಐದು ಬಾರಿ ಸ್ನಾನ ಮಾಡುತ್ತಿದ್ದರೆ, ಅವನಲ್ಲಿ ಏನಾದರೂ ಕೊಳೆ ಉಳಿಯಬಹುದೇ?
عربي
الإنجليزية
الأوردية
ಮಕ್ಕಳಿಗೆ ಏಳು ವರ್ಷ ಪ್ರಾಯವಾದಾಗ ನಮಾಝ್ ನಿರ್ವಹಿಸಲು ಆದೇಶಿಸಿರಿ, ಹತ್ತು ವರ್ಷ ಪ್ರಾಯವಾದಾಗ ಅದಕ್ಕಾಗಿ ಹೊಡೆಯಿರಿ ಮತ್ತು ಮಲಗುವ ಸ್ಥಳದಲ್ಲಿ ಅವರನ್ನು ಬೇರ್ಪಡಿಸಿರಿ
عربي
الإنجليزية
الأوردية
ನಿಶ್ಚಯವಾಗಿಯೂ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮ್ಮ ಬಳಿಗೆ ಬಂದಾಗ ನಾವು ಹೇಳಿದೆವು: "ಓ ಅಲ್ಲಾಹನ ಸಂದೇಶವಾಹಕರೇ! ನಿಮಗೆ ಹೇಗೆ ಸಲಾಂ ಹೇಳುವುದೆಂದು ನಮಗೆ ತಿಳಿದಿದೆ. ಆದರೆ ನಾವು ನಿಮ್ಮ ಮೇಲೆ ಸಲಾತ್ ಹೇಳುವುದು ಹೇಗೆ?
عربي
الإنجليزية
الأوردية
ಗ್ರಂಥದ ಆರಂಭವನ್ನು (ಸೂರ ಫಾತಿಹ) ಪಠಿಸದವನಿಗೆ ನಮಾಝ್ ಇಲ್ಲ
عربي
الإنجليزية
الأوردية
ಶುಕ್ರವಾರ ದೊಡ್ಡ ಅಶುದ್ಧಿ (ಜನಾಬತ್) ಗಾಗಿರುವ ಸ್ನಾನವನ್ನು ಮಾಡಿ ನಂತರ (ಮಸೀದಿಗೆ) ಹೊರಡುವವನು, ಒಂಟೆಯನ್ನು ಬಲಿ ನೀಡಿದವನಿಗೆ ಸಮಾನನಾಗುತ್ತಾನೆ
عربي
الإنجليزية
الأوردية
ನಿಮ್ಮಲ್ಲಿ ಯಾರಾದರೂ ಜುಮಾ ನಮಾಝ್‌ಗೆ ಬಂದರೆ ಸ್ನಾನ ಮಾಡಿ ಬರಲಿ
عربي
الإنجليزية
الأوردية
ಯಾರು ಉತ್ತಮ ರೀತಿಯಲ್ಲಿ ವುದೂ ನಿರ್ವಹಿಸಿ, ನಂತರ ಜುಮಾ ನಮಾಝಿಗೆ ಬಂದು, (ಪ್ರವಚನವನ್ನು) ಕಿವಿಗೊಟ್ಟು ಕೇಳಿ, ಮೌನವಾಗಿರುತ್ತಾನೋ, ಆ ಜುಮಾ ಮತ್ತು ಮುಂದಿನ ಜುಮಾದ ತನಕವಿರುವ ಮತ್ತು ಮೂರು ದಿನ ಹೆಚ್ಚುವರಿಯಾಗಿ, ಅವನ ಎಲ್ಲಾ ಪಾಪಗಳನ್ನು ಕ್ಷಮಿಸಲಾಗುವುದು
عربي
الإنجليزية
الأوردية
ಯಾರು ಬೆಳಿಗ್ಗೆ ಮತ್ತು ಸಂಜೆ ಮಸೀದಿಗೆ ಹೋಗುತ್ತಾನೋ, ಅವನು ಬೆಳಿಗ್ಗೆ ಮತ್ತು ಸಂಜೆ ಮಸೀದಿಗೆ ಹೋಗುವಾಗಲೆಲ್ಲಾ ಅಲ್ಲಾಹು ಅವನಿಗೆ ಸ್ವರ್ಗದಲ್ಲಿ ಒಂದು ಔತಣವನ್ನು ಸಿದ್ಧಗೊಳಿಸುವನು
عربي
الإنجليزية
الأوردية
ಓ ಜನರೇ! ಸಲಾಂ ಹೇಳುವುದನ್ನು ವ್ಯಾಪಕಗೊಳಿಸಿರಿ, ಆಹಾರವನ್ನು ಉಣಿಸಿರಿ, ಕುಟುಂಬ ಸಂಬಂಧಗಳನ್ನು ಜೋಡಿಸಿರಿ, ಮತ್ತು ರಾತ್ರಿಯಲ್ಲಿ ಜನರು ನಿದ್ರಿಸುತ್ತಿರುವಾಗ ನಮಾಝ್ ಮಾಡಿರಿ. ನೀವು ಸುರಕ್ಷಿತವಾಗಿ ಸ್ವರ್ಗವನ್ನು ಪ್ರವೇಶಿಸುವಿರಿ
عربي
الإنجليزية
الأوردية
ವಿವಾಹವಾಗುವ ಸಾಮರ್ಥ್ಯವಿರುವವರು ವಿವಾಹವಾಗಬೇಕು. ಏಕೆಂದರೆ, ದೃಷ್ಟಿಯನ್ನು ತಗ್ಗಿಸಲು ಮತ್ತು ಪರಿಶುದ್ಧತೆಯನ್ನು ಕಾಪಾಡಲು ಅದು ಹೆಚ್ಚು ಪರಿಣಾಮಕಾರಿಯಾಗಿದೆ. ವಿವಾಹವಾಗುವ ಸಾಮರ್ಥ್ಯವಿಲ್ಲದವರು ಉಪವಾಸ ಆಚರಿಸಬೇಕು. ಏಕೆಂದರೆ, ಅದು ಅವನಿಗೆ ಗುರಾಣಿಯಾಗಿದೆ
عربي
الإنجليزية
الأوردية
ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜನರಲ್ಲೇ ಅತ್ಯಂತ ಉದಾರಿಯಾಗಿದ್ದರು. ರಮದಾನ್ ತಿಂಗಳಲ್ಲಿ ಜಿಬ್ರೀಲ್ ಅವರನ್ನು ಭೇಟಿಯಾಗುವಾಗ ಅವರು ಹಿಂದೆಂದಿಗಿಂತಲೂ ಹೆಚ್ಚು ಉದಾರಿಯಾಗುತ್ತಿದ್ದರು
عربي
الإنجليزية
الأوردية
ಸೂರ್ಯೋದಯಕ್ಕೆ ಮೊದಲು ಮತ್ತು ಸೂರ್ಯಾಸ್ತಕ್ಕೆ ಮೊದಲು ನಮಾಝ್ ಮಾಡಿದವರು ಎಂದಿಗೂ ನರಕವನ್ನು ಪ್ರವೇಶಿಸುವುದಿಲ್ಲ
عربي
الإنجليزية
الأوردية
ಒಬ್ಬ ಮುಸಲ್ಮಾನನು ಕಡ್ಡಾಯ ನಮಾಝ್‌ನ ಸಮಯವಾದಾಗ ಸರಿಯಾಗಿ ವುದೂ ನಿರ್ವಹಿಸಿ, ಪೂರ್ಣ ಭಕ್ತಿಯಿಂದ ಮತ್ತು ರುಕೂ (ಬಾಗುವುದು) ಅನ್ನು ಸರಿಯಾಗಿ ಪೂರ್ಣಗೊಳಿಸುತ್ತಾ ನಮಾಝ್ ನಿರ್ವಹಿಸಿದರೆ, ಅದು ಅವನ ಗತ ಪಾಪಗಳಿಗೆ ಪ್ರಾಯಶ್ಚಿತ್ತವಾಗುತ್ತದೆ—ಅವು ಮಹಾಪಾಪಗಳಲ್ಲದಿದ್ದರೆ. ಇದು ಎಲ್ಲಾ ಕಾಲಕ್ಕೂ ಅನ್ವಯಿಸುತ್ತದೆ.";
عربي
الإنجليزية
الأوردية
ಕಡ್ಡಾಯ ನಮಾಝ್‌ಗಳ ನಂತರ ಕೆಲವು ಸ್ಮರಣೆಗಳಿದ್ದು, ಅವುಗಳನ್ನು ಪಠಿಸುವವನು—ಅಥವಾ ಕಾರ್ಯಗತಗೊಳಿಸುವವನು—ಎಂದಿಗೂ ನಿರಾಶನಾಗುವುದಿಲ್ಲ. ಮೂವತ್ತಮೂರು ತಸ್ಬೀಹ್‌ಗಳು, ಮೂವತ್ತಮೂರು ತಹ್ಮೀದ್‌ಗಳು ಮತ್ತು ಮೂವತ್ತನಾಲ್ಕು ತಕ್ಬೀರ್‌ಗಳು
عربي
الإنجليزية
الأوردية
ಮುಅಝ್ಝಿನ್ (ಅಝಾನ್ ಕರೆ ನೀಡುವವನು) ಕರೆ ನೀಡುವುದನ್ನು ಕೇಳಿದಾಗ, ಯಾರು "ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ, ಅವನು ಏಕೈಕನು ಮತ್ತು ಸಹಭಾಗಿಗಳಿಲ್ಲದವನು, ಮತ್ತು ಮುಹಮ್ಮದ್ ಅವನ ದಾಸರು ಮತ್ತು ಸಂದೇಶವಾಹಕರು ಎಂದು ನಾನು ಸಾಕ್ಷ್ಯ ವಹಿಸುತ್ತೇನೆ, ಪರಿಪಾಲಕನಾಗಿ ಅಲ್ಲಾಹನಲ್ಲಿ, ಸಂದೇಶವಾಹಕರಾಗಿ ಮುಹಮ್ಮದ್‌ರಲ್ಲಿ ಮತ್ತು ಧರ್ಮವಾಗಿ ಇಸ್ಲಾಂನಲ್ಲಿ ನನಗೆ ತೃಪ್ತಿಯಿದೆ ಎಂದು ಹೇಳುತ್ತಾನೋ, ಅವನಿಗೆ ಅವನ ಪಾಪಗಳನ್ನು ಕ್ಷಮಿಸಲಾಗುತ್ತದೆ
عربي
الإنجليزية
الأوردية
ಚಿನ್ನ ಮತ್ತು ಬೆಳ್ಳಿಯನ್ನು ಹೊಂದಿರುವವನು ಅವುಗಳ ಹಕ್ಕನ್ನು (ಝಕಾತನ್ನು) ನೀಡದಿದ್ದರೆ, ಪುನರುತ್ಥಾನ ದಿನದಂದು ಅವುಗಳನ್ನು ಅಗ್ನಿಯ ಹಾಳೆಗಳಾಗಿ ಪರಿವರ್ತಿಸಿ, ನರಕಾಗ್ನಿಯಲ್ಲಿ ಅವುಗಳನ್ನು ಕಾಯಿಲಾಗುವುದು
عربي
الإنجليزية
الأوردية
ನಿಮ್ಮಲ್ಲಿ ಪ್ರತಿಯೊಬ್ಬರೊಂದಿಗೂ ಅಲ್ಲಾಹು ನೇರವಾಗಿ ಮಾತನಾಡುವನು. ಅಲ್ಲಾಹು ಮತ್ತು ಅವನ ನಡುವೆ ಯಾವುದೇ ಅನುವಾದಕನು ಇರುವುದಿಲ್ಲ
عربي
الإنجليزية
الأوردية
ಅದರ ನೀರು ಶುದ್ಧವಾಗಿದೆ ಮತ್ತು ಅದರ ಶವವು ಧರ್ಮಸಮ್ಮತವಾಗಿದೆ
عربي
الإنجليزية
الأوردية
ನೀರು ಎರಡು ಕುಲ್ಲತ್‌ನಷ್ಟಿದ್ದರೆ ಅದು ಮಾಲಿನ್ಯವನ್ನು ವಹಿಸುವುದಿಲ್ಲ
عربي
الإنجليزية
الأوردية
ನಿಮ್ಮಲ್ಲೊಬ್ಬರು ನಿದ್ರೆಯಿಂದ ಎದ್ದರೆ ಮೂರು ಬಾರಿ ಮೂಗಿನೊಳಗೆ ನೀರನ್ನು ಎಳೆದು ಹೊರಬಿಡಲಿ. ಏಕೆಂದರೆ ನಿಶ್ಚಯವಾಗಿಯೂ ಶೈತಾನನು ಅವರ ಮೂಗಿನ ಹೊಳ್ಳೆಯಲ್ಲಿ ರಾತ್ರಿಯನ್ನು ಕಳೆಯುತ್ತಾನೆ
عربي
الإنجليزية
الأوردية
