ಹದೀಸ್‌ಗಳ ಪಟ್ಟಿ

ಅವರ ಕರ್ಮಗಳು ಎಷ್ಟೇ ಕಡಿಮೆಯಾಗಿದ್ದರೂ ಸಹ ಅಲ್ಲಾಹು ಅವರನ್ನು ಸ್ವರ್ಗಕ್ಕೆ ಪ್ರವೇಶ ಮಾಡಿಸುವನು
عربي ಆಂಗ್ಲ ಉರ್ದು
“ಅಲ್ಲಾಹನೊಂದಿಗೆ ಸಹಭಾಗಿತ್ವ ಮಾಡದ ಸ್ಥಿತಿಯಲ್ಲಿ ಯಾರು ಅವನನ್ನು ಭೇಟಿಯಾಗುತ್ತಾನೋ ಅವನು ಸ್ವರ್ಗವನ್ನು ಪ್ರವೇಶಿಸುತ್ತಾನೆ. ಅಲ್ಲಾಹನೊಂದಿಗೆ ಸಹಭಾಗಿತ್ವ ಮಾಡಿದ ಸ್ಥಿತಿಯಲ್ಲಿ ಯಾರು ಅವನನ್ನು ಭೇಟಿಯಾಗುತ್ತಾನೋ ಅವನು ನರಕವನ್ನು ಪ್ರವೇಶಿಸುತ್ತಾನೆ.”
عربي ಆಂಗ್ಲ ಉರ್ದು
ತನ್ನ ಎರಡು ದವಡೆಗಳ ನಡುವೆ ಮತ್ತು ತನ್ನ ಎರಡು ಕಾಲುಗಳ ನಡುವೆ ಇರುವುದನ್ನು ನಿಯಂತ್ರಿಸುತ್ತೇನೆಂದು ಯಾರು ನನಗೆ ಖಾತ್ರಿ ನೀಡುತ್ತಾನೋ, ಅವನಿಗೆ ನಾನು ಸ್ವರ್ಗದ ಖಾತ್ರಿ ನೀಡುತ್ತೇನೆ
عربي ಆಂಗ್ಲ ಉರ್ದು
“ನಿಮ್ಮಲ್ಲೊಬ್ಬನಿಗೆ ಸ್ವರ್ಗವು ಅವನ ಚಪ್ಪಲಿಯ ತೊಗಲಪಟ್ಟಿಗಿಂತಲೂ ಹತ್ತಿರದಲ್ಲಿದೆ; ಹಾಗೆಯೇ ನರಕವೂ ಕೂಡ.”
عربي ಆಂಗ್ಲ ಉರ್ದು
“ನರಕವನ್ನು ಮೋಹಗಳಿಂದ ಮರೆಮಾಡಲಾಗಿದೆ ಮತ್ತು ಸ್ವರ್ಗವನ್ನು ಸಂಕಷ್ಟಗಳಿಂದ ಮರೆಮಾಡಲಾಗಿದೆ.”
عربي ಆಂಗ್ಲ ಉರ್ದು
ಜನರು ಅತಿಹೆಚ್ಚಾಗಿ ಸ್ವರ್ಗವನ್ನು ಪ್ರವೇಶಿಸಲು ಕಾರಣವಾಗುವ ವಿಷಯದ ಬಗ್ಗೆ ಕೇಳಲಾದಾಗ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಉತ್ತರಿಸಿದರು: "ಅಲ್ಲಾಹನ ಭಯ ಮತ್ತು ಉತ್ತಮ ನಡವಳಿಕೆ
عربي ಆಂಗ್ಲ ಉರ್ದು
ಅಲ್ಲಾಹು ಸ್ವರ್ಗ ಮತ್ತು ನರಕಗಳನ್ನು ಸೃಷ್ಟಿಸಿದಾಗ ಜಿಬ್ರೀಲರನ್ನು (ಅವರ ಮೇಲೆ ಶಾಂತಿಯಿರಲಿ) ಸ್ವರ್ಗಕ್ಕೆ ಕಳುಹಿಸಿ ಹೇಳಿದನು
عربي ಆಂಗ್ಲ ಉರ್ದು
ಪುನರುತ್ಥಾನ ದಿನದಂದು ಒಬ್ಬ ವ್ಯಕ್ತಿಯನ್ನು ತರಲಾಗುವುದು ಮತ್ತು ಅವನನ್ನು ನರಕಕ್ಕೆ ಎಸೆಯಲಾಗುವುದು. ಆಗ ಅವನ ಕರುಳುಗಳು ಹೊಟ್ಟೆಯಿಂದ ಹೊರ ಚೆಲ್ಲುವುವು. ಕತ್ತೆಯು ಗಾಣಕ್ಕೆ ಸುತ್ತು ಬರುವಂತೆ ಅವನು ಅದರೊಂದಿಗೆ ಸುತ್ತು ಬರುವನು
