عَنْ طَاوُسٍ أَنَّهُ قَالَ: أَدْرَكْتُ نَاسًا مِنْ أَصْحَابِ رَسُولِ اللهِ صَلَّى اللهُ عَلَيْهِ وَسَلَّمَ، يَقُولُونَ كُلُّ شَيْءٍ بِقَدَرٍ، قَالَ: وَسَمِعْتُ عَبْدَ اللهِ بْنَ عُمَرَ رضي الله عنهما يَقُولُ: قَالَ رَسُولُ اللهِ صَلَّى اللهُ عَلَيْهِ وَسَلَّمَ:
«كُلُّ شَيْءٍ بِقَدَرٍ، حَتَّى الْعَجْزِ وَالْكَيْسِ، أَوِ الْكَيْسِ وَالْعَجْزِ».
[صحيح] - [رواه مسلم] - [صحيح مسلم: 2655]
المزيــد ...
ತಾವೂಸ್ ರಿಂದ ವರದಿ. ಅವರು ಹೇಳಿದರು: ನಾನು ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅನೇಕ ಸಂಗಡಿಗರನ್ನು ಭೇಟಿಯಾಗಿದ್ದೇನೆ. ಎಲ್ಲವೂ ವಿಧಿ ನಿರ್ಣಯವೆಂದು ಅವರು ಹೇಳುತ್ತಿದ್ದರು. ಅವರು ಹೇಳಿದರು: ಅಬ್ದುಲ್ಲಾ ಬಿನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
“ಎಲ್ಲವೂ ವಿಧಿ ನಿರ್ಣಯದಂತೆ ನಡೆಯುತ್ತದೆ. ನಿಶಕ್ತಿ ಮತ್ತು ಉತ್ಸಾಹ, ಅಥವಾ ಉತ್ಸಾಹ ಮತ್ತು ನಿಶಕ್ತಿ ಕೂಡ.”
[صحيح] - [رواه مسلم] - [صحيح مسلم - 2655]
ಎಲ್ಲವೂ ವಿಧಿ ನಿರ್ಣಯದಂತೆ ನಡೆಯುತ್ತದೆ ಎಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುತ್ತಾರೆ. ನಿಶಕ್ತಿಯೂ ಕೂಡ. ನಿಶಕ್ತಿಯೆಂದರೆ ಕಡ್ಡಾಯವಾಗಿರುವುದನ್ನು ಮಾಡದಿರುವುದು, ಅದನ್ನು ಮುಂದೂಡುವುದು, ಅಥವಾ ಅದರ ನಿಶ್ಚಿತ ಸಮಯದ ಬಳಿಕ ನಿರ್ವಹಿಸುವುದು. ಇಹಲೋಕ ಮತ್ತು ಪರಲೋಕಕ್ಕೆ ಸಂಬಂಧಿಸಿದ ವಿಷಯಗಳೆಲ್ಲವೂ ಇದರಲ್ಲಿ ಒಳಪಡುತ್ತವೆ. ಅದೇ ರೀತಿ ಉತ್ಸಾಹವು ಕೂಡ. ಉತ್ಸಾಹ ಎಂದರೆ ಇಹಲೋಕ ಮತ್ತು ಪರಲೋಕಕ್ಕೆ ಸಂಬಂಧಿಸಿದ ಕಾರ್ಯಗಳಲ್ಲಿ ಆವೇಶ ಮತ್ತು ಪರಿಣತಿ ಹೊಂದಿರುವುದು. ಸರ್ವಶಕ್ತನಾದ ಅಲ್ಲಾಹು ನಿಶಕ್ತಿ, ಉತ್ಸಾಹ ಮುಂತಾದ ಎಲ್ಲವನ್ನು ನಿರ್ಣಯಿಸಿದ್ದಾನೆ. ಅಲ್ಲಾಹನ ಜ್ಞಾನ ಮತ್ತು ಇಚ್ಛೆಯಲ್ಲಿರುವುದಲ್ಲದೆ ಜಗತ್ತಿನಲ್ಲಿ ಬೇರೇನೂ ಸಂಭವಿಸುವುದಿಲ್ಲ.