عَنْ أَبِي سَعِيدٍ الخُدْرِيِّ رضي الله عنه قَالَ: خَرَجَ رَسُولُ اللَّهِ صَلَّى اللهُ عَلَيْهِ وَسَلَّمَ فِي أَضْحَى أَوْ فِطْرٍ إِلَى المُصَلَّى، فَمَرَّ عَلَى النِّسَاءِ، فَقَالَ:
«يَا مَعْشَرَ النِّسَاءِ، تَصَدَّقْنَ، فَإِنِّي أُرِيتُكُنَّ أَكْثَرَ أَهْلِ النَّارِ» فَقُلْنَ: وَبِمَ يَا رَسُولَ اللَّهِ؟ قَالَ: «تُكْثِرْنَ اللَّعْنَ، وَتَكْفُرْنَ العَشِيرَ، مَا رَأَيْتُ مِنْ نَاقِصَاتِ عَقْلٍ وَدِينٍ أَذْهَبَ لِلُبِّ الرَّجُلِ الحَازِمِ مِنْ إِحْدَاكُنَّ»، قُلْنَ: وَمَا نُقْصَانُ دِينِنَا وَعَقْلِنَا يَا رَسُولَ اللَّهِ؟ قَالَ: «أَلَيْسَ شَهَادَةُ المَرْأَةِ مِثْلَ نِصْفِ شَهَادَةِ الرَّجُلِ» قُلْنَ: بَلَى، قَالَ: «فَذَلِكِ مِنْ نُقْصَانِ عَقْلِهَا، أَلَيْسَ إِذَا حَاضَتْ لَمْ تُصَلِّ وَلَمْ تَصُمْ» قُلْنَ: بَلَى، قَالَ: «فَذَلِكِ مِنْ نُقْصَانِ دِينِهَا».
[صحيح] - [متفق عليه] - [صحيح البخاري: 304]
المزيــد ...
ಅಬೂ ಸಈದ್ ಖುದ್ರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಈದುಲ್ ಅದ್‌ಹಾ ಅಥವಾ ಈದುಲ್ ಫಿತ್ರ್ ಹಬ್ಬದ ದಿನದಂದು ಈದ್‌ಗಾಹ್‌ಗೆ ಹೊರಟರು. ನಂತರ ಮಹಿಳೆಯರ ಬಳಿಗೆ ಹೋಗಿ ಹೇಳಿದರು:
