عَنْ أُمِّ سَلَمَةَ أُمِّ المُؤمنين رضي الله عنها: أَنَّ رَسُولَ اللهِ صلى الله عليه وسلم قَالَ:
«سَتَكُونُ أُمَرَاءُ فَتَعْرِفُونَ وَتُنْكِرُونَ، فَمَنْ عَرَفَ بَرِئَ، وَمَنْ أَنْكَرَ سَلِمَ، وَلَكِنْ مَنْ رَضِيَ وَتَابَعَ» قَالُوا: أَفَلَا نُقَاتِلُهُمْ؟ قَالَ: «لَا، مَا صَلَّوْا».
[صحيح] - [رواه مسلم] - [صحيح مسلم: 1854]
المزيــد ...
ಸತ್ಯವಿಶ್ವಾಸಿಗಳ ಮಾತೆ ಉಮ್ಮು ಸಲಮ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
“ಆಡಳಿತಗಾರರು ಬರುವರು. ಆಗ ಅವರು ಮಾಡುವ ಕೆಲವು ಕಾರ್ಯಗಳನ್ನು ನೀವು ಗುರುತಿಸುವಿರಿ ಮತ್ತು ಕೆಲವು ಕಾರ್ಯಗಳನ್ನು ಅಲ್ಲಗಳೆಯುವಿರಿ. ಯಾರು (ಅವರ ಕೆಡುಕುಗಳನ್ನು) ಗುರುತಿಸುತ್ತಾರೋ ಅವರು ದೋಷಮುಕ್ತರಾಗುವರು. ಯಾರು (ಅವುಗಳಿಗೆ) ಅಸಮ್ಮತಿ ಸೂಚಿಸುತ್ತಾರೋ ಅವರು ಸುರಕ್ಷಿತರಾಗುವರು. ಆದರೆ ಅವರ ಬಗ್ಗೆ ಸಂತೃಪ್ತರಾಗಿ ಅವರನ್ನು ಅನುಸರಿಸುವವರು ಇದಕ್ಕೆ ಹೊರತಾಗಿದ್ದಾರೆ.” ಅವರು (ಸಹಾಬಿಗಳು) ಕೇಳಿದರು: “ನಾವು ಅವರ (ಆಡಳಿತಗಾರರ) ವಿರುದ್ಧ ಯುದ್ಧ ಮಾಡಬೇಕೇ?” ಪ್ರವಾದಿಯವರು ಉತ್ತರಿಸಿದರು: “ಬೇಡ, ಅವರು ನಮಾಝ್ ನಿರ್ವಹಿಸುತ್ತಿರುವ ತನಕ.”
[صحيح] - [رواه مسلم] - [صحيح مسلم - 1854]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ನಮ್ಮ ಮೇಲೆ ಕೆಲವು ಆಡಳಿತಗಾರರು ಆಡಳಿತ ನಡೆಸುವರು. ಆಗ ನಾವು ಅವರು ಮಾಡುವ ಕೆಲವು ಕಾರ್ಯಗಳನ್ನು ಗುರುತಿಸುತ್ತೇವೆ. ಏಕೆಂದರೆ ಅವು ನಮ್ಮ ಶರಿಯತ್ (ಧರ್ಮಶಾಸ್ತ್ರ) ಗೆ ಅನುಗುಣವಾಗಿರುತ್ತವೆ. ಕೆಲವು ಕಾರ್ಯಗಳನ್ನು ನಾವು ಅಲ್ಲಗಳೆಯುತ್ತೇವೆ. ಏಕೆಂದರೆ ಅವು ನಮ್ಮ ಶರಿಯತ್‌ಗೆ ವಿರುದ್ಧವಾಗಿರುತ್ತವೆ. ಆಡಳಿತಗಾರರು ಮಾಡುವ ದುಷ್ಕೃತ್ಯಗಳನ್ನು ತಡೆಯಲು ಸಾಧ್ಯವಾಗದೆ ಹೃದಯದಲ್ಲೇ ದ್ವೇಷಿಸುವವರು ಪಾಪ ಮತ್ತು ಕಪಟತೆಯಿಂದ ಮುಕ್ತರಾಗುತ್ತಾರೆ. ಅವರ ದುಷ್ಕೃತ್ಯಗಳನ್ನು ಕೈಯಿಂದ ಅಥವಾ ನಾಲಗೆಯಿಂದ ತಡೆಯಲು ಸಾಧ್ಯವಿದ್ದು ಅದನ್ನು ಮಾಡುವವರು ಪಾಪ ಮತ್ತು ಅದರಲ್ಲಿ ಸಹಭಾಗಿತ್ವದಿಂದ ಸುರಕ್ಷಿತರಾಗುತ್ತಾರೆ. ಆದರೆ ಯಾರು ಅವರ ದುಷ್ಕೃತ್ಯಗಳಿಗೆ ಸಂತೃಪ್ತಿ ಸೂಚಿಸಿ ಅವರನ್ನು ಅನುಸರಿಸುತ್ತಾರೋ ಅವರು ಆ ಆಡಳಿತಗಾರರು ನಾಶವಾಗುವಂತೆಯೇ ನಾಶವಾಗುತ್ತಾರೆ.
ಆಗ ಸಹಾಬಿಗಳು ಪ್ರವಾದಿಯವರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದರು: "ಇಂತಹ ಆಡಳಿತಗಾರರ ವಿರುದ್ಧ ನಾವು ಯುದ್ಧ ಮಾಡಬೇಕೇ?" ಅವರು ಉತ್ತರಿಸಿದರು: "ಬೇಡ, ಅವರು ನಮಾಝ್ ಸಂಸ್ಥಾಪಿಸುತ್ತಿರುವ ತನಕ ಅವರ ವಿರುದ್ಧ ಯುದ್ಧ ಮಾಡಬಾರದು."