ಒಬ್ಬ ವ್ಯಕ್ತಿ ವುದೂ ನಿರ್ವಹಿಸಿದರು ಮತ್ತು ತನ್ನ ಪಾದದಲ್ಲಿ ಉಗುರಿನ ಗಾತ್ರದ ಸ್ಥಳವನ್ನು ಬಿಟ್ಟುಬಿಟ್ಟರು. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅದನ್ನು ನೋಡಿ ಹೇಳಿದರು: "ಹಿಂದಿರುಗಿ ಹೋಗು ಮತ್ತು ಅತ್ಯುತ್ತಮವಾಗಿ ವುದೂ ನಿರ್ವಹಿಸು." ಆ ವ್ಯಕ್ತಿ ಹಿಂದಿರುಗಿ ಹೋಗಿ, ನಂತರ ನಮಾಝ್ ನಿರ್ವಹಿಸಿದರು
عربي
الإنجليزية
الأوردية
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಒಂದು ಸಾಅ್ ನಿಂದ ಐದು ಮುದ್ದ್ ವರೆಗಿನ ನೀರಿನಲ್ಲಿ ಸ್ನಾನ ಮಾಡುತ್ತಿದ್ದರು ಮತ್ತು ಒಂದು ಮುದ್ದ್ ನೀರಿನಲ್ಲಿ ವುದೂ ನಿರ್ವಹಿಸುತ್ತಿದ್ದರು
عربي
الإنجليزية
الأوردية
ಒಬ್ಬ ಮುಸಲ್ಮಾನನು ಉತ್ತಮ ರೀತಿಯಲ್ಲಿ ವುದೂ ನಿರ್ವಹಿಸಿ, ನಂತರ ಎದ್ದು ನಿಂತು ತನ್ನ ಹೃದಯ ಮತ್ತು ಮುಖವನ್ನು ಕೇಂದ್ರೀಕರಿಸಿ ಏಕಾಗ್ರತೆಯಿಂದ ಎರಡು ರಕಅತ್ ನಮಾಝ್ ನಿರ್ವಹಿಸಿದರೆ, ಅವನಿಗೆ ಸ್ವರ್ಗವು ಕಡ್ಡಾಯವಾಗದೇ ಇರುವುದಿಲ್ಲ
عربي
الإنجليزية
الأوردية
ನಿಮ್ಮಲ್ಲೊಬ್ಬರು ವುದೂ ನಿರ್ವಹಿಸಿದ ನಂತರ ಚರ್ಮದ ಪಾದರಕ್ಷೆ ಧರಿಸಿದರೆ, ಅದನ್ನು ಧರಿಸಿಯೇ ನಮಾಝ್ ನಿರ್ವಹಿಸಲಿ. ಅದರ ಮೇಲೆ ಸವರಿಕೊಳ್ಳಲಿ. ನಂತರ ಅವರು ಬಯಸಿದರೆ ಅದನ್ನು ಕಳಚದೆಯೇ ಇರಬಹುದು. ಆದರೆ ದೊಡ್ಡ ಅಶುದ್ಧಿ ಉಂಟಾದರೆ ಹೊರತು
عربي
الإنجليزية
الأوردية
ಶುದ್ಧಿಯಾದ ನಂತರ ನಾವು ಕಂದು ಬಣ್ಣ ಅಥವಾ ಹಳದಿ ಬಣ್ಣವನ್ನು ಪರಿಗಣಿಸುತ್ತಿರಲಿಲ್ಲ
عربي
الإنجليزية
الأوردية
ನಿಮ್ಮ ಮುಟ್ಟಿನ ಅವಧಿಯು ಸಾಮಾನ್ಯವಾಗಿ ನಿಮ್ಮನ್ನು ತಡೆಹಿಡಿಯುವ ತನಕ ಕಾಯಿರಿ, ತದನಂತರ ಸ್ನಾನ ಮಾಡಿರಿ
عربي
الإنجليزية
الأوردية
ಹರೆಯ ತಲುಪಿದ ಎಲ್ಲರಿಗೂ ಶುಕ್ರವಾರ ಸ್ನಾನ ಮಾಡುವುದು, ಹಲ್ಲು ಸ್ವಚ್ಛ ಮಾಡುವುದು ಮತ್ತು ಲಭ್ಯವಿದ್ದರೆ ಸುಗಂಧ ದ್ರವ್ಯವನ್ನು ಹಚ್ಚುವುದು ಕಡ್ಡಾಯವಾಗಿದೆ
عربي
الإنجليزية
الأوردية
ಒಬ್ಬ ಮಹಿಳೆ ತನ್ನ ಜೊತೆಗೆ ಗಂಡ ಅಥವಾ ವಿವಾಹ ನಿಷಿದ್ಧ ಪುರುಷರು ಇಲ್ಲದೆ ಎರಡು ದಿನಗಳಷ್ಟು ದೂರದ ಪ್ರಯಾಣ ಮಾಡಬಾರದು
عربي
الإنجليزية
الأوردية
ಮೂರು ಸಮಯಗಳು. ಆ ಸಮಯಗಳಲ್ಲಿ ನಮಾಝ್ ಮಾಡುವುದನ್ನು ಅಥವಾ ನಮ್ಮ ಮೃತರನ್ನು ಸಮಾಧಿ ಮಾಡುವುದನ್ನು ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಗೆ ನಿಷೇಧಿಸುತ್ತಿದ್ದರು
عربي
الإنجليزية
الأوردية
ಯಾರು ಅಝಾನ್ ಕೇಳಿದಾಗ, 'ಓ ಅಲ್ಲಾಹ್, ಈ ಪರಿಪೂರ್ಣ ಕರೆಯ ಮತ್ತು ಸಂಸ್ಥಾಪಿಸಲಾದ ನಮಾಝ್‌ನ ಪರಿಪಾಲಕನೇ, ಮುಹಮ್ಮದ್‌ರಿಗೆ ವಸೀಲ (ಸ್ವರ್ಗದಲ್ಲಿ ಒಂದು ಉನ್ನತ ಸ್ಥಾನ) ಮತ್ತು ಫಝೀಲ (ಘನತೆ) ವನ್ನು ನೀಡು. ನೀನು ಅವರಿಗೆ ಭರವಸೆ ನೀಡಿದ ಸ್ತುತ್ಯರ್ಹ ಸ್ಥಾನಕ್ಕೆ (ಮಕಾಮೆ ಮಹ್ಮೂದ್) ಅವರನ್ನು ಕಳುಹಿಸು' ಎಂದು ಪ್ರಾರ್ಥಿಸುತ್ತಾರೋ, ಅವರಿಗೆ ಪುನರುತ್ಥಾನ ದಿನದಂದು ನನ್ನ ಶಿಫಾರಸ್ಸು (ಶಫಾಅತ್) ಖಚಿತವಾಗಿ ದೊರೆಯುತ್ತದೆ
عربي
الإنجليزية
الأوردية
ನಿಮ್ಮಲ್ಲಿ ಯಾರೂ ಕೂಡ ಒಂದೇ ವಸ್ತ್ರದಲ್ಲಿ ತಮ್ಮ ಭುಜಗಳ ಮೇಲೆ ಏನೂ ಇಲ್ಲದೆ ನಮಾಝ್ ಮಾಡಬಾರದು
عربي
الإنجليزية
الأوردية
ಕೆಲವು ಜನರಿಗೆ ಏನಾಗಿದೆ? ಅವರು ತಮ್ಮ ನಮಾಝ್‌ನಲ್ಲಿ ತಮ್ಮ ದೃಷ್ಟಿಗಳನ್ನು ಆಕಾಶದ ಕಡೆಗೆ ಏಕೆ ಎತ್ತುತ್ತಾರೆ?". ಆ ವಿಷಯದಲ್ಲಿ ಅವರು ತೀಕ್ಷ್ಣವಾಗಿ ಮಾತನಾಡಿದರು. ಎಷ್ಟರವರೆಗೆಂದರೆ ಅವರು ಹೇಳಿದರು: "ಅವರು ಖಂಡಿತವಾಗಿಯೂ ಹಾಗೆ ಮಾಡುವುದನ್ನು ನಿಲ್ಲಿಸಬೇಕು, ಅಥವಾ ಖಂಡಿತವಾಗಿಯೂ ಅವರ ದೃಷ್ಟಿಗಳನ್ನು ಕಿತ್ತುಕೊಳ್ಳಲಾಗುವುದು
عربي
الإنجليزية
الأوردية
ನೀವು ಸಜ್ದಾ (ಸಾಷ್ಟಾಂಗ) ಮಾಡುವಾಗ, ನಿಮ್ಮ ಅಂಗೈಗಳನ್ನು ನೆಲದ ಮೇಲೆ ಇರಿಸಿ ಮತ್ತು ನಿಮ್ಮ ಮೊಣಕೈಗಳನ್ನು ಎತ್ತಿಕೊಳ್ಳಿ
عربي
الإنجليزية
الأوردية
ನಾನು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜೊತೆ ನಮಾಝ್ ಮಾಡಿದೆ. ಅವರು ತಮ್ಮ ಬಲಗಡೆಗೆ ತಿರುಗಿ 'ಅಸ್ಸಲಾಮು ಅಲೈಕುಮ್ ವರಹ್ಮತುಲ್ಲಾಹಿ ವಬರಕಾತುಹು' ಎಂದು ಸಲಾಂ ಹೇಳುತ್ತಿದ್ದರು, ಮತ್ತು ತಮ್ಮ ಎಡಗಡೆಗೆ ತಿರುಗಿ 'ಅಸ್ಸಲಾಮು ಅಲೈಕುಮ್ ವರಹ್ಮತುಲ್ಲಾಹ್' ಎಂದು ಸಲಾಂ ಹೇಳುತ್ತಿದ್ದರು
عربي
الإنجليزية
الأوردية
ಯಾರು ಎಲ್ಲಾ ನಮಾಝ್‌ಗಳ ನಂತರ ಮೂವತ್ತಮೂರು ಬಾರಿ ಸುಬ್‌ಹಾನಲ್ಲಾಹ್, ಮೂವತ್ತಮೂರು ಬಾರಿ ಅಲ್-ಹಮ್ದುಲಿಲ್ಲಾಹ್ ಮತ್ತು ಮೂವತ್ತಮೂರು ಬಾರಿ ಅಲ್ಲಾಹು ಅಕ್ಬರ್ ಹೇಳುತ್ತಾರೋ—ಇವು ಒಟ್ಟು ತೊಂಬತ್ತೊಂಬತ್ತು— ಮತ್ತು ನೂರನ್ನು ಪೂರ್ತಿ ಮಾಡಲು, ಲಾ ಇಲಾಹ ಇಲ್ಲಲ್ಲಾಹು ವಹ್ದಹೂ ಲಾ ಶರೀಕ ಲಹೂ, ಲಹುಲ್ ಮುಲ್ಕು ವಲಹುಲ್ ಹಮ್ದು, ವಹುವ ಅಲಾ ಕುಲ್ಲಿ ಶೈಇನ್ ಕದೀರ್ ಎಂದು ಪಠಿಸುತ್ತಾರೋ, ಅವರ ಪಾಪಗಳೆಲ್ಲವನ್ನೂ ಕ್ಷಮಿಸಲಾಗುವುದು. ಅವು ಸಮುದ್ರದ ನೊರೆಗಳಷ್ಟಿದ್ದರೂ ಸಹ
عربي
الإنجليزية
الأوردية
ಯಾರು ಎಲ್ಲಾ ಕಡ್ಡಾಯ ನಮಾಝ್‌ಗಳ ನಂತರ ಆಯತುಲ್-ಕುರ್ಸಿ ಪಠಿಸುತ್ತಾರೋ, ಅವರನ್ನು ಸಾವಿನ ಹೊರತು ಬೇರೇನೂ ಸ್ವರ್ಗ ಪ್ರವೇಶಿಸದಂತೆ ತಡೆಯುವುದಿಲ್ಲ
عربي
الإنجليزية
الأوردية
ನಿಮ್ಮಲ್ಲೊಬ್ಬರಿಗೆ ನಮಾಝ್‌ನಲ್ಲಿ ಸಂಶಯವುಂಟಾಗಿ ತಾನು ಮೂರು ರಕಅತ್ ನಿರ್ವಹಿಸಿದ್ದೇನೋ ಅಥವಾ ನಾಲ್ಕು ರಕಅತ್ ನಿರ್ವಹಿಸಿದ್ದೇನೋ ಎಂದು ತಿಳಿಯಲಾಗದಿದ್ದರೆ, ಅವನು ಆ ಸಂಶಯವನ್ನು ಉಪೇಕ್ಷಿಸಿ ತನಗೆ ಖಾತ್ರಿಯಿರುವುದರ ಆಧಾರದಲ್ಲಿ ಮುಂದುವರಿಯಲಿ. ನಂತರ, ಸಲಾಂ ಹೇಳುವುದಕ್ಕೆ ಮೊದಲು ಎರಡು ಸುಜೂದ್‌ಗಳನ್ನು ನಿರ್ವಹಿಸಲಿ
عربي
الإنجليزية
الأوردية
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಝುಹರ್ ನಮಾಝ್‌ಗೆ ಮೊದಲು ನಾಲ್ಕು ರಕ್ಅತ್ ನಮಾಝನ್ನು ಮತ್ತು ಫಜ್ರ್ ನಮಾಝ್‌ಗೆ ಮೊದಲು ಎರಡು ರಕ್ಅತ್ ನಮಾಝನ್ನು ತಪ್ಪದೆ ನಿರ್ವಹಿಸುತ್ತಿದ್ದರು
عربي
الإنجليزية
الأوردية
