عَنْ أَبِي هُرَيْرَةَ رَضيَ اللهُ عنه أَنَّ رَسُولَ اللهِ صَلَّى اللهُ عَلَيْهِ وَسَلَّمَ، قَالَ:
«أَحَبُّ الْبِلَادِ إِلَى اللهِ مَسَاجِدُهَا، وَأَبْغَضُ الْبِلَادِ إِلَى اللهِ أَسْوَاقُهَا».
[صحيح] - [رواه مسلم] - [صحيح مسلم: 671]
المزيــد ...
ಅಬೂ ಹುರೈರಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಅಲ್ಲಾಹನಿಗೆ ಸ್ಥಳಗಳಲ್ಲಿ ಅತ್ಯಂತ ಪ್ರಿಯವಾಗಿರುವುದು ಅದರ ಮಸೀದಿಗಳಾಗಿವೆ, ಮತ್ತು ಅಲ್ಲಾಹನಿಗೆ ಸ್ಥಳಗಳಲ್ಲಿ ಅತ್ಯಂತ ಅಪ್ರಿಯವಾಗಿರುವುದು ಅದರ ಮಾರುಕಟ್ಟೆಗಳಾಗಿವೆ".
[صحيح] - [رواه مسلم] - [صحيح مسلم - 671]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ಸರ್ವಶಕ್ತನಾದ ಅಲ್ಲಾಹನಿಗೆ ಅತ್ಯಂತ ಪ್ರಿಯವಾದ ಸ್ಥಳಗಳು ಮಸೀದಿಗಳಾಗಿವೆ. ಏಕೆಂದರೆ ಅವು ವಿಧೇಯತೆಯ ಭವನಗಳಾಗಿವೆ, ಮತ್ತು ಅವುಗಳ ಅಡಿಪಾಯವು ದೇವಭಕ್ತಿಯ (ತಖ್ವಾ) ಮೇಲಿದೆ. ಹಾಗೆಯೇ ಅಲ್ಲಾಹನಿಗೆ ಸ್ಥಳಗಳಲ್ಲಿ ಅತ್ಯಂತ ಅಪ್ರಿಯವಾಗಿರುವುದು ಮಾರುಕಟ್ಟೆಗಳಾಗಿವೆ. ಏಕೆಂದರೆ ಅವು ಸಾಮಾನ್ಯವಾಗಿ ಮೋಸ, ವಂಚನೆ, ಬಡ್ಡಿ, ಸುಳ್ಳು ಪ್ರಮಾಣಗಳು, ವಾಗ್ದಾನ ಮುರಿಯುವುದು ಮತ್ತು (ಜನರು) ಅಲ್ಲಾಹನ ಸ್ಮರಣೆಯಿಂದ ವಿಮುಖರಾಗುವ ಸ್ಥಳಗಳಾಗಿವೆ.