عَنْ أَنَسِ بْنِ مَالِكٍ رَضيَ اللهُ عنه قَالَ: قَالَ رَسُولُ اللَّهِ صَلَّى اللهُ عَلَيْهِ وَسَلَّمَ:
«لَمَّا عُرِجَ بِي مَرَرْتُ بِقَوْمٍ لَهُمْ أَظْفَارٌ مِنْ نُحَاسٍ يَخْمُشُونَ بها وُجُوهَهُمْ وَصُدُورَهُمْ، فَقُلْتُ: مَنْ هَؤُلَاءِ يَا جِبْرِيلُ، قَالَ: هَؤُلَاءِ الَّذِينَ يَأْكُلُونَ لُحُومَ النَّاسِ، وَيَقَعُونَ فِي أَعْرَاضِهِمْ».
[حسن] - [رواه أبو داود] - [سنن أبي داود: 4878]
المزيــد ...
ಅನಸ್ ಇಬ್ನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ನನ್ನನ್ನು ಆಕಾಶಲೋಕಕ್ಕೆ ಕರೆದೊಯ್ಯಲ್ಪಟ್ಟಾಗ, ನಾನು ಒಂದು ಜನಾಂಗದ ಬಳಿಯಿಂದ ಸಾಗಿದೆನು. ಅವರಿಗೆ ತಾಮ್ರದ ಉಗುರುಗಳಿದ್ದವು. ಅವರು ಅವುಗಳಿಂದ ತಮ್ಮ ಮುಖಗಳನ್ನು ಮತ್ತು ಎದೆಗಳನ್ನು ಪರಚಿಕೊಳ್ಳುತ್ತಿದ್ದರು. ನಾನು ಕೇಳಿದೆನು: 'ಓ ಜಿಬ್ರೀಲ್, ಇವರು ಯಾರು?'. ಅವರು (ಜಿಬ್ರೀಲ್) ಹೇಳಿದರು: 'ಇವರು ಜನರ ಮಾಂಸವನ್ನು ತಿನ್ನುತ್ತಿದ್ದವರು, ಮತ್ತು ಅವರ ಘನತೆಗೆ ಧಕ್ಕೆ ತರುತ್ತಿದ್ದವರು'.
[حسن] - [رواه أبو داود] - [سنن أبي داود - 4878]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ಇಸ್ರಾ ಮತ್ತು ಮಿಅರಾಜ್‌ನ ರಾತ್ರಿಯಂದು ಅವರನ್ನು ಆಕಾಶಕ್ಕೆ ಏರಿಸಿದಾಗ, ಅವರು ಕೆಲವು ಜನರ ಬಳಿಯಿಂದ ಸಾಗಿದರು. ಅವರಿಗೆ ತಾಮ್ರದ ಉಗುರುಗಳಿದ್ದವು. ಅವರು ಅವುಗಳಿಂದ ತಮ್ಮ ಮುಖಗಳನ್ನು ಮತ್ತು ಎದೆಗಳನ್ನು ಪರಚುತ್ತಿದ್ದರು ಮತ್ತು ಹರಿಯುತ್ತಿದ್ದರು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜಿಬ್ರೀಲ್ (ಅವರ ಮೇಲೆ ಶಾಂತಿಯಿರಲಿ) ರಲ್ಲಿ ಕೇಳಿದರು: ಈ ಶಿಕ್ಷೆಗೆ ಅರ್ಹರಾಗಲು ಇವರು ಏನು ಮಾಡಿದ್ದರು? ಆಗ ಜಿಬ್ರೀಲ್ (ಅವರ ಮೇಲೆ ಶಾಂತಿಯಿರಲಿ) ಹೇಳಿದರು: ಇವರು ಜನರ ಪರನಿಂದೆ ಮಾಡುತ್ತಿದ್ದವರು (ಗೀಬತ್), ಮತ್ತು ಅನ್ಯಾಯವಾಗಿ ಅವರ ಘನತೆಯ ಬಗ್ಗೆ ಮಾತನಾಡುತ್ತಿದ್ದರು.