ಯಾರು ಝುಹರ್ ನಮಾಝ್‌ಗೆ ಮೊದಲು ನಾಲ್ಕು ರಕ್ಅತ್ ಮತ್ತು ಅದರ ನಂತರ ನಾಲ್ಕು ರಕ್ಅತ್ ನಮಾಝನ್ನು ತಪ್ಪದೆ ನಿರ್ವಹಿಸುತ್ತಾರೋ, ಅವರನ್ನು ಅಲ್ಲಾಹು ನರಕದಿಂದ ರಕ್ಷಿಸುತ್ತಾನೆ
عربي
الإنجليزية
الأوردية
ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಫಜ್ರ್‌ನ ಎರಡು ರಕ್ಅತ್‌ಗಳಲ್ಲಿ "ಕುಲ್ ಯಾ ಅಯ್ಯುಹಲ್ ಕಾಫಿರೂನ್" ಮತ್ತು "ಕುಲ್ ಹುವಲ್ಲಾಹು ಅಹದ್" ಅನ್ನು ಪಠಿಸಿದರು
عربي
الإنجليزية
الأوردية
ನಿಮ್ಮಲ್ಲೊಬ್ಬನು ಒಂಟಿಯಾಗಿ ಮಾಡುವ ನಮಾಝ್‌ಗಿಂತ ಜಮಾಅತ್ (ಸಂಘಟಿತ) ನಮಾಝ್ ಇಪ್ಪತ್ತೈದು ಪಟ್ಟು ಶ್ರೇಷ್ಠವಾಗಿದೆ. ರಾತ್ರಿಯ ಮಲಕ್‌ಗಳು (ದೇವದೂತರು) ಮತ್ತು ಹಗಲಿನ ಮಲಕ್‌ಗಳು ಫಜ್ರ್ ನಮಾಝ್‌ನಲ್ಲಿ ಒಟ್ಟುಗೂಡುತ್ತಾರೆ
عربي
الإنجليزية
الأوردية
ಪುರುಷರ ಸಾಲುಗಳಲ್ಲಿ ಅತ್ಯುತ್ತಮವಾದುದು ಮೊದಲನೆಯ ಸಾಲು ಮತ್ತು ಅತಿಕೆಟ್ಟದು ಕೊನೆಯ ಸಾಲು. ಮಹಿಳೆಯರ ಸಾಲುಗಳಲ್ಲಿ ಅತ್ಯುತ್ತಮವಾದುದು ಕೊನೆಯ ಸಾಲು ಮತ್ತು ಅತಿಕೆಟ್ಟದು ಮೊದಲನೆಯ ಸಾಲು
عربي
الإنجليزية
الأوردية
ಒಬ್ಬ ವ್ಯಕ್ತಿ ಸಾಲಿನಲ್ಲಿ ಒಬ್ಬಂಟಿಯಾಗಿ ನಿಂತು ನಮಾಝ್ ಮಾಡುವುದನ್ನು ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನೋಡಿದರು. ಅವರು ಆತನಿಗೆ ನಮಾಝ್ ಅನ್ನು ಪುನರಾವರ್ತಿಸಲು ಆಜ್ಞಾಪಿಸಿದರು
عربي
الإنجليزية
الأوردية
ಈ ಎರಡು ನಮಾಝ್‌ಗಳು ಕಪಟವಿಶ್ವಾಸಿಗಳಿಗೆ ಅತ್ಯಂತ ಭಾರವಾದ ನಮಾಝ್‌ಗಳಾಗಿವೆ. ಅವುಗಳಲ್ಲಿರುವ ಪ್ರತಿಫಲದ ಬಗ್ಗೆ ನಿಮಗೆ ತಿಳಿದಿದ್ದರೆ, ನೀವು ಮೊಣಕಾಲಿನಲ್ಲಿ ತೆವಳಿಕೊಂಡಾದರೂ ಬರುತ್ತಿದ್ದಿರಿ
عربي
الإنجليزية
الأوردية
ಮೂರು ಜನರ ಬಗ್ಗೆ ಲೇಖನಿಯನ್ನು ಎತ್ತಲಾಗಿದೆ. ನಿದ್ರೆ ಮಾಡುವವನು ಎದ್ದೇಳುವ ತನಕ, ಮಗು ಪ್ರೌಢನಾಗುವ ತನಕ ಮತ್ತು ಮಾನಸಿಕ ಅಸ್ವಸ್ಥನು ಸ್ವಸ್ಥ ಬುದ್ಧಿಯವನಾಗುವ ತನಕ
عربي
الإنجليزية
الأوردية
ನೀವು ಮುಶ್ರಿಕರೊಡನೆ ನಿಮ್ಮ ಸಂಪತ್ತು, ನಿಮ್ಮ ಪ್ರಾಣ ಮತ್ತು ನಿಮ್ಮ ನಾಲಿಗೆಯಿಂದ ಜಿಹಾದ್ ಮಾಡಿರಿ
عربي
الإنجليزية
الأوردية
ಕರ್ಮಗಳಲ್ಲಿ ಆರು ವಿಧಗಳಿವೆ. ಮನುಷ್ಯರಲ್ಲಿ ನಾಲ್ಕು ವರ್ಗಗಳಿವೆ. ಕಡ್ಡಾಯಗೊಳಿಸುವ ಎರಡು ಕಾರ್ಯಗಳಿವೆ. ತದ್ರೂಪವಾದ ಒಂದು ವಿಷಯವಿದೆ. ಹತ್ತು ಪಟ್ಟು ಪ್ರತಿಫಲವಿರುವ ಒಳಿತು ಮತ್ತು ಏಳು ನೂರು ಪಟ್ಟು ಪ್ರತಿಫಲವಿರುವ ಒಳಿತು ಇದೆ
عربي
الإنجليزية
الأوردية
ಒಬ್ಬ ಮನುಷ್ಯನು ಇಂತಿಂತಹ ಒಂದು ಊರಿನಲ್ಲಿ ನಿಧನನಾಗಬೇಕೆಂದು ಅಲ್ಲಾಹು ತೀರ್ಮಾನಿಸಿದರೆ ಅವನಿಗೆ ಆ ಊರಿಗೆ ಹೋಗುವ ಅಗತ್ಯವನ್ನು ಉಂಟುಮಾಡುತ್ತಾನೆ
عربي
الإنجليزية
الأوردية
ನಾನು ಬನೂ ಸಅದ್ ಗೋತ್ರಕ್ಕೆ ಸೇರಿದ ದಿಮಾಮ್ ಬಿನ್ ಸಅಲಬ
عربي
الإنجليزية
الأوردية
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎಲ್ಲಾ ನಮಾಝ್‌ಗಳಿಗೂ ಪ್ರತ್ಯೇಕವಾಗಿ ವುದೂ ಮಾಡುತ್ತಿದ್ದರು
عربي
الإنجليزية
الأوردية
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಂಗಗಳನ್ನು ಒಂದೊಂದು ಬಾರಿ ತೊಳೆಯುವ ಮೂಲಕ ವುದೂ ನಿರ್ವಹಿಸಿದರು
عربي
الإنجليزية
الأوردية
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಂಗಗಳನ್ನು ಎರಡೆರಡು ಬಾರಿ ತೊಳೆಯುವ ಮೂಲಕ ವುದೂ ನಿರ್ವಹಿಸಿದರು
عربي
الإنجليزية
الأوردية
ನಿಮ್ಮಲ್ಲೊಬ್ಬನಿಗೆ ತನ್ನ ಹೊಟ್ಟೆಯೊಳಗೆ ಏನೋ ಅನುಭವವಾಗಿ, ಅದರಿಂದ ಏನಾದರೂ ಹೊರ ಬಂದಿದೆಯೋ ಇಲ್ಲವೋ ಎಂದು ಸಂಶಯವಾದರೆ, ಸದ್ದು ಕೇಳುವ ತನಕ ಅಥವಾ ವಾಸನೆ ಅನುಭವವಾಗುವ ತನಕ ಅವನು ಮಸೀದಿಯಿಂದ ಹೊರಹೋಗಬಾರದು
عربي
الإنجليزية
الأوردية
ವಾರಕ್ಕೊಮ್ಮೆ ತಲೆ ಮತ್ತು ದೇಹವನ್ನು ತೊಳೆಯುವ ಮೂಲಕ ಸ್ನಾನ ಮಾಡುವುದು ಪ್ರತಿಯೊಬ್ಬ ಮುಸಲ್ಮಾನನ ಕರ್ತವ್ಯವಾಗಿದೆ
عربي
الإنجليزية
الأوردية
ನಾನು ಇಸ್ಲಾಂ ಸ್ವೀಕರಿಸಲು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದಾಗ, ಅವರು ನನಗೆ ನೀರು ಮತ್ತು ಸಿದ್ರ್ ಎಲೆಗಳಿಂದ ಸ್ನಾನ ಮಾಡಲು ಆದೇಶಿಸಿದರು
عربي
الإنجليزية
الأوردية
ಮುಅಝ್ಝಿನ್ ಅಝಾನ್ ನೀಡುವುದನ್ನು ಕೇಳಿದರೆ, ಅವರು ಹೇಳಿದಂತೆಯೇ ಹೇಳಿರಿ. ನಂತರ ನನ್ನ ಮೇಲೆ ಸಲಾತ್ ಹೇಳಿರಿ
عربي
الإنجليزية
الأوردية
ಯಾರು ಅಲ್ಲಾಹನಿಗೋಸ್ಕರ ಒಂದು ಮಸೀದಿಯನ್ನು ನಿರ್ಮಿಸುತ್ತಾರೋ ಅವರಿಗೆ ಅಲ್ಲಾಹು ಸ್ವರ್ಗದಲ್ಲಿ ಅದಕ್ಕೆ ಸಮಾನವಾದುದನ್ನು ನಿರ್ಮಿಸುತ್ತಾನೆ
عربي
الإنجليزية
الأوردية
ನನ್ನ ಈ ಮಸೀದಿಯಲ್ಲಿ ನಿರ್ವಹಿಸುವ ಒಂದು ನಮಾಝ್ ಇತರ ಮಸೀದಿಗಳಲ್ಲಿ ನಿರ್ವಹಿಸುವ ಸಾವಿರ ನಮಾಝ್‌ಗಳಿಗಿಂತಲೂ ಶ್ರೇಷ್ಠವಾಗಿದೆ. ಮಸ್ಜಿದುಲ್ ಹರಾಂ ಹೊರತುಪಡಿಸಿ
عربي
الإنجليزية
الأوردية
ನಿಮ್ಮಲ್ಲೊಬ್ಬರು ಮಸೀದಿಯೊಳಗೆ ಪ್ರವೇಶ ಮಾಡಿದರೆ ಕುಳಿತುಕೊಳ್ಳುವುದಕ್ಕೆ ಮೊದಲು ಎರಡು ರಕಅತ್ ನಮಾಝ್ ನಿರ್ವಹಿಸಲಿ
عربي
الإنجليزية
الأوردية
ನಿಮ್ಮಲ್ಲೊಬ್ಬರು ಮಸೀದಿಯನ್ನು ಪ್ರವೇಶಿಸುವಾಗ, 'ಅಲ್ಲಾಹುಮ್ಮಫ್ತಹ್ ಲೀ ಅಬ್ವಾಬ ರಹ್ಮತಿಕ್' (ಓ ಅಲ್ಲಾಹ್! ನಿನ್ನ ದಯೆಯ ಬಾಗಿಲುಗಳನ್ನು ನನಗೆ ತೆರೆದುಕೊಡು) ಎಂದು ಹೇಳಬೇಕು ಮತ್ತು ಹೊರಬರುವಾಗ, 'ಅಲ್ಲಾಹುಮ್ಮ ಇನ್ನೀ ಅಸ್‌ಅಲುಕ ಮಿನ್ ಫದ್ಲಿಕ್' (ಓ ಅಲ್ಲಾಹ್! ನಿನ್ನ ಔದಾರ್ಯದಿಂದ ನಾನು ನಿನ್ನಲ್ಲಿ ಬೇಡುತ್ತೇನೆ) ಎಂದು ಹೇಳಬೇಕು
عربي
الإنجليزية
الأوردية
ಓ ಬಿಲಾಲ್! ನಮಾಝ್‌ಗಾಗಿ ಇಕಾಮತ್ ನೀಡು ಮತ್ತು ಅದರ ಮೂಲಕ ನಮ್ಮನ್ನು ನಿರಾಳಗೊಳಿಸು
عربي
الإنجليزية
الأوردية
ಓ ಜನರೇ! ನಾನು ಹೀಗೆ ಮಾಡಿದ್ದು ನೀವು ನನ್ನನ್ನು ಅನುಸರಿಸುವುದಕ್ಕಾಗಿ ಮತ್ತು ನನ್ನ ನಮಾಝನ್ನು ಕಲಿಯುವುದಕ್ಕಾಗಿ
