عَنِ ابْنِ عَبَّاسٍ رضيَ اللهُ عنهما:
أنَّهُ قَالَ لعَطَاءِ بْنِ أَبِي رَبَاحٍ: أَلَا أُرِيكَ امْرَأَةً مِنْ أَهْلِ الْجَنَّةِ؟ قُلْتُ: بَلَى، قَالَ: هَذِهِ الْمَرْأَةُ السَّوْدَاءُ، أَتَتِ النَّبِيَّ صَلَّى اللهُ عَلَيْهِ وَسَلَّمَ، قَالَتْ: إِنِّي أُصْرَعُ وَإِنِّي أَتَكَشَّفُ، فَادْعُ اللهَ لِي، قَالَ: «إِنْ شِئْتِ صَبَرْتِ وَلَكِ الْجَنَّةُ، وَإِنْ شِئْتِ دَعَوْتُ اللهَ أَنْ يُعَافِيَكِ» قَالَتْ: أَصْبِرُ، قَالَتْ: فَإِنِّي أَتَكَشَّفُ فَادْعُ اللهَ أَنْ لَا أَتَكَشَّفَ، فَدَعَا لَهَا.
[صحيح] - [متفق عليه] - [صحيح مسلم: 2576]
المزيــد ...
ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ:
ಅವರು (ಇಬ್ನ್ ಅಬ್ಬಾಸ್) ಅತಾಅ್ ಇಬ್ನ್ ಅಬೀ ರಬಾಹ್ ರಿಗೆ ಹೇಳಿದರು: "ನಾನು ನಿನಗೆ ಸ್ವರ್ಗವಾಸಿಗಳಲ್ಲಿ ಸೇರಿದ ಒಬ್ಬ ಮಹಿಳೆಯನ್ನು ತೋರಿಸಲೇ?" ನಾನು ಹೇಳಿದೆನು: "ಖಂಡಿತವಾಗಿ (ತೋರಿಸಿ)". ಅವರು ಹೇಳಿದರು: "ಈ ಕಪ್ಪು ಮಹಿಳೆ. ಆಕೆ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ಹೇಳಿದರು: 'ನಾನು ಮೂರ್ಛೆ ರೋಗದಿಂದ (ಅಥವಾ ಅಪಸ್ಮಾರದಿಂದ) ಬಳಲುತ್ತಿದ್ದೇನೆ ಮತ್ತು (ಆಗ) ನನ್ನ ದೇಹವು ಅನಾವರಣಗೊಳ್ಳುತ್ತದೆ. ಆದ್ದರಿಂದ, ನನಗಾಗಿ ಅಲ್ಲಾಹನಲ್ಲಿ ಪ್ರಾರ್ಥಿಸಿರಿ'. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: 'ನೀನು ಇಚ್ಛಿಸಿದರೆ ತಾಳ್ಮೆಯಿಂದಿರು. ನಿನಗೆ ಸ್ವರ್ಗವಿದೆ. ಇನ್ನು ನೀನು ಇಚ್ಛಿಸಿದರೆ ಅಲ್ಲಾಹು ನಿನ್ನನ್ನು ಗುಣಪಡಿಸುವಂತೆ ನಾನು ಪ್ರಾರ್ಥಿಸುವೆನು'. ಆಕೆ ಹೇಳಿದರು: 'ನಾನು ತಾಳ್ಮೆಯಿಂದಿರುತ್ತೇನೆ'. ನಂತರ ಆಕೆ ಹೇಳಿದರು: 'ಆದರೆ ನಾನು (ಮೂರ್ಛೆ ಹೋದಾಗ) ಅನಾವರಣಗೊಳ್ಳುತ್ತೇನೆ, ಆದ್ದರಿಂದ ನಾನು ಅನಾವರಣಗೊಳ್ಳದಂತೆ ಅಲ್ಲಾಹನಲ್ಲಿ ಪ್ರಾರ್ಥಿಸಿರಿ'. ಆಗ ಅವರು ಆಕೆಗಾಗಿ ಪ್ರಾರ್ಥಿಸಿದರು".
[صحيح] - [متفق عليه] - [صحيح مسلم - 2576]
ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರವರು ಅತಾಅ್ ಇಬ್ನ್ ಅಬೀ ರಬಾಹ್ ರಿಗೆ ಹೇಳಿದರು: ನಾನು ನಿನಗೆ ಸ್ವರ್ಗವಾಸಿಗಳಲ್ಲಿ ಸೇರಿದ ಒಬ್ಬ ಮಹಿಳೆಯನ್ನು ತೋರಿಸಲೇ? ಅತಾಅ್ ಹೇಳಿದರು: ಖಂಡಿತವಾಗಿ. ಇಬ್ನ್ ಅಬ್ಬಾಸ್ ಹೇಳಿದರು: ಈ ಹಬಶೀ (ಅಬಿಸೀನಿಯನ್) ಕಪ್ಪು ಮಹಿಳೆ. ಈಕೆ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ಹೇಳಿದರು: ನನ್ನಲ್ಲಿ ಒಂದು ರೋಗವಿದೆ. ಅದರಿಂದ ನಾನು ಮೂರ್ಛೆ ಹೋಗುತ್ತೇನೆ ಮತ್ತು ನನಗೆ ತಿಳಿಯದಂತೆಯೇ ನನ್ನ ದೇಹದ ಕೆಲವು ಭಾಗಗಳು ಅನಾವರಣಗೊಳ್ಳುತ್ತವೆ. ಅಲ್ಲಾಹು ನನ್ನನ್ನು ಗುಣಪಡಿಸುವಂತೆ ಪ್ರಾರ್ಥಿಸಿರಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ನೀನು ಇಚ್ಛಿಸಿದರೆ ತಾಳ್ಮೆಯಿಂದಿರು. ನಿನಗೆ ಸ್ವರ್ಗವಿದೆ. ಇನ್ನು ನೀನು ಇಚ್ಛಿಸಿದರೆ ಅಲ್ಲಾಹು ನಿನ್ನನ್ನು ಗುಣಪಡಿಸುವಂತೆ ನಾನು ಪ್ರಾರ್ಥಿಸುತ್ತೇನೆ. ಆಕೆ ಹೇಳಿದರು: ಹಾಗಾದರೆ ನಾನು ತಾಳ್ಮೆಯಿಂದಿರುತ್ತೇನೆ. ನಂತರ ಆಕೆ ಹೇಳಿದರು: ನಾನು ಮೂರ್ಛೆ ಹೋದಾಗ ಅನಾವರಣಗೊಳ್ಳದಂತೆ ಅಲ್ಲಾಹನಲ್ಲಿ ಪ್ರಾರ್ಥಿಸಿರಿ. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆಕೆಗಾಗಿ ಪ್ರಾರ್ಥಿಸಿದರು.