عَنِ ابْنِ عُمَرَ رَضِيَ اللَّهُ عَنْهُمَا قَالَ:
حَفِظْتُ مِنَ النَّبِيِّ صَلَّى اللهُ عَلَيْهِ وَسَلَّمَ عَشْرَ رَكَعَاتٍ: رَكْعَتَيْنِ قَبْلَ الظُّهْرِ، وَرَكْعَتَيْنِ بَعْدَهَا، وَرَكْعَتَيْنِ بَعْدَ المَغْرِبِ فِي بَيْتِهِ، وَرَكْعَتَيْنِ بَعْدَ العِشَاءِ فِي بَيْتِهِ، وَرَكْعَتَيْنِ قَبْلَ صَلاَةِ الصُّبْحِ، وَكَانَتْ سَاعَةً لاَ يُدْخَلُ عَلَى النَّبِيِّ صَلَّى اللهُ عَلَيْهِ وَسَلَّمَ فِيهَا، حَدَّثَتْنِي حَفْصَةُ أَنَّهُ كَانَ إِذَا أَذَّنَ المُؤَذِّنُ وَطَلَعَ الفَجْرُ صَلَّى رَكْعَتَيْنِ، وَفِي لَفْظٍ: أَنَّ النَّبِيَّ صَلَّى اللهُ عَلَيْهِ وَسَلَّمَ كَانَ يُصَلِّي بَعْدَ الْجُمُعَةِ رَكْعَتَيْنِ.
[صحيح] - [متفق عليه بجميع رواياته] - [صحيح البخاري: 1180]
المزيــد ...
ಇಬ್ನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ.
"ನಾನು ಪ್ರವಾದಿಯವರಿಂದ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹತ್ತು ರಕಅತ್‌ಗಳನ್ನು ಜ್ಞಾಪಕದಲ್ಲಿಟ್ಟಿದ್ದೇನೆ: ಝುಹರ್ ನಮಾಝಿಗೆ ಮೊದಲು ಎರಡು ರಕಅತ್‌ಗಳು ಮತ್ತು ಅದರ ನಂತರ ಎರಡು ರಕಅತ್‌ಗಳು, ಮಗ್ರಿಬ್ ನಂತರ ಮನೆಯಲ್ಲಿ ಎರಡು ರಕಅತ್‌ಗಳು, ಇಶಾ ನಂತರ ಮನೆಯಲ್ಲಿ ಎರಡು ರಕಅತ್‌ಗಳು, ಫಜ್ರ್ ನಮಾಝಿಗೆ ಮೊದಲು ಎರಡು ರಕಅತ್‌ಗಳು. (ಇವು ಮಾತ್ರವಲ್ಲದೆ) ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಯಾರೂ ಹೋಗದಂತಹ ಒಂದು ಸಮಯವಿದೆ. (ಪ್ರವಾದಿ ಪತ್ನಿ) ಹಫ್ಸ ನನಗೆ ತಿಳಿಸಿದರು: ಮುಅಝ್ಝಿನ್ ಅಝಾನ್ ನೀಡಿ ಪ್ರಭಾತವು ಉದಯವಾದಾಗ ಪ್ರವಾದಿಯವರು ಎರಡು ರಕಅತ್ ನಮಾಝ್ ಮಾಡುತ್ತಿದ್ದರು." ಇನ್ನೊಂದು ವರದಿಯಲ್ಲಿ: "ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜುಮಾ ನಮಾಝಿನ ಬಳಿಕ ಎರಡು ರಕಅತ್ ನಮಾಝ್ ನಿರ್ವಹಿಸುತ್ತಿದ್ದರು."
[صحيح] - [متفق عليه بجميع رواياته] - [صحيح البخاري - 1180]
ಅಬ್ದುಲ್ಲಾ ಬಿನ್ ಉಮರ್ (ಅವರಿಬ್ಬರ ಬಗ್ಗೆ ಅಲ್ಲಾಹು ಸಂಪ್ರೀತನಾಗಲಿ) ಇಲ್ಲಿ ವಿವರಿಸುವುದೇನೆಂದರೆ, ಅವರು ಜ್ಞಾಪಕದಲ್ಲಿಟ್ಟುಕೊಂಡಂತೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹತ್ತು ರಕಅತ್ ಐಚ್ಛಿಕ ನಮಾಝ್ ನಿರ್ವಹಿಸುತ್ತಿದ್ದರು. ಇವುಗಳನ್ನು ರವಾತಿಬ್ ಸುನ್ನತ್ ಎಂದು ಕರೆಯಲಾಗುತ್ತದೆ. ಝುಹರ್ ನಮಾಝಿಗೆ ಮೊದಲು ಎರಡು ರಕಅತ್‌ಗಳು ಮತ್ತು ನಂತರ ಎರಡು ರಕಅತ್‌ಗಳು. ಮಗ್ರಿಬ್ ನಮಾಝಿನ ನಂತರ ಮನೆಯಲ್ಲಿ ಎರಡು ರಕಅತ್‌ಗಳು. ಇಶಾ ನಮಾಝಿನ ನಂತರ ಮನೆಯಲ್ಲಿ ಎರಡು ರಕಅತ್‌ಗಳು. ಮತ್ತು ಫಜ್ರ್ ನಮಾಝಿಗೆ ಮೊದಲು ಎರಡು ರಕಅತ್‌ಗಳು. ಒಟ್ಟು ಹತ್ತು ರಕಅತ್‌ಗಳು. ಜುಮಾ ನಮಾಝಿನ ನಂತರ ಅವರು ಎರಡು ರಕಅತ್ ನಮಾಝ್ ನಿರ್ವಹಿಸುತ್ತಿದ್ದರು.