عن أبي هريرة رضي الله عنه
عَنِ النَّبِيِّ صَلَّى اللهُ عَلَيْهِ وَسَلَّمَ، فِيمَا يَحْكِي عَنْ رَبِّهِ عَزَّ وَجَلَّ، قَالَ: «أَذْنَبَ عَبْدٌ ذَنْبًا، فَقَالَ: اللَّهُمَّ اغْفِرْ لِي ذَنْبِي، فَقَالَ تَبَارَكَ وَتَعَالَى: أَذْنَبَ عَبْدِي ذَنْبًا، فَعَلِمَ أَنَّ لَهُ رَبًّا يَغْفِرُ الذَّنْبَ، وَيَأْخُذُ بِالذَّنْبِ، ثُمَّ عَادَ فَأَذْنَبَ، فَقَالَ: أَيْ رَبِّ اغْفِرْ لِي ذَنْبِي، فَقَالَ تَبَارَكَ وَتَعَالَى: عَبْدِي أَذْنَبَ ذَنْبًا، فَعَلِمَ أَنَّ لَهُ رَبًّا يَغْفِرُ الذَّنْبَ، وَيَأْخُذُ بِالذَّنْبِ، ثُمَّ عَادَ فَأَذْنَبَ، فَقَالَ: أَيْ رَبِّ اغْفِرْ لِي ذَنْبِي، فَقَالَ تَبَارَكَ وَتَعَالَى: أَذْنَبَ عَبْدِي ذَنْبًا، فَعَلِمَ أَنَّ لَهُ رَبًّا يَغْفِرُ الذَّنْبَ، وَيَأْخُذُ بِالذَّنْبِ، اعْمَلْ مَا شِئْتَ فَقَدْ غَفَرْتُ لَكَ».
[صحيح] - [متفق عليه] - [صحيح مسلم: 2758]
المزيــد ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ.
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸರ್ವಶಕ್ತನಾದ ಅವರ ಪರಿಪಾಲಕನಿಂದ (ಅಲ್ಲಾಹನಿಂದ) ವರದಿ ಮಾಡುತ್ತಾ ಹೇಳುತ್ತಾರೆ: "ಒಬ್ಬ ದಾಸ ಪಾಪವನ್ನು ಮಾಡಿ ನಂತರ ಹೇಳುತ್ತಾನೆ: "ಓ ಅಲ್ಲಾಹ್! ನನ್ನ ಪಾಪವನ್ನು ಕ್ಷಮಿಸು." ಆಗ ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ನನ್ನ ದಾಸ ಪಾಪ ಮಾಡಿದ್ದಾನೆ ಮತ್ತು ಪಾಪಗಳನ್ನು ಕ್ಷಮಿಸುವ ಹಾಗೂ ಪಾಪಗಳಿಗೆ ಶಿಕ್ಷೆ ನೀಡುವ ಒಬ್ಬ ಪರಿಪಾಲಕನಿದ್ದಾನೆ ಎಂದು ಅವನು ತಿಳಿದಿದ್ದಾನೆ." ನಂತರ, ಆ ದಾಸ ಮತ್ತೆ ಪಾಪ ಮಾಡಿ, ನಂತರ ಹೇಳುತ್ತಾನೆ: "ಓ ನನ್ನ ಪರಿಪಾಲಕನೇ! ನನ್ನ ಪಾಪವನ್ನು ಕ್ಷಮಿಸು." ಆಗ ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ನನ್ನ ದಾಸ ಪಾಪ ಮಾಡಿದ್ದಾನೆ ಮತ್ತು ಪಾಪಗಳನ್ನು ಕ್ಷಮಿಸುವ ಹಾಗೂ ಪಾಪಗಳಿಗೆ ಶಿಕ್ಷೆ ನೀಡುವ ಒಬ್ಬ ಪರಿಪಾಲಕನಿದ್ದಾನೆ ಎಂದು ಅವನು ತಿಳಿದಿದ್ದಾನೆ." ನಂತರ, ಆ ದಾಸ ಮತ್ತೆ ಪಾಪ ಮಾಡಿ, ನಂತರ ಹೇಳುತ್ತಾನೆ: "ಓ ನನ್ನ ಪರಿಪಾಲಕನೇ! ನನ್ನ ಪಾಪವನ್ನು ಕ್ಷಮಿಸು." ಆಗ ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ನನ್ನ ದಾಸ ಪಾಪ ಮಾಡಿದ್ದಾನೆ ಮತ್ತು ಪಾಪಗಳನ್ನು ಕ್ಷಮಿಸುವ ಹಾಗೂ ಪಾಪಗಳಿಗೆ ಶಿಕ್ಷೆ ನೀಡುವ ಒಬ್ಬ ಪರಿಪಾಲಕನಿದ್ದಾನೆ ಎಂದು ಅವನು ತಿಳಿದಿದ್ದಾನೆ. ನಿನಗೆ ಇಷ್ಟವಿರುವುದನ್ನು ಮಾಡು. ನಾನಂತೂ ನಿನ್ನನ್ನು ಕ್ಷಮಿಸಿದ್ದೇನೆ."
