+ -

عن أُمِّ عَطِيَّةَ رَضي الله عنها، وكَانَتْ بايَعَت النبيَّ صلى الله عليه وسلم، قالت:
كُنَّا لا نَعُدّ الكُدرَةَ والصُّفْرَةَ بعدَ الطُّهرِ شيئًا.

[صحيح] - [رواه أبو داود بهذا اللفظ، ورواه البخاري بدون زيادة (بعد الطهر)] - [سنن أبي داود: 307]
المزيــد ...

ಉಮ್ಮು ಅತಿಯ್ಯ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಿಷ್ಠೆಯ ಪ್ರತಿಜ್ಞೆ ಮಾಡಿದವರಾಗಿದ್ದರು. ಅವರು ಹೇಳಿದರು:
"ಶುದ್ಧಿಯಾದ ನಂತರ ನಾವು ಕಂದು ಬಣ್ಣ ಅಥವಾ ಹಳದಿ ಬಣ್ಣವನ್ನು ಪರಿಗಣಿಸುತ್ತಿರಲಿಲ್ಲ."

[صحيح] - [رواه أبو داود بهذا اللفظ، ورواه البخاري بدون زيادة (بعد الطهر)] - [سنن أبي داود - 307]

ವಿವರಣೆ

ಸಹಾಬಿ ವನಿತೆ ಉಮ್ಮು ಅತಿಯ್ಯ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಇಲ್ಲಿ ತಿಳಿಸುವುದೇನೆಂದರೆ, ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕಾಲದಲ್ಲಿ ಮಹಿಳೆಯರು ಮುಟ್ಟಿನಿಂದ ಶುದ್ಧಿಯಾದ ನಂತರ ಜನನಾಂಗದಿಂದ ಸ್ರವಿಸುವ ಕಡುಗಂದು ಅಥವಾ ಕಡುಹಳದಿ ಬಣ್ಣದ ದ್ರವವನ್ನು ಮುಟ್ಟಿನ ರಕ್ತವೆಂದು ಪರಿಗಣಿಸುತ್ತಿರಲಿಲ್ಲ ಮತ್ತು ಅದರ ಕಾರಣದಿಂದ ನಮಾಝ್ ಅಥವಾ ಉಪವಾಸವನ್ನು ತೊರೆಯುತ್ತಿರಲಿಲ್ಲ.

ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಉಯ್ಘರ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ಥಾಯ್ ಪಶ್ತೋ الأسامية السويدية الأمهرية الهولندية الغوجاراتية القيرقيزية النيبالية اليوروبا الليتوانية الدرية الصربية الصومالية الكينياروندا الرومانية المجرية التشيكية الموري المالاجاشية الأورومو الولوف الأوكرانية الجورجية
ಅನುವಾದಗಳನ್ನು ತೋರಿಸಿ

ಹದೀಸಿನ ಪ್ರಯೋಜನಗಳು

  1. ಮುಟ್ಟಿನಿಂದ ಶುದ್ಧಿಯಾದ ನಂತರ ಮಹಿಳೆಯ ಜನನಾಂಗದಿಂದ ಸ್ರವಿಸುವ ದ್ರವವನ್ನು ಪರಿಗಣಿಸಬೇಕಾಗಿಲ್ಲ. ಅದು ರಕ್ತದಿಂದ ಉಂಟಾದ ಕಂದು ಅಥವಾ ಹಳದಿ ಬಣ್ಣವನ್ನು ಹೊಂದಿದ್ದರೂ ಸಹ.
  2. ಮುಟ್ಟಿನ ಅವಧಿಯಲ್ಲಿ ಸ್ರವಿಸುವ ಕಂದು ಅಥವಾ ಹಳದಿ ಬಣ್ಣದ ರಕ್ತವು ಮುಟ್ಟಿನ ರಕ್ತವಾಗಿದೆ. ಏಕೆಂದರೆ, ಅದು ಮುಟ್ಟಿನ ಸಮಯದಲ್ಲಿ ಸ್ರವಿಸುವ ರಕ್ತವಾಗಿದೆ. ಆದರೆ ಅದರಲ್ಲಿ ದ್ರವವು ಮಿಶ್ರಿತವಾಗಿರುತ್ತದೆ.
  3. ಶುದ್ಧಿಯಾದ ನಂತರ ಕಂಡುಬರುವ ಕಂದು ಅಥವಾ ಹಳದಿ ಬಣ್ಣದ ರಕ್ತದ ಕಾರಣದಿಂದ ಮಹಿಳೆಯರು ನಮಾಝ್ ಮತ್ತು ಉಪವಾಸವನ್ನು ತೊರೆಯಬಾರದು. ಬದಲಿಗೆ, ವುದೂ ನಿರ್ವಹಿಸಿ ನಮಾಝ್ ಮಾಡಬೇಕು.