عن عرفجة رضي الله عنه قال: سمعت رسول الله صلى الله عليه وسلم يقول:
«مَنْ أَتَاكُمْ وَأَمْرُكُمْ جَمِيعٌ عَلَى رَجُلٍ وَاحِدٍ، يُرِيدُ أَنْ يَشُقَّ عَصَاكُمْ، أَوْ يُفَرِّقَ جَمَاعَتَكُمْ، فَاقْتُلُوهُ».
[صحيح] - [رواه مسلم] - [صحيح مسلم: 1852]
المزيــد ...
ಅರ್ಫಜ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ:
"ನೀವು ಒಬ್ಬ ವ್ಯಕ್ತಿಯ ನಾಯಕತ್ವದಲ್ಲಿ ಒಗ್ಗಟ್ಟಿನಲ್ಲಿರುವಾಗ, ಯಾರಾದರೂ ಬಂದು ನಿಮ್ಮನ್ನು ಬೇರೆ ಬೇರೆ ಮಾಡಲು, ಅಥವಾ ನಿಮ್ಮ ಸಮಾಜವನ್ನು ಒಡೆಯಲು ಉದ್ದೇಶಿಸಿದರೆ, ಅವನೊಂದಿಗೆ ಹೋರಾಡಿ."
[صحيح] - [رواه مسلم] - [صحيح مسلم - 1852]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಮುಸಲ್ಮಾನರು ಒಬ್ಬ ಆಡಳಿತಗಾರನ ನಾಯಕತ್ವದಲ್ಲಿ ಮತ್ತು ಒಂದು ಸಮಾಜದಲ್ಲಿ ಒಗ್ಗಟ್ಟಿನಲ್ಲಿರುವಾಗ, ಒಬ್ಬ ವ್ಯಕ್ತಿ ಬಂದು ಆಡಳಿತದ ವಿಷಯದಲ್ಲಿ ವಿವಾದ ಹುಟ್ಟುಹಾಕಲು, ಅಥವಾ ಮುಸಲ್ಮಾನರನ್ನು ಒಂದಕ್ಕಿಂತ ಹೆಚ್ಚು ಸಮಾಜಗಳಾಗಿ ವಿಂಗಡಿಸಲು ಉದ್ದೇಶಿಸಿದರೆ, ಅವನಿಂದ ಉಂಟಾಗುವ ಹಾನಿಯನ್ನು ತಡೆಗಟ್ಟಲು ಮತ್ತು ಮುಸಲ್ಮಾನರ ರಕ್ತವನ್ನು (ಜೀವವನ್ನು) ಸಂರಕ್ಷಿಸಲು ಅವನನ್ನು ತಡೆಯುವುದು ಮತ್ತು ಅವನ ವಿರುದ್ಧ ಹೋರಾಡುವುದು ಕಡ್ಡಾಯವಾಗಿದೆ.