ಹದೀಸ್‌ಗಳ ಪಟ್ಟಿ

"ಮಹಾಪಾಪಗಳಲ್ಲಿ ಅತಿದೊಡ್ಡ ಪಾಪದ ಬಗ್ಗೆ ನಾನು ನಿಮಗೆ ತಿಳಿಸಿಕೊಡಲೇ?*" ಅವರು ಇದನ್ನು ಮೂರು ಬಾರಿ ಪುನರುಚ್ಛರಿಸಿದರು. ಸಹಾಬಿಗಳು ಹೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ತಿಳಿಸಿಕೊಡಿ." ಅವರು ಹೇಳಿದರು: "ಅಲ್ಲಾಹನೊಡನೆ ಸಹಭಾಗಿತ್ವ ಮಾಡುವುದು ಮತ್ತು ತಂದೆ-ತಾಯಿಗೆ ಅವಿಧೇಯತೆ ತೋರುವುದು." ಒರಗಿ ಕುಳಿತಿದ್ದ ಅವರು ನೇರವಾಗಿ ಕುಳಿತು ಹೇಳಿದರು: "ಮತ್ತು ಸುಳ್ಳು ಹೇಳಿಕೆ ನೀಡುವುದು." "ಅವರು ಮೌನ ವಹಿಸಿದ್ದರೆ ಚೆನ್ನಾಗಿತ್ತು" ಎಂದು ನಾವು ಹೇಳುವ ತನಕ ಅವರು ಪುನರುಚ್ಛರಿಸುತ್ತಲೇ ಇದ್ದರು.
عربي ಆಂಗ್ಲ ಉರ್ದು
“ಒಬ್ಬ ವ್ಯಕ್ತಿ ತನ್ನ ಸಹೋದರನನ್ನು ಪ್ರೀತಿಸಿದರೆ, ತಾನು ಅವನನ್ನು ಪ್ರೀತಿಸುತ್ತೇನೆಂದು ಅವನಿಗೆ ತಿಳಿಸಬೇಕು.”
عربي ಆಂಗ್ಲ ಉರ್ದು
“ಏಳು ವಿನಾಶಕಾರಿ ಪಾಪಗಳಿಂದ ದೂರವಿರಿ*” ಅವರು (ಸಂಗಡಿಗರು) ಕೇಳಿದರು: “ಓ ಅಲ್ಲಾಹನ ಸಂದೇಶವಾಹಕರೇ! ಅವು ಯಾವುವು?” ಅವರು ಹೇಳಿದರು: “ಅಲ್ಲಾಹನೊಂದಿಗೆ ಸಹಭಾಗಿತ್ವ (ಶಿರ್ಕ್) ಮಾಡುವುದು; ಮಾಟಗಾರಿಕೆ (ವಾಮಾಚಾರ) ಮಾಡುವುದು; ಅಲ್ಲಾಹು (ಹತ್ಯೆ ಮಾಡುವುದು) ನಿಷೇಧಿಸಿದ ಮನುಷ್ಯ ಜೀವಿಯನ್ನು ನೈತಿಕ ಹಕ್ಕಿನಿಂದಲ್ಲದೆ ಹತ್ಯೆ ಮಾಡುವುದು; ಬಡ್ಡಿ ತಿನ್ನುವುದು; ಅನಾಥರ ಆಸ್ತಿಯನ್ನು ತಿನ್ನುವುದು; ಯುದ್ಧಭೂಮಿಯಿಂದ ಪಲಾಯನ ಮಾಡುವುದು; ಮತ್ತು ಪರಿಶುದ್ಧ, ಮುಗ್ಧ ಹಾಗೂ ಸತ್ಯವಿಶ್ವಾಸಿಗಳಾದ ಮಹಿಳೆಯರ ಮೇಲೆ ದುರಾರೋಪ ಹೊರಿಸುವುದು.”
عربي ಆಂಗ್ಲ ಉರ್ದು
“ಸೌಮ್ಯವಾಗಿ ಮಾರಾಟ ಮಾಡುವ, ಖರೀದಿಸುವ ಮತ್ತು ಸಾಲ ಮರುಪಾವತಿಯನ್ನು ಕೇಳುವ ವ್ಯಕ್ತಿಗೆ ಅಲ್ಲಾಹು ದಯೆ ತೋರಲಿ.”