عربي ಆಂಗ್ಲ ಉರ್ದು
ಅದು ಎಪ್ಪತ್ತು ವರ್ಷಗಳ ಹಿಂದೆ ನರಕಕ್ಕೆ ಎಸೆಯಲಾದ ಒಂದು ಕಲ್ಲು. ಅದು ನರಕದೊಳಗೆ ಬೀಳುತ್ತಾ ಇದೀಗ ಅದರ ತಳಭಾಗವನ್ನು ತಲುಪಿದೆ
عربي ಆಂಗ್ಲ ಉರ್ದು
ನರಕವಾಸಿಗಳಲ್ಲಿ ಅತ್ಯಂತ ಕನಿಷ್ಠ ಶಿಕ್ಷೆಯನ್ನು ಅನುಭವಿಸುವವನು ಯಾರೆಂದರೆ, ಬೆಂಕಿಯಿಂದ ಮಾಡಿದ ಎರಡು ಚಪ್ಪಲಿಗಳು ಮತ್ತು ಎರಡು ಚಪ್ಪಲಿದಾರಗಳನ್ನು ಧರಿಸಿದವನು. ಅವುಗಳಿಂದ ಅವನ ಮಿದುಳು ಪಾತ್ರೆಯು ಕುದಿಯುವಂತೆ ಕುದಿಯುತ್ತದೆ. ಅವನು ತನಗಿಂತ ಹೆಚ್ಚು ಕಠಿಣವಾದ ಶಿಕ್ಷೆಯನ್ನು ಅನುಭವಿಸುವವರು ಯಾರೂ ಇರಲಾರರು ಎಂದು ಭಾವಿಸುತ್ತಾನೆ. ಆದರೆ ವಾಸ್ತವವಾಗಿ ಅವನು ಅವರಲ್ಲಿ ಅತ್ಯಂತ ಕನಿಷ್ಠ ಶಿಕ್ಷೆಯನ್ನು ಅನುಭವಿಸುವವನಾಗಿದ್ದಾನೆ
عربي ಆಂಗ್ಲ ಉರ್ದು
ಒಬ್ಬ ಘೋಷಕನು ಘೋಷಿಸುವನು: ನೀವು ಸದಾ ಆರೋಗ್ಯವಂತರಾಗಿರುವಿರಿ. ನೀವೆಂದೂ ರೋಗಿಗಳಾಗುವುದಿಲ್ಲ. ನೀವು ಸದಾ ಜೀವಂತವಾಗಿರುವಿರಿ. ನೀವೆಂದೂ ಮರಣಹೊಂದುವುದಿಲ್ಲ. ನೀವು ಸದಾ ಯುವಕರಾಗಿರುವಿರಿ. ನೀವೆಂದೂ ವೃದ್ಧರಾಗುವುದಿಲ್ಲ. ನೀವು ಸದಾ ಸುಖಭೋಗಿಗಳಾಗುವಿರಿ. ನೀವೆಂದೂ ನೋವು ಅನುಭವಿಸುವುದಿಲ್ಲ
عربي ಆಂಗ್ಲ ಉರ್ದು
ಸರ್ವಶಕ್ತನಾದ ಅಲ್ಲಾಹು ಸ್ವರ್ಗವಾಸಿಗಳೊಡನೆ ಕೇಳುವನು: "ಓ ಸ್ವರ್ಗವಾಸಿಗಳೇ!" ಅವರು ಉತ್ತರಿಸುವರು: "ನಾವು ನಿನಗೆ ಓಗೊಡುತ್ತಿದ್ದೇವೆ ಮತ್ತು ನಿನ್ನ ಸೇವೆ ಮಾಡಲು ಸನ್ನದ್ಧರಾಗಿದ್ದೇವೆ." ಅವನು ಕೇಳುವನು: "ನಿಮಗೆ ತೃಪ್ತಿಯಾಗಿದೆಯೇ?" ಅವರು ಉತ್ತರಿಸುವರು: "ನಮಗೆ ತೃಪ್ತಿಯಾಗದಿರಲು ಹೇಗೆ ಸಾಧ್ಯ? ನೀನಂತೂ ನಿನ್ನ ಸೃಷ್ಟಿಗಳಲ್ಲಿ ಯಾರಿಗೂ ನೀಡದೇ ಇರುವುದನ್ನು ನಮಗೆ ನೀಡಿರುವೆ
عربي ಆಂಗ್ಲ ಉರ್ದು
ಸ್ವರ್ಗವಾಸಿಗಳು ಸ್ವರ್ಗವನ್ನು ಪ್ರವೇಶಿಸಿದಾಗ ಸರ್ವಶಕ್ತನಾದ ಅಲ್ಲಾಹು ಕೇಳುವನು: "ನಾನು ನಿಮಗೆ ಇನ್ನೂ ಏನಾದರೂ ಹೆಚ್ಚಿಗೆ ಕೊಡಬೇಕೆಂದು ನೀವು ಬಯಸುತ್ತೀರಾ?
