عن عبد الله بن عمرو رضي الله عنهما قال: قال رسول الله صلى الله عليه وسلم:
«إِنَّ الْمُقْسِطِينَ عِنْدَ اللهِ عَلَى مَنَابِرَ مِنْ نُورٍ، عَنْ يَمِينِ الرَّحْمَنِ عَزَّ وَجَلَّ، وَكِلْتَا يَدَيْهِ يَمِينٌ، الَّذِينَ يَعْدِلُونَ فِي حُكْمِهِمْ وَأَهْلِيهِمْ وَمَا وَلُوا».
[صحيح] - [رواه مسلم] - [صحيح مسلم: 1827]
المزيــد ...
ಅಬ್ದುಲ್ಲಾ ಬಿನ್ ಅಮ್ರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ನ್ಯಾಯಯುತವಾಗಿ ವರ್ತಿಸುವವರು ಅಲ್ಲಾಹನ ಬಳಿ ಪ್ರಕಾಶದ ಪೀಠಗಳ ಮೇಲಿರುತ್ತಾರೆ. ಅವರು ಪರಮ ದಯಾಮಯನ ಬಲಭಾಗದಲ್ಲಿರುತ್ತಾರೆ. ಅಲ್ಲಾಹನ ಎರಡು ಕೈಗಳೂ ಬಲಗೈಗಳಾಗಿವೆ. ಅವರು ಯಾರೆಂದರೆ, ತಮ್ಮ ತೀರ್ಪಿನಲ್ಲಿ, ತಮ್ಮ ಜನರ ವಿಷಯದಲ್ಲಿ ಮತ್ತು ತಮ್ಮ ಅಧೀನದಲ್ಲಿರುವವರ ವಿಷಯದಲ್ಲಿ ನ್ಯಾಯಯುತವಾಗಿ ವರ್ತಿಸುವವರು."
[صحيح] - [رواه مسلم] - [صحيح مسلم - 1827]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ತಮ್ಮ ಅಧೀನದಲ್ಲಿರುವವರ ವಿಷಯದಲ್ಲಿ ಸತ್ಯ ಮತ್ತು ನ್ಯಾಯದಿಂದ ತೀರ್ಪು ನೀಡುವವರು ಮತ್ತು ಆಡಳಿತ ನಡೆಸುವವರು ಪ್ರಕಾಶದಿಂದ ಸೃಷ್ಟಿಸಲಾದ ಎತ್ತರದ ಪೀಠಗಳಲ್ಲಿ ಕುಳಿತಿರುತ್ತಾರೆ. ಇದು ಅವರಿಗೆ ಪುನರುತ್ಥಾನ ದಿನದಂದು ನೀಡಲಾಗುವ ಗೌರವವಾಗಿದೆ. ಈ ಪೀಠಗಳು ಪರಮ ದಯಾಮಯನಾದ ಅಲ್ಲಾಹನ ಬಲಭಾಗದಲ್ಲಿವೆ. ಸರ್ವಶಕ್ತನಾದ ಅಲ್ಲಾಹನ ಎರಡೂ ಕೈಗಳು ಬಲಗೈಗಳಾಗಿವೆ.