عَن أَبي هُرَيْرَةَ رضي الله عنه قَالَ: سَمِعْتُ رَسُولَ اللَّهِ صَلَّى اللهُ عَلَيْهِ وَسَلَّمَ يَقُولُ:
«تَفْضُلُ صَلاَةُ الجَمِيعِ صَلاَةَ أَحَدِكُمْ وَحْدَهُ، بِخَمْسٍ وَعِشْرِينَ جُزْءًا، وَتَجْتَمِعُ مَلاَئِكَةُ اللَّيْلِ وَمَلاَئِكَةُ النَّهَارِ فِي صَلاَةِ الفَجْرِ» ثُمَّ يَقُولُ أَبُو هُرَيْرَةَ: فَاقْرَءُوا إِنْ شِئْتُمْ: {إِنَّ قُرْآنَ الفَجْرِ كَانَ مَشْهُودًا} [الإسراء: 78].
[صحيح] - [متفق عليه] - [صحيح البخاري: 648]
المزيــد ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ:
"ನಿಮ್ಮಲ್ಲೊಬ್ಬನು ಒಂಟಿಯಾಗಿ ಮಾಡುವ ನಮಾಝ್‌ಗಿಂತ ಜಮಾಅತ್ (ಸಂಘಟಿತ) ನಮಾಝ್ ಇಪ್ಪತ್ತೈದು ಪಟ್ಟು ಶ್ರೇಷ್ಠವಾಗಿದೆ. ರಾತ್ರಿಯ ಮಲಕ್‌ಗಳು (ದೇವದೂತರು) ಮತ್ತು ಹಗಲಿನ ಮಲಕ್‌ಗಳು ಫಜ್ರ್ ನಮಾಝ್‌ನಲ್ಲಿ ಒಟ್ಟುಗೂಡುತ್ತಾರೆ". ನಂತರ ಅಬೂ ಹುರೈರಾ ಹೇಳುತ್ತಿದ್ದರು: "ನೀವು ಇಚ್ಛಿಸಿದರೆ (ಇದಕ್ಕೆ ಪುರಾವೆಯಾಗಿ ಈ ವಚನವನ್ನು) ಓದಿರಿ: "ಖಂಡಿತವಾಗಿಯೂ ಫಜ್ರ್‌ನ ಪಾರಾಯಣವು (ಕುರ್‌ಆನ್) ಸಾಕ್ಷಿವಹಿಸಲ್ಪಡುತ್ತದೆ." [ಸೂರಃ ಅಲ್-ಇಸ್ರಾ: 78].
[صحيح] - [متفق عليه] - [صحيح البخاري - 648]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿವರಿಸುವುದೇನೆಂದರೆ, ಒಬ್ಬ ವ್ಯಕ್ತಿಯು ಇಮಾಮರೊಂದಿಗೆ ಜಮಾಅತ್‌ನಲ್ಲಿ ಮಾಡುವ ನಮಾಝ್‌ನ ಪುಣ್ಯ ಮತ್ತು ಪ್ರತಿಫಲವು, ಅವನು ತನ್ನ ಮನೆಯಲ್ಲಿ ಅಥವಾ ಮಾರುಕಟ್ಟೆಯಲ್ಲಿ ಒಂಟಿಯಾಗಿ ಮಾಡುವ ಇಪ್ಪತ್ತೈದು ನಮಾಝ್‌ಗಳಿಗಿಂತ ಶ್ರೇಷ್ಠವಾಗಿದೆ. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರಾತ್ರಿಯ ಮತ್ತು ಹಗಲಿನ ಮಲಕ್‌ಗಳು (ದೇವದೂತರು) ಫಜ್ರ್ ನಮಾಝ್‌ನಲ್ಲಿ ಒಟ್ಟುಗೂಡುತ್ತಾರೆ ಎಂದು ಹೇಳಿದರು. ನಂತರ ಅಬೂ ಹುರೈರಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಅದಕ್ಕೆ ಸಾಕ್ಷಿಯಾಗಿ ಹೇಳುತ್ತಾರೆ:
ನೀವು ಇಚ್ಛಿಸಿದರೆ ಓದಿರಿ: "ಖಂಡಿತವಾಗಿಯೂ ಫಜ್ರ್‌ನ ಪಾರಾಯಣವು (ಕುರ್‌ಆನ್) ಸಾಕ್ಷಿವಹಿಸಲ್ಪಡುತ್ತದೆ." [ಸೂರಃ ಅಲ್-ಇಸ್ರಾ: 78]. ಅಂದರೆ: ಖಂಡಿತವಾಗಿಯೂ ಫಜ್ರ್ ನಮಾಝ್‌ಗೆ ರಾತ್ರಿಯ ಮಲಕ್‌ಗಳು ಮತ್ತು ಹಗಲಿನ ಮಲಕ್‌ಗಳು ಸಾಕ್ಷಿಯಾಗುತ್ತಾರೆ.