عن جابر رضي الله عنه أن رسول الله صلى الله عليه وسلم قال:
«رَحِمَ اللهُ رَجُلًا سَمْحًا إِذَا بَاعَ، وَإِذَا اشْتَرَى، وَإِذَا اقْتَضَى».
[صحيح] - [رواه البخاري] - [صحيح البخاري: 2076]
المزيــد ...
ಜಾಬಿರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
“ಸೌಮ್ಯವಾಗಿ ಮಾರಾಟ ಮಾಡುವ, ಖರೀದಿಸುವ ಮತ್ತು ಸಾಲ ಮರುಪಾವತಿಯನ್ನು ಕೇಳುವ ವ್ಯಕ್ತಿಗೆ ಅಲ್ಲಾಹು ದಯೆ ತೋರಲಿ.”
[صحيح] - [رواه البخاري] - [صحيح البخاري - 2076]
ಮಾರಾಟ ಮಾಡುವಾಗ ಸರಳ, ಉದಾರ ಮತ್ತು ಕೊಡುಗೈಯಾಗಿರುವ ವ್ಯಕ್ತಿಗೆ ದಯೆ ತೋರಬೇಕೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಪ್ರಾರ್ಥಿಸುತ್ತಾರೆ. ಆದ್ದರಿಂದ ಬೆಲೆಯ ವಿಷಯದಲ್ಲಿ ಗ್ರಾಹಕನೊಂದಿಗೆ ಕಠೋರವಾಗಿ ವರ್ತಿಸಬಾರದು, ಉತ್ತಮ ಗುಣದಿಂದ ವ್ಯವಹರಿಸಬೇಕು. ಖರೀದಿಸುವಾಗ ಸರಳ, ಉದಾರ ಮತ್ತು ಕೊಡುಗೈಯಾಗಿರಬೇಕು. ಜಿಪುಣತನ ತೋರಬಾರದು ಮತ್ತು ವಸ್ತುವಿನ ಮೌಲ್ಯಕ್ಕಿಂತ ಕಡಿಮೆ ಹಣ ಕೊಡಬಾರದು. ಸಾಲ ಮರುಪಾವತಿಯನ್ನು ಕೇಳುವಾಗ ಸರಳ, ಉದಾರ ಮತ್ತು ಕೊಡುಗೈಯಾಗಿರಬೇಕು. ಬಡವರು ಮತ್ತು ಕಷ್ಟದಲ್ಲಿರುವವರನ್ನು ಸತಾಯಿಸಬಾರದು. ಬದಲಿಗೆ, ಮೃದುವಾಗಿ ಸೌಮ್ಯವಾಗಿ ಕೇಳಬೇಕು. ಕಷ್ಟದಲ್ಲಿರುವವರಿಗೆ ಮರುಪಾವತಿಗಾಗಿ ಸಮಯವನ್ನು ಹೆಚ್ಚಿಸಬೇಕು.