عربي
الإنجليزية
الأوردية
ನೀವು ನಮಾಝ್ ಮಾಡುವಾಗ ನಿಮ್ಮ ಸಾಲುಗಳನ್ನು ನೇರಗೊಳಿಸಿರಿ. ನಂತರ ನಿಮ್ಮಲ್ಲೊಬ್ಬರು ನಮಾಝ್‌ಗೆ ಇಮಾಮತ್ (ಮುಂದಾಳುತ್ವ) ವಹಿಸಲಿ. ಅವರು ತಕ್ಬೀರ್ ಹೇಳಿದರೆ ನೀವು ಕೂಡ ತಕ್ಬೀರ್ ಹೇಳಿರಿ
عربي
الإنجليزية
الأوردية
ನನ್ನ ಆತ್ಮ ಯಾರ ಕೈಯಲ್ಲಿದೆಯೋ ಅವನ ಮೇಲಾಣೆ! ನಾನು ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಾಝನ್ನು ಅವರು ನಿರ್ವಹಿಸಿದಂತೆಯೇ ನಿರ್ವಹಿಸಿ ತೋರಿಸುತ್ತಿದ್ದೇನೆ. ಅವರು ಇಹಲೋಕಕ್ಕೆ ವಿದಾಯ ಹೇಳುವ ತನಕ ಅವರ ನಮಾಝ್ ಹೀಗೆಯೇ ಇತ್ತು
عربي
الإنجليزية
الأوردية
ಕಳ್ಳತನ ಮಾಡುವವರಲ್ಲಿ ಅತಿಕೆಟ್ಟವರು ನಮಾಝ್‌ನಲ್ಲಿ ಕಳ್ಳತನ ಮಾಡುವವರು." ಸಹಾಬಿಗಳು ಕೇಳಿದರು: "ನಮಾಝ್‌ನಲ್ಲಿ ಕಳ್ಳತನ ಮಾಡುವುದು ಹೇಗೆ?" ಅವರು ಉತ್ತರಿಸಿದರು: "ಅದರ ರುಕೂ ಮತ್ತು ಸುಜೂದ್‌ಗಳನ್ನು ಪೂರ್ಣಗೊಳಿಸದಿರುವುದು
عربي
الإنجليزية
الأوردية
ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರುಕೂನಿಂದ ಬೆನ್ನನ್ನು ಎತ್ತುವಾಗ, ಹೀಗೆ ಹೇಳುತ್ತಿದ್ದರು: "ಸಮಿಅಲ್ಲಾಹು ಲಿಮನ್ ಹಮಿದ
عربي
الإنجليزية
الأوردية
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎಲ್ಲಾ ಕಡ್ಡಾಯ ನಮಾಝ್‌ಗಳ ನಂತರ ಹೀಗೆ ಹೇಳುತ್ತಿದ್ದರು
عربي
الإنجليزية
الأوردية
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎರಡು ಸುಜೂದ್‌ಗಳ ಮಧ್ಯೆ "ರಬ್ಬಿಗ್ಫಿರ್ ಲೀ, ರಬ್ಬಿಗ್ಫಿರ್ ಲೀ" (ಓ ನನ್ನ ಪರಿಪಾಲಕನೇ! ನನ್ನನ್ನು ಕ್ಷಮಿಸು, ಓ ನನ್ನ ಪರಿಪಾಲಕನೇ! ನನ್ನನ್ನು ಕ್ಷಮಿಸು) ಎಂದು ಹೇಳುತ್ತಿದ್ದರು
عربي
الإنجليزية
الأوردية
ಅವನು ಖಿನ್‌ಝಬ್ ಎಂಬ ಹೆಸರಿನ ಶೈತಾನ್. ನಿಮಗೆ ಅವನ ಅನುಭವವಾದರೆ, ಅವನ ವಿರುದ್ಧ ಅಲ್ಲಾಹನಲ್ಲಿ ರಕ್ಷೆ ಬೇಡಿರಿ, ಮತ್ತು ನಿಮ್ಮ ಎಡಭಾಗಕ್ಕೆ ಮೂರು ಸಲ ಹಗುರವಾಗಿ ಉಗಿಯಿರಿ
عربي
الإنجليزية
الأوردية
ಒಬ್ಬ ವ್ಯಕ್ತಿ ಅಸುನೀಗಿದರೆ ಅವನ ಕರ್ಮಗಳೆಲ್ಲವೂ ಮುಕ್ತಾಯವಾಗುತ್ತವೆ. ಆದರೆ ಮೂರು ವಿಷಯಗಳು ಇದಕ್ಕೆ ಹೊರತಾಗಿವೆ. ನಡೆಯುತ್ತಿರುವ ದಾನ-ಧರ್ಮಗಳು, ಪ್ರಯೋಜನಪಡೆಯಲಾಗುತ್ತಿರುವ ಜ್ಞಾನಗಳು ಮತ್ತು ಅವನಿಗಾಗಿ ಪ್ರಾರ್ಥಿಸುವ ಅವನ ನೀತಿವಂತ ಮಕ್ಕಳು
عربي
الإنجليزية
الأوردية
ಓ ಅಲ್ಲಾಹನ ಸಂದೇಶವಾಹಕರೇ! ಉಮ್ಮು ಸಅದ್ ನಿಧನರಾದರು. ಅವರ ಹೆಸರಲ್ಲಿ ಯಾವ ದಾನಧರ್ಮವು ಶ್ರೇಷ್ಠವಾಗಿದೆ?" ಅವರು ಉತ್ತರಿಸಿದರು: "ನೀರು." ಆಗ ಅವರು ಒಂದು ಬಾವಿ ತೋಡಿದರು. ಮತ್ತು ಹೇಳಿದರು: "ಇದು ಉಮ್ಮು ಸಅದ್‌ರಿಗೆ
عربي
الإنجليزية
الأوردية
ಮೀಸೆಯನ್ನು ಕತ್ತರಿಸುವುದು, ಉಗುರುಗಳನ್ನು ಕತ್ತರಿಸುವುದು, ಕಂಕುಳಿನ ಕೂದಲನ್ನು ಕೀಳುವುದು, ಮತ್ತು ಗುಪ್ತಾಂಗದ (ಸುತ್ತಲಿನ) ಕೂದಲನ್ನು ಬೋಳಿಸುವುದು – ಇವುಗಳಲ್ಲಿ ನಾವು ನಲವತ್ತು ರಾತ್ರಿಗಳಿಗಿಂತ ಹೆಚ್ಚು ಕಾಲ (ಅವುಗಳನ್ನು ಹಾಗೆಯೇ) ಬಿಡಬಾರದೆಂದು ನಮಗೆ ಸಮಯವನ್ನು ನಿಗದಿಪಡಿಸಲಾಗಿದೆ
عربي
الإنجليزية
الإندونيسية
'ಅವಳನ್ನು ಮೂರು ಬಾರಿ, ಅಥವಾ ಐದು ಬಾರಿ, ಅಥವಾ ನಿಮಗೇನಾದರೂ (ಅಗತ್ಯವೆಂದು) ಕಂಡರೆ ಅದಕ್ಕಿಂತ ಹೆಚ್ಚು ಬಾರಿ, ನೀರು ಮತ್ತು 'ಸಿದ್ರ್' (ಬೋರೆ ಮರದ ಎಲೆ) ನಿಂದ ಸ್ನಾನ ಮಾಡಿಸಿರಿ. ಕೊನೆಯದರಲ್ಲಿ (ಕೊನೆಯ ಬಾರಿ ತೊಳೆಯುವಾಗ) ಕರ್ಪೂರವನ್ನು — ಅಥವಾ ಸ್ವಲ್ಪ ಕರ್ಪೂರವನ್ನು — ಹಾಕಿರಿ. ನೀವು (ಸ್ನಾನ ಮಾಡಿಸಿ) ಮುಗಿಸಿದಾಗ ನನಗೆ ತಿಳಿಸಿರಿ'
عربي
الإنجليزية
الأوردية
ರಮದಾನ್ ತಿಂಗಳು ಬಂದರೆ ಉಮ್ರ ನಿರ್ವಹಿಸು. ಏಕೆಂದರೆ, ಅದರಲ್ಲಿ ನಿರ್ವಹಿಸುವ ಉಮ್ರ ಹಜ್ಜ್‌ಗೆ ಸಮಾನವಾಗಿದೆ
عربي
الإنجليزية
الأوردية
ಓ ಅಲ್ಲಾಹನ ಸಂದೇಶವಾಹಕರೇ! ನಾವು ಜಿಹಾದ್ ಅನ್ನು ಅತಿಶ್ರೇಷ್ಠ ಕರ್ಮವೆಂದು ಪರಿಗಣಿಸುತ್ತೇವೆ. ನಾವು ಕೂಡ ಜಿಹಾದ್ ಮಾಡಬಾರದೇ?" ಅವರು ಉತ್ತರಿಸಿದರು: "ಬೇಡ, ಬದಲಿಗೆ ಅತಿಶ್ರೇಷ್ಠ ಜಿಹಾದ್ ಎಂದರೆ ಹಜ್ಜ್ ಮಬ್ರೂರ್ (ಸ್ವೀಕೃತ ಹಜ್ಜ್) ಆಗಿದೆ
عربي
الإنجليزية
الأوردية
ಪುನರುತ್ಥಾನ ದಿನದಂದು ಅಲ್ಲಾಹು ಮೊದಲಿನವರು ಮತ್ತು ನಂತರದವರನ್ನು (ಎಲ್ಲರನ್ನೂ) ಒಟ್ಟುಗೂಡಿಸಿದಾಗ, ಪ್ರತಿಯೊಬ್ಬ ವಿಶ್ವಾಸದ್ರೋಹಿಗಾಗಿ ಒಂದು ಪ್ರತ್ಯೇಕ ಧ್ವಜ ಏರಿಸಲಾಗುವುದು. ಆಗ ಹೇಳಲಾಗುವುದು: 'ಇದು ಇಂಥಿಂತವನ ಮಗನ ವಿಶ್ವಾಸದ್ರೋಹ'
عربي
الإنجليزية
الأوردية
ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಗೆ ಏಳು ವಿಷಯಗಳನ್ನು ಮಾಡಲು ಆದೇಶಿಸಿದರು ಮತ್ತು ಏಳು ವಿಷಯಗಳಿಂದ ನಮ್ಮನ್ನು ತಡೆದರು
عربي
الإنجليزية
الأوردية
ಅಲ್ಲಾಹನ ಮಾರ್ಗದಲ್ಲಿ ಒಂದು ದಿನ 'ರಿಬಾತ್' ಮಾಡುವುದು (ಗಡಿಯಲ್ಲಿ ಕಾವಲು ಕಾಯುವುದು) ಇಹಲೋಕ ಮತ್ತು ಅದರಲ್ಲಿರುವ ಎಲ್ಲದಕ್ಕಿಂತ ಉತ್ತಮವಾಗಿದೆ
عربي
الإنجليزية
الأوردية
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕಪ್ಪು ಮತ್ತು ಬಿಳಿ ಬಣ್ಣದ, ಕೊಂಬುಗಳಿರುವ ಎರಡು ಟಗರುಗಳನ್ನು ಬಲಿ ನೀಡಿದರು. ಅವರು ತಮ್ಮ ಕೈಯಿಂದಲೇ ಅವುಗಳನ್ನು ವಧಿಸಿದರು. ಅವರು "ಬಿಸ್ಮಿಲ್ಲಾಹಿ ವಲ್ಲಾಹು ಅಕ್ಬರ್" ಎಂದು ಹೇಳಿದರು ಮತ್ತು ಅವುಗಳ ಕೊರಳುಗಳ ಮೇಲೆ ತಮ್ಮ ಪಾದವನ್ನಿಟ್ಟರು
عربي
الإنجليزية
الأوردية
ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಶೌಚಾಲಯಕ್ಕೆ ಪ್ರವೇಶಿಸುತ್ತಿದ್ದರು. ಆಗ ನಾನು ಮತ್ತು ನನ್ನ ವಯಸ್ಸಿನ ಇನ್ನೊಬ್ಬ ಬಾಲಕ ನೀರಿನ ಒಂದು ಸಣ್ಣ ಚರ್ಮದ ಪಾತ್ರೆ ಮತ್ತು ಒಂದು ಚಿಕ್ಕ ಕೋಲನ್ನು ಹೊತ್ತುಕೊಂಡು ಹೋಗುತ್ತಿದ್ದೆವು. ಆಗ ಅವರು ನೀರಿನಿಂದ ಇಸ್ತಿಂಜಾ (ಶುದ್ಧೀಕರಣ) ಮಾಡುತ್ತಿದ್ದರು