عربي ಆಂಗ್ಲ ಉರ್ದು
ಎರಡು ವಿಧಗಳ ಜನರು ನರಕವಾಸಿಗಳಾಗಿದ್ದಾರೆ. ಆದರೆ ನಾನು ಅವರನ್ನು ಕಂಡಿಲ್ಲ. ದನದ ಬಾಲದಂತಹ ಚಾಟಿಯನ್ನು ಹಿಡಿದುಕೊಂಡು, ಅದರಿಂದ ಜನರಿಗೆ ಥಳಿಸುವವರು. ಬಟ್ಟೆ ಧರಿಸಿದ್ದರೂ ನಗ್ನರಾಗಿರುವ ಮತ್ತು (ಜನರನ್ನು ಕೆಡುಕಿನ ಕಡೆಗೆ) ವಾಲಿಸುವ ಹಾಗೂ ಸ್ವಯಂ ಅದರೆಡೆಗೆ ವಾಲುವ ಸ್ತ್ರೀಯರು
عربي ಆಂಗ್ಲ ಉರ್ದು
ಓ ಮಹಿಳೆಯರ ಸಮೂಹವೇ! ದಾನ ಮಾಡಿರಿ. ಏಕೆಂದರೆ ನಾನು ನರಕವಾಸಿಗಳಲ್ಲಿ ನಿಮ್ಮನ್ನು ಹೆಚ್ಚಾಗಿ ನೋಡಿದ್ದೇನೆ." ಆಗ ಅವರು ಕೇಳಿದರು: “ಓ ಅಲ್ಲಾಹನ ಸಂದೇಶವಾಹಕರೇ! ಅದಕ್ಕೆ ಕಾರಣವೇನು?” ಅವರು ಉತ್ತರಿಸಿದರು: "ನೀವು ಹೆಚ್ಚುಹೆಚ್ಚಾಗಿ ಶಪಿಸುತ್ತೀರಿ ಮತ್ತು ನಿಮ್ಮ ಗಂಡನಿಗೆ ಕೃತಘ್ನರಾಗುತ್ತೀರಿ. ಬುದ್ಧಿ ಮತ್ತು ಧರ್ಮದಲ್ಲಿ ನಿಮಗಿಂತಲೂ ಹೆಚ್ಚು ಕೊರತೆಯಿರುವವರನ್ನು ನಾನು ನೋಡಿಲ್ಲ. ಆದರೂ ನೀವು ದೃಢಮನಸ್ಸಿನ ಪುರುಷನ ಬುದ್ಧಿಯನ್ನು ಕದಡಬಲ್ಲಿರಿ
عربي ಆಂಗ್ಲ ಉರ್ದು
(ಪುನರುತ್ಥಾನ ದಿನದಂದು) ಸಾವನ್ನು ಕಪ್ಪು ಮತ್ತು ಬಿಳಿ ಬಣ್ಣವಿರುವ ಟಗರಿನ ರೂಪದಲ್ಲಿ ತರಲಾಗುವುದು
عربي ಆಂಗ್ಲ ಉರ್ದು
ನೀವು ಉರಿಸುವ ಬೆಂಕಿ ನರಕದ ಬೆಂಕಿಯ ಎಪ್ಪತ್ತನೇ ಒಂದು ಭಾಗವಾಗಿದೆ
عربي ಆಂಗ್ಲ ಉರ್ದು
ಖಂಡಿತವಾಗಿಯೂ, ಸ್ವರ್ಗದಲ್ಲಿ ಸತ್ಯವಿಶ್ವಾಸಿಗೆ ಒಂದೇ ಮುತ್ತಿನಿಂದ ಮಾಡಿದ, ಒಳಗೆ ಟೊಳ್ಳಾದ ಒಂದು ಗುಡಾರವಿದೆ. ಅದರ ಉದ್ದ ಅರವತ್ತು ಮೈಲಿಗಳು. ಸತ್ಯವಿಶ್ವಾಸಿಗೆ ಅದರಲ್ಲಿ ಪತ್ನಿಯರು ಇರುತ್ತಾರೆ. ಸತ್ಯವಿಶ್ವಾಸಿ ಅವರನ್ನು ಸರದಿಯಂತೆ ಭೇಟಿ ಮಾಡುತ್ತಾನೆ. ಆದರೆ ಅವರು ಒಬ್ಬರನ್ನೊಬ್ಬರು ನೋಡುವುದಿಲ್ಲ
عربي ಆಂಗ್ಲ ಉರ್ದು