عَنْ أَنَسِ بْنِ مَالِكٍ رَضِيَ اللَّهُ عَنْهُ قَالَ:
قَدِمَ أُنَاسٌ مِنْ عُكْلٍ أَوْ عُرَيْنَةَ، فَاجْتَوَوْا المَدِينَةَ فَأَمَرَهُمُ النَّبِيُّ صَلَّى اللهُ عَلَيْهِ وَسَلَّمَ بِلِقَاحٍ، وَأَنْ يَشْرَبُوا مِنْ أَبْوَالِهَا وَأَلْبَانِهَا، فَانْطَلَقُوا، فَلَمَّا صَحُّوا قَتَلُوا رَاعِيَ النَّبِيِّ صَلَّى اللهُ عَلَيْهِ وَسَلَّمَ، وَاسْتَاقُوا النَّعَمَ، فَجَاءَ الخَبَرُ فِي أَوَّلِ النَّهَارِ، فَبَعَثَ فِي آثَارِهِمْ، فَلَمَّا ارْتَفَعَ النَّهَارُ جِيءَ بِهِمْ، فَأَمَرَ فَقَطَعَ أَيْدِيَهُمْ وَأَرْجُلَهُمْ، وَسُمِرَتْ أَعْيُنُهُمْ، وَأُلْقُوا فِي الحَرَّةِ، يَسْتَسْقُونَ فَلاَ يُسْقَوْنَ، قَالَ أَبُو قِلاَبَةَ: فَهَؤُلاَءِ سَرَقُوا وَقَتَلُوا، وَكَفَرُوا بَعْدَ إِيمَانِهِمْ، وَحَارَبُوا اللَّهَ وَرَسُولَهُ.
[صحيح] - [متفق عليه] - [صحيح البخاري: 233]
المزيــد ...
ಅನಸ್ ಇಬ್ನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು:
" 'ಉಕ್ಲ್' ಅಥವಾ 'ಉರೈನ' (ಜನಾಂಗದ) ಕೆಲವರು (ಮದೀನಾಕ್ಕೆ) ಬಂದರು. ಅವರಿಗೆ ಮದೀನಾದ ಹವಾಮಾನ ಒಗ್ಗಲಿಲ್ಲ. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರಿಗೆ ಹಾಲು ಕರೆಯುವ ಒಂಟೆಗಳ ಬಳಿ ಹೋಗಿ ಅವುಗಳ ಮೂತ್ರ ಮತ್ತು ಹಾಲನ್ನು ಕುಡಿಯಲು ಆದೇಶಿಸಿದರು. ಅವರು ಹೊರಟರು. ಅವರು ಗುಣಮುಖರಾದಾಗ, ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕುರಿಗಾಹಿಯನ್ನು ಕೊಂದು ಒಂಟೆಗಳನ್ನು ವಶಪಡಿಸಿಕೊಂಡು ಹೋದರು. ಮುಂಜಾನೆ ಈ ಸುದ್ದಿ (ಪ್ರವಾದಿಯವರಿಗೆ) ತಲುಪಿತು. ಆಗ ಅವರು ಅವರನ್ನು ಹಿಂಬಾಲಿಸಲು (ಜನರನ್ನು) ಕಳುಹಿಸಿದರು. ಬಿಸಿಲು ಏರಿದಾಗ ಅವರನ್ನು ಹಿಡಿದು ತರಲಾಯಿತು. ಆಗ ಅವರು (ಪ್ರವಾದಿ) ಆದೇಶಿಸಿದಂತೆ, ಅವರ ಕೈ ಮತ್ತು ಕಾಲುಗಳನ್ನು ಕತ್ತರಿಸಲಾಯಿತು, ಅವರ ಕಣ್ಣುಗಳಿಗೆ ಬರೆ ಹಾಕಲಾಯಿತು, ಮತ್ತು ಅವರನ್ನು 'ಹರ್ರಾ' (ಕಪ್ಪು ಕಲ್ಲುಗಳ ಬಿಸಿಲ ಪ್ರದೇಶ) ದಲ್ಲಿ ಎಸೆಯಲಾಯಿತು. ಅವರು ನೀರಿಗಾಗಿ ಹಪಹಪಿಸುತ್ತಿದ್ದರೆ, ಆದರೆ ಅವರಿಗೆ ನೀರು ನೀಡಲಾಗಲಿಲ್ಲ". (ವರದಿಗಾರರಾದ) ಅಬೂ ಖಿಲಾಬ ಹೇಳುತ್ತಾರೆ: "ಇವರು ಕಳ್ಳತನ ಮಾಡಿದರು, ಕೊಲೆ ಮಾಡಿದರು, ಸತ್ಯವಿಶ್ವಾಸ ಸ್ವೀಕರಿಸಿದ ನಂತರ ಸತ್ಯನಿಷೇಧಿಗಳಾದರು, ಮತ್ತು ಅಲ್ಲಾಹು ಹಾಗೂ ಅವನ ಸಂದೇಶವಾಹಕರ ವಿರುದ್ಧ ಯುದ್ಧ ಮಾಡಿದರು".