عربي ಆಂಗ್ಲ ಉರ್ದು
. : .
عربي ಆಂಗ್ಲ ಉರ್ದು
"ನಿಶ್ಚಯವಾಗಿಯೂ ಅಲ್ಲಾಹು ಪ್ರತಿಯೊಂದು ವಿಷಯದಲ್ಲೂ ಉತ್ತಮವಾಗಿ ವರ್ತಿಸುವುದನ್ನು ಕಡ್ಡಾಯಗೊಳಿಸಿದ್ದಾನೆ*. ಆದ್ದರಿಂದ ನೀವು (ಪ್ರತೀಕಾರಕ್ಕಾಗಿ) ಕೊಲ್ಲುವಾಗ ಉತ್ತಮ ರೀತಿಯಲ್ಲಿ ಕೊಲ್ಲಿರಿ. ನೀವು (ಪ್ರಾಣಿಗಳನ್ನು ಮಾಂಸಕ್ಕಾಗಿ) ಕೊಯ್ಯುವಾಗ ಉತ್ತಮ ರೀತಿಯಲ್ಲಿ ಕೊಯ್ಯಿರಿ. ನಿಮ್ಮಲ್ಲೊಬ್ಬನು ಕೊಯ್ಯುವಾಗ ಚೂರಿಯನ್ನು ಹರಿತಗೊಳಿಸಲಿ ಮತ್ತು ಪ್ರಾಣಿಗೆ ನಿರಾಳತೆಯನ್ನು ನೀಡಲಿ."
عربي ಆಂಗ್ಲ ಉರ್ದು
ಒಬ್ಬ ವ್ಯಕ್ತಿ ಪ್ರವಾದಿಯವರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನನಗೆ ಹಿತವಚನ ನೀಡಿರಿ." ಅವರು ಹೇಳಿದರು: "@ಕೋಪಗೊಳ್ಳಬೇಡಿ*." ಆ ವ್ಯಕ್ತಿ ಹಲವು ಬಾರಿ ಅದೇ ಪ್ರಶ್ನೆ ಕೇಳಿದಾಗಲೂ ಪ್ರವಾದಿಯವರು ಹೇಳಿದರು: "ಕೋಪಗೊಳ್ಳಬೇಡಿ."
عربي ಆಂಗ್ಲ ಉರ್ದು
. .
عربي ಆಂಗ್ಲ ಉರ್ದು
"ಸೌಮ್ಯತೆಯಿಂದ ವಂಚಿತನಾದವನು ಒಳಿತಿನಿಂದಲೂ ವಂಚಿತನಾಗಿದ್ದಾನೆ."
عربي ಆಂಗ್ಲ ಉರ್ದು
“ಗುಮಾನಿಯ ಬಗ್ಗೆ ಎಚ್ಚರದಿಂದಿರಿ! ಏಕೆಂದರೆ ಗುಮಾನಿಯು ಅತಿದೊಡ್ಡ ಸುಳ್ಳು ಮಾತಾಗಿದೆ.* ನೀವು ಒಬ್ಬರನ್ನೊಬ್ಬರು ಬೇಹುಗಾರಿಕೆ ಮಾಡಬೇಡಿ, ಒಬ್ಬರು ಇನ್ನೊಬ್ಬರ ಖಾಸಗಿ ವಿಚಾರಗಳನ್ನು ಕೆದಕಬೇಡಿ, ಒಬ್ಬರನ್ನೊಬ್ಬರು ಅಸೂಯೆ ಪಡಬೇಡಿ, ಒಬ್ಬರಿಗೊಬ್ಬರು ಮುಖ ತಿರುಗಿಸಬೇಡಿ, ಒಬ್ಬರನ್ನೊಬ್ಬರು ದ್ವೇಷಿಸಬೇಡಿ. ಓ ಅಲ್ಲಾಹನ ದಾಸರೇ, ನೀವು ಸಹೋದರರಾಗಿರಿ."
عربي ಆಂಗ್ಲ ಉರ್ದು
.
عربي ಆಂಗ್ಲ ಉರ್ದು
.
