+ -

عَنِ النُّعْمَانِ بْنِ بَشِيرٍ رضي الله عنه قَالَ: قَالَ رَسُولُ اللهِ صَلَّى اللهُ عَلَيْهِ وَسَلَّمَ:
«إِنَّ أَهْوَنَ أَهْلِ النَّارِ عَذَابًا مَنْ لَهُ نَعْلَانِ وَشِرَاكَانِ مِنْ نَارٍ، يَغْلِي مِنْهُمَا دِمَاغُهُ كَمَا يَغْلِ الْمِرْجَلُ، مَا يَرَى أَنَّ أَحَدًا أَشَدُّ مِنْهُ عَذَابًا، وَإِنَّهُ لَأَهْوَنُهُمْ عَذَابًا».

[صحيح] - [متفق عليه] - [صحيح مسلم: 213]
المزيــد ...

ನುಅಮಾನ್ ಬಿನ್ ಬಶೀರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ನರಕವಾಸಿಗಳಲ್ಲಿ ಅತ್ಯಂತ ಕನಿಷ್ಠ ಶಿಕ್ಷೆಯನ್ನು ಅನುಭವಿಸುವವನು ಯಾರೆಂದರೆ, ಬೆಂಕಿಯಿಂದ ಮಾಡಿದ ಎರಡು ಚಪ್ಪಲಿಗಳು ಮತ್ತು ಎರಡು ಚಪ್ಪಲಿದಾರಗಳನ್ನು ಧರಿಸಿದವನು. ಅವುಗಳಿಂದ ಅವನ ಮಿದುಳು ಪಾತ್ರೆಯು ಕುದಿಯುವಂತೆ ಕುದಿಯುತ್ತದೆ. ಅವನು ತನಗಿಂತ ಹೆಚ್ಚು ಕಠಿಣವಾದ ಶಿಕ್ಷೆಯನ್ನು ಅನುಭವಿಸುವವರು ಯಾರೂ ಇರಲಾರರು ಎಂದು ಭಾವಿಸುತ್ತಾನೆ. ಆದರೆ ವಾಸ್ತವವಾಗಿ ಅವನು ಅವರಲ್ಲಿ ಅತ್ಯಂತ ಕನಿಷ್ಠ ಶಿಕ್ಷೆಯನ್ನು ಅನುಭವಿಸುವವನಾಗಿದ್ದಾನೆ."

[صحيح] - [متفق عليه] - [صحيح مسلم - 213]

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಪುನರುತ್ಥಾನ ದಿನದಂದು ನರಕವಾಸಿಗಳಲ್ಲಿ ಅತ್ಯಂತ ಕನಿಷ್ಠ ಶಿಕ್ಷೆಯನ್ನು ಅನುಭವಿಸುವವನು ಯಾರೆಂದರೆ, ಎರಡು ಚಪ್ಪಲಿಗಳು ಮತ್ತು ಚಪ್ಪಲಿದಾರಗಳನ್ನು ಧರಿಸಿದವನು. ಅವುಗಳ ಶಾಖದಿಂದ ಅವನ ಮಿದುಳು ತಾಮ್ರದ ಪಾತ್ರೆಯು ಕುದಿಯುವಂತೆ ಕುದಿಯುತ್ತದೆ. ಅವನು ತನಗಿಂತ ಹೆಚ್ಚು ಕಠಿಣವಾದ ಶಿಕ್ಷೆಯನ್ನು ಅನುಭವಿಸುವವರು ಯಾರೂ ಇರಲಾರರು ಎಂದು ಭಾವಿಸುತ್ತಾನೆ. ಆದರೆ ವಾಸ್ತವವಾಗಿ ಅವನು ಅವರಲ್ಲಿ ಅತ್ಯಂತ ಕನಿಷ್ಠ ಶಿಕ್ಷೆಯನ್ನು ಅನುಭವಿಸುವವನಾಗಿದ್ದಾನೆ. ಏಕೆಂದರೆ ಅವನು ದೈಹಿಕ ಮತ್ತು ಮಾನಸಿಕ ಶಿಕ್ಷೆಗಳೆರಡನ್ನೂ ಅನುಭವಿಸುತ್ತಿದ್ದಾನೆ.

ಹದೀಸಿನ ಪ್ರಯೋಜನಗಳು

  1. ನರಕದಲ್ಲಿನ ಈ ಭಯಾನಕ ಶಿಕ್ಷೆಯ ಬಗ್ಗೆ ಪಾಪಿಗಳು ಮತ್ತು ಸತ್ಯನಿಷೇಧಿಗಳಿಗೆ ಎಚ್ಚರಿಕೆ ನೀಡಲಾಗಿದೆ. ಅವರು ಅದಕ್ಕೆ ಕಾರಣವಾಗುವ ಕೆಲಸಗಳಿಂದ ದೂರವಿರುವುದಕ್ಕಾಗಿ.
  2. ನರಕವನ್ನು ಪ್ರವೇಶಿಸುವವರ ಶ್ರೇಣಿಗಳಲ್ಲಿ ಅವರ ಕೆಡುಕುಗಳಿಗೆ ಅನುಗುಣವಾಗಿ ವ್ಯತ್ಯಾಸಗಳಿರುತ್ತವೆ.
  3. ನರಕ ಶಿಕ್ಷೆಯ ಭಯಾನಕತೆಯನ್ನು ತಿಳಿಸಲಾಗಿದೆ. ಅಲ್ಲಾಹು ನಮ್ಮನ್ನು ಅದರಿಂದ ರಕ್ಷಿಸಲಿ.
ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ಥಾಯ್ ಪಶ್ತೋ الأسامية السويدية الأمهرية الهولندية الغوجاراتية النيبالية الدرية الرومانية المجرية الموري الولوف الأوكرانية الجورجية المقدونية الخميرية الماراثية
ಅನುವಾದಗಳನ್ನು ತೋರಿಸಿ
ಇನ್ನಷ್ಟು