عَنْ جَابِرِ بْنِ عَبْدِ اللَّهِ رضي الله عنهما أَنَّ النَّبِيَّ صَلَّى اللهُ عَلَيْهِ وَسَلَّمَ قَالَ:
«مَنْ أَكَلَ ثُومًا أَوْ بَصَلًا، فَلْيَعْتَزِلْنَا -أَوْ قَالَ: فَلْيَعْتَزِلْ- مَسْجِدَنَا، وَلْيَقْعُدْ فِي بَيْتِهِ»، وَأَنَّ النَّبِيَّ صَلَّى اللهُ عَلَيْهِ وَسَلَّمَ أُتِيَ بِقِدْرٍ فِيهِ خَضِرَاتٌ مِنْ بُقُولٍ، فَوَجَدَ لَهَا رِيحًا، فَسَأَلَ فَأُخْبِرَ بِمَا فِيهَا مِنَ البُقُولِ، فَقَالَ قَرِّبُوهَا إِلَى بَعْضِ أَصْحَابِهِ كَانَ مَعَهُ، فَلَمَّا رَآهُ كَرِهَ أَكْلَهَا، قَالَ: «كُلْ فَإِنِّي أُنَاجِي مَنْ لاَ تُنَاجِي».
ولِمُسْلِمٍ عَنْ جَابِرِ بْنِ عَبْدِ اللهِ، عَنِ النَّبِيِّ صَلَّى اللهُ عَلَيْهِ وَسَلَّمَ قَالَ: «مَنْ أَكَلَ مِنْ هَذِهِ الْبَقْلَةِ، الثُّومِ - وقَالَ مَرَّةً: مَنْ أَكَلَ الْبَصَلَ وَالثُّومَ وَالْكُرَّاثَ فَلَا يَقْرَبَنَّ مَسْجِدَنَا، فَإِنَّ الْمَلَائِكَةَ تَتَأَذَّى مِمَّا يَتَأَذَّى مِنْهُ بَنُو آدَمَ».
[صحيح] - [متفق عليه] - [صحيح البخاري: 855]
المزيــد ...
ಜಾಬಿರ್ ಬಿನ್ ಅಬ್ದುಲ್ಲಾ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಬೆಳ್ಳುಳ್ಳಿ ಅಥವಾ ಈರುಳ್ಳಿಯನ್ನು ತಿಂದವರು ನಮ್ಮಿಂದ ದೂರವಿರಲಿ - ಅಥವಾ ಅವರು ಹೀಗೆ ಹೇಳಿದರು: ಅವರು ನಮ್ಮ ಮಸೀದಿಯಿಂದ ದೂರವಿರಲಿ - ಮತ್ತು ತಮ್ಮ ಮನೆಯಲ್ಲೇ ಉಳಿದುಕೊಳ್ಳಲಿ." ಒಮ್ಮೆ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ತರಕಾರಿ ಸೊಪ್ಪುಗಳಿರುವ ಮಡಿಕೆಯನ್ನು ತರಲಾಯಿತು. ಅವರಿಗೆ ಅದರಿಂದ ಕೆಟ್ಟ ವಾಸನೆ ಅನುಭವವಾಯಿತು. ಅವರು ಅದರ ಬಗ್ಗೆ ವಿಚಾರಿಸಿದಾಗ, ಅದರಲ್ಲಿರುವ ಸೊಪ್ಪುಗಳ ಬಗ್ಗೆ ಅವರಿಗೆ ತಿಳಿಸಲಾಯಿತು. ಅವರು ಅದನ್ನು ಹತ್ತಿರ ತರುವಂತೆ ತಮ್ಮ ಬಳಿಯಲ್ಲಿದ್ದ ಒಬ್ಬ ಸಂಗಡಿಗರಿಗೆ ಆದೇಶಿಸಿದರು. ಅದನ್ನು ಕಂಡಾಗ ಅವರು ಅದನ್ನು ತಿನ್ನಲು ಅಸಹ್ಯಪಟ್ಟರು. ಅವರು ಹೇಳಿದರು: "ತಿನ್ನಿರಿ! ಏಕೆಂದರೆ, ನಿಶ್ಚಯವಾಗಿಯೂ ನೀವು ಸಂಭಾಷಣೆ ಮಾಡದವನೊಂದಿಗೆ ನಾನು ಸಂಭಾಷಣೆ ಮಾಡುತ್ತೇನೆ."
[صحيح] - [متفق عليه] - [صحيح البخاري - 855]
ಈರುಳ್ಳಿ ಅಥವಾ ಬೆಳ್ಳುಳ್ಳಿ ತಿಂದವರು ಮಸೀದಿಗೆ ಬರದಂತೆ ಪ್ರವಾದಿಯವರು ತಡೆದರು. ಇದು ಸಾಮೂಹಿಕ ನಮಾಝ್ ನಿರ್ವಹಿಸಲು ಬರುವ ಇತರ ಸಹೋದರರಿಗೆ ಅದರ ದುರ್ಗಂಧದಿಂದ ತೊಂದರೆಯಾಗದಿರುವುದಕ್ಕಾಗಿದೆ. ಇದು ಮಸೀದಿಗೆ ಬರದಂತೆ ತಡೆಯುವ ನಿಷೇಧವಾಗಿದೆಯೇ ಹೊರತು ಅವುಗಳನ್ನು ತಿನ್ನುವುದನ್ನು ತಡೆಯುವ ನಿಷೇಧವಲ್ಲ. ಏಕೆಂದರೆ, ಅವು ಧರ್ಮಸಮ್ಮತ ಆಹಾರಗಳಾಗಿವೆ. ಒಮ್ಮೆ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಕ ಒಂದು ತರಕಾರಿಯ ಮಡಿಕೆ ತರಲಾಯಿತು. ಅವರಿಗೆ ಅದರಿಂದ ಕೆಟ್ಟ ವಾಸನೆ ಅನುಭವವಾದಾಗ ಅದರಲ್ಲಿ ಏನಿದೆಯೆಂದು ಕೇಳಿದರು. ಅದರಲ್ಲಿರುವುದರ ಬಗ್ಗೆ ಅವರಿಗೆ ತಿಳಿಸಲಾದಾಗ, ಅವರು ಅದನ್ನು ತಿನ್ನಲು ಅಸಹ್ಯಪಟ್ಟು ಅದನ್ನು ತಿನ್ನುವಂತೆ ತನ್ನ ಒಬ್ಬ ಸಂಗಡಿಗರಿಗೆ ಸೂಚಿಸಿದರು. ಆದರೆ ಆ ಸಂಗಡಿಗರು ಕೂಡ ಅವರಂತೆ ಅದನ್ನು ತಿನ್ನಲು ಅಸಹ್ಯಪಟ್ಟರು. ಇದನ್ನು ಕಂಡಾಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ತಿನ್ನಿರಿ. ಏಕೆಂದರೆ ನಾನು ದೇವವಾಣಿ ಪಡೆಯಲು ದೇವದೂತರೊಂದಿಗೆ ಸಂಭಾಷಣೆ ಮಾಡುತ್ತೇನೆ."
ಕೆಟ್ಟ ದುರ್ಗಂಧದಿಂದ ಮನುಷ್ಯರು ತೊಂದರೆ ಅನುಭವಿಸುವಂತೆ ದೇವದೂತರುಗಳು ಕೂಡ ತೊಂದರೆ ಅನುಭವಿಸುತ್ತಾರೆ ಎಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸಿದರು.