ಹದೀಸ್‌ಗಳ ಪಟ್ಟಿ

ಅಲ್ಲಾಹು ಯಾರಿಗಾದರೂ ಒಳಿತನ್ನು ಬಯಸಿದರೆ, ಅವನಿಗೆ ಕಷ್ಟಗಳು ಬಾಧಿಸುವಂತೆ ಮಾಡುತ್ತಾನೆ
عربي ಆಂಗ್ಲ ಉರ್ದು
ಮಗೂ! ನಾನು ನಿನಗೆ ಕೆಲವು ವಚನಗಳನ್ನು ಕಲಿಸುತ್ತೇನೆ. ಅಲ್ಲಾಹನ ಸಂರಕ್ಷಣೆ ಮಾಡು, ಅವನು ನಿನ್ನ ಸಂರಕ್ಷಣೆ ಮಾಡುವನು. ಅಲ್ಲಾಹನ ಸಂರಕ್ಷಣೆ ಮಾಡು, ಆಗ ನೀನು ಅವನನ್ನು ನಿನ್ನ ಮುಂಭಾಗದಲ್ಲಿ ಕಾಣಬಹುದು. ನೀನು ಬೇಡುವುದಾದರೆ ಅಲ್ಲಾಹನಲ್ಲಿ ಬೇಡು. ನೀನು ಸಹಾಯ ಯಾಚಿಸುವುದಾದರೆ, ಅಲ್ಲಾಹನಲ್ಲಿ ಸಹಾಯ ಯಾಚಿಸು
عربي ಆಂಗ್ಲ ಉರ್ದು
ಅಲ್ಲಾಹು ಆಕಾಶಗಳನ್ನು ಮತ್ತು ಭೂಮಿಯನ್ನು ಸೃಷ್ಟಿಸುವುದಕ್ಕೆ ಐವತ್ತು ಸಾವಿರ ವರ್ಷಗಳ ಮುಂಚೆ ಎಲ್ಲಾ ಸೃಷ್ಟಿಗಳ ವಿಧಿ ನಿರ್ಣಯಗಳನ್ನು ದಾಖಲಿಸಿದ್ದಾನೆ
عربي ಆಂಗ್ಲ ಉರ್ದು
ಸತ್ಯವಿಶ್ವಾಸಿಗಳು ಮತ್ತು ಸತ್ಯವಿಶ್ವಾಸಿನಿಗಳು, ಅವರು ಅಲ್ಲಾಹನನ್ನು ಭೇಟಿಯಾಗುವವರೆಗೂ ಸ್ವತಃ ಅವರಲ್ಲಿ, ಅವರ ಮಕ್ಕಳಲ್ಲಿ ಮತ್ತು ಅವರ ಸಂಪತ್ತಿನಲ್ಲಿ ಪರೀಕ್ಷೆಗಳು ಸಂಭವಿಸುತ್ತಲೇ ಇರುತ್ತವೆ; ಎಲ್ಲಿಯವರೆಗೆಂದರೆ, ಅವರು ಸಂಪೂರ್ಣ ಪಾಪರಹಿತರಾಗುವ ತನಕ
عربي ಆಂಗ್ಲ ಉರ್ದು
ಬಲಶಾಲಿ ಸತ್ಯವಿಶ್ವಾಸಿಯು ದುರ್ಬಲ ಸತ್ಯವಿಶ್ವಾಸಿಗಿಂತ ಉತ್ತಮನು ಮತ್ತು ಅಲ್ಲಾಹನಿಗೆ ಹೆಚ್ಚು ಪ್ರಿಯನಾಗಿದ್ದಾನೆ. ಎಲ್ಲರಲ್ಲೂ ಒಳಿತಿದೆ
عربي ಆಂಗ್ಲ ಉರ್ದು
ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ)—ಅವರು ಸತ್ಯವಂತರು ಮತ್ತು ಸತ್ಯವಂತರೆಂದು ಅಂಗೀಕರಿಸಲ್ಪಟ್ಟವರು—ತಿಳಿಸಿದರು: ನಿಶ್ಚಯವಾಗಿಯೂ, ನಿಮ್ಮಲ್ಲಿ ಪ್ರತಿಯೊಬ್ಬನ ಸೃಷ್ಟಿಯನ್ನು ಅವನ ತಾಯಿಯ ಉದರದಲ್ಲಿ ನಲ್ವತ್ತು ದಿನ-ರಾತ್ರಿಗಳ ಕಾಲ 'ನುತ್ಫ'ದ (ವೀರ್ಯದ) ರೂಪದಲ್ಲಿ ಜೋಡಿಸಿಡಲಾಗುತ್ತದೆ
عربي ಆಂಗ್ಲ ಉರ್ದು
“ಎಲ್ಲವೂ ವಿಧಿ ನಿರ್ಣಯದಂತೆ ನಡೆಯುತ್ತದೆ. ನಿಶಕ್ತಿ ಮತ್ತು ಉತ್ಸಾಹ, ಅಥವಾ ಉತ್ಸಾಹ ಮತ್ತು ನಿಶಕ್ತಿ ಕೂಡ.”
عربي ಆಂಗ್ಲ ಉರ್ದು
ಒಬ್ಬ ಮನುಷ್ಯನು ಇಂತಿಂತಹ ಒಂದು ಊರಿನಲ್ಲಿ ನಿಧನನಾಗಬೇಕೆಂದು ಅಲ್ಲಾಹು ತೀರ್ಮಾನಿಸಿದರೆ ಅವನಿಗೆ ಆ ಊರಿಗೆ ಹೋಗುವ ಅಗತ್ಯವನ್ನು ಉಂಟುಮಾಡುತ್ತಾನೆ
عربي ಆಂಗ್ಲ ಉರ್ದು
ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ ಎಂದು ಹೇಳಿರಿ. ಪುನರುತ್ಥಾನ ದಿನದಂದು ನಾನು ಅದರ ಮೂಲಕ ನಿಮ್ಮ ಪರವಾಗಿ ಸಾಕ್ಷಿ ಹೇಳುವೆನು
عربي ಆಂಗ್ಲ ಉರ್ದು