عربي ಆಂಗ್ಲ ಉರ್ದು
ಒಬ್ಬ ವ್ಯಕ್ತಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ಹೇಳಿದರು: "ನನ್ನ ಒಂಟೆ ಸುಸ್ತಾಗಿಬಿಟ್ಟಿದೆ. ಆದ್ದರಿಂದ ನನಗೆ ಸವಾರಿ ಮಾಡುವ ಒಂದು ಒಂಟೆಯನ್ನು ಕೊಡಿ." ಅವರು ಹೇಳಿದರು: "ನನ್ನ ಬಳಿ ಒಂಟೆಯಿಲ್ಲ." ಆಗ ಆ ವ್ಯಕ್ತಿ ಹೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ಅವನಿಗೆ ಒಂಟೆ ಕೊಡುವ ವ್ಯಕ್ತಿಯನ್ನು ನಾನು ತೋರಿಸುತ್ತೇನೆ." ಆಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "@ಯಾರು ಒಳಿತನ್ನು ತೋರಿಸಿಕೊಡುತ್ತಾರೋ ಅವನಿಗೆ ಆ ಒಳಿತು ಮಾಡಿದ ವ್ಯಕ್ತಿಗೆ ದೊರಕುವಷ್ಟೇ ಪ್ರತಿಫಲ ದೊರಕುತ್ತದೆ*."
عربي ಆಂಗ್ಲ ಉರ್ದು
“ಚಾಡಿಕೋರ ಸ್ವರ್ಗವನ್ನು ಪ್ರವೇಶಿಸುವುದಿಲ್ಲ.”
عربي ಆಂಗ್ಲ ಉರ್ದು
“ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಡುವವನು ಒಳ್ಳೆಯ ಮಾತನ್ನೇ ಆಡಲಿ ಅಥವಾ ಮೌನವಾಗಿರಲಿ*. ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಡುವವನು ತನ್ನ ನೆರೆಮನೆಯವನನ್ನು ಗೌರವಿಸಲಿ. ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಡುವವನು ತನ್ನ ಅತಿಥಿಗಳನ್ನು ಗೌರವಿಸಲಿ.”
عربي ಆಂಗ್ಲ ಉರ್ದು
“ಯಾರು ಇತರರಿಗೆ ದಯೆ ತೋರುವುದಿಲ್ಲವೋ ಅವರಿಗೆ ಸರ್ವಶಕ್ತನಾದ ಅಲ್ಲಾಹು ದಯೆ ತೋರುವುದಿಲ್ಲ.”
عربي ಆಂಗ್ಲ ಉರ್ದು
"ಅಲ್ಲಾಹು ಜನರ ಪೈಕಿ ಅತಿಯಾಗಿ ದ್ವೇಷಿಸುವುದು ಮಹಾ ಜಗಳಗಂಟನನ್ನಾಗಿದೆ."
عربي ಆಂಗ್ಲ ಉರ್ದು
:
عربي ಆಂಗ್ಲ ಉರ್ದು
ಒಬ್ಬ ವ್ಯಕ್ತಿ ತನ್ನ ಸಹೋದರನಿಗೆ ಸಂಕೋಚ ಪಡಬಾರದೆಂದು ಬುದ್ಧಿ ಹೇಳುವುದನ್ನು ಕೇಳಿದಾಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "@ಸಂಕೋಚವು ಸತ್ಯವಿಶ್ವಾಸದ ಒಂದು ಭಾಗವಾಗಿದೆ*."
عربي ಆಂಗ್ಲ ಉರ್ದು
.
عربي ಆಂಗ್ಲ ಉರ್ದು
"ಯಾರು ತನ್ನ ಸಹೋದರನ ಘನತೆಯನ್ನು ಕಾಪಾಡುತ್ತಾನೋ, ಅವನ ಮುಖವನ್ನು ಪುನರುತ್ಥಾನ ದಿನದಂದು ಅಲ್ಲಾಹು ನರಕದಿಂದ ಕಾಪಾಡುತ್ತಾನೆ."
عربي ಆಂಗ್ಲ ಉರ್ದು
"ನಿಶ್ಚಯವಾಗಿಯೂ ಅಲ್ಲಾಹು ದೇವಭಯವುಳ್ಳ, ಸ್ವಾವಲಂಬಿಯಾದ ಮತ್ತು ಗಮನ ಸೆಳೆಯಲು ಬಯಸದ ದಾಸನನ್ನು ಪ್ರೀತಿಸುತ್ತಾನೆ."
