عن أُبيِّ بن كعبٍ رضي الله عنه قال:
صلَّى بنا رسولُ الله صلى الله عليه وسلم يومًا الصُّبحَ فقال: «أشاهِد فُلان؟» قالوا: لا، قال: «أشاهِدٌ فُلان؟» قالوا: لا، قال: «إنَّ هاتيَنِ الصَّلاتين أثقَلُ الصَّلَواتِ على المُنافقين، ولو تعلمون ما فيهما لأتيتُمُوهما ولو حَبْوًا على الرُّكب، وإن الصفَّ الأوّلَ على مِثلِ صَفِّ الملائكة، ولو عَلِمتُم ما فضيلتُه لابتَدَرتُموهُ، وإنّ صلاةَ الرجل مع الرجل أزكى من صلاتِه وحدَه، وصلاتَه مع الرجلَين أزكى من صلاتِه مع الرجل، وما كَثُرَ فهو أحبُّ إلى الله تعالى».
[صحيح] - [رواه أبو داود والنسائي وأحمد] - [سنن أبي داود: 554]
المزيــد ...
ಉಬೈ ಬಿನ್ ಕಅಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು:
ಒಂದಿನ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮ್ಮೊಂದಿಗೆ ಸುಬಹ್ ನಮಾಝ್ ನಿರ್ವಹಿಸಿದರು. ನಂತರ ಹೇಳಿದರು: "ಇಂತಿಂತಹ ವ್ಯಕ್ತಿ ಇದ್ದಾರೆಯೇ?" ಅವರು ಉತ್ತರಿಸಿದರು: "ಇಲ್ಲ." ಅವರು ಕೇಳಿದರು: "ಇಂತಿಂತಹ ವ್ಯಕ್ತಿ ಇದ್ದಾರೆಯೇ?" ಅವರು ಉತ್ತರಿಸಿದರು: "ಇಲ್ಲ." ಅವರು ಹೇಳಿದರು: "ಈ ಎರಡು ನಮಾಝ್‌ಗಳು ಕಪಟವಿಶ್ವಾಸಿಗಳಿಗೆ ಅತ್ಯಂತ ಭಾರವಾದ ನಮಾಝ್‌ಗಳಾಗಿವೆ. ಅವುಗಳಲ್ಲಿರುವ ಪ್ರತಿಫಲದ ಬಗ್ಗೆ ನಿಮಗೆ ತಿಳಿದಿದ್ದರೆ, ನೀವು ಮೊಣಕಾಲಿನಲ್ಲಿ ತೆವಳಿಕೊಂಡಾದರೂ ಬರುತ್ತಿದ್ದಿರಿ. ನಿಶ್ಚಯವಾಗಿಯೂ, ಮೊದಲನೇ ಸಾಲು ದೇವದೂತರುಗಳ ಸಾಲಿನಂತೆ. ಅದರ ಶ್ರೇಷ್ಠತೆಯ ಬಗ್ಗೆ ನೀವು ತಿಳಿದುಕೊಂಡಿದ್ದರೆ ನೀವು ಅದಕ್ಕಾಗಿ ತ್ವರೆ ಮಾಡುತ್ತಿದ್ದಿರಿ. ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯೊಂದಿಗೆ ಸೇರಿ ನಮಾಝ್ ಮಾಡುವುದು ಅವನು ಏಕಾಂಗಿಯಾಗಿ ನಮಾಝ್ ಮಾಡುವುದಕ್ಕಿಂತ ಪರಿಶುದ್ಧವಾಗಿದೆ. ಒಬ್ಬ ವ್ಯಕ್ತಿ ಇಬ್ಬರು ವ್ಯಕ್ತಿಗಳೊಂದಿಗೆ ಸೇರಿ ನಮಾಝ್ ಮಾಡುವುದು ಅವನು ಒಬ್ಬ ವ್ಯಕ್ತಿಯೊಂದಿಗೆ ನಮಾಝ್ ಮಾಡುವುದಕ್ಕಿಂತ ಪರಿಶುದ್ಧವಾಗಿದೆ. ಈ ಸಂಖ್ಯೆಯು ಹೆಚ್ಚಾಗುವುದು ಅಲ್ಲಾಹನಿಗೆ ಅತ್ಯಂತ ಇಷ್ಟವಾಗಿದೆ."
