+ -

عَنْ أَبي مَسْعُودٍ رضي الله عنه قَالَ: قَالَ النَّبِيُّ صَلَّى اللهُ عَلَيْهِ وَسَلَّمَ:
«إِنَّ مِمَّا أَدْرَكَ النَّاسُ مِنْ كَلاَمِ النُّبُوَّةِ الأُولَى: إِذَا لَمْ تَسْتَحْيِ فَاصْنَعْ مَا شِئْتَ».

[صحيح] - [رواه البخاري] - [صحيح البخاري: 6120]
المزيــد ...

ಅಬೂ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಜನರು ಪೂರ್ವ ಪ್ರವಾದಿಗಳಿಂದ ಪಡೆದ ಮಾತುಗಳಲ್ಲಿ ಒಂದು ಏನೆಂದರೆ: ನಿನಗೆ ನಾಚಿಕೆ ಇಲ್ಲದಿದ್ದರೆ ನೀನಿಚ್ಛಿಸುವುದನ್ನು ಮಾಡು."

[صحيح] - [رواه البخاري] - [صحيح البخاري - 6120]

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಪೂರ್ವ ಪ್ರವಾದಿಗಳ ಹಿತವಚನಗಳ ಪೈಕಿ ಜನರ ನಡುವೆ ಪ್ರಸಾರವಾದ ಮತ್ತು ಜನರು ತಲೆಮಾರುಗಳ ನಂತರ ತಲೆಮಾರುಗಳಿಗೆ ಹಸ್ತಾಂತರಿಸಿ, ಈ ಸಮುದಾಯದವರೆಗೆ ತಲುಪಿದ ಒಂದು ಹಿತವಚನ ಹೀಗಿದೆ: ಅದೇನೆಂದರೆ, ನೀವು ಮಾಡಲು ಉದ್ದೇಶಿಸುವ ಕಾರ್ಯದ ಬಗ್ಗೆ ಆಲೋಚಿಸಿ. ಅದು ನಾಚಿಕೆಯ ಕಾರ್ಯವಲ್ಲದಿದ್ದರೆ ಮಾಡಿರಿ. ನಾಚಿಕೆಯ ಕಾರ್ಯವಾಗಿದ್ದರೆ ಮಾಡಬೇಡಿ. ಏಕೆಂದರೆ, ನಾಚಿಕೆಯು ಕೆಟ್ಟಕೃತ್ಯಗಳನ್ನು ಮಾಡದಂತೆ ತಡೆಯುತ್ತದೆ. ನಾಚಿಕೆಯೆಂಬುದು ಇಲ್ಲದಿದ್ದರೆ ಯಾವುದೇ ಅಶ್ಲೀಲ ಮತ್ತು ದುಷ್ಟಕೃತ್ಯಗಳನ್ನು ಮಾಡಬಹುದಾಗಿದೆ.

