عَنْ أَبِي هُرَيْرَةَ رضي الله عنه عَنِ النَّبِيِّ صلى الله عليه وسلم قَالَ:
«إِيَّاكُمْ وَالظَّنَّ؛ فَإِنَّ الظَّنَّ أَكْذَبُ الْحَدِيثِ، وَلَا تَحَسَّسُوا، وَلَا تَجَسَّسُوا، وَلَا تَحَاسَدُوا، وَلَا تَدَابَرُوا، وَلَا تَبَاغَضُوا، وَكُونُوا عِبَادَ اللهِ إِخْوَانًا».
[صحيح] - [متفق عليه] - [صحيح البخاري: 6064]
المزيــد ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
“ಗುಮಾನಿಯ ಬಗ್ಗೆ ಎಚ್ಚರದಿಂದಿರಿ! ಏಕೆಂದರೆ ಗುಮಾನಿಯು ಅತಿದೊಡ್ಡ ಸುಳ್ಳು ಮಾತಾಗಿದೆ. ನೀವು ಒಬ್ಬರನ್ನೊಬ್ಬರು ಬೇಹುಗಾರಿಕೆ ಮಾಡಬೇಡಿ, ಒಬ್ಬರು ಇನ್ನೊಬ್ಬರ ಖಾಸಗಿ ವಿಚಾರಗಳನ್ನು ಕೆದಕಬೇಡಿ, ಒಬ್ಬರನ್ನೊಬ್ಬರು ಅಸೂಯೆ ಪಡಬೇಡಿ, ಒಬ್ಬರಿಗೊಬ್ಬರು ಮುಖ ತಿರುಗಿಸಬೇಡಿ, ಒಬ್ಬರನ್ನೊಬ್ಬರು ದ್ವೇಷಿಸಬೇಡಿ. ಓ ಅಲ್ಲಾಹನ ದಾಸರೇ, ನೀವು ಸಹೋದರರಾಗಿರಿ."
[صحيح] - [متفق عليه] - [صحيح البخاري - 6064]
ಮುಸ್ಲಿಮರಲ್ಲಿ ಒಡಕು ಮತ್ತು ದ್ವೇಷಕ್ಕೆ ಕಾರಣವಾಗುವ ಕೆಲವು ವಿಚಾರಗಳನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿರೋಧಿಸುತ್ತಾರೆ ಮತ್ತು ಎಚ್ಚರಿಸುತ್ತಾರೆ. ಅವುಗಳಲ್ಲಿ ಕೆಲವು ಹೀಗಿವೆ:
ಗುಮಾನಿ: ಅಂದರೆ ಯಾವುದೇ ಆಧಾರವಿಲ್ಲದೆ ಹೃದಯಗಳಲ್ಲಿ ಮೂಡುವ ಕೆಲವು ಆರೋಪಗಳಾಗಿವೆ. ಅವು ಅತಿದೊಡ್ಡ ಸುಳ್ಳು ಮಾತುಗಳಾಗಿವೆಯೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿವರಿಸಿದ್ದಾರೆ.
ಬೇಹುಗಾರಿಕೆ: ಅಂದರೆ ಕಣ್ಣು ಮತ್ತು ಕಿವಿಗಳ ಮೂಲಕ ಜನರ ಖಾಸಗಿ ವಿಷಯಗಳನ್ನು ತನಿಖೆ ಮಾಡುವುದು.
ಕೆದಕುವುದು: ಅಂದರೆ ಅತ್ಯಂತ ಸೂಕ್ಷ್ಮ ವಿಷಯಗಳನ್ನು ಅನ್ವೇಷಿಸಿ ತಿಳಿಯುವುದು. ಇದು ಹೆಚ್ಚಾಗಿ ಕೆಟ್ಟ ಉದ್ದೇಶಗಳಿಗೆ ಬಳಕೆಯಾಗುತ್ತದೆ.
ಅಸೂಯೆ: ಅಂದರೆ ಇತರರಿಗೆ ಒಳಿತುಂಟಾಗುವುದನ್ನು ದ್ವೇಷಿಸುವುದು.
ಒಬ್ಬರಿಗೊಬ್ಬರು ಮುಖ ತಿರುಗಿಸುವುದು: ಅಂದರೆ ಒಬ್ಬರು ಇನ್ನೊಬ್ಬರನ್ನು ಕಡೆಗಣಿಸುವುದು, ಸಲಾಂ ಹೇಳದಿರುವುದು ಮತ್ತು ಮುಸ್ಲಿಂ ಸಹೋದರರನ್ನು ಭೇಟಿಯಾಗದಿರುವುದು.
ಒಬ್ಬರನ್ನೊಬ್ಬರು ದ್ವೇಷಿಸುವುದು: ಅಂದರೆ ಇಷ್ಟಪಡದಿರುವುದು ಮತ್ತು ಅಸಹ್ಯಪಡುವುದು. ಉದಾಹರಣೆಗೆ, ಇತರರಿಗೆ ತೊಂದರೆ ಕೊಡುವುದು, ಮುಖ ಸಿಂಡರಿಸುವುದು ಮತ್ತು ಕೆಟ್ಟದಾಗಿ ವರ್ತಿಸುವುದು.
ನಂತರ ಮುಸಲ್ಮಾನರು ಪರಸ್ಪರ ತಮ್ಮ ಸಂಬಂಧಗಳನ್ನು ಸುಧಾರಿಸಬಹುದಾದ ಸಮಗ್ರ ಆಜ್ಞೆಯನ್ನು ನೀಡುತ್ತಾ ಅವರು ಹೇಳುತ್ತಾರೆ: "ಓ ಅಲ್ಲಾಹನ ದಾಸರೇ, ನೀವು ಸಹೋದರರಾಗಿರಿ." ಸಹೋದರತ್ವವೆಂದರೆ, ಜನರ ನಡುವಿನ ಸಂಬಂಧಗಳನ್ನು ಸರಿಪಡಿಸುವ ಕೊಂಡಿಯಾಗಿದ್ದು, ಅದು ಅವರ ನಡುವೆ ಪ್ರೀತಿ-ವಾತ್ಸಲ್ಯವನ್ನು ಹೆಚ್ಚಿಸುತ್ತದೆ.