عربي
الإنجليزية
الأوردية
ಒಮ್ಮೆ ನಾನು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜೊತೆಯಲ್ಲಿದ್ದಾಗ, ಅವರು ಅಲ್ಲಿನ ಜನಸಮೂಹದ ತಿಪ್ಪೆಯ ಬಳಿಗೆ ಸಾಗಿ, ಅಲ್ಲಿ ನಿಂತುಕೊಂಡು ಮೂತ್ರ ವಿಸರ್ಜನೆ ಮಾಡಿದರು
عربي
الإنجليزية
الأوردية
ಸುಬ್‌ಹಾನಲ್ಲಾಹ್! ಖಂಡಿತವಾಗಿಯೂ ಸತ್ಯವಿಶ್ವಾಸಿಯು ಎಂದಿಗೂ ಅಶುದ್ಧನಾಗುವುದಿಲ್ಲ
عربي
الإنجليزية
الأوردية
ಜನಾಝಾದ (ಅಂತ್ಯಕ್ರಿಯೆಯ) ವಿಷಯದಲ್ಲಿ ಆತುರ ಮಾಡಿರಿ. ಏಕೆಂದರೆ, (ಆ ಮೃತ ವ್ಯಕ್ತಿ) ಸಜ್ಜನನಾಗಿದ್ದರೆ, ನೀವು ಅದನ್ನು ಒಳಿತಿನ ಕಡೆಗೆ ಬೇಗನೆ ಕಳುಹಿಸುತ್ತಿದ್ದೀರಿ. ಒಂದು ವೇಳೆ ಅದು ಅದಲ್ಲದಿದ್ದರೆ (ಕೆಟ್ಟವನಾಗಿದ್ದರೆ), ನೀವು ಅದನ್ನು ನಿಮ್ಮ ಹೆಗಲುಗಳಿಂದ ಕೆಡುಕನ್ನು (ಬೇಗನೆ) ಇಳಿಸುತ್ತಿದ್ದೀರಿ
عربي
الإنجليزية
الأوردية
ಓ ಅಲ್ಲಾಹನ ಸಂದೇಶವಾಹಕರೇ, ಸಂಪತ್ತು (ಜಾನುವಾರುಗಳು) ನಾಶವಾಗಿವೆ ಮತ್ತು ದಾರಿಗಳು ಕಡಿದುಹೋಗಿವೆ (ಪ್ರಯಾಣ ಸ್ಥಗಿತಗೊಂಡಿದೆ). ಆದ್ದರಿಂದ ನಮಗೆ ಮಳೆ ಸುರಿಸುವಂತೆ ಅಲ್ಲಾಹನಲ್ಲಿ ಪ್ರಾರ್ಥಿಸಿರಿ
عربي
الإنجليزية
الأوردية
ಜನಾಝಾಗಳನ್ನು (ಮೃತದೇಹಗಳನ್ನು) ಹಿಂಬಾಲಿಸುವುದನ್ನು ನಮಗೆ (ಮಹಿಳೆಯರಿಗೆ) ನಿಷೇಧಿಸಲಾಗಿದೆ. ಆದರೆ ನಮ್ಮ ಮೇಲೆ ಅದನ್ನು ಕಟ್ಟುನಿಟ್ಟಾಗಿ ಹೇರಲಾಗಿರಲಿಲ್ಲ
عربي
الإنجليزية
الأوردية
ಯಾರು ಈ ಹೆಣ್ಣು ಮಕ್ಕಳ ಜವಾಬ್ದಾರಿಯನ್ನು ವಹಿಸುತ್ತಾನೋ ಮತ್ತು ಅವರಿಗೆ ಉತ್ತಮವಾಗಿ ಉಪಚರಿಸುತ್ತಾನೋ, ಅವರು (ಹೆಣ್ಣು ಮಕ್ಕಳು) ಅವನಿಗೆ ನರಕಕ್ಕೆ (ಹೋಗದಂತೆ) ಒಂದು ತಡೆಯಾಗುತ್ತಾರೆ
عربي
الإنجليزية
الأوردية
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಫಜ್ರ್‌ನ ಎರಡು (ಐಚ್ಛಿಕ) ರಕ್‌ಅತ್‌ಗಳನ್ನು ನಿರ್ವಹಿಸಲು ತೋರುತ್ತಿದ್ದ ಕಾಳಜಿಯನ್ನು ಬೇರೆ ಯಾವುದೇ ಐಚ್ಛಿಕ ನಮಾಝ್‌ಗಳಲ್ಲಿ ತೋರುತ್ತಿರಲಿಲ್ಲ
عربي
الإنجليزية
الأوردية
ನಾನು ಆಯಿಷಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರೊಂದಿಗೆ ಕೇಳಿದೆ: "ಋತುಮತಿಯಾದ ಮಹಿಳೆ ಉಪವಾಸವನ್ನು ಖಝಾ ನಿರ್ವಹಿಸಲು (ಬಿಟ್ಟುಹೋದ ಉಪವಾಸಗಳನ್ನು ನಂತರ ಆಚರಿಸಲು) ಮತ್ತು ನಮಾಝ್ ಖಝಾ ನಿರ್ವಹಿಸದಿರಲು ಕಾರಣವೇನು?
عربي
الإنجليزية
الأوردية
ಅವರು ತಮ್ಮ ಚಿಕ್ಕ ಮಗುವನ್ನು (ಗಂಡು ಮಗುವನ್ನು) ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಕರೆತಂದರು. ಆ ಮಗು ಇನ್ನೂ (ಘನ) ಆಹಾರವನ್ನು ತಿನ್ನುತ್ತಿರಲಿಲ್ಲ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವನನ್ನು (ಮಗುವನ್ನು) ತಮ್ಮ ಮಡಿಲಲ್ಲಿ ಕುಳ್ಳಿರಿಸಿಕೊಂಡರು. ಆಗ ಅವನು ಅವರ ವಸ್ತ್ರದ ಮೇಲೆ ಮೂತ್ರ ವಿಸರ್ಜಿಸಿದನು. ಅವರು ನೀರನ್ನು ತರಿಸಿ, ಅದನ್ನು (ಮೂತ್ರದ ಮೇಲೆ) ಚಿಮುಕಿಸಿದರು. ಅವರು ಅದನ್ನು ತೊಳೆಯಲಿಲ್ಲ
عربي
الإنجليزية
الأوردية
ಮೇಲಿನ ಕೈಯು ಕೆಳಗಿನ ಕೈಗಿಂತ ಉತ್ತಮವಾಗಿದೆ
عربي
الإنجليزية
الأوردية
ಖಂಡಿತವಾಗಿಯೂ ಸ್ವರ್ಗದಲ್ಲಿ 'ರಯ್ಯಾನ್' ಎಂಬ ಒಂದು ಬಾಗಿಲಿದೆ. ಉಪವಾಸ ಆಚರಿಸಿದವರು ಪುನರುತ್ಥಾನ ದಿನದಂದು ಅದರ ಮೂಲಕ ಪ್ರವೇಶಿಸುವರು. ಅವರಲ್ಲದೆ ಬೇರೆ ಯಾರೂ ಅದರ ಮೂಲಕ ಪ್ರವೇಶಿಸುವುದಿಲ್ಲ
عربي
الإنجليزية
الأوردية
ಪ್ರಯಾಣದ ಸಂದರ್ಭದಲ್ಲಿ ಉಪವಾಸ ಆಚರಿಸುವುದು ಪುಣ್ಯಕಾರ್ಯವಲ್ಲ
عربي
الإنجليزية
الأوردية
ಹೌದು. ನಾವು ಪ್ರಯಾಣದಲ್ಲಿದ್ದಾಗ ಅಥವಾ ಪ್ರಯಾಣಿಕರಾಗಿದ್ದಾಗ, ಜನಾಬತ್ (ದೊಡ್ಡ ಅಶುದ್ಧಿ) ಹೊರತುಪಡಿಸಿ, ಮಲ, ಮೂತ್ರ ಮತ್ತು ನಿದ್ರೆಯಂತಹ (ಸಣ್ಣ ಅಶುದ್ಧಿ) ಗಳಿಗಾಗಿ ಮೂರು ಹಗಲು ಮತ್ತು ರಾತ್ರಿಗಳವರೆಗೆ (72 ತಾಸು) ನಮ್ಮ ಪಾದರಕ್ಷೆಗಳನ್ನು ಕಳಚಬಾರದೆಂದು ಅವರು ನಮಗೆ ಆದೇಶಿಸುತ್ತಿದ್ದರು
عربي
الإنجليزية
الأوردية
ಅಲ್ಲಾಹನಿಗೆ ಸ್ಥಳಗಳಲ್ಲಿ ಅತ್ಯಂತ ಪ್ರಿಯವಾಗಿರುವುದು ಅದರ ಮಸೀದಿಗಳಾಗಿವೆ, ಮತ್ತು ಅಲ್ಲಾಹನಿಗೆ ಸ್ಥಳಗಳಲ್ಲಿ ಅತ್ಯಂತ ಅಪ್ರಿಯವಾಗಿರುವುದು ಅದರ ಮಾರುಕಟ್ಟೆಗಳಾಗಿವೆ
عربي
الإنجليزية
الأوردية
ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) 'ಸಮಿಅಲ್ಲಾಹು ಲಿಮನ್ ಹಮಿದಹ್' (ತನ್ನನ್ನು ಸ್ತುತಿಸಿದವನ ಮಾತನ್ನು ಅಲ್ಲಾಹು ಕೇಳಲಿ) ಎಂದು ಹೇಳಿದಾಗ, ಅವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಾಷ್ಟಾಂಗ (ಸಜ್ದ) ಮಾಡುವವರೆಗೆ ನಮ್ಮಲ್ಲಿ ಯಾರೂ ತಮ್ಮ ಬೆನ್ನನ್ನು ಬಾಗಿಸುತ್ತಿರಲಿಲ್ಲ. ನಂತರ ನಾವು ಅವರ ಹಿಂದೆ ಸಾಷ್ಟಾಂಗ ಮಾಡುತ್ತಿದ್ದೆವು
عربي
الإنجليزية
الأوردية
ನಮಾಝ್ ಮಾಡುವವನ ಮುಂದೆ ಹಾದುಹೋಗುವವನಿಗೆ, ಅವನ ಮೇಲೆ ಏನಿದೆ (ಅಂದರೆ, ಎಷ್ಟು ಪಾಪವಿದೆ) ಎಂದು ತಿಳಿದಿದ್ದರೆ, ಅವನ ಮುಂದೆ ಹಾದುಹೋಗುವುದಕ್ಕಿಂತ ನಲವತ್ತು (ದಿನ/ತಿಂಗಳು/ವರ್ಷ) ಕಾಯುವುದು ಅವನಿಗೆ ಉತ್ತಮವಾಗಿರುತ್ತಿತ್ತು
عربي
الإنجليزية
الأوردية
ವುಝೂವನ್ನು ಪೂರ್ಣವಾಗಿ ನಿರ್ವಹಿಸು, ಬೆರಳುಗಳ ನಡುವೆ ನೀರು ಹರಿಸಿ ತಿಕ್ಕು, ಮತ್ತು ನಿನಗೆ ಉಪವಾಸ ಇಲ್ಲದಿದ್ದರೆ ಮೂಗಿಗೆ ನೀರು ಹಾಕಿ ಚೆನ್ನಾಗಿ ಆಳಕ್ಕೆ ಎಳೆದುಕೊ
عربي
الإنجليزية
الأوردية
ಖಂಡಿತವಾಗಿಯೂ, ಬೆಂಕಿಯ ಒಡೆಯನಲ್ಲದೆ (ಅಲ್ಲಾಹನಲ್ಲದೆ) ಬೇರೆ ಯಾರಿಗೂ ಬೆಂಕಿಯಿಂದ ಶಿಕ್ಷಿಸುವುದು ಉಚಿತವಲ್ಲ
عربي
الإنجليزية
الأوردية
ಖಂಡಿತವಾಗಿಯೂ ಈ ಮಸೀದಿಗಳು ಇಂತಹ ಯಾವುದೇ ಮೂತ್ರಕ್ಕಾಗಲಿ, ಅಥವಾ ಹೊಲಸಿಗಾಗಲಿ ಇರುವಂಥದ್ದಲ್ಲ. ಅವು ಕೇವಲ ಅಲ್ಲಾಹನ ಸ್ಮರಣೆ (ಧಿಕ್ರ್), ನಮಾಝ್ ಮತ್ತು ಕುರ್‌ಆನ್ ಪಾರಾಯಣಕ್ಕಾಗಿ ಇರುವುದಾಗಿವೆ