"ಓ ಮಹಿಳೆಯರ ಸಮೂಹವೇ! ದಾನ ಮಾಡಿರಿ. ಏಕೆಂದರೆ ನಾನು ನರಕವಾಸಿಗಳಲ್ಲಿ ನಿಮ್ಮನ್ನು ಹೆಚ್ಚಾಗಿ ನೋಡಿದ್ದೇನೆ." ಆಗ ಅವರು ಕೇಳಿದರು: “ಓ ಅಲ್ಲಾಹನ ಸಂದೇಶವಾಹಕರೇ! ಅದಕ್ಕೆ ಕಾರಣವೇನು?” ಅವರು ಉತ್ತರಿಸಿದರು: "ನೀವು ಹೆಚ್ಚುಹೆಚ್ಚಾಗಿ ಶಪಿಸುತ್ತೀರಿ ಮತ್ತು ನಿಮ್ಮ ಗಂಡನಿಗೆ ಕೃತಘ್ನರಾಗುತ್ತೀರಿ. ಬುದ್ಧಿ ಮತ್ತು ಧರ್ಮದಲ್ಲಿ ನಿಮಗಿಂತಲೂ ಹೆಚ್ಚು ಕೊರತೆಯಿರುವವರನ್ನು ನಾನು ನೋಡಿಲ್ಲ. ಆದರೂ ನೀವು ದೃಢಮನಸ್ಸಿನ ಪುರುಷನ ಬುದ್ಧಿಯನ್ನು ಕದಡಬಲ್ಲಿರಿ." ಆಗ ಅವರು ಕೇಳಿದರು: “ಓ ಅಲ್ಲಾಹನ ಸಂದೇಶವಾಹಕರೇ! ನಮ್ಮ ಧರ್ಮ ಮತ್ತು ಬುದ್ಧಿಗಳಲ್ಲಿನ ಕೊರತೆಯೇನು?” ಅವರು ಉತ್ತರಿಸಿದರು: "ಮಹಿಳೆಯ ಸಾಕ್ಷ್ಯವು ಪುರುಷನ ಸಾಕ್ಷ್ಯದ ಅರ್ಧದಷ್ಟಲ್ಲವೇ?" ಅವರು ಹೇಳಿದರು: “ಹೌದು.” ಪ್ರವಾದಿಯವರು ಹೇಳಿದರು: "ಅದು ಅವಳ ಬುದ್ಧಿಯ ಕೊರತೆಯಿಂದಾಗಿದೆ. ಅವಳು ಮುಟ್ಟಾದಾಗ ನಮಾಝ್ ಮತ್ತು ಉಪವಾಸವನ್ನು ಬಿಟ್ಟುಬಿಡುವುದಿಲ್ಲವೇ?" ಅವರು ಹೇಳಿದರು: “ಹೌದು.” ಪ್ರವಾದಿಯವರು ಹೇಳಿದರು: "ಅದು ಅವಳ ಧರ್ಮದ ಕೊರತೆಯಿಂದಾಗಿದೆ."
[صحيح] - [متفق عليه] - [صحيح البخاري - 304]
ಒಮ್ಮೆ ಈದ್ ಹಬ್ಬದ ದಿನದಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಈದ್‌ಗಾಹ್‌ಗೆ ಹೊರಟರು. ಅವರು ಮಹಿಳೆಯರಿಗೆ ವಿಶೇಷವಾಗಿ ಉಪದೇಶ ನೀಡುವೆನೆಂದು ವಾಗ್ದಾನ ಮಾಡಿದ್ದರು. ಆದ್ದರಿಂದ ಅವರು ಆ ದಿನ ಆ ವಾಗ್ದಾನವನ್ನು ಪೂರೈಸುತ್ತಾ ಹೇಳಿದರು: ಓ ಮಹಿಳೆಯರ ಸಮೂಹವೇ! ದಾನ ಮಾಡಿರಿ, ಮತ್ತು ಇಸ್ತಿಗ್ಫಾರ್ (ಕ್ಷಮೆಯಾಚನೆ) ಮಾಡುವುದನ್ನು ಹೆಚ್ಚಿಸಿರಿ. ಏಕೆಂದರೆ ಅವು ಪಾಪಗಳನ್ನು ನಿವಾರಿಸುವ ಬಹುದೊಡ್ಡ ಸಾಧನಗಳಾಗಿವೆ. ಏಕೆಂದರೆ, ನಾನು ಇಸ್ರಾದ ರಾತ್ರಿಯಲ್ಲಿ ನರಕವಾಸಿಗಳಲ್ಲಿ ನಿಮ್ಮನ್ನೇ ಹೆಚ್ಚಾಗಿ ನೋಡಿದ್ದೇನೆ.
ಆಗ ಅವರಲ್ಲಿದ್ದ ಬುದ್ಧಿವಂತೆ, ವಿಚಾರವಂತೆ ಮತ್ತು ಗಾಂಭೀರ್ಯವುಳ್ಳ ಮಹಿಳೆ ಕೇಳಿದಳು: ಓ ಅಲ್ಲಾಹನ ಸಂದೇಶವಾಹಕರೇ, ನಾವೇ ನರಕವಾಸಿಗಳಲ್ಲಿ ಹೆಚ್ಚಾಗಿರಲು ಕಾರಣವೇನು?