[صحيح] - - [سنن أبي داود - 554]
ಒಂದಿನ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಫಜ್ರ್ ನಮಾಝ್ ಮಾಡಿದರು. ನಂತರ ಕೇಳಿದರು: "ಇಂತಿಂತಹ ವ್ಯಕ್ತಿ ನಮಾಝ್‌ನಲ್ಲಿ ಪಾಲ್ಗೊಂಡಿದ್ದಾನೆಯೇ?" ಸಹಾಬಿಗಳು ಹೇಳಿದರು: "ಇಲ್ಲ." ಅವರು ಪುನಃ ಇನ್ನೊಬ್ಬ ವ್ಯಕ್ತಿಯ ಬಗ್ಗೆ ಕೇಳಿದರು: "ಇಂತಿಂತಹ ವ್ಯಕ್ತಿ ಪಾಲ್ಗೊಂಡಿದ್ದಾರೆಯೇ?" ಅವರು ಉತ್ತರಿಸಿದರು: "ಇಲ್ಲ." ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಶ್ಚಯವಾಗಿಯೂ ಫಜ್ರ್ ನಮಾಝ್ ಮತ್ತು ಇಶಾ ನಮಾಝ್ ಕಪಟವಿಶ್ವಾಸಿಗಳಿಗೆ ಅತ್ಯಂತ ಭಾರವಾದ ನಮಾಝ್‌ಗಳಾಗಿವೆ." ಏಕೆಂದರೆ, ಈ ಸಮಯಗಳಲ್ಲಿ ಅವರು ಆಲಸಿಗರಾಗುತ್ತಾರೆ. ಅಷ್ಟೇ ಅಲ್ಲ, ಈ ಸಮಯದಲ್ಲಿ ಅವರಿಗೆ ಜನರ ಪ್ರಶಂಸೆ ಪಡೆಯಲು ಸಾಧ್ಯವಾಗುವುದಿಲ್ಲ. ಏಕೆಂದರೆ, ಕತ್ತಲೆಯಾದ್ದರಿಂದ ಅವರು ನಮಾಝ್‌ಗೆ ಹೋಗುವುದು ಯಾರಿಗೂ ಕಾಣಿಸುವುದಿಲ್ಲ.
ಓ ಸತ್ಯವಿಶ್ವಾಸಿಗಳೇ, ಸುಬಹ್ ನಮಾಝ್ ಮತ್ತು ಇಶಾ ನಮಾಝ್‌ನಲ್ಲಿರುವ ಪ್ರತಿಫಲ ಮತ್ತು ಹೆಚ್ಚುವರಿ ಪುಣ್ಯದ ಬಗ್ಗೆ ನೀವೇನಾದರೂ ತಿಳಿದಿದ್ದರೆ—ಪ್ರತಿಫಲವು ಕೆಲಸದ ಕಠಿಣತೆಯ ಮೇಲೆ ಅವಲಂಬಿತವಾಗಿರುತ್ತದೆ—ನೀವು ತೆವಳಿಕೊಂಡು ಅಂಬೆಗಾಲಿನಲ್ಲಾದರೂ ಬರುತ್ತಿದ್ದಿರಿ.
ಇಮಾಮರಿಗೆ ಹತ್ತಿರವಾಗಿರುವ ಮೊದಲನೆಯ ಸಾಲು ಅಲ್ಲಾಹನಿಗೆ ಹತ್ತಿರವಾಗಿರುವ ದೇವದೂತರುಗಳ ಸಾಲಿನಂತೆ. ಒಂದು ವೇಳೆ ಮೊದಲನೆಯ ಸಾಲಿಗಿರುವ ಶ್ರೇಷ್ಠತೆಯ ಬಗ್ಗೆ ಸತ್ಯವಿಶ್ವಾಸಿಗಳು ತಿಳಿದಿದ್ದರೆ ಅವರು ಅದಕ್ಕಾಗಿ ಸ್ಪರ್ಧಿಸುತ್ತಿದ್ದರು. ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯೊಂದಿಗೆ ಸೇರಿ ನಮಾಝ್ ಮಾಡುವುದಕ್ಕೆ ಅವನು ಏಕಾಂಗಿಯಾಗಿ ನಮಾಝ್ ಮಾಡುವುದಕ್ಕಿಂತ ಹೆಚ್ಚು ಪ್ರತಿಫಲ ಮತ್ತು ಪರಿಣಾಮವಿದೆ. ಅವನು ، ಇಬ್ಬರು ವ್ಯಕ್ತಿಗಳೊಂದಿಗೆ ಸೇರಿ ನಮಾಝ್ ಮಾಡುವುದು ಒಬ್ಬ ವ್ಯಕ್ತಿಯೊಂದಿಗೆ ನಮಾಝ್ ಮಾಡುವುದಕ್ಕಿಂತ ಶ್ರೇಷ್ಠವಾಗಿದೆ. ಹೆಚ್ಚು ಜನರು ಸೇರಿ ನಿರ್ವಹಿಸುವ ನಮಾಝ್ ಅಲ್ಲಾಹನಿಗೆ ಹೆಚ್ಚು ಇಷ್ಟವಾಗಿದೆ.