[صحيح] - [متفق عليه] - [صحيح مسلم - 2758]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರ ಪರಿಪಾಲಕನಿಂದ (ಅಲ್ಲಾಹನಿಂದ) ವರದಿ ಮಾಡುತ್ತಾ ಹೇಳುವುದೇನೆಂದರೆ, ಒಬ್ಬ ದಾಸ ಪಾಪ ಮಾಡಿದ ನಂತರ, "ಓ ಅಲ್ಲಾಹ್! ನನ್ನನ್ನು ಕ್ಷಮಿಸು" ಎಂದು ಹೇಳುತ್ತಾನೆ. ಆಗ ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ನನ್ನ ದಾಸ ಪಾಪ ಮಾಡಿದ್ದಾನೆ. ಆದರೆ ಪಾಪವನ್ನು ಕ್ಷಮಿಸುವ, ಮರೆಮಾಚುವ, ಮಾಫಿ ಮಾಡುವ ಮತ್ತು ಪಾಪ ಮಾಡಿದ್ದಕ್ಕಾಗಿ ಶಿಕ್ಷಿಸುವ ಒಬ್ಬ ಪರಿಪಾಲಕ ಅವನಿಗಿದ್ದಾನೆ ಎಂದು ಅವನು ತಿಳಿದಿದ್ದಾನೆ. ಆದ್ದರಿಂದ ನಾನು ಅವನನ್ನು ಕ್ಷಮಿಸಿದ್ದೇನೆ." ನಂತರ, ಆ ದಾಸ ಮತ್ತೆ ಪಾಪವನ್ನು ಮಾಡಿ ಪ್ರಾರ್ಥಿಸುತ್ತಾನೆ: "ಓ ಅಲ್ಲಾಹ್! ನನ್ನ ಪಾಪವನ್ನು ಕ್ಷಮಿಸು." ಆಗ ಅಲ್ಲಾಹು ಹೇಳುತ್ತಾನೆ: "ನನ್ನ ದಾಸ ಪಾಪ ಮಾಡಿದ್ದಾನೆ. ಆದರೆ ಪಾಪವನ್ನು ಕ್ಷಮಿಸುವ, ಮರೆಮಾಚುವ, ಮಾಫಿ ಮಾಡುವ ಮತ್ತು ಪಾಪ ಮಾಡಿದ್ದಕ್ಕಾಗಿ ಶಿಕ್ಷಿಸುವ ಒಬ್ಬ ಪರಿಪಾಲಕ ಅವನಿಗಿದ್ದಾನೆ ಎಂದು ಅವನು ತಿಳಿದಿದ್ದಾನೆ. ಆದ್ದರಿಂದ ನಾನು ನನ್ನ ದಾಸನಿಗೆ ಕ್ಷಮಿಸಿದ್ದೇನೆ." ನಂತರ, ಆ ದಾಸ ಮತ್ತೆ ಪಾಪವನ್ನು ಮಾಡಿ ಪ್ರಾರ್ಥಿಸುತ್ತಾನೆ: "ಓ ಅಲ್ಲಾಹ್! ನನ್ನ ಪಾಪವನ್ನು ಕ್ಷಮಿಸು." ಆಗ ಅಲ್ಲಾಹು ಹೇಳುತ್ತಾನೆ: "ನನ್ನ ದಾಸ ಪಾಪ ಮಾಡಿದ್ದಾನೆ. ಆದರೆ ಪಾಪವನ್ನು ಕ್ಷಮಿಸುವ, ಮರೆಮಾಚುವ, ಮಾಫಿ ಮಾಡುವ ಮತ್ತು ಪಾಪ ಮಾಡಿದ್ದಕ್ಕಾಗಿ ಶಿಕ್ಷಿಸುವ ಒಬ್ಬ ಪರಿಪಾಲಕ ಅವನಿಗಿದ್ದಾನೆ ಎಂದು ಅವನು ತಿಳಿದಿದ್ದಾನೆ. ಆದ್ದರಿಂದ ನಾನು ನನ್ನ ದಾಸನಿಗೆ ಕ್ಷಮಿಸಿದ್ದೇನೆ." ಅವನಿಗೆ ಇಷ್ಟವಿರುವುದನ್ನು ಅವನು ಮಾಡಲಿ. ಅವನು ಪ್ರತಿ ಬಾರಿ ಪಾಪ ಮಾಡಿದಾಗಲೂ, ಆ ಪಾಪವನ್ನು ತೊರೆದು, ಪಶ್ಚಾತ್ತಾಪಪಟ್ಟು, ಮತ್ತೆ ಆ ಪಾಪವನ್ನು ಮಾಡುವುದಿಲ್ಲವೆಂದು ನಿರ್ಧರಿಸುತ್ತಾನೆ. ಆದರೆ ಅವನ ಮನಸ್ಸು ಅವನನ್ನು ಸೋಲಿಸುತ್ತದೆ ಅವನು ಮತ್ತೆ ಮತ್ತೆ ಪಾಪ ಮಾಡುತ್ತಾನೆ. ಅವನು ಹೀಗೆ ಪಾಪ ಮಾಡಿದ ನಂತರ ಪಶ್ಚಾತ್ತಾಪಪಡುತ್ತಿರುವ ತನಕ ನಾನು ಅವನಿಗೆ ಕ್ಷಮಿಸುತ್ತಲೇ ಇರುತ್ತೇನೆ. ಪಶ್ಚಾತ್ತಾಪವು ಅದಕ್ಕಿಂತ ಮುಂಚೆ ಮಾಡಿದ ಪಾಪಗಳನ್ನು ನಿರ್ಮೂಲನ ಮಾಡುತ್ತದೆ.