عَن أَبِي بُرْدَةَ بْنِ أَبِي مُوسَى رَضِيَ اللَّهُ عَنْهُ قَالَ:
وَجِعَ أَبُو مُوسَى وَجَعًا شَدِيدًا، فَغُشِيَ عَلَيْهِ وَرَأْسُهُ فِي حَجْرِ امْرَأَةٍ مِنْ أَهْلِهِ، فَلَمْ يَسْتَطِعْ أَنْ يَرُدَّ عَلَيْهَا شَيْئًا، فَلَمَّا أَفَاقَ، قَالَ: أَنَا بَرِيءٌ مِمَّنْ بَرِئَ مِنْهُ رَسُولُ اللَّهِ صَلَّى اللهُ عَلَيْهِ وَسَلَّمَ، إِنَّ رَسُولَ اللَّهِ صَلَّى اللهُ عَلَيْهِ وَسَلَّمَ بَرِئَ مِنَ الصَّالِقَةِ وَالحَالِقَةِ وَالشَّاقَّةِ.
[صحيح] - [متفق عليه] - [صحيح البخاري: 1296]
المزيــد ...
ಅಬೂ ಬುರ್ದ ಬಿನ್ ಅಬೂ ಮೂಸಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು:
"ಅಬೂ ಮೂಸಾ ತೀವ್ರ ನೋವಿನಿಂದ ಬಳಲುತ್ತಿದ್ದರು. ಅವರ ತಲೆಯು ಅವರ ಕುಟುಂಬದ ಮಹಿಳೆಯೊಬ್ಬರ ಮಡಿಲಿನಲ್ಲಿದ್ದ ಸ್ಥಿತಿಯಲ್ಲಿ ಅವರು ಪ್ರಜ್ಞಾಹೀನರಾಗಿದ್ದರು. ಆಕೆಗೆ ಯಾವುದೇ ರೀತಿಯಲ್ಲಿ ಉತ್ತರ ನೀಡಲು ಅವರಿಗೆ ಸಾಧ್ಯವಾಗಲಿಲ್ಲ. ಪ್ರಜ್ಞೆ ಮರಳಿ ಬಂದ ನಂತರ ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಯಾರಿಂದ ಮುಕ್ತರಾಗಿದ್ದರೋ ಅವರಿಂದ ನಾನು ಕೂಡ ಮುಕ್ತನಾಗಿದ್ದೇನೆ. ಖಂಡಿತವಾಗಿಯೂ, ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಾಲಿಕ (ಗೋಳಾಡುವ ಮಹಿಳೆ), ಹಾಲಿಕ (ತಲೆ ಬೋಳಿಸಿಕೊಳ್ಳುವ ಮಹಿಳೆ) ಮತ್ತು ಶಾಕ್ಕ (ಬಟ್ಟೆ ಹರಿದುಕೊಳ್ಳುವ ಮಹಿಳೆ) ರಿಂದ ಮುಕ್ತರಾಗಿದ್ದರು."
[صحيح] - [متفق عليه] - [صحيح البخاري - 1296]
ಅಬೂ ಬುರ್ದಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಇಲ್ಲಿ ತಿಳಿಸುವುದೇನೆಂದರೆ, ಅವರ ತಂದೆ ಅಬೂ ಮೂಸಾ ಅಶ್‌ಅರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ತೀವ್ರ ಅನಾರೋಗ್ಯಕ್ಕೆ ಒಳಗಾಗಿ ಪ್ರಜ್ಞಾಹೀನರಾದರು. ಅವರ ತಲೆಯು ಅವರ ಕುಟುಂಬದ ಮಹಿಳೆಯೊಬ್ಬರ ಮಡಿಲಿನಲ್ಲಿತ್ತು. ಆಕೆ ಗಟ್ಟಿಯಾಗಿ ಕೂಗುತ್ತಾ ಗೋಳಾಡುತ್ತಿದ್ದಳು. ಆದರೆ ಪ್ರಜ್ಞಾಹೀನರಾಗಿದ್ದರಿಂದ ಆಕೆಗೆ ಉತ್ತರ ಕೊಡಲು ಅಬೂ ಮೂಸಾರಿಗೆ ಸಾಧ್ಯವಾಗಲಿಲ್ಲ. ಪ್ರಜ್ಞೆ ಮರಳಿ ಬಂದ ನಂತರ, ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಯಾರಿಂದ ಮುಕ್ತರಾಗಿದ್ದರೋ ಅವರಿಂದ ನಾನು ಕೂಡ ಮುಕ್ತನಾಗಿದ್ದೇನೆ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಈ ಕೆಳಗಿನವರಿಂದ ಮುಕ್ತರಾಗಿದ್ದರು: ಸಾಲಿಕ: ಅಂದರೆ, ದುರಂತ ಸಂಭವಿಸುವಾಗ ಗಟ್ಟಿಯಾಗಿ ಅರಚುವ ಮಹಿಳೆ. ಹಾಲಿಕ: ಅಂದರೆ, ದುರಂತ ಸಂಭವಿಸುವಾಗ ತನ್ನ ತಲೆಗೂದಲನ್ನು ಬೋಳಿಸಿಕೊಳ್ಳುವ ಮಹಿಳೆ. ಶಾಕ್ಕ: ಅಂದರೆ, ದುರಂತ ಸಂಭವಿಸುವಾಗ ತನ್ನ ಬಟ್ಟೆಯನ್ನು ಹರಿಯುವ ಮಹಿಳೆ. ಏಕೆಂದರೆ, ಇವೆಲ್ಲವೂ ಅಜ್ಞಾನ ಯುಗದ ಆಚರಣೆಗಳಾಗಿವೆ. ಬದಲಿಗೆ, ದುರಂತ ಸಂಭವಿಸುವಾಗ ತಾಳ್ಮೆಯಿಂದಿರಲು ಮತ್ತು ಅದಕ್ಕಾಗಿ ಅಲ್ಲಾಹನಿಂದ ಪ್ರತಿಫಲವನ್ನು ಅಪೇಕ್ಷಿಸಲು ಆಜ್ಞಾಪಿಸಲಾಗಿದೆ.