عَنْ عِكْرِمَةَ:
أَنَّ عَلِيًّا رَضِيَ اللَّهُ عَنْهُ حَرَّقَ قَوْمًا، فَبَلَغَ ابْنَ عَبَّاسٍ فَقَالَ: لَوْ كُنْتُ أَنَا لَمْ أُحَرِّقْهُمْ لِأَنَّ النَّبِيَّ صَلَّى اللهُ عَلَيْهِ وَسَلَّمَ قَالَ: «لاَ تُعَذِّبُوا بِعَذَابِ اللَّهِ»، وَلَقَتَلْتُهُمْ كَمَا قَالَ النَّبِيُّ صَلَّى اللهُ عَلَيْهِ وَسَلَّمَ: «مَنْ بَدَّلَ دِينَهُ فَاقْتُلُوهُ».
[صحيح] - [رواه البخاري] - [صحيح البخاري: 3017]
المزيــد ...
ಇಕ್ರಿಮಾ ರಿಂದ ವರದಿ:
ಅಲೀ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಒಂದು ಸಮುದಾಯವನ್ನು (ಜನರ ಗುಂಪನ್ನು) ಸುಟ್ಟುಹಾಕಿದರು. ಈ ವಿಷಯ ಇಬ್ನ್ ಅಬ್ಬಾಸ್ ರಿಗೆ ತಲುಪಿದಾಗ ಅವರು ಹೇಳಿದರು: "ನಾನಾಗಿದ್ದರೆ ಅವರನ್ನು ಸುಡುತ್ತಿರಲಿಲ್ಲ. ಏಕೆಂದರೆ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳಿದ್ದಾರೆ: 'ಅಲ್ಲಾಹನ ಶಿಕ್ಷೆಯಿಂದ (ಬೆಂಕಿಯಿಂದ) ನೀವು ಶಿಕ್ಷಿಸಬೇಡಿ'. 'ಯಾರು ತನ್ನ ಧರ್ಮವನ್ನು ಬದಲಿಸುತ್ತಾನೋ, ಅವನನ್ನು ಕೊಲ್ಲಿರಿ' ಎಂದು ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದಂತೆ ನಾನು ಅವರನ್ನು ಖಂಡಿತವಾಗಿಯೂ ಕೊಲ್ಲುತ್ತಿದ್ದೆನು".
[صحيح] - [رواه البخاري] - [صحيح البخاري - 3017]
ಅಲೀ ಇಬ್ನ್ ಅಬೀ ತಾಲಿಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರು ತಮ್ಮ ಇಜ್ತಿಹಾದ್ (ಧಾರ್ಮಿಕ ನಿಯಮವನ್ನು ಸಂಶೋಧಿಸುವುದು) ನಿಂದ, ಇಸ್ಲಾಂನಿಂದ ಧರ್ಮಭ್ರಷ್ಟರಾದ ನಾಸ್ತಿಕರ ಒಂದು ಗುಂಪನ್ನು ಬೆಂಕಿಯಿಂದ ಸುಟ್ಟುಹಾಕಿದರು. ಅಬ್ದುಲ್ಲಾ ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಗೆ ಈ ಸುದ್ದಿ ತಲುಪಿದಾಗ, ಅವರು ಅವರನ್ನು ಕೊಲ್ಲುವುದನ್ನು ಬೆಂಬಲಿಸಿದರು; ಆದರೆ ಬೆಂಕಿಯಿಂದ ಸುಡುವುದನ್ನು ಖಂಡಿಸಿದರು. ಅವರು ಹೇಳಿದರು: ನಾನು ಅವರ ಸ್ಥಾನದಲ್ಲಿದ್ದರೆ ಅವರನ್ನು ಬೆಂಕಿಯಿಂದ ಸುಡುತ್ತಿರಲಿಲ್ಲ. ಏಕೆಂದರೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬೆಂಕಿಯ ಒಡೆಯನಾದ ಅಲ್ಲಾಹನ ಹೊರತು ಬೇರೆ ಯಾರೂ ಬೆಂಕಿಯಿಂದ ಶಿಕ್ಷಿಸಬಾರದು ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಆದರೆ ಅವರನ್ನು ಕೊಲ್ಲುವುದು ಸಾಕಾಗುತ್ತಿತ್ತು (ಬೆಂಕಿಯಿಲ್ಲದೆ). ಏಕೆಂದರೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದ್ದಾರೆ: ಯಾರು ಇಸ್ಲಾಂನಿಂದ ಧರ್ಮಭ್ರಷ್ಟನಾಗಿ ತನ್ನ ಧರ್ಮವನ್ನು ಬೇರೆ ಧರ್ಮಕ್ಕೆ ಬದಲಾಯಿಸುತ್ತಾನೋ, ಅವನನ್ನು ಕೊಲ್ಲಿರಿ.