عربي
الإنجليزية
الأوردية
ಖಂಡಿತವಾಗಿಯೂ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಲದ್ದಿ ಅಥವಾ ಮೂಳೆಯಿಂದ 'ಇಸ್ತಿಂಜಾ' (ಶುದ್ಧೀಕರಣ) ಮಾಡುವುದನ್ನು ನಿಷೇಧಿಸಿದರು,
عربي
الإنجليزية
الأوردية
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಲಮೂತ್ರ ವಿಸರ್ಜನೆಯ ಸ್ಥಳದಿಂದ ಹೊರ ಬಂದರೆ "ಗುಫ್ರಾನಕ್" ಎಂದು ಹೇಳುತ್ತಿದ್ದರು
عربي
الإنجليزية
الأوردية
'ನಿಮ್ಮಲ್ಲೊಬ್ಬನು ಮೂರಕ್ಕಿಂತ ಕಡಿಮೆ ಕಲ್ಲುಗಳಿಂದ 'ಇಸ್ತಿಂಜಾ' ಮಾಡಬಾರದು'
عربي
الإنجليزية
الأوردية
ಮುಅದ್ದಿನ್‌ಗಳು (ಅಝಾನ್ ಹೇಳುವವರು) ಪುನರುತ್ಥಾನ ದಿನದಂದು ಜನರಲ್ಲಿ ಅತ್ಯಂತ ಉದ್ದವಾದ ಕುತ್ತಿಗೆಯುಳ್ಳವರಾಗಿರುತ್ತಾರೆ
عربي
الإنجليزية
الأوردية
ಫಜ್ರ್‌ನ ಅಝಾನ್‌ನಲ್ಲಿ ಮುಅದ್ದಿನ್ (ಅಝಾನ್ ಹೇಳುವವನು) 'ಹಯ್ಯ ಅಲಲ್-ಫಲಾಹ್' ಎಂದು ಹೇಳಿದಾಗ, 'ಅಸ್ಸಲಾತು ಖೈರುನ್ ಮಿನನ್ನೌಮ್' (ನಿದ್ರೆಗಿಂತ ನಮಾಝ್ ಉತ್ತಮವಾಗಿದೆ) ಎಂದು ಹೇಳುವುದು ಸುನ್ನತ್‌ನ ಭಾಗವಾಗಿದೆ
عربي
الإنجليزية
الأوردية
ಜನರು ಮಸೀದಿಗಳ ಬಗ್ಗೆ ಜಂಭ ಕೊಚ್ಚಿಕೊಳ್ಳುವವರೆಗೆ ಘಳಿಗೆಯು (ಪುನರುತ್ಥಾನ) ಸಂಭವಿಸುವುದಿಲ್ಲ
عربي
الإنجليزية
الأوردية
ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಾಝ್ ಅನ್ನು 'ತಕ್ಬೀರ್' (ಅಲ್ಲಾಹು ಅಕ್ಬರ್ ಎಂದು ಹೇಳುವ) ಮೂಲಕ ಮತ್ತು ಕುರ್‌ಆನ್ ಪಾರಾಯಣವನ್ನು 'ಅಲ್-ಹಮ್ದು ಲಿಲ್ಲಾಹಿ ರಬ್ಬಿಲ್ ಆಲಮೀನ್' (ಸೂರ ಅಲ್-ಫಾತಿಹಾ) ಮೂಲಕ ಆರಂಭಿಸುತ್ತಿದ್ದರು
عربي
الإنجليزية
الأوردية
ಒಬ್ಬ ವ್ಯಕ್ತಿಯು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಿಂಬರ್ (ಪ್ರವಚನ ಪೀಠ) ನ ಮೇಲಿದ್ದಾಗ ಅವರಲ್ಲಿ ಕೇಳಿದನು: "ರಾತ್ರಿ ನಮಾಝ್‌ನ ಬಗ್ಗೆ ನೀವೇನು ಹೇಳುತ್ತೀರಿ?". ಅವರು (ಪ್ರವಾದಿ) ಹೇಳಿದರು: "(ಅದು) ಎರಡೆರಡು ರಕಅತ್‌ಗಳು
عربي
الإنجليزية
الأوردية
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರನ್ನು (ಮುಆದ್ ರನ್ನು) ಯಮನ್‌ಗೆ ಕಳುಹಿಸಿದಾಗ, ಹಸುಗಳ ಝಕಾತ್ ಆಗಿ, ಪ್ರತಿ ಮೂವತ್ತು ಹಸುಗಳಿಗೆ ಒಂದು ಗಂಡು ಅಥವಾ ಹೆಣ್ಣು ಕರುವನ್ನು (ಒಂದು ವರ್ಷ ಪ್ರಾಯದ್ದು),
عربي
الإنجليزية
الأوردية
ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಾವು 'ಜುನುಬ್' (ಅಶುದ್ಧ) ಆಗಿರದಿದ್ದ ಹೊರತು, ಉಳಿದೆಲ್ಲಾ ಸ್ಥಿತಿಗಳಲ್ಲೂ ನಮಗೆ ಕುರ್‌ಆನ್ ಓದಿ ಕೊಡುತ್ತಿದ್ದರು
عربي
الإنجليزية
الأوردية
“ಹಾಜಿಗಳಿಗೆ ನೀರು ಕುಡಿಸುವುದನ್ನು ಮತ್ತು ಮಸ್ಜಿದುಲ್ ಹರಾಮ್ ಅನ್ನು ನಿರ್ವಹಿಸುವುದನ್ನು, ಅಲ್ಲಾಹನ ಮತ್ತು ಪರಲೋಕದ ಮೇಲೆ ವಿಶ್ವಾಸವಿಟ್ಟವರ (ಕಾರ್ಯಕ್ಕೆ) ನೀವು ಸಮಾನವಾಗಿಸಿದಿರೇನು?…” [ತೌಬಾ: 19] ವಚನದ ಕೊನೆಯವರೆಗೆ
عربي
الإنجليزية
الأوردية
ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) 'ಜನಾಬತ್' (ದೊಡ್ಡ ಅಶುದ್ಧಿ) ಸ್ನಾನ ಮಾಡಲು ಒಂದು 'ಸಾಅ್' ನೀರನ್ನು, ಮತ್ತು ವುಧೂ ಮಾಡಲು ಒಂದು 'ಮುದ್ದ್' ನೀರನ್ನು ಬಳಸುತ್ತಿದ್ದರು
عربي
الإنجليزية
الأوردية
ನಾನು ಅಲ್ಲಾಹನ ಸಂದೇಶವಾಹಕರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನೋಡಿದ್ದೇನೆ; ಅವರು ಮೂತ್ರವಿಸರ್ಜನೆ ಮಾಡಿ, ನಂತರ ವುಧೂ ಮಾಡಿದರು ಮತ್ತು ತಮ್ಮ ಚರ್ಮದ ಪಾದರಕ್ಷೆಗಳ ಮೇಲೆ ಸವರಿದರು'
عربي
الإنجليزية
الأوردية
ಖಂಡಿತವಾಗಿಯೂ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಫಜ್ರ್ ನಮಾಜ್ ನಿರ್ವಹಿಸಿದ ನಂತರ, ಸೂರ್ಯನು ಚೆನ್ನಾಗಿ (ಎತ್ತರಕ್ಕೆ) ಉದಯಿಸುವವರೆಗೆ ತಮ್ಮ ನಮಾಝ್ ಸ್ಥಳದಲ್ಲೇ ಕುಳಿತುಕೊಳ್ಳುತ್ತಿದ್ದರು
عربي
الإنجليزية
الأوردية
ಅಲ್ಲಾಹನ ದಾಸಿಯರನ್ನು (ಮಹಿಳೆಯರನ್ನು) ಅಲ್ಲಾಹನ ಮಸೀದಿಗಳಿಂದ (ಅಲ್ಲಿಗೆ ಹೋಗದಂತೆ) ತಡೆಯಬೇಡಿ. ಆದರೆ ಅವರು ಸುಗಂಧ ಹಚ್ಚದೆ ಹೊರಡಲಿ
عربي
الإنجليزية
الأوردية
ನಿಮ್ಮಲ್ಲಿ ಯಾರಾದರೂ ಮಸೀದಿಯನ್ನು ಪ್ರವೇಶಿಸಿದರೆ, ಪ್ರವಾದಿಯವರ ಮೇಲೆ ಸಲಾಂ ಹೇಳಲಿ ಮತ್ತು ಹೀಗೆ ಹೇಳಲಿ: 'ಅಲ್ಲಾಹುಮ್ಮ ಫ್ತಹ್ ಲೀ ಅಬ್ವಾಬ ರಹ್ಮತಿಕ' (ಓ ಅಲ್ಲಾಹ್, ನನಗಾಗಿ ನಿನ್ನ ಕರುಣೆಯ ಬಾಗಿಲುಗಳನ್ನು ತೆರೆ)
عربي
الإنجليزية
الأوردية
ಯಾರು ನಮ್ಮ (ರೀತಿಯಲ್ಲಿ) ನಮಾಝನ್ನು ನಿರ್ವಹಿಸುತ್ತಾನೋ, ನಮ್ಮ ಕಿಬ್ಲಾವನ್ನು (ಕಾಬಾವನ್ನು) ಅಭಿಮುಖೀಕರಿಸುತ್ತಾನೋ, ಮತ್ತು ನಾವು ವಧೆ ಮಾಡಿದ ಪ್ರಾಣಿಯನ್ನು ತಿನ್ನುತ್ತಾನೋ, ಅವನು ಮುಸ್ಲಿಮ್. ಅವನಿಗೆ ಅಲ್ಲಾಹನ ರಕ್ಷಣೆ ಮತ್ತು ಅವನ ರಸೂಲರ ರಕ್ಷಣೆ ಇದೆ. ಆದ್ದರಿಂದ ನೀವು ಅಲ್ಲಾಹನ ರಕ್ಷಣೆಯ ವಿಷಯದಲ್ಲಿ ಅವನಿಗೆ ದ್ರೋಹ ಮಾಡಬೇಡಿ
عربي
الإنجليزية
الأوردية
ನಾನು ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಬಲಗಡೆಗೆ ಮತ್ತು ತಮ್ಮ ಎಡಗಡೆಗೆ ಸಲಾಂ ಹೇಳುವುದನ್ನು ನೋಡುತ್ತಿದ್ದೆನು. ಎಷ್ಟರಮಟ್ಟಿಗೆಂದರೆ (ಅವರು ತಿರುಗುವಾಗ) ನಾನು ಅವರ ಕೆನ್ನೆಯ ಬಿಳುಪನ್ನು ಕಾಣುತ್ತಿದ್ದೆನು
عربي
الإنجليزية
الأوردية
“ಖಂಡಿತವಾಗಿಯೂ ಓರ್ವ ದಾಸನು ನಮಾಝ್ ಮಾಡುತ್ತಾನೆ, ಆದರೆ ಅವನಿಗೆ ಅದರಲ್ಲಿ ಹತ್ತನೇ ಒಂದು ಭಾಗ, ಒಂಬತ್ತನೇ ಒಂದು ಭಾಗ, ಎಂಟನೇ ಒಂದು ಭಾಗ, ಏಳನೇ ಒಂದು ಭಾಗ, ಆರನೇ ಒಂದು ಭಾಗ, ಐದನೇ ಒಂದು ಭಾಗ, ನಾಲ್ಕನೇ ಒಂದು ಭಾಗ, ಮೂರನೇ ಒಂದು ಭಾಗ ಅಥವಾ ಅರ್ಧದಷ್ಟು (ಪ್ರತಿಫಲ) ಮಾತ್ರ ಬರೆಯಲ್ಪಡುತ್ತದೆ'
عربي