[صحيح] - [متفق عليه] - [صحيح البخاري - 233]
'ಉಕ್ಲ್' ಮತ್ತು 'ಉರೈನ' ಜನಾಂಗದ ಕೆಲವು ಪುರುಷರು ಮುಸ್ಲಿಮರಾಗಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದರು. ಅವರಿಗೆ ಒಂದು ರೋಗ ತಗಲಿ, ಅದರಿಂದ ಅವರ ಹೊಟ್ಟೆಗಳು ಉಬ್ಬಿಕೊಂಡವು. ಅವರು ಮದೀನಾದಲ್ಲಿ ಉಳಿಯಲು ಇಷ್ಟಪಡಲಿಲ್ಲ, ಏಕೆಂದರೆ ಅಲ್ಲಿನ ಆಹಾರ ಮತ್ತು ಹವಾಮಾನ ಅವರಿಗೆ ಒಗ್ಗುತ್ತಿರಲಿಲ್ಲ. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರಿಗೆ ಝಕಾತ್ ಆಗಿ ಸಂಗ್ರಹಿಸಿದ ಒಂಟೆಗಳ ಬಳಿಗೆ ಹೋಗಿ, ಅವುಗಳ ಮೂತ್ರ ಮತ್ತು ಹಾಲನ್ನು ಕುಡಿಯಲು ಆದೇಶಿಸಿದರು. ಅವರು ಹೊರಟರು. ಅವರು ಗುಣಮುಖರಾಗಿ, ಆರೋಗ್ಯವಂತರಾದಾಗ ಮತ್ತು ಅವರ ಕಾಂತಿಯು ಮರಳಿದಾಗ, ಅವರು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕುರಿಗಾಹಿಯನ್ನು ಕೊಂದು, ಒಂಟೆಗಳನ್ನು ಅಟ್ಟಿಸಿಕೊಂಡು ಹೋದರು. ಮುಂಜಾನೆ ಈ ಸುದ್ದಿ ಪ್ರವಾದಿಯವರಿಗೆ ಬಂದಿತು. ಅವರು ಅವರನ್ನು ಹುಡುಕಲು ಜನರನ್ನು ಕಳುಹಿಸಿದರು. ಅವರನ್ನು ಹಿಡಿದು ಬಿಸಿಲು ಏರಿದಾಗ ಅವರನ್ನು ಸೆರೆಯಾಳುಗಳಾಗಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ತರಲಾಯಿತು. ಆಗ ಅವರು ಕೈ ಕಾಲುಗಳನ್ನು ಕತ್ತರಿಸಲು ಮತ್ತು ಅವರ ಕಣ್ಣುಗಳನ್ನು ಕೀಳಲು ಆದೇಶಿಸಿದರು; ಏಕೆಂದರೆ ಅವರು ಕುರಿಗಾಹಿಗೆ ಹಾಗೆಯೇ ಮಾಡಿದ್ದರು. ನಂತರ ಅವರನ್ನು 'ಹರ್ರಾ'ದಲ್ಲಿ ಎಸೆಯಲಾಯಿತು, ಅವರು ನೀರು ಕೇಳುತ್ತಿದ್ದರು. ಆದರೆ ಅವರಿಗೆ ನೀರು ಕೊಡಲಾಗಲಿಲ್ಲ. ಕೊನೆಗೆ ಅವರು (ಆ ಸ್ಥಿತಿಯಲ್ಲೇ) ಪ್ರಾಣಬಿಟ್ಟರು. ಅಬೂ ಖಿಲಾಬ (ವರದಿಗಾರರು) ಹೇಳುತ್ತಾರೆ: ಅವರು ಕಳ್ಳತನ ಮಾಡಿದರು, ಕೊಲೆ ಮಾಡಿದರು, ವಿಶ್ವಾಸವಿಟ್ಟ ನಂತರ ನಿಷೇಧಿಗಳಾದರು, ಮತ್ತು ಅಲ್ಲಾಹು ಹಾಗೂ ಅವನ ಸಂದೇಶವಾಹಕರ ವಿರುದ್ಧ ಯುದ್ಧ ಮಾಡಿದರು.