+ -

عَنْ أَبِي هُرَيْرَةَ رضي الله عنه عَنِ النَّبِيِّ صَلَّى اللهُ عَلَيْهِ وَسَلَّمَ:
«مَنْ غَدَا إِلَى الْمَسْجِدِ أَوْ رَاحَ أَعَدَّ اللهُ لَهُ فِي الْجَنَّةِ نُزُلًا، كُلَّمَا غَدَا أَوْ رَاحَ».

[صحيح] - [متفق عليه] - [صحيح مسلم: 669]
المزيــد ...

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಯಾರು ಬೆಳಿಗ್ಗೆ ಮತ್ತು ಸಂಜೆ ಮಸೀದಿಗೆ ಹೋಗುತ್ತಾನೋ, ಅವನು ಬೆಳಿಗ್ಗೆ ಮತ್ತು ಸಂಜೆ ಮಸೀದಿಗೆ ಹೋಗುವಾಗಲೆಲ್ಲಾ ಅಲ್ಲಾಹು ಅವನಿಗೆ ಸ್ವರ್ಗದಲ್ಲಿ ಒಂದು ಔತಣವನ್ನು ಸಿದ್ಧಗೊಳಿಸುವನು."

[صحيح] - [متفق عليه] - [صحيح مسلم - 669]

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಸಿಹಿಸುದ್ದಿ ತಿಳಿಸುವುದೇನೆಂದರೆ, ಯಾರು ಆರಾಧನೆ ಮಾಡಲು, ಜ್ಞಾನ ಸಂಪಾದಿಸಲು ಅಥವಾ ಇತರ ಉದ್ದೇಶಗಳಿಗಾಗಿ ಯಾವುದೇ ಸಮಯದಲ್ಲಿ, ಅದು ಬೆಳಗ್ಗೆ ಆಗಿರಲಿ ಅಥವಾ ಸಂಜೆಯಾಗಿರಲಿ, ಮಸೀದಿಗೆ ಹೋಗುತ್ತಾರೋ, ಅವರು ಹಗಲು ಮತ್ತು ರಾತ್ರಿ ಮಸೀದಿಗೆ ಹೋಗುವಾಗಲೆಲ್ಲಾ ಅಲ್ಲಾಹು ಅವರಿಗೆ ಸ್ವರ್ಗದಲ್ಲಿ ಒಂದು ವಸತಿ ಮತ್ತು ಔತಣವನ್ನು ಸಿದ್ಧಗೊಳಿಸುವನು.

ಹದೀಸಿನ ಪ್ರಯೋಜನಗಳು

  1. ಮಸೀದಿಗೆ ತೆರಳುವ ಶ್ರೇಷ್ಠತೆಯನ್ನು ತಿಳಿಸಲಾಗಿದೆ ಮತ್ತು ಮಸೀದಿಯಲ್ಲಿ ಸಾಮೂಹಿಕ (ಜಮಾಅತ್) ನಮಾಝ್ ನಿರ್ವಹಿಸಲು ಪ್ರೋತ್ಸಾಹಿಸಲಾಗಿದೆ. ಅಲ್ಲಾಹು ತನ್ನ ಮನೆಯನ್ನು ಗುರಿಯಾಗಿಟ್ಟು ಬರುವವರಿಗೆ ಸಿದ್ಧಗೊಳಿಸಿದ ಅದೆಷ್ಟು ಒಳಿತು, ಶ್ರೇಷ್ಠತೆ, ಪ್ರತಿಫಲ ಮತ್ತು ಔತಣವನ್ನು ಮಸೀದಿಗೆ ಹೋಗದವರು ಕಳೆದುಕೊಳ್ಳುತ್ತಿದ್ದಾರೆ!
  2. ಜನರು ತಮ್ಮ ಮನೆಗೆ ಬರುವವರನ್ನು ಆದರಿಸಿ ಸತ್ಕರಿಸುತ್ತಾರೆ. ಅವರಿಗೆ ಆಹಾರಗಳನ್ನು ನೀಡುತ್ತಾರೆ. ಸರ್ವಶಕ್ತನಾದ ಅಲ್ಲಾಹು ಅವನ ಸೃಷ್ಟಿಗಳಿಗಿಂತಲೂ ಹೆಚ್ಚು ಉದಾರಿಯಾಗಿದ್ದಾನೆ! ಅವನ ಮನೆಯನ್ನು ಉದ್ದೇಶವಾಗಿಟ್ಟು ಬರುವವರನ್ನು ಅವನು ಗೌರವಿಸುತ್ತಾನೆ ಮತ್ತು ಅವರಿಗೆ ಅತಿದೊಡ್ಡ ಔತಣವನ್ನು ಸಿದ್ಧಗೊಳಿಸುತ್ತಾನೆ.
  3. ಮಸೀದಿಗೆ ತೆರಳಲು ಸಂತೋಷಪಡಬೇಕೆಂದು ತಿಳಿಸಲಾಗಿದೆ. ಏಕೆಂದರೆ, ಬೆಳಿಗ್ಗೆ ಮತ್ತು ಸಂಜೆ ಮಸೀದಿಗೆ ಹೋಗುವಾಗಲೆಲ್ಲಾ ಆ ಸಂಖ್ಯೆಗೆ ಅನುಗುಣವಾಗಿ ಔತಣವನ್ನು ಸಿದ್ಧಗೊಳಿಸಲಾಗುತ್ತದೆ.
ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಉಯ್ಘರ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ಥಾಯ್ ಜರ್ಮನ್ ಪಶ್ತೋ الأسامية السويدية الأمهرية الهولندية الغوجاراتية القيرقيزية النيبالية الرومانية المجرية الموري الأورومو الجورجية
ಅನುವಾದಗಳನ್ನು ತೋರಿಸಿ