عربي ಆಂಗ್ಲ ಉರ್ದು
.
عربي ಆಂಗ್ಲ ಉರ್ದು
"ನಿಶ್ಚಯವಾಗಿಯೂ ಯಾವ ವಿಷಯದಲ್ಲಿ ಮೃದುತ್ವವಿರುತ್ತದೋ ಅದು ಅದನ್ನು ಅಂದಗೊಳಿಸುತ್ತದೆ; ಮತ್ತು ಯಾವ ವಿಷಯದಿಂದ ಅದನ್ನು ತೆಗೆಯಲಾಗುತ್ತದೋ ಅದು ಅದನ್ನು ಅಂದಗೆಡಿಸುತ್ತದೆ."
عربي ಆಂಗ್ಲ ಉರ್ದು
"ನಿಶ್ಚಯವಾಗಿಯೂ ಒಬ್ಬ ಸತ್ಯವಿಶ್ವಾಸಿ ತನ್ನ ಒಳ್ಳೆಯ ನಡವಳಿಕೆಯಿಂದ, ಉಪವಾಸ ಆಚರಿಸುವವನ ಮತ್ತು ರಾತ್ರಿಯಲ್ಲಿ ನಮಾಝ್ ಮಾಡುವವನ ಪದವಿಯನ್ನು ಪಡೆಯುತ್ತಾನೆ."
عربي ಆಂಗ್ಲ ಉರ್ದು
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಶ್ಲೀಲವಾಗಿರಲಿಲ್ಲ ಮತ್ತು ಅಶ್ಲೀಲ ಭಾಷೆಯನ್ನು ಬಳಸುತ್ತಿರಲಿಲ್ಲ. ಅವರು ಹೇಳುತ್ತಿದ್ದರು: "@ನಿಶ್ಚಯವಾಗಿಯೂ ನಿಮ್ಮಲ್ಲಿ ಅತ್ಯುತ್ತಮರು ಉತ್ತಮ ನಡವಳಿಕೆಯನ್ನು ಹೊಂದಿರುವವರು."
عربي ಆಂಗ್ಲ ಉರ್ದು
.
عربي ಆಂಗ್ಲ ಉರ್ದು
"ಸುಲಭಗೊಳಿಸಿರಿ, ಕಷ್ಟಗೊಳಿಸಬೇಡಿ; ಸಿಹಿಸುದ್ದಿ ತಿಳಿಸಿರಿ, ಗಾಬರಿಗೊಳಿಸಬೇಡಿ."
عربي ಆಂಗ್ಲ ಉರ್ದು
. .
عربي ಆಂಗ್ಲ ಉರ್ದು
"ತಲೆಯ ಒಂದು ಭಾಗವನ್ನು ಬೋಳಿಸಿ ಇನ್ನೊಂದು ಭಾಗವನ್ನು ಬೋಳಿಸದಿರುವುದನ್ನು ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿರೋಧಿಸಿದ್ದಾರೆ."
عربي ಆಂಗ್ಲ ಉರ್ದು
:
عربي ಆಂಗ್ಲ ಉರ್ದು
. . .
عربي ಆಂಗ್ಲ ಉರ್ದು
. .
عربي ಆಂಗ್ಲ ಉರ್ದು
.
عربي ಆಂಗ್ಲ ಉರ್ದು
:
عربي ಆಂಗ್ಲ ಉರ್ದು
"ತನಗಾಗಿ ಇಷ್ಟಪಡುವುದನ್ನು ತನ್ನ ಸಹೋದರನಿಗಾಗಿಯೂ ಇಷ್ಟಪಡುವ ತನಕ ನಿಮ್ಮಲ್ಲಿ ಯಾರೂ (ನಿಜವಾದ) ಸತ್ಯವಿಶ್ವಾಸಿಯಾಗುವುದಿಲ್ಲ."
عربي ಆಂಗ್ಲ ಉರ್ದು
"ಮುಸಲ್ಮಾನನನ್ನು ನಿಂದಿಸುವುದು ಅವಿಧೇಯತೆಯಾಗಿದೆ ಮತ್ತು ಅವನೊಡನೆ ಹೋರಾಡುವುದು ಸತ್ಯನಿಷೇಧವಾಗಿದೆ."
