عَنْ عَبْدِ اللَّهِ بْنِ عُمَرَ رَضيَ اللهُ عنهما:
سَأَلَ رَجُلٌ النَّبِيَّ صَلَّى اللهُ عَلَيْهِ وَسَلَّمَ وَهُوَ عَلَى المِنْبَرِ، مَا تَرَى فِي صَلاَةِ اللَّيْلِ، قَالَ: «مَثْنَى مَثْنَى، فَإِذَا خَشِيَ الصُّبْحَ صَلَّى وَاحِدَةً، فَأَوْتَرَتْ لَهُ مَا صَلَّى» وَإِنَّهُ كَانَ يَقُولُ: «اجْعَلُوا آخِرَ صَلاَتِكُمْ وِتْرًا» فَإِنَّ النَّبِيَّ صَلَّى اللهُ عَلَيْهِ وَسَلَّمَ أَمَرَ بِهِ.
[صحيح] - [متفق عليه] - [صحيح البخاري: 472]
المزيــد ...
ಅಬ್ದುಲ್ಲಾ ಇಬ್ನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ:
ಒಬ್ಬ ವ್ಯಕ್ತಿಯು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಿಂಬರ್ (ಪ್ರವಚನ ಪೀಠ) ನ ಮೇಲಿದ್ದಾಗ ಅವರಲ್ಲಿ ಕೇಳಿದನು: "ರಾತ್ರಿ ನಮಾಝ್‌ನ ಬಗ್ಗೆ ನೀವೇನು ಹೇಳುತ್ತೀರಿ?". ಅವರು (ಪ್ರವಾದಿ) ಹೇಳಿದರು: "(ಅದು) ಎರಡೆರಡು ರಕಅತ್‌ಗಳು. ಬೆಳಗಾಗುವುದೆಂದು (ಫಜ್ರ್ ನಮಾಝಿನ ಸಮಯವಾಗುವುದೆಂದು) ಭಯವಾದರೆ, ಒಂದು ರಕಅತ್ ನಿರ್ವಹಿಸಬೇಕು. ಅದು ಅದಕ್ಕೂ ಮುನ್ನ ನಿರ್ವಹಿಸಿದ ನಮಾಝ್ ಅನ್ನು 'ವಿತ್ರ್' (ಬೆಸ ಸಂಖ್ಯೆ) ಗೊಳಿಸುತ್ತದೆ". ಅವರು (ಇಬ್ನ್ ಉಮರ್) ಹೇಳುತ್ತಿದ್ದರು: "ನಿಮ್ಮ (ರಾತ್ರಿಯ) ನಮಾಝ್‌ನ ಕೊನೆಯದನ್ನು ವಿತ್ರ್ ಗೊಳಿಸಿರಿ". ಏಕೆಂದರೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅದನ್ನು ಆದೇಶಿಸಿದ್ದಾರೆ.
[صحيح] - [متفق عليه] - [صحيح البخاري - 472]
ಒಬ್ಬ ವ್ಯಕ್ತಿಯು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಿಂಬರ್ ಮೇಲೆ ಪ್ರವಚನ ನೀಡುತ್ತಿರುವಾಗ ಕೇಳಿದನು: ಓ ಅಲ್ಲಾಹನ ಸಂದೇಶವಾಹಕರೇ, ರಾತ್ರಿ ನಮಾಝ್ ಮಾಡುವುದು ಹೇಗೆಂದು ನನಗೆ ಕಲಿಸಿಕೊಡಿ. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ನೀನು ನಮಾಝ್ ಮಾಡು ಮತ್ತು ಪ್ರತಿ ಎರಡು ರಕಅತ್‌ಗಳಿಗೆ ಸಲಾಮ್ ಹೇಳಿ (ಮುಗಿಸು). ಬೆಳಗಾಗುವುದೆಂದು (ಫಜ್ರ್ ಸಮಯವಾಗುವುದೆಂದು) ನಿನಗೆ ಭಯವಾದರೆ, ಒಂದು ರಕಅತ್ ನಿರ್ವಹಿಸು, ಅದು ನೀನು ನಿರ್ವಹಿಸಿದ ನಮಾಝ್ ಅನ್ನು ನಿನಗಾಗಿ ವಿತ್ರ್ (ಬೆಸ) ಗೊಳಿಸುತ್ತದೆ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರಾತ್ರಿ ನಮಾಝ್‌ನ ಕೊನೆಯ ಭಾಗವನ್ನು ವಿತ್ರ್ ಗೊಳಿಸುವಂತೆ ಉಪದೇಶಿಸುತ್ತಿದ್ದರು.