عَنْ أَبِي الدَّرْدَاءِ رضي الله عنه: سَمِعْتُ رَسُولَ اللهِ صَلَّى اللهُ عَلَيْهِ وَسَلَّمَ يَقُولُ:
«إِنَّ اللَّعَّانِينَ لَا يَكُونُونَ شُهَدَاءَ وَلَا شُفَعَاءَ يَوْمَ الْقِيَامَةِ».
[صحيح] - [رواه مسلم] - [صحيح مسلم: 2598]
المزيــد ...
ಅಬೂ ದರ್ದಾಅ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ:
"ಅತಿಯಾಗಿ ಶಾಪ ಹಾಕುವವರು ಪುನರುತ್ಥಾನ ದಿನದಂದು ಸಾಕ್ಷಿಗಳು ಅಥವಾ ಶಿಫಾರಸ್ಸು ಮಾಡುವವರು ಆಗುವುದಿಲ್ಲ."
[صحيح] - [رواه مسلم] - [صحيح مسلم - 2598]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಶಾಪಕ್ಕೆ ಅರ್ಹರಲ್ಲದವರ ಮೇಲೆ ಯಾರು ಅತಿಯಾಗಿ ಶಾಪ ಹಾಕುತ್ತಾರೋ ಅವರು ಎರಡು ಶಿಕ್ಷೆಗಳಿಗೆ ಅರ್ಹರಾಗುತ್ತಾರೆ: ಮೊದಲನೆಯದು: ಅವರು ಪುನರುತ್ಥಾನ ದಿನದಂದು ಪ್ರವಾದಿಗಳು ತಮ್ಮ ಸಂದೇಶಗಳನ್ನು ತಲುಪಿಸಿದ ಬಗ್ಗೆ ಸಮುದಾಯಗಳ ಮೇಲೆ ಸಾಕ್ಷಿಯಾಗುವುದಿಲ್ಲ. ಅವರ ದುಷ್ಟತನದಿಂದಾಗಿ ಇಹಲೋಕದಲ್ಲಿ ಅವರ ಸಾಕ್ಷ್ಯವು ಸ್ವೀಕರಿಸಲ್ಪಡುವುದಿಲ್ಲ. ಅವರಿಗೆ ಅಲ್ಲಾಹನ ಮಾರ್ಗದಲ್ಲಿ ಹುತಾತ್ಮರಾಗುವ ಶಹೀದ್ ಪದವಿಯನ್ನು ನೀಡಲಾಗುವುದಿಲ್ಲ. ಎರಡನೆಯದು: ಪುನರುತ್ಥಾನ ದಿನದಂದು ನರಕಕ್ಕೆ ಅರ್ಹರಾದ ತಮ್ಮ ಸಹೋದರರಿಗಾಗಿ ಸತ್ಯವಿಶ್ವಾಸಿಗಳು ಶಿಫಾರಸ್ಸು ಮಾಡುವಾಗ ಇವರಿಗೆ ಶಿಫಾರಸ್ಸು ಮಾಡುವ ಅಧಿಕಾರವಿರುವುದಿಲ್ಲ.