عربي ಆಂಗ್ಲ ಉರ್ದು
.
عربي ಆಂಗ್ಲ ಉರ್ದು
. . .
عربي ಆಂಗ್ಲ ಉರ್ದು
"ದಿವಾಳಿ ಯಾರೆಂದು ನಿಮಗೆ ತಿಳಿದಿದೆಯೇ?"* ಅವರು (ಸ್ವಹಾಬಗಳು) ಹೇಳಿದರು: "ನಮ್ಮಲ್ಲಿ ದಿವಾಳಿ ಯಾರೆಂದರೆ ಹಣ ಅಥವಾ ಸಾಮಾನುಗಳು ಇಲ್ಲದವನು." ಅವರು ಹೇಳಿದರು: "ಖಂಡಿತವಾಗಿಯೂ, ನನ್ನ ಸಮುದಾಯದಲ್ಲಿ ದಿವಾಳಿ ಯಾರೆಂದರೆ, ಪುನರುತ್ಥಾನದ ದಿನದಂದು ನಮಾಝ್, ಉಪವಾಸ ಮತ್ತು ಝಕಾತ್‌ಗಳೊಂದಿಗೆ ಬರುವವನು. ಆದರೆ, ಅದೇ ಸಮಯ ಅವನು ಇತರರನ್ನು ನಿಂದಿಸಿ, ಇತರರ ಮೇಲೆ ಸುಳ್ಳಾರೋಪ ಹೊರಿಸಿ, ಇತರರ ರಕ್ತ ಚೆಲ್ಲಿ ಮತ್ತು ಇತರರಿಗೆ ಥಳಿಸಿದಂತಹ ಪಾಪಗಳೊಂದಿಗೂ ಬರುತ್ತಾನೆ. ಆಗ ಅವನ ಸತ್ಕರ್ಮಗಳಿಂದ ಕೆಲವನ್ನು ನೀಡಿ ಅವರಿಗೆ ನ್ಯಾಯ ಒದಗಿಸಲಾಗುವುದು. ಅವರೆಲ್ಲರಿಗೂ ನ್ಯಾಯ ಒದಗಿಸುವ ಮೊದಲೇ ಇವನ ಸತ್ಕರ್ಮಗಳು ಮುಗಿದು ಬಿಟ್ಟರೆ, ಅವರ ಕೆಲವು ಪಾಪಗಳನ್ನು ತೆಗೆದು ಇವನ ಮೇಲೆ ಹೊರಿಸಲಾಗುವುದು. ನಂತರ ಅವನನ್ನು ನರಕಕ್ಕೆ ಎಸೆಯಲಾಗುವುದು."
عربي ಆಂಗ್ಲ ಉರ್ದು
"ಒಬ್ಬ ಪುರುಷನು ಇನ್ನೊಬ್ಬ ಪುರುಷನ ಖಾಸಗಿ ಭಾಗಗಳನ್ನು ಮತ್ತು ಒಬ್ಬ ಮಹಿಳೆ ಇನ್ನೊಬ್ಬ ಮಹಿಳೆಯ ಖಾಸಗಿ ಭಾಗಗಳನ್ನು ನೋಡಬಾರದು.* ಒಬ್ಬ ಪುರುಷನು ಇನ್ನೊಬ್ಬ ಪುರುಷನ ಜೊತೆಗೆ ಒಂದೇ ಬಟ್ಟೆಯಲ್ಲಿ ಮಲಗಬಾರದು. ಒಬ್ಬ ಮಹಿಳೆ ಇನ್ನೊಬ್ಬ ಮಹಿಳೆಯ ಜೊತೆಗೆ ಒಂದೇ ಬಟ್ಟೆಯಲ್ಲಿ ಮಲಗಬಾರದು."
عربي ಆಂಗ್ಲ ಉರ್ದು
.
عربي ಆಂಗ್ಲ ಉರ್ದು
"ನನ್ನ ಮೇಲೆ ಮನಃಪೂರ್ವಕ ಸುಳ್ಳು ಹೇಳುವವರು ನರಕಾಗ್ನಿಯಲ್ಲಿ ಅವರ ಆಸನವನ್ನು ಸಿದ್ಧಪಡಿಸಿಕೊಳ್ಳಲಿ."
عربي ಆಂಗ್ಲ ಉರ್ದು