الإنجليزية
الأوردية
ಎಲ್ಲಾ ಎರಡು ಅಝಾನ್‌ಗಳ ನಡುವೆ ಒಂದು ನಮಾಝ್ ಇದೆ. ಎಲ್ಲಾ ಎರಡು ಅಝಾನ್‌ಗಳ ನಡುವೆ ಒಂದು ನಮಾಝ್ ಇದೆ." ನಂತರ ಮೂರನೆಯದಾಗಿ ಹೇಳಿದರು: "ಇಚ್ಛಿಸುವವರಿಗೆ ಮಾತ್ರ
عربي
الإنجليزية
الأوردية
ನಿಮ್ಮಲ್ಲಿ ಮರಣಶಯ್ಯೆಯಲ್ಲಿರುವವರಿಗೆ 'ಲಾ ಇಲಾಹ ಇಲ್ಲಲ್ಲಾಹ್' (ಅಲ್ಲಾಹನ ಹೊರತು ಆರಾಧನೆಗೆ ಅರ್ಹರು ಯಾರೂ ಇಲ್ಲ) ಎಂದು ಹೇಳಿಕೊಡಿರಿ
عربي
الإنجليزية
الأوردية
“ನೀವು ಇಚ್ಚಿಸುವುದಾದರೆ ನಾನು ನಿಮಗೆ ನೀಡುತ್ತೇನೆ. (ಆದರೆ) ಇದರಲ್ಲಿ ಶ್ರೀಮಂತನಿಗೆ ಅಥವಾ ದುಡಿಯಲು ಶಕ್ತನಾಗಿರುವ ಬಲಿಷ್ಠನಿಗೆ ಯಾವುದೇ ಪಾಲಿಲ್ಲ
عربي
الإنجليزية
الأوردية
ಹಜ್ ಮತ್ತು ಉಮ್ರಾವನ್ನು ಒಂದರ ನಂತರ ಒಂದರಂತೆ (ನಿರಂತರವಾಗಿ) ಮಾಡುತ್ತಿರಿ. ಏಕೆಂದರೆ, ಅವೆರಡೂ ಕುಲುಮೆಯು ಕಬ್ಬಿಣ, ಚಿನ್ನ ಮತ್ತು ಬೆಳ್ಳಿಯ ಕಲ್ಮಶವನ್ನು (ಕಿಲುಬನ್ನು) ನಿವಾರಿಸುವಂತೆ, ಬಡತನ ಮತ್ತು ಪಾಪಗಳನ್ನು ನಿವಾರಿಸುತ್ತವೆ. 'ಮಬ್ರೂರ್' (ಸ್ವೀಕಾರಾರ್ಹ) ಹಜ್‌ಗೆ ಸ್ವರ್ಗವನ್ನು ಹೊರತುಪಡಿಸಿ ಬೇರೆ ಪ್ರತಿಫಲವಿಲ್ಲ
عربي
الإنجليزية
الإندونيسية
ನೀವು ಮುಂದಿನ (ಮೊದಲ) ಸಾಲನ್ನು ಪೂರ್ತಿಗೊಳಿಸಿರಿ, ನಂತರ ಅದರ ಹಿಂದಿನದನ್ನು. ಒಂದು ವೇಳೆ (ಸಾಲಿನಲ್ಲಿ) ಅಪೂರ್ಣತೆ (ಕೊರತೆ) ಇರುವುದಾದರೆ, ಅದು ಕೊನೆಯ ಸಾಲಿನಲ್ಲಿರಲಿ
عربي
الإنجليزية
الأوردية
ನಮಾಝ್‌ಗೆ 'ಇಕಾಮತ್' ಕರೆಯಲಾದರೆ, ಕಡ್ಡಾಯ (ಫರ್ಝ್) ನಮಾಝ್ ಹೊರತುಪಡಿಸಿ ಬೇರೆ ಯಾವುದೇ ನಮಾಝ್ ಇಲ್ಲ
عربي
الإنجليزية
الأوردية
ಜನರು ಜುಮುಅ (ಶುಕ್ರವಾರದ) ನಮಾಝ್‌ಗಳನ್ನು ಬಿಡುವುದನ್ನು ಖಂಡಿತವಾಗಿಯೂ ನಿಲ್ಲಿಸಬೇಕು. ಇಲ್ಲದಿದ್ದರೆ, ಅಲ್ಲಾಹು ಅವರ ಹೃದಯಗಳ ಮೇಲೆ ಖಂಡಿತವಾಗಿಯೂ ಮೊಹರು ಹಾಕುವನು. ನಂತರ ಅವರು ಖಂಡಿತವಾಗಿಯೂ ನಿರ್ಲಕ್ಷ್ಯರಾಗಿ ಬಿಡುವರು
عربي
الإنجليزية
الإندونيسية
ಯಾರು ಉದಾಸೀನತೆಯಿಂದ ಮೂರು ಜುಮುಅ (ಶುಕ್ರವಾರದ ನಮಾಝ್) ಗಳನ್ನು ಬಿಡುತ್ತಾರೋ, ಅಲ್ಲಾಹು ಅವರ ಹೃದಯದ ಮೇಲೆ ಮೊಹರು ಹಾಕುತ್ತಾನೆ
عربي
الإنجليزية
الإندونيسية
ಓ ಬಿಲಾಲ್, ಇಸ್ಲಾಮಿನಲ್ಲಿ ನೀನು ಮಾಡಿದ ಕಾರ್ಯಗಳಲ್ಲಿ, ನೀನು ಅತಿ ಹೆಚ್ಚು ನಿರೀಕ್ಷೆ (ಭರವಸೆ) ಇಟ್ಟಿರುವ ಕಾರ್ಯ ಯಾವುದು ಎಂದು ನನಗೆ ಹೇಳು
عربي
الإنجليزية
الأوردية
'ಅಂತ್ಯಕಾಲದಲ್ಲಿ ಒಂದು ಜನಾಂಗವು ಬರುತ್ತದೆ. ಅವರು ವಯಸ್ಸಿನಲ್ಲಿ ಚಿಕ್ಕವರು ಮತ್ತು ಬುದ್ಧಿಶಕ್ತಿಯಲ್ಲಿ ಅವಿವೇಕಿಗಳು. ಅವರು ಸೃಷ್ಟಿಗಳ ಮಾತುಗಳಲ್ಲೇ ಅತ್ಯುತ್ತಮವಾದ ಮಾತನ್ನು ಹೇಳುತ್ತಾರೆ. ಬಾಣವು ಗುರಿಯಿಂದ ಹೊರಬೀಳುವಷ್ಟು ವೇಗವಾಗಿ ಅವರು ಇಸ್ಲಾಮಿನಿಂದ ಹೊರಬೀಳುತ್ತಾರೆ
عربي
الإنجليزية
الإندونيسية
ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಯಾವುದೇ ಸಮುದಾಯವನ್ನು (ಇಸ್ಲಾಮಿಗೆ) ಆಹ್ವಾನಿಸದೆ ಅವರೊಂದಿಗೆ ಎಂದಿಗೂ ಯುದ್ಧ ಮಾಡುತ್ತಿರಲಿಲ್ಲ
عربي
الإنجليزية
الأوردية
ಖಂಡಿತವಾಗಿಯೂ ನೀನು ಕಲ್ಲು ಎಂದು ನನಗೆ ತಿಳಿದಿದೆ. ನೀನು ತೊಂದರೆ ಕೊಡುವುದಿಲ್ಲ ಅಥವಾ ಪ್ರಯೋಜನವನ್ನು ನೀಡುವುದಿಲ್ಲ. ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ನಿನ್ನನ್ನು ಚುಂಬಿಸುವುದನ್ನು ನಾನು ನೋಡದಿರುತ್ತಿದ್ದರೆ ನಾನು ನಿನ್ನನ್ನು ಚುಂಬಿಸುತ್ತಿರಲಿಲ್ಲ
عربي
الإنجليزية
الأوردية
ಮರಳಿಹೋಗಿ ನಮಾಝ್ ಮಾಡಿರಿ. ಏಕೆಂದರೆ ನೀವು ನಮಾಝ್ ಮಾಡಿಲ್ಲ
عربي
الإنجليزية
الأوردية
ಒಬ್ಬ ಮುಸ್ಲಿಂ ದಾಸನು - ಅಥವಾ ಸತ್ಯವಿಶ್ವಾಸಿಯು - ವುಝೂ (ಶುದ್ಧೀಕರಣ) ಮಾಡಿ, ತನ್ನ ಮುಖವನ್ನು ತೊಳೆದಾಗ, ಅವನು ತನ್ನ ಕಣ್ಣುಗಳಿಂದ ನೋಡಿದ ಪ್ರತಿಯೊಂದು ಕಿರಿಯ ಪಾಪವು ನೀರಿನೊಂದಿಗೆ - ಅಥವಾ ನೀರಿನ ಕೊನೆಯ ಹನಿಯೊಂದಿಗೆ - ಅವನ ಮುಖದಿಂದ ಹೊರಬರುತ್ತದೆ
عربي
الإنجليزية
الأوردية
ಅಲ್ಲಾಹುವಿನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ನಮಗೆ ಕುರ್‌ಆನ್‌ನ ಒಂದು ಸೂರಃವನ್ನು (ಅಧ್ಯಾಯವನ್ನು) ಕಲಿಸುವಂತೆ ಪ್ರತಿಯೊಂದು ವಿಷಯದಲ್ಲೂ ಇಸ್ತಿಖಾರ (ಮಾರ್ಗದರ್ಶನಕ್ಕಾಗಿ ಪ್ರಾರ್ಥನೆ) ಮಾಡುವುದನ್ನು ಕಲಿಸುತ್ತಿದ್ದರು
عربي
الإنجليزية
الأوردية
ಓ ಅಬೂ ಸಈದ್, ಯಾರು ಅಲ್ಲಾಹುವನ್ನು ಪರಿಪಾಲಕನೆಂದು, ಇಸ್ಲಾಮನ್ನು ಧರ್ಮವೆಂದು, ಮತ್ತು ಮುಹಮ್ಮದ್ ರನ್ನು ಪ್ರವಾದಿಯೆಂದು (ಒಪ್ಪಿಕೊಂಡು) ತೃಪ್ತರಾಗುತ್ತಾರೋ, ಅವರಿಗೆ ಸ್ವರ್ಗವು ಖಚಿತವಾಯಿತು
عربي
الإنجليزية
الأوردية
ಯಾರು ಅಲ್ಲಾಹನ ಮಾರ್ಗದಲ್ಲಿ ಒಂದು ದಿನ ಉಪವಾಸವನ್ನು ಆಚರಿಸುತ್ತಾನೋ, ಅಲ್ಲಾಹು ಅವನ ಮುಖವನ್ನು ನರಕದಿಂದ ಎಪ್ಪತ್ತು ಶರತ್ಕಾಲಗಳಷ್ಟು ದೂರ ಮಾಡುತ್ತಾನೆ
عربي
الإنجليزية
الأوردية
ಜನರು ಉಪವಾಸವನ್ನು ಬೇಗನೆ ತೊರೆಯುವವರೆಗೆ ಅವರು ಒಳಿತಿನಲ್ಲಿರುತ್ತಾರೆ
عربي
الإنجليزية
الأوردية
ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮ್ಮೊಂದಿಗೆ ಇದ್ದಾಗ, ನಾವು ಚಿಕ್ಕವರು, ದೊಡ್ಡವರು, ಸ್ವತಂತ್ರರು ಮತ್ತು ಗುಲಾಮರು ಹೀಗೆ ಎಲ್ಲರ ಪರವಾಗಿಯೂ, ಒಂದು ಸಾಅ್ ಆಹಾರ, ಅಥವಾ ಒಂದು ಸಾಅ್ ಗಿಣ್ಣು, ಅಥವಾ ಒಂದು ಸಾಅ್ ಬಾರ್ಲಿ, ಅಥವಾ ಒಂದು ಸಾಅ್ ಖರ್ಜೂರ, ಅಥವಾ ಒಂದು ಸಾಅ್ ಒಣದ್ರಾಕ್ಷಿ ಫಿತ್ರ್ ಝಕಾತ್ ನೀಡುತ್ತಿದ್ದೆವು
عربي
الإنجليزية
الأوردية
ನಾವು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜೊತೆ ಸಹರಿ ಸೇವಿಸಿದೆವು. ನಂತರ ಅವರು ನಮಾಝ್ ಮಾಡಲು ನಿಂತರು. ನಾನು ಕೇಳಿದೆ: 'ಅದಾನ್ ಮತ್ತು ಸಹರಿಯ ನಡುವೆ ಎಷ್ಟು ಸಮಯವಿತ್ತು?' ಅವರು ಹೇಳಿದರು: 'ಸುಮಾರು ಐವತ್ತು ಆಯತ್‌ಗಳಷ್ಟು.'