ಅವರು ಉತ್ತರಿಸಿದರು: “ಅದಕ್ಕೆ ಕೆಲವು ಕಾರಣಗಳಿವೆ: ನೀವು ಶಾಪ ಮತ್ತು ನಿಂದನೆಯನ್ನು ಹೆಚ್ಚಿಸುತ್ತೀರಿ, ಮತ್ತು ಗಂಡನ ಹಕ್ಕನ್ನು ನಿಷೇಧಿಸುತ್ತೀರಿ. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರನ್ನು ಈ ರೀತಿ ವರ್ಣಿಸಿದರು: ಮಹಿಳೆಯರಿಗೆ ಬುದ್ಧಿ ಮತ್ತು ಧರ್ಮದಲ್ಲಿ ಕೊರತೆಯಿದ್ದರೂ ಸಹ, ಅವರು ಒಬ್ಬ ಬುದ್ಧಿವಂತ, ವಿಚಾರಶೀಲ, ದೃಢಸಂಕಲ್ಪದ ಮತ್ತು ತನ್ನ ವಿಷಯವನ್ನು ನಿಯಂತ್ರಿಸಬಲ್ಲ ಪುರುಷನನ್ನು ಸೋಲಿಸುವಷ್ಟು ಪ್ರಬಲರಾಗಿದ್ದಾರೆ.
ಅವಳು ಕೇಳಿದಳು: “ಓ ಅಲ್ಲಾಹನ ಸಂದೇಶವಾಹಕರೇ! ಬುದ್ಧಿ ಮತ್ತು ಧರ್ಮದ ಕೊರತೆ ಎಂದರೆ ಏನು?”
ಅವರು ಉತ್ತರಿಸಿದರು: “ಬುದ್ಧಿಯ ಕೊರತೆಯೆಂದರೆ ಇಬ್ಬರು ಮಹಿಳೆಯರ ಸಾಕ್ಷ್ಯವು ಒಬ್ಬ ಪುರುಷನ ಸಾಕ್ಷ್ಯಕ್ಕೆ ಸಮಾನವಾಗಿದೆ. ಇದು ಬುದ್ಧಿಯ ಕೊರತೆಯಾಗಿದೆ. ಧರ್ಮದ ಕೊರತೆಯೆಂದರೆ ಸತ್ಕರ್ಮಗಳಲ್ಲಿನ ಕೊರತೆಯಾಗಿದೆ. ಏಕೆಂದರೆ ಮಹಿಳೆಯರು ಮುಟ್ಟಿನ ಕಾರಣದಿಂದ ಅನೇಕ ರಾತ್ರಿ ಮತ್ತು ಹಗಲುಗಳನ್ನು ನಮಾಝ್ ಮಾಡದೆ ಮತ್ತು ರಮದಾನ್ ತಿಂಗಳ ದಿನಗಳಾದರೆ ಉಪವಾಸ ಆಚರಿಸದೆ ಕಳೆಯುತ್ತಾರೆ. ಇದು ಧರ್ಮದ ಕೊರತೆಯಾಗಿದೆ. ಆದರೆ, ಈ ಕಾರಣಕ್ಕಾಗಿ ಅವರನ್ನು ದೂಷಿಸಲಾಗುವುದಿಲ್ಲ ಅಥವಾ ಶಿಕ್ಷಿಸಲಾಗುವುದಿಲ್ಲ. ಏಕೆಂದರೆ ಅದು ಅವರ ಸೃಷ್ಟಿಯ ಮೂಲವಾಗಿದೆ. ಉದಾಹರಣೆಗೆ, ಮನುಷ್ಯನು ಹಣವನ್ನು ಪ್ರೀತಿಸುವವನಾಗಿ, ತನ್ನ ಕೆಲಸಕಾರ್ಯಗಳಲ್ಲಿ ಆತುರಪಡುವವನಾಗಿ ಮತ್ತು ಅಜ್ಞಾನಿಯಾಗಿ ಸೃಷ್ಟಿಸಲ್ಪಟ್ಟಿದ್ದಾನೆ. ಆದ್ದರಿಂದ ಇವುಗಳಿಂದ ವಂಚಿತರಾಗದಿರುವುದಕ್ಕಾಗಿ ಇವುಗಳ ಬಗ್ಗೆ ಎಚ್ಚರಿಸಲು ಇದನ್ನು ತಿಳಿಸಲಾಗಿದೆ.