عن خَولة الأنصاريةِ رضي الله عنها قالت: سمعت النبي صلى الله عليه وسلم يقول:
«إِنَّ رِجَالًا يَتَخَوَّضُونَ فِي مَالِ اللهِ بِغَيْرِ حَقٍّ، فَلَهُمُ النَّارُ يَوْمَ الْقِيَامَةِ».
[صحيح] - [رواه البخاري] - [صحيح البخاري: 3118]
المزيــد ...
ಖೌಲ ಅನ್ಸಾರಿಯ್ಯ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ:
“ನಿಶ್ಚಯವಾಗಿಯೂ ಅಲ್ಲಾಹನ ಆಸ್ತಿಯಲ್ಲಿ ಲಂಗು-ಲಗಾಮಿಲ್ಲದೆ ವ್ಯವಹರಿಸುವ ಜನರು ಯಾರೋ ಅವರಿಗೆ ಪುನರುತ್ಥಾನ ದಿನದಂದು ನರಕಾಗ್ನಿಯಿದೆ.”
[صحيح] - [رواه البخاري] - [صحيح البخاري - 3118]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಮುಸಲ್ಮಾನರ ಹಣದಲ್ಲಿ ಲಂಗುಲಗಾಮಿಲ್ಲದೆ ವ್ಯವಹರಿಸುವವರು ಮತ್ತು ಅನ್ಯಾಯವಾಗಿ ತಿನ್ನುವವರ ಬಗ್ಗೆ ತಿಳಿಸುತ್ತಾರೆ. ಅನುಚಿತ ಮೂಲಗಳಿಂದ ಸಂಗ್ರಹಿಸುವ ಮತ್ತು ಸಂಪಾದಿಸುವ, ಅನುಚಿತ ವಿಷಯಗಳಿಗಾಗಿ ಖರ್ಚು ಮಾಡುವ ಹಣಗಳೆಲ್ಲವೂ ಇದರ ವ್ಯಾಪ್ತಿಯಲ್ಲಿ ಬರುತ್ತದೆ. ಅನಾಥರ ಆಸ್ತಿಯನ್ನು ತಿನ್ನುವುದು, ವಕ್ಫ್ ಆಸ್ತಿಯನ್ನು ಕಬಳಿಸುವುದು, ವಿಶ್ವಾಸದಿಂದ ಒಪ್ಪಿಸಲಾದ ವಸ್ತುಗಳನ್ನು ಹಿಂದಿರುಗಿಸದಿರುವುದು, ಸಾರ್ವಜನಿಕ ಆಸ್ತಿಯನ್ನು ಅನರ್ಹ ವಿಧಾನಗಳ ಮೂಲಕ ವಶಪಡಿಸುವುದು ಎಲ್ಲವೂ ಇದರಲ್ಲಿ ಒಳಪಡುತ್ತವೆ.
ನಂತರ, ಪುನರುತ್ಥಾನ ದಿನದಂದು ಅದಕ್ಕೆ ಪ್ರತಿಫಲವಾಗಿ ಅವರನ್ನು ನರಕಕ್ಕೆ ತಳ್ಳಲಾಗುತ್ತದೆ ಎಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುತ್ತಾರೆ.