عن عُبَادَةَ بن الصَّامتِ رضي الله عنه قال:
بَايَعْنَا رسولَ اللهِ صلى الله عليه وسلم على السَّمْعِ وَالطَّاعَةِ فِي الْعُسْرِ وَالْيُسْرِ، وَالْمَنْشَطِ وَالْمَكْرَهِ، وعلى أَثَرَةٍ علينا، وعلى أَلَّا نُنَازِعَ الْأَمْرَ أهلَه، وعلى أَنْ نَقُولَ بِالْحَقِّ أينما كُنَّا، لا نَخَافُ في الله لَوْمَةَ لَائِمٍ.
[صحيح] - [متفق عليه] - [صحيح مسلم: 1709]
المزيــد ...
ಉಬಾದ ಬಿನ್ ಸಾಮಿತ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು:
"ಕಷ್ಟದಲ್ಲೂ, ಸುಖದಲ್ಲೂ, ಇಷ್ಟವಿದ್ದರೂ, ಇಷ್ಟವಿಲ್ಲದಿದ್ದರೂ, ನಮಗಿಂತ ಇತರರಿಗೆ ಆದ್ಯತೆ ನೀಡಿದರೂ ನಾವು ನಿಮ್ಮ ಮಾತನ್ನು ಕೇಳುತ್ತೇವೆ ಮತ್ತು ಅನುಸರಿಸುತ್ತೇವೆ ಎಂದು ನಾವು ಅಲ್ಲಾಹನ ಸಂದೇಶವಾಹಕರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಿಷ್ಠೆಯ ಪ್ರಮಾಣ ಮಾಡಿದೆವು. ಅದೇ ರೀತಿ, ಅಧಿಕಾರದಲ್ಲಿರುವವರ ವಿಷಯದಲ್ಲಿ ನಾವು ವಿರೋಧ ವ್ಯಕ್ತಪಡಿಸುವುದಿಲ್ಲ, ನಾವು ಎಲ್ಲೇ ಇದ್ದರೂ ಸತ್ಯವನ್ನೇ ಹೇಳುತ್ತೇವೆ, ಮತ್ತು ಅಲ್ಲಾಹನ ವಿಷಯದಲ್ಲಿ ನಾವು ಯಾವುದೇ ವಿಮರ್ಶಕನ ಮಾತುಗಳಿಗೆ ಹೆದರುವುದಿಲ್ಲ ಎಂದು ನಾವು ನಿಷ್ಠೆಯ ಪ್ರಮಾಣ ಮಾಡಿದೆವು."
[صحيح] - [متفق عليه] - [صحيح مسلم - 1709]
ಮುಖಂಡರನ್ನು ಮತ್ತು ಅಧಿಕಾರದಲ್ಲಿರುವವರನ್ನು ಕಷ್ಟದಲ್ಲೂ, ಸುಖದಲ್ಲೂ, ಶ್ರೀಮಂತಿಕೆಯಲ್ಲೂ, ಬಡತನದಲ್ಲೂ, ಅವರ ಆಜ್ಞೆಗಳು ಇಷ್ಟವಾದರೂ ಇಷ್ಟವಾಗದಿದ್ದರೂ, ಅವರನ್ನು ಅನುಸರಿಸಬೇಕೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಸಹಚರರಿಂದ ನಿಷ್ಠೆಯ ಪ್ರಮಾಣ ಸ್ವೀಕರಿಸಿದರು. ಎಲ್ಲಿಯವರೆಗೆಂದರೆ, ಆಡಳಿತಗಾರರು ಸಾರ್ವಜನಿಕ ಆಸ್ತಿ ಮತ್ತು ಸ್ಥಾನಮಾನದ ವಿಷಯದಲ್ಲಿ ಪ್ರಜೆಗಳ ಹಿತಕ್ಕೆ ವಿರುದ್ಧವಾಗಿ ತಮ್ಮ ಸ್ವಾರ್ಥಕ್ಕೆ ಪ್ರಾಮುಖ್ಯತೆ ನೀಡಿದರೂ ಅವರನ್ನು ಅನುಸರಿಸಬೇಕಾಗಿದೆ. ಒಳ್ಳೆಯ ರೀತಿಯಲ್ಲಿ ಅವರ ಮಾತನ್ನು ಕೇಳುವುದು, ಅವರ ಆಜ್ಞಾಪಾಲನೆ ಮಾಡುವುದು ಮತ್ತು ಅವರ ವಿರುದ್ಧ ಬಂಡೇಳದಿರುವುದು ಕಡ್ಡಾಯವಾಗಿದೆ. ಏಕೆಂದರೆ ಅವರ ವಿರುದ್ಧ ಹೋರಾಡುವುದರಿಂದ ಉಂಟಾಗುವ ಅರಾಜಕತೆ ಮತ್ತು ತೊಂದರೆಗಳು ಅವರು ಮಾಡುವ ಅನ್ಯಾಯಗಳಿಂದ ಉಂಟಾಗುವ ತೊಂದರೆಗಳಿಂದಲೂ ಘೋರವಾಗಿದೆ. ಅದೇ ರೀತಿ, ನಿಷ್ಕಳಂಕವಾಗಿ ಅಲ್ಲಾಹನ ಸಂಪ್ರೀತಿಯನ್ನು ಮಾತ್ರ ಉದ್ದೇಶಿಸಿ, ಯಾವುದೇ ವಿಮರ್ಶಕನ ಟೀಕೆಗಳಿಗೆ ಹೆದರದೆ, ಎಲ್ಲೇ ಇದ್ದರೂ ಸತ್ಯವನ್ನೇ ಹೇಳುತ್ತೇವೆಂದು ಅವರು ನಿಷ್ಠೆಯ ಪ್ರಮಾಣ ಮಾಡಿದರು.