عَنْ مَطَرِ بْنِ عُكَامِسٍ رضي الله عنه قَالَ: قَالَ رَسُولُ اللهِ صَلَّى اللَّهُ عَلَيْهِ وَسَلَّمَ:
«إِذَا قَضَى اللَّهُ لِعَبْدٍ أَنْ يَمُوتَ بِأَرْضٍ جَعَلَ لَهُ إِلَيْهَا حَاجَةً».
[صحيح] - [رواه الترمذي] - [سنن الترمذي: 2146]
المزيــد ...
ಮತರ್ ಬಿನ್ ಉಕಾಮಿಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಒಬ್ಬ ಮನುಷ್ಯನು ಇಂತಿಂತಹ ಒಂದು ಊರಿನಲ್ಲಿ ನಿಧನನಾಗಬೇಕೆಂದು ಅಲ್ಲಾಹು ತೀರ್ಮಾನಿಸಿದರೆ ಅವನಿಗೆ ಆ ಊರಿಗೆ ಹೋಗುವ ಅಗತ್ಯವನ್ನು ಉಂಟುಮಾಡುತ್ತಾನೆ."
[صحيح] - [رواه الترمذي] - [سنن الترمذي - 2146]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ: ಒಬ್ಬ ವ್ಯಕ್ತಿ ಇಂತಿಂತಹ ಊರಿನಲ್ಲಿ ನಿಧನನಾಗಬೇಕೆಂದು ಅಲ್ಲಾಹು ತೀರ್ಮಾನಿಸಿದರೆ ಮತ್ತು ನಿರ್ಣಯಿಸಿದರೆ ಆತ ಆ ಊರಿನಲ್ಲಿ ಇಲ್ಲದಿದ್ದರೂ, ಆ ಊರಿಗೆ ಹೋಗುವ ಅಗತ್ಯವನ್ನು ಉಂಟು ಮಾಡಿ ಅವನ ಆತ್ಮವನ್ನು ಆ ಊರಿನಲ್ಲಿ ವಶಪಡಿಸುತ್ತಾನೆ.