ಹದೀಸಿನ ಪ್ರಯೋಜನಗಳು

  1. ನಾಚಿಕೆಯು ಉದಾತ್ತ ನಡವಳಿಕೆಯ ಮೂಲ ಅಡಿಪಾಯವಾಗಿದೆ.
  2. ನಾಚಿಕೆಯು ಸಂದೇಶವಾಹಕರುಗಳ ಗುಣವಾಗಿದೆ. ಅದು ಅವರಿಂದ ಉತ್ತರಾಧಿಕಾರವಾಗಿ ಬಂದಿದೆ.
  3. ಒಬ್ಬ ಮುಸಲ್ಮಾನನು ಸುಂದರವಾದ ಮತ್ತು ಅಂದವಾದ ಕಾರ್ಯಗಳನ್ನು ಮಾಡಲು ಮತ್ತು ಕೆಟ್ಟ ಹಾಗೂ ಹೊಲಸು ಕಾರ್ಯಗಳನ್ನು ತೊರೆಯಲು ನಾಚಿಕೆಯು ಕಾರಣವಾಗುತ್ತದೆ.
  4. ನವವಿ ಹೇಳಿದರು: "ಇದು ಅನುಮತಿ ನೀಡುವ ರೂಪದಲ್ಲಿರುವ ಆಜ್ಞೆಯಾಗಿದೆ. ಅಂದರೆ, ನೀವೊಂದು ಕಾರ್ಯವನ್ನು ಮಾಡಲು ಉದ್ದೇಶಿಸಿದರೆ, ಆ ಕಾರ್ಯವನ್ನು ಅಲ್ಲಾಹನ ಮುಂದೆ ಮತ್ತು ಜನರ ಮುಂದೆ ಮಾಡಲು ನೀವು ನಾಚುವುದಿಲ್ಲವಾದರೆ ಮಾಡಿರಿ. ನಾಚುವುದಾದರೆ ಮಾಡಬೇಡಿ. ಇದು ಇಸ್ಲಾಂ ಧರ್ಮದ ತಿರುಳು. ಇದರ ತಾತ್ಪರ್ಯವೇನೆಂದರೆ, ಕಡ್ಡಾಯವಾಗಿರುವ ಮತ್ತು ಪ್ರೋತ್ಸಾಹಕರವಾಗಿರುವ ಕಾರ್ಯಗಳನ್ನು ತೊರೆಯುವುದರಿಂದ ನಾಚಿಕೆಪಡಬೇಕು ಮತ್ತು ನಿಷೇಧಿಸಲಾದ ಹಾಗೂ ಅಸಹ್ಯಪಡಲಾದ ಕಾರ್ಯಗಳನ್ನು ಮಾಡಲು ನಾಚಿಕೆಪಡಬೇಕು. ಇನ್ನು ಅನುಮತಿಯಿರುವ ಕಾರ್ಯದ ಬಗ್ಗೆ ಹೇಳುವುದಾದರೆ ಅದನ್ನು ಮಾಡಲು ಅಥವಾ ತೊರೆಯಲು ನಾಚಿಕೆ ಪಡುವುದು ಸಮ್ಮತಾರ್ಹ. ಒಟ್ಟಿನಲ್ಲಿ, ಈ ಹದೀಸ್ ಪಂಚ ನಿಯಮಗಳನ್ನು ಒಳಗೊಂಡಿದೆ. ಹೀಗೆ ಹೇಳಲಾಗುತ್ತದೆ: ಇದು ಬೆದರಿಕೆಯ ರೂಪದಲ್ಲಿರುವ ಆಜ್ಞೆಯಾಗಿದೆ. ಅಂದರೆ, ನಿಮಗೆ ನಾಚಿಕೆಯಿಲ್ಲದಿದ್ದರೆ, ನಿಮಗೆ ಇಷ್ಟವಿರುವುದನ್ನು ಮಾಡಿರಿ. ಅಲ್ಲಾಹು ನಿಮಗೆ ಅದಕ್ಕೆ ತಕ್ಕ ಪ್ರತಿಫಲ ನೀಡುವನು. ಹೀಗೂ ಹೇಳಲಾಗುತ್ತದೆ: ಇದು ತಿಳುವಳಿಕೆ ನೀಡುವ ರೂಪದಲ್ಲಿರುವ ಆಜ್ಞೆಯಾಗಿದೆ. ಅಂದರೆ, ನಾಚಿಕೆಯಿಲ್ಲದವನು ಅವನಿಗೆ ತೋಚಿದ್ದನ್ನು ಮಾಡುತ್ತಾನೆ."
ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ಥಾಯ್ ಜರ್ಮನ್ ಪಶ್ತೋ الأسامية السويدية الهولندية الغوجاراتية القيرقيزية النيبالية الرومانية المجرية الموري المالاجاشية الأورومو الأوكرانية الجورجية المقدونية
ಅನುವಾದಗಳನ್ನು ತೋರಿಸಿ
ಇನ್ನಷ್ಟು