عربي
الإنجليزية
الأوردية
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರಮದಾನ್ ತಿಂಗಳ ಕೊನೆಯ ಹತ್ತು ದಿನಗಳಲ್ಲಿ ಅಲ್ಲಾಹು ಮರಣವನ್ನು ನೀಡುವವರೆಗೆ ಈತಿಕಾಫ್ (ಏಕಾಂತ ಆರಾಧನೆ) ಮಾಡುತ್ತಿದ್ದರು. ಅವರ ನಂತರ ಅವರ ಪತ್ನಿಯರು ಈತಿಕಾಫ್ ಕೂರುತ್ತಿದ್ದರು
عربي
الإنجليزية
الأوردية
ನೀವು ಸಹರಿ ಸೇವಿಸಿರಿ, ಏಕೆಂದರೆ ಸಹರಿಯಲ್ಲಿ ಸಮೃದ್ಧಿ (ಬರಕತ್) ಇದೆ
عربي
الإنجليزية
الأوردية
ನೀವು ರಮದಾನ್‌ಗಿಂತ ಒಂದು ಅಥವಾ ಎರಡು ದಿನಗಳ ಮೊದಲು ಉಪವಾಸ ಆಚರಿಸಬಾರದು. ಆದರೆ ವಾಡಿಕೆಯ ಉಪವಾಸವನ್ನು ಆಚರಿಸುವವನ ಹೊರತು. ಅವನು ಅದನ್ನು ಆಚರಿಸಬಹುದು
عربي
الإنجليزية
الأوردية
ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಫಿತ್ರ್ ಝಕಾತನ್ನು ಒಂದು ಸಾಅ್ ಖರ್ಜೂರ ಅಥವಾ ಒಂದು ಸಾಅ್ ಬಾರ್ಲಿಯಂತೆ ಗುಲಾಮರು, ಸ್ವತಂತ್ರರು, ಪುರುಷರು, ಸ್ತ್ರೀಯರು, ಕಿರಿಯರು, ಹಿರಿಯರು ಮುಂತಾದ ಎಲ್ಲಾ ಮುಸ್ಲಿಮರ ಮೇಲೆ ಕಡ್ಡಾಯಗೊಳಿಸಿದರು. ಜನರು ನಮಾಝ್‌ಗೆ ಹೊರಡುವ ಮೊದಲು ಅದನ್ನು ನೀಡಬೇಕೆಂದು ಅವರು ಆದೇಶಿಸಿದರು
عربي
الإنجليزية
الأوردية
ಯಾವುದೇ ಮುಸ್ಲಿಂ ಮಹಿಳೆ ತನ್ನ ಮಹ್ರಮ್ (ಹತ್ತಿರದ ಪುರುಷ ಸಂಬಂಧಿ) ಇಲ್ಲದೆ ಒಂದು ರಾತ್ರಿಯ ದೂರ ಪ್ರಯಾಣಿಸುವುದು ಅನು ಮತಿಸಲಾಗುವುದಿಲ್ಲ
عربي
الإنجليزية
الأوردية
ಯಾರಾದರೂ ಉಪವಾಸದಲ್ಲಿದ್ದಾಗ ಮರೆತು ತಿಂದರೆ ಅಥವಾ ಕುಡಿದರೆ, ಅವನು ತನ್ನ ಉಪವಾಸವನ್ನು ಪೂರ್ಣಗೊಳಿಸಲಿ. ಏಕೆಂದರೆ ಅಲ್ಲಾಹನೇ ಅವನಿಗೆ ಆಹಾರ ಮತ್ತು ಪಾನೀಯವನ್ನು ನೀಡಿದ್ದಾನೆ
عربي
الإنجليزية
الأوردية
ಉಮರ್ ಬಿನ್ ಖತ್ತಾಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರೊಂದಿಗೆ ನಾನು ಒಂದು ಈದ್‌ನಲ್ಲಿ ಪಾಲ್ಗೊಂಡಿದ್ದೆ. ಅವರು ಹೇಳಿದರು: 'ಇವೆರಡು ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉಪವಾಸ ಆಚರಿಸುವುದನ್ನು ನಿಷೇಧಿಸಿದ ದಿನಗಳಾಗಿವೆ: ನಿಮ್ಮ ಉಪವಾಸವನ್ನು ಕೊನೆಗೊಳಿಸುವ ದಿನ ಮತ್ತು ನೀವು ನಿಮ್ಮ ಬಲಿಮೃಗದಿಂದ ತಿನ್ನುವ ದಿನ
عربي
الإنجليزية
الأوردية
ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಲ್ಬಿಯ ಹೀಗಿತ್ತು: "ಲಬ್ಬೈಕ ಅಲ್ಲಾಹುಮ್ಮ ಲಬ್ಬೈಕ್, ಲಬ್ಬೈಕ ಲಾ ಶರೀಕ ಲಕ ಲಬ್ಬೈಕ್, ಇನ್ನಲ್-ಹಮ್ದ ವನ್ನಿಅಮತ ಲಕ ವಲ್-ಮುಲ್ಕ್, ಲಾ ಶರೀಕ ಲಕ್
عربي
الإنجليزية
الأوردية
ನೀವು ರಮದಾನ್ ತಿಂಗಳ ಕೊನೆಯ ಹತ್ತು ರಾತ್ರಿಗಳಲ್ಲಿರುವ ಬೆಸ ರಾತ್ರಿಗಳಲ್ಲಿ ಲೈಲತುಲ್ ಖದ್ರ್ ಅನ್ನು ಹುಡುಕಿರಿ
عربي
الإنجليزية
الأوردية
ನಿಮ್ಮ ಕನಸುಗಳೆಲ್ಲವೂ ಕೊನೆಯ ಏಳರಲ್ಲಿ ಒಗ್ಗೂಡುತ್ತಿರುವುದನ್ನು ನಾನು ಕಾಣುತ್ತಿದ್ದೇನೆ. ಆದ್ದರಿಂದ ಯಾರಾದರೂ ಲೈಲತುಲ್ ಖದ್ರ್ ಅನ್ನು ಹುಡುಕುತ್ತಿದ್ದರೆ, ಅವರು ಅದನ್ನು ಕೊನೆಯ ಏಳರಲ್ಲಿ ಹುಡುಕಲಿ
عربي
الإنجليزية
الأوردية
ಅಲ್ಲಾಹು ನಿಮಗೆ ದಾನವಾಗಿ ನೀಡಲು ಸಾಧ್ಯವಾಗುವಂತಹದ್ದನ್ನು ಒದಗಿಸಿಲ್ಲವೇ? ಪ್ರತಿ ತಸ್ಬೀಹ್ (ಸುಬ್‌ಹಾನಲ್ಲಾಹ್ ಎಂದು ಹೇಳುವುದು) ದಾನವಾಗಿದೆ; ಪ್ರತಿ ತಕ್ಬೀರ್ (ಅಲ್ಲಾಹು ಅಕ್ಬರ್ ಎಂದು ಹೇಳುವುದು) ದಾನವಾಗಿದೆ; ಪ್ರತಿ ತಹ್ಮೀದ್ (ಅಲ್‌ಹಮ್ದುಲಿಲ್ಲಾಹ್ ಎಂದು ಹೇಳುವುದು) ದಾನವಾಗಿದೆ; ಮತ್ತು ಪ್ರತಿ ತಹ್ಲೀಲ್ (ಲಾ ಇಲಾಹ ಇಲ್ಲಲ್ಲಾಹ್ ಎಂದು ಹೇಳುವುದು) ದಾನವಾಗಿದೆ. ಒಳಿತನ್ನು ಆದೇಶಿಸುವುದು ದಾನವಾಗಿದೆ, ಕೆಡುಕನ್ನು ತಡೆಯುವುದು ದಾನವಾಗಿದೆ, ಮತ್ತು ನಿಮ್ಮಲ್ಲಿ ಒಬ್ಬರು ಲೈಂಗಿಕ ಬಯಕೆಯನ್ನು ಪೂರೈಸುವುದರಲ್ಲಿ ಸಹ ದಾನವಿದೆ
عربي
الإنجليزية
الأوردية
ಖಂಡಿತವಾಗಿಯೂ, ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಾಲಿಕ (ಗೋಳಾಡುವ ಮಹಿಳೆ), ಹಾಲಿಕ (ತಲೆ ಬೋಳಿಸಿಕೊಳ್ಳುವ ಮಹಿಳೆ) ಮತ್ತು ಶಾಕ್ಕ (ಬಟ್ಟೆ ಹರಿದುಕೊಳ್ಳುವ ಮಹಿಳೆ) ರಿಂದ ಮುಕ್ತರಾಗಿದ್ದರು
عربي
الإنجليزية
الأوردية
(ರಮದಾನ್ ತಿಂಗಳ ಕೊನೆಯ) ಹತ್ತು ದಿನಗಳು ಪ್ರಾರಂಭವಾದರೆ, ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರಾತ್ರಿಯನ್ನು ಜೀವಂತಗೊಳಿಸುತ್ತಿದ್ದರು, ತಮ್ಮ ಕುಟುಂಬವನ್ನು ಎಬ್ಬಿಸುತ್ತಿದ್ದರು, ಪರಿಶ್ರಮಪಡುತ್ತಿದ್ದರು ಮತ್ತು ತಮ್ಮ ಧೋತಿಯನ್ನು ಬಿಗಿಗೊಳಿಸುತ್ತಿದ್ದರು
عربي
الإنجليزية
الأوردية
ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) "ಅಲ್ಲಾಹನ ಸಹಾಯ ಮತ್ತು ವಿಜಯ ಬಂದಾಗ." [ಸೂರ ನಸ್ರ್: 1] ಎಂಬ ವಚನವು ಅವತೀರ್ಣವಾದ ಬಳಿಕ ಅವರು ಯಾವುದೇ ನಮಾಝ್ ಮಾಡಿದರೂ ಅದರಲ್ಲಿ "ಸುಬ್‌ಹಾನಕ ರಬ್ಬನಾ ವಬಿಹಮ್ದಿಕ್, ಅಲ್ಲಾಹುಮ್ಮಗ್‌ಫಿರ್ ಲೀ (ನಮ್ಮ ಪರಿಪಾಲಕನೇ, ನೀನು ಪರಮ ಪವಿತ್ರನು. ಸ್ತುತಿಗಳೆಲ್ಲವೂ ನಿನಗೆ ಸಲ್ಲುತ್ತದೆ. ಓ ಅಲ್ಲಾಹ್, ನನ್ನನ್ನು ಕ್ಷಮಿಸು) ಎಂದು ಹೇಳದೇ ಇರುತ್ತಿರಲಿಲ್ಲ
عربي
الإنجليزية
الأوردية
ಅಲ್ಲಾಹನು ಯಹೂದಿಗಳು ಮತ್ತು ಕ್ರೈಸ್ತರನ್ನು ಶಪಿಸಲಿ, ಅವರು ತಮ್ಮ ಪ್ರವಾದಿಗಳ ಸಮಾಧಿಗಳನ್ನು ಮಸೀದಿಗಳನ್ನಾಗಿ ಮಾಡಿಕೊಂಡರು
عربي
الإنجليزية
الأوردية
ನೀನು ಅಲ್ಲಾಹುವಿನ ಮಾರ್ಗದಲ್ಲಿ ಖರ್ಚು ಮಾಡಿದ ಒಂದು ದೀನಾರ್ (ಬಂಗಾರದ ನಾಣ್ಯ), ನೀನು ಒಬ್ಬ ಗುಲಾಮನನ್ನು ಸ್ವತಂತ್ರಗೊಳಿಸಲು ಖರ್ಚು ಮಾಡಿದ ಒಂದು ದೀನಾರ್, ನೀನು ಒಬ್ಬ ಬಡವನಿಗೆ/ನಿರ್ಗತಿಕನಿಗೆ ದಾನವಾಗಿ ನೀಡಿದ ಒಂದು ದೀನಾರ್ ಮತ್ತು ನೀನು ನಿನ್ನ ಕುಟುಂಬಕ್ಕಾಗಿ ಖರ್ಚು ಮಾಡಿದ ಒಂದು ದೀನಾರ್. ಇವುಗಳಲ್ಲಿ ಅತ್ಯಧಿಕ ಪ್ರತಿಫಲವುಳ್ಳದ್ದು ನೀನು ನಿನ್ನ ಕುಟುಂಬಕ್ಕಾಗಿ ಖರ್ಚು ಮಾಡಿದ್ದಾಗಿದೆ
عربي
الإنجليزية
الأوردية
ವರ್ಷವಿಡೀ ಉಪವಾಸ ಆಚರಿಸುವವನು ಉಪವಾಸ ಆಚರಿಸುವುದಿಲ್ಲ. ಪ್ರತಿ ತಿಂಗಳ ಮೂರು ದಿನಗಳಲ್ಲಿ ಉಪವಾಸ ಆಚರಿಸುವುದು ವರ್ಷವಿಡೀ ಉಪವಾಸ ಆಚರಿಸಿದಂತೆ
عربي
الإنجليزية
الأوردية
ಯಾರಾದರೂ ಬಲಿಕೊಡಲು (ಕುರ್ಬಾನಿ ಮಾಡಲು) ಪ್ರಾಣಿಯನ್ನು ಹೊಂದಿದ್ದರೆ ಮತ್ತು ದುಲ್-ಹಿಜ್ಜಾ ತಿಂಗಳ ಚಂದ್ರನು ಕಾಣಿಸಿಕೊಂಡರೆ, ಅವನು ಬಲಿ ಕೊಡುವವರೆಗೆ (ಕುರ್ಬಾನಿ ಮಾಡುವವರೆಗೆ) ತನ್ನ ಕೂದಲು ಅಥವಾ ಉಗುರುಗಳಿಂದ ಏನನ್ನೂ ಕತ್ತರಿಸಬಾರದು
عربي
الإنجليزية
الأوردية
ರಮದಾನ್ ತಿಂಗಳು ಬಂದರೆ, ಸ್ವರ್ಗದ ಬಾಗಿಲುಗಳನ್ನು ತೆರೆಯಲಾಗುತ್ತದೆ, ನರಕದ ಬಾಗಿಲುಗಳನ್ನು ಮುಚ್ಚಲಾಗುತ್ತದೆ ಮತ್ತು ಶೈತಾನರನ್ನು ಸರಪಳಿಗಳಿಂದ ಬಂಧಿಸಲಾಗುತ್ತದೆ
عربي
الإنجليزية
الأوردية
ಒಂದು ವೇಳೆ ಜನರಿಗೆ ಅಝಾನ್ (ನಮಾಝ್‌ನ ಕರೆ) ನೀಡುವುದರಲ್ಲಿ ಮತ್ತು (ಜಮಾಅತ್ ನಮಾಝ್‌ನ) ಮೊದಲ ಸಾಲಿನಲ್ಲಿ ನಿಲ್ಲುವುದರಲ್ಲಿ ಏನಿದೆ (ಎಷ್ಟು ಪುಣ್ಯವಿದೆ) ಎಂದು ತಿಳಿದಿದ್ದರೆ, ನಂತರ ಚೀಟಿ ಹಾಕುವುದರ ಹೊರತು ಅವರಿಗೆ ಅದಕ್ಕಾಗಿ ಬೇರೆ ದಾರಿ ಕಾಣದಿದ್ದರೆ, ಅವರು ಖಂಡಿತವಾಗಿಯೂ ಅದಕ್ಕಾಗಿ ಚೀಟಿ ಹಾಕುತ್ತಿದ್ದರು
عربي
الإنجليزية
الإندونيسية
ಅಲ್ಲಾಹನ ನೆರಳಲ್ಲದೆ ಬೇರೆ ನೆರಳಿಲ್ಲದ ದಿನ (ಪುನರುತ್ಥಾನ ದಿನ) ದಂದು ಅವನು ಏಳು (ರೀತಿಯ) ಜನರಿಗೆ ತನ್ನ ನೆರಳಿನಲ್ಲಿ ನೆರಳು ನೀಡುತ್ತಾನೆ
عربي
الإنجليزية
الإندونيسية
ನಮಾಝ್ (ಅನ್ನು ಸಂರಕ್ಷಿಸಿ) ಮತ್ತು ನಿಮ್ಮ ಬಲಗೈಗಳು ಅಧೀನದಲ್ಲಿಟ್ಟಿರುವವರ (ಹಕ್ಕುಗಳನ್ನು ಪೂರೈಸಿರಿ)!
عربي
الإنجليزية
الإندونيسية