عَنْ عَبْدِ اللهِ بْنِ عَمْرِو بْنِ الْعَاصِ رضي الله عنهما قَالَ: سَمِعْتُ رَسُولَ اللهِ صَلَّى اللهُ عَلَيْهِ وَسَلَّمَ يَقُولُ:
«كَتَبَ اللهُ مَقَادِيرَ الْخَلَائِقِ قَبْلَ أَنْ يَخْلُقَ السَّمَاوَاتِ وَالْأَرْضَ بِخَمْسِينَ أَلْفَ سَنَةٍ، قَالَ: وَعَرْشُهُ عَلَى الْمَاءِ».
[صحيح] - [رواه مسلم] - [صحيح مسلم: 2653]
المزيــد ...
ಅಬ್ದುಲ್ಲಾ ಬಿನ್ ಅಮ್ರ್ ಬಿನ್ ಆಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ:
"ಅಲ್ಲಾಹು ಆಕಾಶಗಳನ್ನು ಮತ್ತು ಭೂಮಿಯನ್ನು ಸೃಷ್ಟಿಸುವುದಕ್ಕೆ ಐವತ್ತು ಸಾವಿರ ವರ್ಷಗಳ ಮುಂಚೆ ಎಲ್ಲಾ ಸೃಷ್ಟಿಗಳ ವಿಧಿ ನಿರ್ಣಯಗಳನ್ನು ದಾಖಲಿಸಿದ್ದಾನೆ." ಅವರು ಹೇಳಿದರು: "ಆಗ ಅವನ ಅರ್ಶ್ ನೀರಿನ ಮೇಲಿತ್ತು."
[صحيح] - [رواه مسلم] - [صحيح مسلم - 2653]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ತಿಳಿಸುವುದೇನೆಂದರೆ, ಅಲ್ಲಾಹು ಆಕಾಶಗಳನ್ನು ಮತ್ತು ಭೂಮಿಯನ್ನು ಸೃಷ್ಟಿಸುವುದಕ್ಕೆ ಐವತ್ತು ಸಾವಿರ ವರ್ಷಗಳ ಮುಂಚೆ, ಸೃಷ್ಟಿಗಳ ಬದುಕು, ಸಾವು, ಆಹಾರ ಮುಂತಾದ ಅವರಿಗೆ ಸಂಬಂಧಿಸಿದ ಎಲ್ಲಾ ವಿಧಿ ನಿರ್ಣಯಗಳನ್ನು ಸವಿಸ್ತಾರವಾಗಿ ಸುರಕ್ಷಿತ ಫಲಕದಲ್ಲಿ ದಾಖಲಿಸಿದ್ದಾನೆ. ಸರ್ವಶಕ್ತನಾದ ಅಲ್ಲಾಹನ ತೀರ್ಮಾನದಂತೆಯೇ ಅವೆಲ್ಲವೂ ಸಂಭವಿಸುತ್ತವೆ. ಆದ್ದರಿಂದ, ಯಾವುದೇ ಒಂದು ವಿಷಯವು ಸಂಭವಿಸುವುದಾದರೂ ಅದು ಅಲ್ಲಾಹನ ತೀರ್ಮಾನ ಮತ್ತು ನಿರ್ಣಯದ ಪ್ರಕಾರವೇ ಸಂಭವಿಸುತ್ತದೆ. ಮನುಷ್ಯನಿಗೆ ಏನಾದರೂ ಕೆಡುಕು ಸಂಭವಿಸಿದರೆ, ಅದು ಅವನಿಗೆ ಸಂಭವಿಸದೆ ತಪ್ಪಿ ಹೋಗುವುದಾಗಿರಲಿಲ್ಲ. ಅದೇ ರೀತಿ, ಅವನಿಗೆ ಏನಾದರೂ ಕೆಡುಕು ಸಂಭವಿಸದೆ ತಪ್ಪಿ ಹೋದರೆ, ಅದು ಅವನಿಗೆ ಸಂಭವಿಸುವುದಾಗಿರಲಿಲ್ಲ.